Garuda Purana: ಅದೃಷ್ಟ, ಆರೋಗ್ಯ, ಸ್ನೇಹಿತರು ಮತ್ತು ಕಲಿಕೆ ಏಕೆ ನಾಶವಾಗುತ್ತದೆ?

ಜೀವನದಲ್ಲಿ ಏನೂ ಇಲ್ಲದೆ ಶುರು ಮಾಡಿ ಕಡೆಗೆ ಯಶಸ್ಸು, ಹಣ, ಹೆಸರು ಗಳಿಸುವುದು ಸಾರ್ಥಕತೆಯನ್ನು ನೀಡುತ್ತದೆ. ಆದರೆ, ಜೀವನದ ಆರಂಭದಲ್ಲಿ ಎಲ್ಲವೂ ಇದ್ದು, ನಂತರದಲ್ಲಿ ಅವೆಲ್ಲವೂ ನಷ್ಟವಾಗುವ ದುರದೃಷ್ಟ ಕೆಲವರನ್ನು ಕಾಡುತ್ತದೆ. ಇದಕ್ಕೇನು ಕಾರಣ ಎಂದು ಗರುಡ ಪುರಾಣದಲ್ಲಿ ವಿವರಿಸಲಾಗಿದೆ.

For what reasons good luck health friends and knowledge get destroyed know from Garuda Purana skr

ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಅನೇಕ ಗ್ರಂಥಗಳು, ವೇದಗಳು ಮತ್ತು ಪುರಾಣಗಳನ್ನು ಬರೆಯಲಾಗಿದೆ. ಅವುಗಳಲ್ಲಿ ಗರುಡ ಪುರಾಣವನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಗರುಡ ಪುರಾಣದಲ್ಲಿ ಗುಪ್ತ ರಹಸ್ಯಗಳು ಮತ್ತು ನಿಗೂಢ ಜ್ಞಾನವನ್ನು ತಿಳಿಸಲಾಗಿದೆ. ಜೀವನಕ್ಕೆ ಸಂಬಂಧಿಸಿದ, ಜ್ಞಾನ, ಧರ್ಮ ಮತ್ತು ನೀತಿಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಈ ಪುಸ್ತಕದಲ್ಲಿ ಹೇಳಲಾಗಿದೆ, ಅದನ್ನು ಅನುಸರಿಸಿ ಒಬ್ಬ ವ್ಯಕ್ತಿಯು ಸಂತೋಷದ ಜೀವನವನ್ನು ನಡೆಸಬಹುದು ಮತ್ತು ಮರಣಾನಂತರ ಮೋಕ್ಷವನ್ನು ಪಡೆಯಬಹುದು. 

ಅದೃಷ್ಟ, ಆರೋಗ್ಯ, ಸ್ನೇಹಿತರು ಮತ್ತು ಕಲಿಕೆ ಏಕೆ ನಾಶವಾಗುತ್ತದೆ?
ಕೆಲವೊಮ್ಮೆ ನಾವು ಕುಟುಂಬ, ಸಂಪತ್ತು, ಆಸ್ತಿ, ಉತ್ತಮ ಆರೋಗ್ಯ, ಜ್ಞಾನ, ಪ್ರತಿಷ್ಠೆ ಮತ್ತು ಸ್ನೇಹಿತರು ಎಲ್ಲವನ್ನೂ ಹೊಂದಿರುತ್ತೇವೆ. ಆದರೆ ಕ್ರಮೇಣ ಈ ವಿಷಯಗಳು ಜೀವನದಿಂದ ನಾಶವಾಗಲು ಪ್ರಾರಂಭಿಸುತ್ತವೆ. ಮತ್ತು ವ್ಯಕ್ತಿಯು ಮೋಸ ಅಥವಾ ದುರದೃಷ್ಟಕರ ಭಾವನೆಯನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಆದರೆ ಅದೃಷ್ಟ, ಆರೋಗ್ಯ, ಸ್ನೇಹಿತರು ಮತ್ತು ಜ್ಞಾನ ನಾಶವಾಗಲು ಕಾರಣವೇನು ಎಂದು ನಿಮಗೆ ತಿಳಿದಿದೆಯೇ? ಈ ವಸ್ತುಗಳ ನಾಶಕ್ಕೆ ಕಾರಣಗಳನ್ನು ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ.

ಸಂತೋಷ ಮತ್ತು ಅದೃಷ್ಟದ ನಾಶಕ್ಕೆ ಕಾರಣ
ಕೆಲವರು ಸಂಪತ್ತು ಮತ್ತು ಎಲ್ಲ ರೀತಿಯ ಸೌಕರ್ಯಗಳಿಂದ ಆಶೀರ್ವದಿಸಲ್ಪಡುತ್ತಾರೆ. ಆದರೆ ಇದರ ಹೊರತಾಗಿಯೂ, ಪ್ರತಿ ದಿನ ಸ್ನಾನ ಮಾಡುವುದಿಲ್ಲ ಮತ್ತು ಕೊಳಕು ಬಟ್ಟೆಗಳನ್ನು ಧರಿಸುವವರ ಮೇಲೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಮತ್ತು ಅವರ ಸಂತೋಷ ಮತ್ತು ಅದೃಷ್ಟವೂ ನಾಶವಾಗುತ್ತದೆ. ಅಲ್ಲದೆ ಇಂತಹವರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಅದಕ್ಕಾಗಿಯೇ ಶುದ್ಧ ಮತ್ತು ಪರಿಮಳಯುಕ್ತ ಬಟ್ಟೆಗಳನ್ನು ಮಾತ್ರ ಧರಿಸಿ. ಹಾಗೆಯೇ ಪ್ರತಿ ದಿನ ಸ್ನಾನ ಮಾಡಿ.

