Asianet Suvarna News Asianet Suvarna News

Date of Birth and Luck: ಈ ದಿನ ಹುಟ್ಟಿದ ಹುಡುಗಿಯರಿಂದ ಗಂಡಂದಿರಿಗೆ ಅದೃಷ್ಟ..!

ಹುಟ್ಟಿದ ದಿನಾಂಕ ಸಹ ಅದೃಷ್ಟ ತರಲಿದೆ. ಕೆಲವು ಹುಡುಗಿಯರು ಹುಟ್ಟುತ್ತಲೇ ಅದೃಷ್ಟವನ್ನು ಹೊಂದಿರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಗಳಲ್ಲಿ ಹುಟ್ಟಿದವರು ಭಾರೀ ಅದೃಷ್ಟವಂತರು. ಇದು ಅವರಿಗಷ್ಟೇ ಅದೃಷ್ಟ ತರುವುದು ಮಾತ್ರವಲ್ಲ, ಅವರನ್ನು ವಿವಾಹ ಆಗುವವರಿಗೂ ಅದೃಷ್ಟವಂತರನ್ನಾಗಿ ಮಾಡುತ್ತದೆ. 

Girls born on these date of birth are considered lucky for husbands
Author
Bangalore, First Published Nov 20, 2021, 6:03 PM IST
  • Facebook
  • Twitter
  • Whatsapp

ಅದೃಷ್ಟ ಎಂಬುದು ಯಾರಿಗೆ ಹೇಗೆ ಬರುತ್ತದೆ ಎಂದು ಹೇಳುವುದು ಕಷ್ಟ. ಕೆಲವರ ಜಾತಕದ (Kundali) ಪ್ರಕಾರ ಜನ್ಮದಿಂದಲೇ (By born) ಅದೃಷ್ಟ ಹೆಗಲೇರಿ ಬಂದಿರುತ್ತದೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ (Gold). ಕೈ ಇಟ್ಟ ಕ್ಷೇತ್ರಗಳಲ್ಲೆಲ್ಲಾ ಯಶಸ್ಸು (Success). ಆದರೆ, ಇನ್ನು ಕೆಲವರು ಏನೇ ಮಾಡಿದರೂ ಆ ಕೆಲಸ (Work) - ಕಾರ್ಯಗಳು ಕೈಗೆ ಹತ್ತದೆ ಹತಾಶ (Disappointment) ಮನೋಭಾವನೆಯನ್ನು ಹೊಂದಿರುತ್ತಾರೆ. ಅವರಿಗೆ ಅದೃಷ್ಟಕ್ಕೆ ಸರಿಯಾದ ಬಲ ಸಿಕ್ಕಿರುವುದಿಲ್ಲ. ಆದರೆ, ಇಂಥವರೂ ಸೇರಿದಂತೆ ಕೆಲವರಿಗೆ ಮದುವೆಯಾದ ಮೇಲೆ ಅದೃಷ್ಟ ಹೆಚ್ಚಲಿದೆ. ಹೌದು. ವಿವಾಹವಾಗಿ (Marriage) ಪತ್ನಿ (Wife) ಗೃಹಪ್ರವೇಶ ಮಾಡಿದ ನಂತರ ಕೆಲವರ ಲಕ್ (Luck) ಬದಲಾಗುತ್ತದೆ. ಅಂದರೆ, ಆ ಹುಡುಗಿಯರು ಹುಟ್ಟಿದ ದಿನಾಂಕದಿಂದ ಪತಿಯಾದವನಿಗೆ (Husband) ಅದೃಷ್ಟ ಬರುತ್ತದೆ ಎಂದು ಸಂಖ್ಯಾಶಾಸ್ತ್ರ (Numerology)  ಹೆಳುತ್ತದೆ. 3, 12, 21 ಅಥವಾ 30ರಂದು ಜನಿಸಿದ ಹುಡುಗಿಯರೇ (Girls) ಅದೃಷ್ಟ ತರುವ ಲಕ್ಷ್ಮಿಯರು ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಈ ದಿನಾಂಕದಂದು ಹುಟ್ಟಿದವರ ಪತಿಯಾದವರು ತಮ್ಮ ಹೆಸರಿನಲ್ಲಿ ವ್ಯವಹಾರ (Business)  ಮಾಡಿದರೆ ಯಶಸ್ಸು ಸಾಧಿಸುತ್ತಾರೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಈ ಹೆಣ್ಣುಮಕ್ಕಳು ತಮ್ಮ ಗಂಡಂದಿರನ್ನು ತುಂಬಾ ಇಷ್ಟ (Like) ಪಡುತ್ತಾರೆ. ಅವರು ತಮ್ಮ ವೃತ್ತಿಪರ (Professional) ಮತ್ತು ವೈಯಕ್ತಿಕ (Personal)  ಜೀವನದಲ್ಲಿ ಉತ್ತಮ ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತಾರೆ ಎಂದು ಸಹ ಹೇಳಲಾಗಿದೆ.

