Asianet Suvarna News Asianet Suvarna News

ಗುರು ಪ್ರಭಾವ: ಯಾವ ರಾಶಿಗೇನು ಶುಭ?

ಜಾತಕದಲ್ಲಿ ಗುರು ಬಲವಿದ್ದರೆ ಮನುಷ್ಯ ರಾಜನಂತೆ ಬದುಕುತ್ತಾನೆ. ಬಯಸಿದ ಭಾಗ್ಯ ತಾನಾಗಿಯೇ ಬರುತ್ತದೆ. ಇಂಥ ಗುರು ಈ ವರ್ಷದ ನವೆಂಬರ್‌ವರೆಗೂ ಧನು ರಾಶಿಯಲ್ಲಿ ಸಂಚರಿಸುತ್ತಾನೆ. ಯಾರಿಗೆ, ಏನು ಫಲ?

effect of Jupiter transit on zodiac signs 2019 2020
Author
Bangalore, First Published Jan 2, 2020, 3:13 PM IST

ಗುರು ಗ್ರಹವು 4-11-2019 ರಿಂದ 20-11-2020 ರವರೆಗೆ ಧನು ರಾಶಿಯಲ್ಲಿ ಸಂಚರಿಸುತ್ತದೆ. ಗುರು ಗ್ರಹವನ್ನು ವರ ಪ್ರದರಾದ ಒಳ್ಳೆಯ ಗ್ರಹವೆಂದು ಗೌರವಿಸುತ್ತಾರೆ. ಗುರು ಬಲ ಇರುವವರಿಗೆ ಯಾವಾಗಲೂ ತೊಂದರೆಗಳು ಬರುವುದಿಲ್ಲ.- ಗುರು ಉಚ್ಛನಾದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದು ಭಾವಿಸುತ್ತಾರೆ. ಜೀವನದಲ್ಲಿ ಉತ್ತಮ ಗುಣಗಳಿಗೆ ಗುರುವೇ  ಮೂಲ ಎಂದು ಹೇಳುತ್ತಾರೆ.

ರಾತ್ರಿ ಉಗುರು ಕತ್ತರಿಸಿದ್ರೆ ಏನು ಪ್ರಾಬ್ಲಂ ಅನ್ನೋರು ಇದನ್ನೊಮ್ಮೆ ಓದಿ!

ಗುರುವಿನ ಮುಖ್ಯ ಲಕ್ಷಣಗಳು ಜ್ಞಾನ ಸಂತೋಷ ಪ್ರಸಿದ್ಧಿ, ಆನಂದ ಧನ ಧಾನ್ಯಾದಿ ಸೌಭಾಗ್ಯ ತೀರ್ಥ ಯಾತ್ರೆ ಉನ್ನತ ಶಿಕ್ಷಣ. ಮನುಷ್ಯರಿಗೆ ಎಲ್ಲವೂ ಇದ್ದರೂ ದೇವರ ದಯೆ ಇಲ್ಲದಿದ್ದರೆ ಮನುಷ್ಯನಿಗೆ ಸೋಲು ಬರುತ್ತದೆ. ಗುರುವು ರಾಶಿಯಿಂದ 4,7,10 ನೇ ಮನೆಯಲ್ಲಿ ಇದ್ದರೆ ಇಂತಹವರಿಗೆ ಗಜ ಕೇಸರಿ ಯೋಗವಾಗುತ್ತದೆ. ಇಂತಹವರಿಗೆ ಜೀವನದಲ್ಲಿ ಒಳ್ಳೆಯದಾಗಿ ಪ್ರಭಾವಿ ಜೀವನ ನಡೆಸುತ್ತಾರೆ. ಗುರುವು ಕೇಂದ್ರದಲ್ಲಿದ್ದರೆ ರೋಮ ಧ್ರುವ ಯೋಗ ದುಷ್ಪಲಗಳೂ ವಿವಾರಿತವಾಗುತ್ತದೆ. ಗುರುವು ಜನ್ಮರಾಶಿಗೆ 2-5-7.9,11 ನೇ ಸ್ಥಾನಗಳಿಗೆ 2-5-7-9-11 ನೇ ಸ್ಥಾನಗಳಿಗೆ ಗುರು ಬಂದರೆ ಶುಭ ಫಲ ಕೊಡುತ್ತಾರೆ.