ಹಿಂದಿನ ಕಾಲದಲ್ಲಿ 14 ವಯಸ್ಸಲ್ಲಿ ಹುಡುಗಿಯರಿಗೆ ಮದುವೆ, 17ಕ್ಕೆ ಹೆರಿಗೆ, ಮನುಸ್ಮೃತಿ ಓದಿ: ಗುಜರಾತ್‌ ಹೈಕೋರ್ಟ್‌

ಇದರಿಂದ ಜ್ಞಾನ ನಾಶವಾಗುತ್ತದೆ
ಎಷ್ಟೇ ದೊಡ್ಡ ವಿದ್ವಾಂಸನಾಗಿದ್ದರೂ ನಿರಂತರ ಅಧ್ಯಯನ ನಡೆಸದಿದ್ದರೆ ಎಲ್ಲವನ್ನೂ ಮರೆತು ಜ್ಞಾನ ನಾಶವಾಗುತ್ತದೆ. ಆದ್ದರಿಂದ ನೀವು ಏನನ್ನು ಕಲಿತರೂ ಅದನ್ನು ನಿರಂತರವಾಗಿ ಅಭ್ಯಾಸ ಮಾಡಿ. ನಿರಂತರ ಮನಸ್ಸಿನಿಂದ ಅಭ್ಯಾಸ ಮಾಡಿದರೆ ಮೂರ್ಖನೂ ಬುದ್ಧಿವಂತನಾಗಬಹುದು. 

ಈ ವಿಷಯಗಳು ಆರೋಗ್ಯವನ್ನು ಹಾಳು ಮಾಡುತ್ತವೆ..
ಮನುಷ್ಯನ ನಿಜವಾದ ಸಂಪತ್ತು ಅವನ ಆರೋಗ್ಯವಾಗಿದೆ. ಆದ್ದರಿಂದಲೇ ಆರೋಗ್ಯದ ಬಗ್ಗೆ ಅರಿವಿರಬೇಕು ಮತ್ತು ಇತರ ಕೆಲಸಗಳಂತೆ ಆರೋಗ್ಯದ ಬಗ್ಗೆಯೂ ಸದಾ ಕಾಳಜಿ ವಹಿಸಬೇಕು. ಏಕೆಂದರೆ ಹೆಚ್ಚಿನ ರೋಗಗಳು ಅಸಮತೋಲಿತ ಮತ್ತು ಅಜೀರ್ಣ ಆಹಾರದಿಂದ ಉಂಟಾಗುತ್ತವೆ. ಅದಕ್ಕಾಗಿಯೇ ಯಾವಾಗಲೂ ಜೀರ್ಣವಾಗುವ ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸಿ.

ಈ ಕಾರಣಕ್ಕಾಗಿಯೇ ಸ್ನೇಹಿತರು ನಮ್ಮನ್ನು ಬಿಟ್ಟು ಹೋಗುತ್ತಾರೆ..
ಕೆಲವೊಮ್ಮೆ ನಾವು ನಮ್ಮ ಸಣ್ಣ ತಪ್ಪಿನಿಂದಾಗಿ ಉತ್ತಮ ಸ್ನೇಹಿತನನ್ನು ಕಳೆದುಕೊಳ್ಳುತ್ತೇವೆ. ಏಕೆಂದರೆ ಸ್ನೇಹದ ಮೂಲ ಮಂತ್ರ ‘ನಂಬಿಕೆ’. ಸ್ನೇಹಿತರು ಅನೇಕ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅವರು ಹಂಚಿಕೊಂಡ ವಿಷಯಗಳನ್ನು ನಿಮಗೆ ಸೀಮಿತವಾಗಿರಿಸಿಕೊಳ್ಳುವುದು ಮುಖ್ಯವಾಗಿದೆ. ನೀವು ಈ ವಿಷಯಗಳ ಬಗ್ಗೆ ಗಾಸಿಪ್ ಮಾಡಿದರೆ ಅದು ಸ್ನೇಹವನ್ನು ನಾಶ ಪಡಿಸುತ್ತದೆ. ಸ್ನೇಹಿತರನ್ನು ಉಳಿಸಿಕೊಳ್ಳಲು ಅವರ ನಂಬಿಕೆ ಉಳಿಸಿಕೊಳ್ಳುವುದು ಮುಖ್ಯ ಎಂಬ ಜ್ಞಾನವಿರಬೇಕು. ಇದಕ್ಕಾಗಿ ಪ್ರಾಮಾಣಿಕತೆ, ಪ್ರೀತಿ ಇರಬೇಕು. 

V Mark On Palm: ಅಂಗೈಲಿದೆಯಾ ವಿ ಗುರುತು? ಈ ವಯಸ್ಸಲ್ಲಿ ತೆರೆಯುತ್ತೆ ಅದೃಷ್ಟದ ಬಾಗಿಲು

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios