Asianet Suvarna News Asianet Suvarna News

ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆ ವೇಳೆ ಕಾಣಿಸಿ ನಭದಲ್ಲೇ ಮಂದಿರಕ್ಕೆ ಪ್ರದಕ್ಷಿಣೆ ಹಾಕಿದ ಗರುಡ

ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿರುವ ಸಮಯದಲ್ಲಿ ಆಗಸದಲ್ಲಿ ಹದ್ದೊಂದು ಹಾರಾಡಿ ಗಮನ ಸೆಳೆದಿದೆ. ಹಿಂದೂ ಪುರಾಣದ ಪ್ರಕಾರ ಗರುಡ(ಹದ್ದು) ವಿಷ್ಣುವಿನ ವಾಹನವಾಗಿದ್ದು, ಅದು ಶ್ರೀರಾಮನನ್ನು ಕಾವಲು ಕಾಯುವ ಸಂಕೇತವಾಗಿದೆ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಸಂತರು ಬಣ್ಣಿಸಿದ್ದಾರೆ.

Garuda was seen during the Pranapratisthana in Ayodhya and circumambulated the temple in sky akb
Author
First Published Jan 23, 2024, 9:35 AM IST | Last Updated Jan 23, 2024, 9:36 AM IST

ಅಯೋಧ್ಯೆ: ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿರುವ ಸಮಯದಲ್ಲಿ ಆಗಸದಲ್ಲಿ ಹದ್ದೊಂದು ಹಾರಾಡಿ ಗಮನ ಸೆಳೆದಿದೆ. ಹಿಂದೂ ಪುರಾಣದ ಪ್ರಕಾರ ಗರುಡ(ಹದ್ದು) ವಿಷ್ಣುವಿನ ವಾಹನವಾಗಿದ್ದು, ಅದು ಶ್ರೀರಾಮನನ್ನು ಕಾವಲು ಕಾಯುವ ಸಂಕೇತವಾಗಿದೆ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಸಂತರು ಬಣ್ಣಿಸಿದ್ದಾರೆ. ರಾಮಾಯಣದಲ್ಲೂ ಸಹ ರಾಮ ಮತ್ತು ಲಕ್ಷ್ಮಣರನ್ನು ಲಂಕೇಶ್ವರನಾದ ರಾವಣ ನಾಗಾಸ್ತ್ರದಿಂದ ಬಂಧಿಸಿದಾಗ, ಗರುಡವೇ ಬಂದು ಅವರನ್ನು ಬಂಧಮುಕ್ತಗೊಳಿಸಿತು ಎನ್ನಲಾಗಿದೆ.

ಮಂದಿರ ಸಂಕೀರ್ಣದಲ್ಲಿ ಮೋದಿಯಿಂದ ಜಟಾಯು ಪ್ರತಿಮೆ ಅನಾವರಣ

ಅಯೋಧ್ಯೆ:  ರಾಮಮಂದಿರ ಸಂಕೀರ್ಣದಲ್ಲಿ ನಿರ್ಮಾಣ ಮಾಡಲಾಗಿರುವ ಜಟಾಯು ಪಕ್ಷಿಯ ಪ್ರತಿಮೆಯನ್ನು ಮೋದಿ ಸೋಮವಾರ ಅನಾವರಣಗೊಳಿಸಿದರು. ರಾಮಾಯಣದ ಸಮಯದಲ್ಲಿ ಸೀತೆಯನ್ನು ರಾಮ ಹೊತ್ತೊಯ್ಯುತ್ತಿದ್ದಾಗ, ಸೀತೆಯ ರಕ್ಷಣೆಗೆ ಧಾವಿಸಿದ ಜಟಾಯು ರಾವಣನಿಂದ ಹತ್ಯೆಯಾಗಿತ್ತು. ಪತ್ರಿಮೆ ಅನಾವರಣದ ಬಳಿಕ ಮಾತನಾಡಿದ ಮೋದಿ, ಜಟಾಯು ಕರ್ತವ್ಯದ ಪ್ರತೀಕವಾಗಿದೆ ಎಂದು ಹೇಳಿದರು.

ಶ್ರೀರಾಮನ ನೆಲೆ ವಾಸ್ತು ಶಿಲ್ಪದ ಅದ್ಭುತ ಸೆಲೆ: 32 ಮೆಟ್ಟಿಲು ಏರಿದರೆ ರಾಮದರ್ಶನ

ಪುರಾತನ ಕುಬೇರ ಶಿವ ದೇವಾಲಯಕ್ಕೆ ಪ್ರಧಾನಿ ಭೇಟಿ, ಪೂಜೆ
ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಬಳಿಕ ರಾಮಮಂದಿರ ಸಂಕೀರ್ಣದಲ್ಲಿರುವ ಪುರಾತನ ಕುಬೇರ ಶಿವ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಸಲ್ಲಿಸಿದರು. ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದ ಅವರು, ಪ್ರದಕ್ಷಿಣೆ ಮಾಡಿ ನಮನ ಸಲ್ಲಿಸಿದರು. ಕುಬೇರ ತಿಲ ಶಿವ ದೇವಾಲಯ ರಾಮಮಂದಿರ ಸಂಕೀರ್ಣದಲ್ಲಿರುವ ಪುರಾತನ ಶಿವ ದೇವಾಲಯವಾಗಿದ್ದು, ರಾಮ ಜನ್ಮಭೂಮಿ ಟ್ರಸ್ಟ್ ಈ ದೇವಾಲಯವನ್ನೂ ಸಹ ರಾಮಮಂದಿರದ ಜೊತೆಗೆ ಮರು ಮರು ನಿರ್ಮಾಣ ಮಾಡುತ್ತಿದೆ. 

ರಾಮನಿಗೆ ಮೋದಿ ಬೆಳ್ಳಿ ಛತ್ರ, ಕೆಂಪು ವಸ್ತ್ರ ಅರ್ಪಣೆ
ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಶ್ರೀರಾಮನಿಗೆ ಬೆಳ್ಳಿ ಛತ್ರ ಹಾಗೂ ಕೆಂಪು ವಸ್ತ್ರ ಸಮರ್ಪಿಸಿದರು. ಪ್ರತಿಷ್ಠಾಪನೆಗೆಂದು ಮಂದಿರಕ್ಕೆ ಆಗಮಿಸಿದ ಮೋದಿ ಅವರು ತಮ್ಮ ಕೈಯಲ್ಲಿ ಕೆಂಪು ವಸ್ತ್ರ ಹಾಗೂ ಅದರ ಮೇಲೆ ಇಟ್ಟಿದ್ದ ಛತ್ರವನ್ನು ಹಿಡಿದುಕೊಂಡು ಬಂದರು. ನಂತರ ಪೂಜೆಯ ವೇಳೆ ಅವನ್ನು ದೇವರಿಗೆ ಸಮರ್ಪಿಸಿದರು.

ಇಂದು ಭಕ್ತರಿಗೆ ತೆರೆಯಲಿದೆ ಅಯೋಧ್ಯೆ ರಾಮಮಂದಿರ: ಶತಮಾನಗಳ ಆಸೆ ಈಡೇರಿಸಿಕೊಳ್ಳುವ ತವಕದಲ್ಲಿ ಭಕ್ತರು
 

 

 

Latest Videos
Follow Us:
Download App:
  • android
  • ios