ಗುರುವಿಗೆ ಬುಧ ಶುಕ್ರರು ಶತ್ರುಗಳು, ಗುರು ಸಪ್ತಮದಲ್ಲಿದ್ದು ಅವನೊಂದಿಗೆ ಶನಿ ಇದ್ದರೆ ಅಶುಭ ಫಲ ಕೊಡುತ್ತಾನೆ. ಪುರುಷರಿಗೆ ಮದುವೆಗೂ ತೊಂದರೆ ಇರುತ್ತದೆ. ಅಷ್ಠ ಮಠದ ಮದುವೆಯ ಯೋಗ ಇದ್ದರೂ ವಿಳಂಭವಾಗಿ ಆಗುತ್ತದೆ. ಆರು ಮತ್ತು ಎಂಟರಲ್ಲಿ ಗುರು ಇದ್ದರೆ ಸಂತಸಕ್ಕೆ ತೊಂದರೆ ಇರುತ್ತದೆ. ಅಷ್ಟ ಮಠದ ಗುರು ಯಾವಾಗಲೂ ಒಳ್ಳೆಯ ಫಲ ಕೊಡುವುದಿಲ್ಲ. ಹಣ ಕಾಸಿನ ನಷ್ಟ ಆಗುತ್ತದೆ. ದಶಮದ ಗುರು  ಹೆಣ್ಣು ಮಕ್ಕಳಿಗೆ ಒಳ್ಳೆಯ ಉದ್ಯೋಗದಲ್ಲಿರುವ ಗಂಡನ್ನು ಕೈ ಹಿಡಿಯುತ್ತಾರೆ. ಶನಿಯಿಂದ 8ರಲ್ಲಿ ಗುರು ಇದ್ದರೆ ಇವರಿಗೆ ಒಳ್ಳೆಯ ಫಲ ಕೊಡುವುದಿಲ್ಲ. ಹಣ ಕಾಸಿನ ನಷ್ಟ ಆಗುತ್ತದೆ. ದಶಮದ ಗುರು ಹೆಣ್ಣು ಮಕ್ಕಳಿಗೆ ಒಳ್ಳೆಯ ಉದ್ಯೋಗದಲ್ಲಿರುವ ಗಂಡನ್ನು ಕೈ ಹಿಡಿಯುತ್ತಾರೆ. ಶನಿಯಿಂದ ಏಳನೇ ಸ್ಥಾನದಲ್ಲಿ ಗುರು ಇದ್ದರೆ ಇವರು ಒಂದೆಡೆ ನಿಲ್ಲದೆ ಚುರುಕಾಗಿ ಇರುತ್ತಾರೆ. ಗುರುವಿಗೆ ಎರಡು ಸ್ಥಾನದ ಅಧಿಪತಿ ಅದು ಒಂದು ಕೇಂದ್ರದಲ್ಲಿ ಇದ್ದರೆ ಇದಕ್ಕೆ ಕೇಂದ್ರಾದಿ ಪತ್ಯ ದೋಷ ಎನ್ನುವರು. ಇದರಿಂದ ಮದುವೆಗಳಿಗೆ ಅಡ್ಡ ಬರುತ್ತದೆ. ಗುರು ಪಂಚಮದಲ್ಲಿ ಇದರ ಪುತ್ರ ದೋಷ ಗುರು 2 ಮತ್ತು ಪಂಚಮವನ್ನು ವೀಕ್ಷಿಸಿದರೆ ಇವರಿಗೆ ಉನ್ನತ ಶಿಕ್ಷಣ ಸಿಗುತ್ತದೆ.

