Asianet Suvarna News Asianet Suvarna News

ಈ ಮೂರು ರಾಶಿ ಹುಡುಗರು ಕೇರಿಂಗ್ –ರೊಮ್ಯಾಂಟಿಕ್!

ಜ್ಯೋತಿಷ್ಯದ ಅನುಸಾರ ಪ್ರತಿ ರಾಶಿಯ ವ್ಯಕ್ತಿಗಳ ಗುಣ ಸ್ವಭಾವಗಳು ಭಿನ್ನವಾಗಿರುತ್ತವೆ. ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಪ್ರತಿ ರಾಶಿಯ ವ್ಯಕ್ತಿಗಳು ಒಂದಿಲ್ಲೊಂದು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಈ ಮೂರು ರಾಶಿಯ ವ್ಯಕ್ತಿಗಳು ತಮ್ಮ ಸಂಗಾತಿಯನ್ನು ಉತ್ತಮವಾಗಿ ನೋಡಿಕೊಳ್ಳುವುದಲ್ಲದೆ, ಉತ್ತಮ ಪತಿಯೆಂದು ಸಾಬೀತಾಗುತ್ತಾರೆಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಗಳು ಯಾವುದು? ತಿಳಿಯೋಣ...
 

Gemini Leo and Pisces people very romantic and caring
Author
Bangalore, First Published Aug 11, 2021, 3:13 PM IST
  • Facebook
  • Twitter
  • Whatsapp

ರಾಶಿ ಚಕ್ರದಲ್ಲಿರುವ ಹನ್ನೆರಡು ರಾಶಿಗಳ ಗುಣ ಮತ್ತು ಸ್ವಭಾವಗಳು ಬೇರೆ ಬೇರೆಯಾಗಿರುತ್ತವೆ. ಪ್ರತಿ ರಾಶಿಯ ವ್ಯಕ್ತಿಗಳ ಸ್ವಭಾವಗಳು ಆಯಾ ರಾಶಿಗುಣಗಳಿಂದ ಪ್ರಭಾವಿತವಾಗಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ ರಾಶಿಯ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ, ಇಷ್ಟ –ಕಷ್ಟ, ಪ್ರೇಮ, ಭವಿಷ್ಯ, ಆರ್ಥಿಕ ಸ್ಥಿತಿ, ಸಂಪತ್ತು ಇನ್ನಿತರ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ. 

ಒಬ್ಬರ ಸ್ವಭಾವ ಮತ್ತೊಬ್ಬರ ಸ್ವಭಾವದಂತಿರುವುದಿಲ್ಲ. ರಾಶಿಯಿಂದ ರಾಶಿಗೆ ಸ್ವಭಾವಗಳು ಭಿನ್ನವಾಗಿರುತ್ತವೆ. ಕೆಲವರು ಸೂಕ್ಷ್ಮ ಸ್ವಭಾವದವರಾದರೆ ಮತ್ತೆ ಕೆಲವರದು ಒರಟು ಸ್ವಭಾವವಾಗಿರುತ್ತದೆ. ಕೆಲವು ರಾಶಿಯವರು ಸಂಗಾತಿಯೊಂದಿಗೆ ಪ್ರೀತಿಯನ್ನು ತೋರ್ಪಡಿಸಿಕೊಳ್ಳುವ ಪಟ್ಟಿಗೆ ಸೇರಿದರೆ, ಇನ್ನು ಕೆಲವು ರಾಶಿಯವರದು ಅವ್ಯಕ್ತ ಪ್ರೀತಿಯಾಗಿರುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸುವ ಸ್ವಭಾವ ಅವರದ್ದಾಗಿರುವುದಿಲ್ಲ. ಈ ಮೂರು ರಾಶಿಯ ಹುಡುಗರು ಹೆಚ್ಚು ಕಾಳಜಿ ವಹಿಸುವವರು ಮತ್ತು ರೊಮ್ಯಾಂಟಿಕ್ ಆಗಿರುತ್ತಾರಂತೆ!!. ಸಂಗಾತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಲ್ಲದೆ, ಪ್ರಣಯದ ವಿಚಾರದಲ್ಲೂ ಮುಂದಿರುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ಆ ರಾಶಿಯ ವ್ಯಕ್ತಿಗಳ ಬಗ್ಗೆ ತಿಳಿಯೋಣ...

ಇದನ್ನು ಓದಿ: ಮಾಂಗಲ್ಯಧಾರಣೆ ಮಹತ್ವ, ಪ್ರಯೋಜನಗಳು!

