ಜ್ಯೋತಿಷ್ಯದ ಪ್ರಕಾರ ಗಜಲಕ್ಷ್ಮಿ ರಾಜಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಯೋಗದ ಪ್ರಭಾವದಿಂದಾಗಿ, ಅನೇಕ ರಾಶಿಚಕ್ರ ಚಿಹ್ನೆಗಳ ಜನರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

ಜ್ಯೋತಿಷ್ಯದ ಪ್ರಕಾರ ಗಜಲಕ್ಷ್ಮಿ ರಾಜಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಯೋಗದ ಪ್ರಭಾವದಿಂದಾಗಿ, ಅನೇಕ ರಾಶಿಚಕ್ರ ಚಿಹ್ನೆಗಳ ಜನರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

ವೈದಿಕ ಪಂಚಾಂಗದ ಪ್ರಕಾರ ಆಗಸ್ಟ್‌ 8ರಂದು ಶುಕ್ರನು ಕಟಕ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ ಮತ್ತು ಗಜಲಕ್ಷ್ಮಿ ರಾಜಯೋಗವನ್ನು ರೂಪಿಸುತ್ತಾನೆ. ಈ ಕಾರಣದಿಂದಾಗಿ ಮೂರು ರಾಶಿಯವರು ಅಪಾರ ಸಂಪತ್ತು, ಯಶಸ್ಸು, ಖ್ಯಾತಿ ಮತ್ತು ಅದೃಷ್ಟ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಗಜಲಕ್ಷ್ಮಿ ಯೋಗದಿಂದ ಮನುಷ್ಯನು ಸುಖ, ಶಾಂತಿ, ಸಮೃದ್ಧಿ ಮತ್ತು ಐಷಾರಾಮಿಗಳನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.

ಗಜ ಎಂದರೆ ಆನೆ. ಆನೆಯನ್ನು ಹಿಂದೂ ಪುರಾಣದಳಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಲಕ್ಷ್ಮಿ ದೇವಿಯನ್ನು ಧನಾತ್ಮಕತೆ, ಸಂಪತ್ತು, ಸಮೃದ್ಧಿ ಮತ್ತು ಐಶ್ವರ್ಯದ ದೇವತೆ ಎಂದು ಕರೆಯಲಾಗುತ್ತದೆ. ಗಜಲಕ್ಷ್ಮಿ ರಾಜಯೋಗದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ತಿಳಿಯಿರಿ.

ಮಿಥುನ ರಾಶಿ (Gemini)

ಗಜಲಕ್ಷ್ಮಿ ರಾಜಯೋಗವು ಮಿಥುನ ರಾಶಿಯವರಿಗೆ ಮಂಗಳಕರವೆಂದು ಸಾಬೀತುಪಡಿಸುತ್ತದೆ. ಏಕೆಂದರೆ ಶುಕ್ರನು ನಿಮ್ಮ ರಾಶಿಯ ಸಂಪತ್ತಿನ ಮನೆಯಲ್ಲಿ ಹಿಮ್ಮುಖವಾಗಿ ಹೋಗುತ್ತಾನೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಮಾಧ್ಯಮ, ಮಾರ್ಕೆಟಿಂಗ್‌, ಶಿಕ್ಷಣ ಮತ್ತು ಸಂವಹನಕ್ಕೆ ಸಂಬಂಧಿಸಿದ ಜನರು ಈ ಅವಧಿಯಲ್ಲಿ ಅದ್ಭುತ ಸಮಯವನ್ನು ಹೊಂದಿರುತ್ತಾರೆ.

ಈ ತಿಂಗಳು 3 ರಾಶಿಯವರಿಗೆ ಹಣದ ಹೊಳೆ; ಶುಕ್ರನ ಆಶೀರ್ವಾದದಿಂದ ಬಾಳೇ ಬಂಗಾರ..!

ಕನ್ಯಾ ರಾಶಿ (Virgo)

ಕನ್ಯಾ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗ ರಚನೆಯಿಂದ ಲಾಭವಾಗಲಿದೆ. ನಿಮ್ಮ ಆದಾಯದ ಮನೆಯಲ್ಲಿ ಶುಕ್ರ ಗ್ರಹವು ಹಿಮ್ಮುಖವಾಗಿದೆ. ಈ ಅವಧಿಯಲ್ಲಿ ನೀವು ಹೂಡಿಕೆಗಳಿಂದ ಲಾಭವನ್ನು ಪಡೆಯುತ್ತೀರಿ ಮತ್ತು ಹಳೆಯ ಹೂಡಿಕೆಗಳಿಂದಲೂ ಲಾಭವನ್ನು ಪಡೆಯುತ್ತೀರಿ. ಬಹಳ ದಿನಗಳಿಂದಲೂ ಅಂಟಿಕೊಂಡಿದ್ದ ಹಣ ನಿಮಗೆ ಸಿಗಲಿದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ನಿಮ್ಮ ಮಕ್ಕಳು ತಮ್ಮ ಪ್ರಗತಿ ಮತ್ತು ಯಶಸ್ಸಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ನಿಮಗೆ ತರಬಹುದು.
ಷೇರು ಮಾರುಕಟ್ಟಗೆ ಸಂಬಂಧಿಸಿದ ಜನರಿಗೆ ಈ ಸಮಯವು ಉತ್ತಮವಾಗಿರುತ್ತದೆ.

ತುಲಾ ರಾಶಿ (Libra)

ಗಜಲಕ್ಷ್ಮಿ ರಾಜಯೋಗವು ತುಲಾ ರಾಶಿಯವರಿಗೆ ಮಂಗಳಕರವೆಂದು ಸಾಬೀತುಪಡಿಸಬಹುದು. ನಿಮ್ಮ ರಾಶಿಚಕ್ರದಲ್ಲಿ ಶುಕ್ರನು ಹಿಮ್ಮುಖವಾಗಿ ಹೋಗುತ್ತಿದ್ದಾನೆ. ಇದು ನಿಮ್ಮ ವ್ಯಾಪಾರವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನಿಮ್ಮ ಯೋಜನೆ ಯಶಸ್ವಿಯಾಗುತ್ತದೆ. ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧವು ಮೊದಲಿಗಿಂತ ಮಧುರವಾಗಿರುತ್ತದೆ. ಉದ್ಯೋಗಿಗಳಿಗೆ ಬಡ್ತಿಯ ಅವಕಾಶಗಳು ದೊರೆಯಲಿವೆ. ನಿಮ್ಮ ಭೌತಿಕ ಸೌಕರ್ಯಗಳು ಸಹ ಹೆಚ್ಚಾಗುತ್ತವೆ.

ಸಾವಿರ ವರ್ಷಗಳ ಬಳಿಕ ಖಗೋಳದಲ್ಲಿ ವಿಸ್ಮಯ; ಆಗಸ್ಟ್'ನಲ್ಲೇ ನಾಲ್ಕು ಕೌತುಕಗಳು..!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.