ಈ ರಾಶಿಯವರಿಗೆ ಗುರು ಬಲ ಬಂದಾಯ್ತು, ಕೂಡಿ ಬಂದಿದೆ ಕಂಕಣ ಭಾಗ್ಯ!

ನವೆಂಬರ್ ನಾಲ್ಕರಿಂದ ದ್ವಾದಶ ರಾಶಿಯವರಿಗೆ- ಗ್ರಹಚಾರದಲ್ಲಿ ಬರುವ ಫಲಾಫಲಗಳು

ಮೇಷ - ನವಮದ ಗುರು ಗುರುವು ನವಮವನ್ನು ನೋಡುವುದರಿಂದ ಇವರಿಗೆ ಕೈಗೊಂಡ ಕೆಲಸದಲ್ಲಿ ಜಯವಾಗುತ್ತದೆ. ಮನೆ ಆಸ್ತಿ ಖರೀದಿಸುವ ಯೋಗ ಇರುತ್ತದೆ. ಉದ್ಯೋಗದಲ್ಲಿದ್ದರೆ ಮುಂಭಡ್ತಿ ಸಿಕ್ಕಿ ಕೆಲವರಿಗೆ ಉನ್ನತ ಹುದ್ದೆ ಸಿಗುತ್ತದೆ. ಸಂತತಿ ಇಲ್ಲದವರಿಗೆ ಪುತ್ರ ಲಾಭವಾಗುತ್ತದೆ. ಮನೆ ಖರೀದಿಸುವವರಿಗೆ ಸರಿಯಾದ ಸಮಯ, ಪುಣ್ಯ ಕ್ಷೇತ್ರಕ್ಕೆ ದರ್ಶನ ಕೊಡುತ್ತೀರಿ.  

ವೃಷಭ - ಈ ರಾಶಿಯವರಿಗೆ ಅಷ್ಟಮದ ಗುರು ಬರುವುದರಿಂದ ಹಣ ಕಾಸಿನ ತೊಂದರೆಯನ್ನು ಅನುಭವಿಸುತ್ತಾರೆ. ಸಾಲದಿಂದ ತೊಂದರೆ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿಯೂ ನಷ್ಟ ಇರುತ್ತದೆ. ಸಾಲ ಕೊಟ್ಟಿದ್ದು ಮರಳಿ ಬರುವುದಿಲ್ಲ. ಯೋಚಿಸಿದರೆ ಕೆಲಸಗಳಿಗೆ ಹಣಕಾಸಿನ ತೊಂದರೆಯಾಗುತ್ತದೆ. ಅನಾರೋಗ್ಯ ಇದ್ದು ಇದಕ್ಕಾಗಿ ಹಣ ಖರ್ಚಾಗುತ್ತದೆ. ವ್ಯಾಜ್ಯಗಳಲ್ಲಿ ಅಪಜಯವಾಗುತ್ತದೆ. ವ್ಯಾಜ್ಯಗಳಲ್ಲಿ ಅಪಜಯವಾಗುತ್ತದೆ. ಮಾನಸಿಕ ನೆಮ್ಮದಿ ಇರುವುದಿಲ್ಲ. ತಾಳ್ಮೆ ಕಡಿಮೆ ಇರುತ್ತದೆ.

ಮಿಥುನ - ಇವರಿಗೆ ಏಳನೆ ರಾಶಿಯ ಗುರು ಇವರಿಗೆ ಗಜಕೇಸರಿ ಯೋಗ. ಇದರಿಂದ ಇವರು ಪ್ರಭಾವಿ ಜೀವನ ನಡೆಸುವವರು ಎಲ್ಲಾ ವಿಷಯದಲ್ಲಿಯೂ ಸುಖವನ್ನು ಅನುಭವಿಸುತ್ತಾರೆ ವಿವಿಧ ಮೂಲಗಳಿಂದ ಹಣಕಾಸು ಬರುತ್ತದೆ. ವಾಹನ ಮನೆ ಖರೀದಿಸುವ ಸಮಯ ಸ್ತಿçÃಯರಿಂದ ಸುಖ ಸಿಗುತ್ತದೆ. ಒಳ್ಳೆಯ ಆರೋಗ್ಯ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಸಂಬAಧ ಕೂಡಿ ಬರುತ್ತದೆ.