ಮಿಥುನ ರಾಶಿ
ಈ ರಾಶಿಯ ಹುಡುಗರು ತುಂಬಾ ರೊಮ್ಯಾಂಟಿಕ್ ಸ್ವಭಾವವನ್ನು ಹೊಂದಿರುತ್ತಾರೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಸಂಗಾತಿಯ ಇಷ್ಟ—ಕಷ್ಟಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆಂದು ಹೇಳಲಾಗುತ್ತದೆ. ಈ ರಾಶಿಯ ವ್ಯಕ್ತಿಗಳ ಸ್ವಭಾವ ಹೆಚ್ಚು ಆಕರ್ಷಕವಾಗಿರುತ್ತದೆ. ಹಾಗಾಗಿ ಇತರರು ಈ ವ್ಯಕ್ತಿಗಳ ಸ್ವಭಾವವನ್ನು ಮೆಚ್ಚಿ ಮತ್ತಷ್ಟು ಇಷ್ಟಪಡುವಂತಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವ್ಯಕ್ತಿಗಳು ಉತ್ತಮ ಪತಿಯಾಗುತ್ತಾರೆಂದು ಹೇಳಲಾಗುತ್ತದೆ. ಮಿಥುನ ರಾಶಿಯ ಹುಡುಗರ ವ್ಯಕ್ತಿತ್ವವಷ್ಟೇ ಆಕರ್ಷಕವಲ್ಲ, ಇವರು ನೋಡಲು ಸಹ ತುಂಬಾ ಸುಂದರರಾಗಿರುತ್ತಾರೆಂದು ಹೇಳಲಾಗುತ್ತದೆ. ಈ ವ್ಯಕ್ತಿಗಳು ನಗಿಸುವ ಕಲೆಯನ್ನು ಬಲ್ಲವರಾಗಿರುತ್ತಾರೆ. ಈ ರಾಶಿಯ ಹುಡುಗರು ತಮ್ಮ ಸಂಗಾತಿಯ ಮೆಚ್ಚುಗೆಯನ್ನು ಪಡೆಯಬೇಕೆಂದು ಒಂದಿಲ್ಲೊಂದು ರೀತಿ ಪ್ರಯತ್ನಿಸುತ್ತಿರುತ್ತಾರೆ. ಸಂಗಾತಿಯನ್ನು ಖುಷಿ ಪಡಿಸುವ ಬಗ್ಗೆ ಚಿಂತಿಸುತ್ತಲೇ ಇರುತ್ತಾರೆ. ಈ ವ್ಯಕ್ತಿಗಳ ಜೊತೆ ಕಾಲ ಕಳೆಯಲು ಬೋರ್ ಆಗುವುದಿಲ್ಲ. ಹಾಗಾಗಿ ಮಿಥುನ ರಾಶಿಯ ಹುಡುಗರು ಉತ್ತಮ ಪತಿಯಾಗುತ್ತಾರೆಂದು ಹೇಳಲಾಗುತ್ತದೆ.

ಇದನ್ನು ಓದಿ: ನಿಮ್ಮ ಹಸ್ತ ರೇಖೆ ಹೀಗಿದ್ದರೆ, ಖಿನ್ನತೆ-ಅಪರಾಧ ಕೃತ್ಯಕ್ಕೆ ಕಾರಣವಾಗತ್ತೆ..!

ತುಲಾ ರಾಶಿ
ತುಲಾ ರಾಶಿ ಹುಡುಗರ ಸ್ವಭಾವ ಹೆಚ್ಚು ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ರಾಶಿಯ ಹುಡುಗರು ತಮ್ಮ ಪ್ರೇಮ ಅಥವಾ ವೈವಾಹಿಕ ಜೀವನಕ್ಕೆ ಹೆಚ್ಚು ಮಹತ್ವವನ್ನು ಕೊಡುವ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಸಂಗಾತಿಯನ್ನು ಸಂತೋಷ ಪಡಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಈ ರಾಶಿಯವರ ಸಂಗಾತಿ ಸಹ ಇವರನ್ನು ಹೆಚ್ಚು ಪ್ರೀತಿಸುತ್ತಾರೆ. ಪ್ರೀತಿ ಅಥವಾ ವೈವಾಹಿಕ ಜೀವನಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡುವ ಈ ರಾಶಿಯವರು ಉತ್ತಮ ಪತಿಯೆಂದು ಸಾಬೀತಾಗುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಪತ್ನಿಯ ಸಣ್ಣ-ಪುಟ್ಟ ಅವಶ್ಯಕತೆಗಳ ಬಗ್ಗೆ ನಿಗಾ ಇಟ್ಟು ಪೂರೈಸುತ್ತಾರೆ.

Gemini Leo and Pisces people very romantic and caring


ಇದನ್ನು ಓದಿ: ರುದ್ರಾಭಿಷೇಕದಿಂದ ವ್ಯಾಪಾರದಲ್ಲಿ ಪ್ರಗತಿ - ಧನಲಾಭ..!

ಸಿಂಹ ರಾಶಿ
ಈ ರಾಶಿಯ ಹುಡುಗರು ಹೆಚ್ಚು ಪ್ರಾಕ್ಟಿಕಲ್ ಆಗಿರುತ್ತಾರೆ. ಮಾತಿನಿಂದಲೇ ಇತರರ ಮನಸ್ಸನ್ನು ಗೆಲ್ಲುವ ಶಕ್ತಿಯುಳ್ಳವರಾಗಿರುತ್ತಾರೆ. ಹೆಚ್ಚಿನ ಹುಡುಗಿಯರು ಈ ರಾಶಿಯ ಹುಡುಗರ ವ್ಯಕ್ತಿತ್ವಕ್ಕೆ ಹೆಚ್ಚು ಆಕರ್ಷಿತರಾಗುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ ಈ ರಾಶಿಯ ಹುಡುಗರಿಗೆ ಪ್ರೀತಿಯೇ ಸರ್ವಸ್ವವಾಗಿರುತ್ತದೆ. ಸಂಗಾತಿಯನ್ನು ಖುಷಿಯಾಗಿಡಲು ಸದಾ ಸಿದ್ಧರಿರುತ್ತಾರೆ. ಅಷ್ಟೇ ಅಲ್ಲದೆ ಸಿಂಹ ರಾಶಿಯ ಹುಡುಗರು ಉತ್ತಮ ಪತಿಯಾಗುತ್ತಾರೆಂದು ಸಹ ಹೇಳಲಾಗುತ್ತದೆ. ಈ ರಾಶಿಯ ವ್ಯಕ್ತಿಗಳ ವೈವಾಹಿಕ ಜೀವನ ಅತ್ಯುತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ರಾಶಿಯವರು ಸಂಗಾತಿಯೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ. ಸಿಂಹ ರಾಶಿಯ ಹುಡುಗರು ಸಂಗಾತಿಯ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಸಹ ನೀಡುವವರಾಗಿರುತ್ತಾರೆ.

Follow Us:
Download App:
  • android
  • ios