ಈ ದಿನಾಂಕಗಳಲ್ಲಿ ಹುಟ್ಟಿದವರು ಸ್ವಾಭಾನಿಕವಾಗಿ ಶಾಂತ (Silence)  ಸ್ವಭಾವದವರು (Nature), ಜೊತೆಗೆ ವೃತ್ತಿ ಬದುಕಿನಲ್ಲಿ ಉತ್ತಮ (Good) ಸ್ಥಾನಕ್ಕೇರುತ್ತಾರೆ. ಭವಿಷ್ಯದ ಬಗ್ಗೆ ಮೊದಲೇ ಚಿಂತಿಸುವ ಇವರು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿರುತ್ತಾರೆ. ಇದೇ ಇವರ ಯಶಸ್ಸಿನ ಗುಟ್ಟಾಗಿದೆ. ಕೆಲಸ ಇರಲಿ ಅಥವಾ ವ್ಯಾವಹಾರಿಕ ಕ್ಷೇತ್ರ ಇರಲಿ ಎರಡರಲ್ಲೂ ಇವರು ಸಾಧನೆ ತೋರಲಿದ್ದಾರೆ. ಎಂಥದ್ದೇ ಸನ್ನಿವೇಶ ಎದುರಾದರೂ ಯಶಸ್ವಿಯಾಗಿ ಎದುರಿಸಲಿದ್ದಾರೆ.ಇವರಿಗೆ ಉತ್ತಮ ನಾಯಕತ್ವ (Leadership) ಗುಣವೂ ಇರಲಿದ್ದು, ನಿರಾಯಾಸವಾಗಿ ತಮ್ಮ ಕೆಲಸವನ್ನು ಪೂರ್ಣಗೊಳಿಸುವ ಸಾಮರ್ಥ್ಯವನ್ನು (Capacity) ಹೊಂದಿರುತ್ತಾರೆ. ಅಲ್ಲದೆ, ಇನ್ನೊಬ್ಬರಿಂದ ಅಷ್ಟೇ ನಾಜೂಕಾಗಿಯೂ ಕೆಲಸವನ್ನು ಮಾಡಿಸಿಕೊಳ್ಳುವ ಚಾಕಚಕ್ಯತೆ ಇವರಲ್ಲಿದೆ. ಇನ್ನು ಕೆಲವು ಸಂದರ್ಭದಲ್ಲಿ ಇವರಿಗೆ ಯಶಸ್ಸಿನ ಅಮಲು ಹೆಚ್ಚಿ, ಅಹಂಕಾರಿಗಳಾಗಿಯೂ ವರ್ತಿಸುತ್ತಾರೆ. ಇದು ಕೆಲವರ ಬೇಸರಕ್ಕೆ ಕಾರಣವಾಗಲಿದೆಯಾದರೂ, ಇವರು ಆ ಬಗ್ಗೆ ಯಾವುದೇ ತಲೆಕೆಡಿಸಿಕೊಳ್ಳುವವರಲ್ಲ. 

ಇವರು ಸಾಕಷ್ಟು ಹೃದಯವಂತರು (Hearty). ದಯಾಗುಣವನ್ನು (Kindness) ಹೊಂದಿರುವ ಇವರು, ಕಷ್ಟ (Difficult) ಎಂದು ಬಂದರೆ ಮಿಡಿಯುವ ಸ್ವಭಾವದವರು. ಹಿಂದು ಮುಂದು ಯೋಚಿಸದೇ ಸಹಾಯವನ್ನು ಮಾಡುವ ವ್ಯಕ್ತಿಗಳಾಗಿದ್ದಾರೆ. ಇದರ ಜೊತೆಗೆ ಕಠಿಣ ಪರಿಶ್ರಮಿಗಳಾಗಿದ್ದು (Hardworking), ಮಾಡುವ ಕೆಲಸವನ್ನು ಆಸಕ್ತಿ (Interest) ಹಾಗೂ ಶ್ರದ್ಧೆಯಿಂದ ಮಾಡುತ್ತಾರೆ. ಅಲ್ಪಾವಧಿಯಲ್ಲಿ ಉತ್ತಮ ಪ್ರಗತಿಯನ್ನು (Progress) ಸಾಧಿಸುತ್ತಾರೆ.

ಇದನ್ನು ಓದಿ: ನಂಬಲು ಅರ್ಹವಾದ ರಾಶಿಗಳಿವು!

ಇನ್ನು ಇವರ ಲವ್ (Love) ವಿಷಯಕ್ಕೆ (Matter) ಸಂಬಂಧಪಟ್ಟಂತೆ ವಿವಾಹಕ್ಕೆ ಮೊದಲು ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆದರೆ, ವೈವಾಹಿಕ ಜೀವನವು (Life)  ಸಂತೋಷದಾಯಕವಾಗಿರಲಿದೆ. ಈ ದಿನಾಂಕದಲ್ಲಿ ಜನಿಸಿದವರು ತಮ್ಮ ಪತಿಯನ್ನು ಸದಾ ಖುಷಿಯಲ್ಲಿ (Happy) ಇಟ್ಟಿರುತ್ತಾರೆ. ಅವರು ಸಂತೋಷವಾಗಿರಬೇಕೆಂಬ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳನ್ನು (Effort) ಮಾಡುತ್ತಾರೆ. ಪತಿಯ ಪ್ರತಿ ಯಶಸ್ಸಿಗೂ ಇವರ ಸಂಪೂರ್ಣವಾದ ಬೆಂಬಲ ಇದ್ದೇ ಇರುತ್ತದೆ. ಹೀಗಾಗಿ ಈ ದಿನಾಂಕದಂದು ಜನಿಸಿದ ಯುವತಿಯರನ್ನು ವಿವಾಹವಾದರೆ, ನಂತರ ಪತಿಯಾದವನ ವೃತ್ತಿ ಜೀವನ ಸೇರಿದಂತೆ ಇತರ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸಿನ ಬಾಗಿಲಿ ತೆರೆದುಕೊಳ್ಳಲಿದೆ ಎಂದು ಸಂಖ್ಯಾಶಾಸ್ತ್ರವು ಹೇಳಿದೆ. 

ಇದನ್ನು ಓದಿ: ಯಾವ ದೇವರಿಗೆ ಯಾವ ಜಪಮಾಲೆ ಇಷ್ಟ, ಬಳಸೋದು ಹೇಗೆ?

Follow Us:
Download App:
  • android
  • ios