ಕರ್ಕಾಟಕ - ಈ ರಾಶಿಯವರಿಗೆ ಆರನೇ ಗುರು. ಇದರಿಂದ ಮಾನಸಿಕ ನೋವುಗಳನ್ನು ಅನುಭವಿಸುತ್ತಾರೆ. ಕಷ್ಟಗಳನ್ನು ಅನುಭವಿಸುತ್ತಾರೆ. ಕಷ್ಟಗಳನ್ನು ಅನುಭವಿಸುತ್ತಾರೆ. ನಷ್ಟಗಳನ್ನು ಅನುಭವಿಸುತ್ತಾರೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಗೆಳೆಯರಿಂದ ತೊಂದರೆಯನ್ನು ಅನುಭವಿಸುತ್ತೀರಿ. ವೈರಿಗಳಿಂದ ತೊಂದರೆ ಇರುತ್ತದೆ. ಪ್ರತಿಯೊಂದು ವಿಷಯದಲ್ಲಿಯೂ ಸಂಶಯ ಇರುತ್ತದೆ. ದೂರ ಸಂಚಾರದಿAದ ನಷ್ಟವನ್ನು ಅನುಭವಿಸುತ್ತಾರೆ.

ಮೂಢನಂಬಿಕೆಯಲ್ಲ ಈ ಹಿಂದೂ ಆಚರಣೆಗಳು,ಇದರ ಬೆನ್ನಿಗಿದೆ ವಿಜ್ಞಾನ!

ಸಿಂಹ - ಈ ರಾಶಿಯವರಿಗೆ ಪಂಚಮದ ಗುರು. ಅವಿವಾಹಿತರಿಗೆ ಒಳ್ಳೆಯ ಸಂಬAಧ ಕೂಡಿ ಬರುತ್ತದೆ. ಸಂತತಿಯೂ ಆಗುತ್ತದೆ. ಮನೆಯ ಶುಭ ಮಂಗಳ ಕೆಲಸಗಳು ನಡೆಯುತ್ತದೆ. ಮನೆ ಆಸ್ತಿ ಖರೀದಿಸುತ್ತೀರಿ. ವಾಹನ ಖರೀದಿ ಮಾರಾಟ ದಿಂದ ಲಾಭ ಇದೆ. ಚಿನ್ನ ಮತ್ತು ಅಲಂಕಾರ ವಸ್ತುಗಳನ್ನು ಖರೀದಿ ಮಾಡುತ್ತೀರಿ. ವಸ್ತç ಸಂಪತ್ತುಗಳು ಬರುತ್ತದೆ. ಒಳ್ಳೆಯ ಜನರ ಸಹವಾಸ ಮಾಡುತ್ತಾರೆ.

ಕನ್ಯಾ - ಇವರಿಗೆ ನಾಲ್ಕನೇ ಗುರು ಇವರಿಗೆ ಗಜ ಕೇಸರಿ ಯೋಗ ಇವರಿಗೆ ಹಣಕಾಸು ಬರುತ್ತದೆ. ಬಂಧು ಮಿತ್ರರರು
ಸಹಾಯ ಮಾಡುತ್ತಾರೆ. ಉನ್ನತ ವಿದ್ಯೆಯು ಲಭ್ಯವಾಗುತ್ತದೆ. ಉನ್ನತ  ವ್ಯಕ್ತಿಗಳ ಪರಿಚಯವೂ ಆಗುತ್ತದೆ. ಮನೆ ಆಸ್ತಿ ಖರೀದಿಸುವುದಕ್ಕೆ ಸರಿಯಾದ ಸಮಯ. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುತ್ತದೆ. ಮಕ್ಕಳಿಂದ ಲಾಭ ಇರುತ್ತದೆ. ಸ್ತಿçÃಯರಿಂದ ಸುಖ ಇದೆ.

ತುಲಾ - ಇವರಿಗೆ ಮೂರನೇ ಗುರು ಇವರು ಒಂದಲ್ಲ ಒಂದು ತೊಂದರೆಗಳಿಗೆ ಸಿಲುಕುತ್ತಾರೆ. ಸ್ತಿçÃಯರಿಂದ ತೊಂದರೆಯನ್ನು ಅನುಭವಿಸುತ್ತಾರೆ.  ವಾಹನಗಳಿಂದ ನಷ್ಟವನ್ನು ಅನುಭವಿಸುತ್ತೀರಿ. ಮನೆಯಲ್ಲಿ ಆಗಾಗ ಕಲಹಗಳು ಬರುತ್ತದೆ. ಸಾಲದಿಂದ ತೊಂದರೆಯನ್ನು ಅನುಭವಿಸುತ್ತಾರೆ. ಆರೋಗ್ಯವೂ ಪೇರಾಗುತ್ತದೆ. ನೆರೆ ಹೊರೆಯವರೊಡನೆ ತೊಂದರೆಗಳಿರುತ್ತದೆ.

ವೃಶ್ಚಿಕ - ರಾಶಿಯವರಿಗೆ ಎರಡನೆಯ ಗುರು ಇವರು ಪ್ರಯತ್ನಿಸಿದ ಕೆಲಸ ಜಯವಾಗುತ್ತದೆ. ಇವರಿಗೆ ಅಖಂಡ ಸಾಮ್ರಾಜ್ಯ ಯೋಗ ಇದೆ. ವಿವಿಧ ಮೂಲಗಳಿಂದ ಹಣ ಬರುತ್ತದೆ. ಶತ್ರುಗಳು ಎದುರು ಬರುವುದಿಲ್ಲ. ಸ್ತಿçÃಯರಿಂದ ಸುಖ ಸಿಗುತ್ತದೆ. ಹಿರಿಯರ ಆಸ್ತಿಯ ಭಾಗವು ಸಿಗುತ್ತದೆ. ಕೃಷಿಯ ವಿಷಯದಲ್ಲಿ ಲಾಭ ಇದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶಗಳಿರುತ್ತದೆ. ವ್ಯಾಪಾರ ವ್ಯವಹಾರದಿಂದ ಲಾಭ ಇದೆ.

ಧನು - ಇವರಿಗೆ ಜನ್ಮರಾಶಿಯ ಗುರು ಇವರಿಗೆ ಮಾನಸಿಕ ನೆಮ್ಮದಿ ಇರುವುದಿಲ್ಲ. ಕೆಲಸದಲ್ಲಿ ತೊಂದರೆಗಳು ಬರುತ್ತದೆ. ಸರಕಾರಿ ನೌಕರರಿಗೆ ತೊಂದರೆಗಳು ಬರುತ್ತದೆ. ವರ್ಗಾವಣೆಯಾಗುವ ಸಂಭವ ಇರುತ್ತದೆ. ಅವಿವಾಹಿತರು ವಿವಾಹಕ್ಕೇ ಪ್ರಯತ್ನಿಸಿದರು ಅಡೆ ತಡೆಯಾಗುತ್ತದೆ. ಮಕ್ಕಳಿಂದ ಸಮಸ್ಯೆಗಳು ಎದುರಾಗುತ್ತದೆ. ಸಾಲ ಕೊಟ್ಟ ಹಣ ಮರಳಿ ಬರುವುದಿಲ್ಲ. ಹಣ ಹೂಡಿಕೆಯನ್ನು ಜಾಗ್ರತೆಯಿಂದ ಮಾಡಿರಿ.

ಮಕರ - ರಾಶಿಯವರಿಗೆ ವ್ಯಯ ಸ್ಥಾನದ ಗುರು.- ಕೆಲವು ವಿಘ್ನಗಳನ್ನು ಎದುರಿಸ ಬೇಕಾಗುತ್ತದೆ. ಯಾವುದೇ ಕೆಲಸಗಳಲ್ಲಿ ಅಡೆ ತಡೆಯಾಗುತ್ತದೆ. ನ್ಯಾಯಲಯದ ಕೆಲಸಗಳಲ್ಲಿ ಅಪಜಯವಾಗುತ್ತದೆ. ಮನೆ ನಿರ್ಮಾಣದ ಕೆಲಸದಲ್ಲಿ ಅಡೆ ತಡೆಯಾಗುತ್ತದೆ.  ನ್ಯಾಯಾಲಯದ ಕೆಲಸಗಳಲ್ಲಿ ಅಪಜಯವಾಗುತ್ತದೆ. ಮನೆ ನಿರ್ಮಾಣದ ಕೆಲಸದಲ್ಲಿ ಅಡೆ ತಡೆಯಾಗುತ್ತದೆ. ಹಣ ಕಾಸಿನ ತೊಂದರೆಯಾಗುತ್ತದೆ, ಅನಾರೋಗ್ಯದಿಂದ ತೊಂದರೆಯನ್ನು ಅನುಭವಿಸುತ್ತೀರಿ. ವಿದ್ಯಾರ್ಥಿಗಳಿಗೂ ಸಮಸ್ಯೆಗಳು ಎದುರಾಗುತ್ತದೆ.    

ಕುಂಭ - ಏಕಾದಶದ ಗುರು - ಸರಕಾರಿ ನೌಕರರಿಗೆ ಮುಂಭಡ್ತಿಯಾಗಿ ಒಳ್ಳೆಯ ಸ್ಥಳಕ್ಕೆ ವರ್ಗಾವಣೆಯಾಗುತ್ತದೆ. ವಿವಿಧ ಮೂಲಗಳಿಂದ ಧನ ಲಾಭ ಬರುತ್ತದೆ. ವ್ಯಾಪಾರಸ್ಥರಿಗೆ ವಿಶೇಷ ಲಾಭವಾಗುತ್ತದೆ. ಮನೆ ಆಸ್ತಿ ಖರೀದಿ ಇಲ್ಲದಿದ್ದರೆ ಮಾರಾಟ ಮಾಡಿದರೂ ಲಾಭವಾಗುತ್ತದೆ. ಗೆಳೆಯರಿಂದ ಸಹಾಯ ಸಿಗುತ್ತದೆ. ಮನೆಗೆ ಬೇಕಾಗುವ ಸಾಮಾಗ್ರಿ ಖರೀದಿ ಮಾಡುತ್ತೀರಿ. ರಾಜಕೀಯದಲ್ಲಿ ಲಾಭ ಇದೆ.

ಮೀನ -  ಈ ರಾಶಿಯವರಿಗೆ ದಶಮದ ಗುರು ಇವರಿಗೆ ಗಜ ಕೇಸರಿ ಯೋಗ ಇರುತ್ತದೆ. ಈ ಜಾತಕದವರು ಧನಿಕರಾಗುತ್ತಾರೆ. ಸುಖ ಜೀವನ ಪ್ರಭಾವಿ ಜೀವನ ಮಾಡುತ್ತಾರೆ. ಉನ್ನತ ಶಿಕ್ಷಣದವರಿಗೆ ಒಳ್ಳೆಯದಾಗುತ್ತದೆ. ಎಡರು ತೊಡರು ದೂರ ಹೋಗುತ್ತದೆ. ಕೆಟ್ಟ ಫಲಗಳು ಇರುವುದಿಲ್ಲ. ನಿರುದ್ಯೋಗಿಗಳಿಗೆ ಸರಿಯಾದ ಉದ್ಯೋಗ ಸಿಗುತ್ತದೆ. ಹಣಕಾಸು ಹೊರಗಿನಿಂದ ಬರುತ್ತದೆ.

ಮೂಲ್ಕಿ ಡಾ| ಹರಿಶ್ಚಂದ್ರ ಪಿ ಸಾಲಿಯಾನ್
ಮೊಬೈಲ್ ನಂ.: 9448490860

Follow Us:
Download App:
  • android
  • ios