Asianet Suvarna News Asianet Suvarna News

ಕನಸಿನಲ್ಲಿ ಹಾವು: ಏನು ಹೇಳುತ್ತೆ ಸ್ವಪ್ನ ಶಾಸ್ತ್ರ, ಶುಭವೋ, ಅಶುಭವೋ?

ಭವಿಷ್ಯದಲ್ಲಿ ನಡೆಯುವ ಘಟನೆಗಳು ಕನಸಿನ ರೂಪದಲ್ಲಿ ಸೂಚನೆಯನ್ನು ನೀಡುತ್ತವೆ. ಕನಸಿನಲ್ಲಿ ಪ್ರಾಣಿ, ಪಕ್ಷಿ ಮತ್ತು ಕೀಟಗಳು ಕಾಣುತ್ತವೆ ಅವುಗಳು ಭವಿಷ್ಯಕ್ಕೆ ಸಂಬಂಧಿಸಿದ ವಿಚಾರಗಳ ವಿಶೇಷ ಅರ್ಥವನ್ನು ಹೊಂದಿರುತ್ತವೆ. ಹಾಗೆಯೇ ಹಾವಿನ ಕನಸು ಹಲವರಿಗೆ ಬೀಳುತ್ತದೆ. ಅದಕ್ಕೇನು ಅರ್ಥವಿರಬಹುದು ಎಂದು ಚಿಂತಿಸಿರುತ್ತೇವೆ. ಸಾಮಾನ್ಯವಾಗಿ ಕಾಳ ಸರ್ಪ ದೋಷವಿದ್ದರೆ ಹಾವಿನ ಕನಸು ಬೀಳುತ್ತದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಅದು ಇನ್ನೂ ಹಲವು ಬೇರೆ ವಿಷಯಗಳನ್ನು ತಿಳಿಸುವ ಸಂಕೇತವಾಗಿರುತ್ತದೆ. ಹಾಗಾದರೆ ಹಾವಿನ ಕನಸಿನ ಅರ್ಥವೇನೆಂಬುದನ್ನು ತಿಳಿಯೋಣ..

Dreaming snake in astrology and interpretation
Author
Bangalore, First Published Jun 17, 2021, 6:22 PM IST

ಸ್ವಪ್ನ ಶಾಸ್ತ್ರವು ಒಂದು ಅದ್ಭುತ ಶಾಸ್ತ್ರವಾಗಿದ್ದು, ಬೀಳುವ ಕನಸಿನ ಅರ್ಥವನ್ನು ತಿಳಿದುಕೊಳ್ಳುವ ಮಾರ್ಗ ಇದಾಗಿದೆ. ರಾತ್ರಿ ಮಲಗಿದಾಗ ಹಲವಾರು ರೀತಿಯ ಕನಸುಗಳು ಬೀಳುತ್ತವೆ. ಕೆಲವು ರಾತ್ರಿ ಮಲಗುವ ಮುಂಚೆ ಯೋಚಿಸಿದ ವಿಷಯಕ್ಕೆ ಸಂಬಂಧಿಸಿದ್ದರಬಹುದು. ಇಲ್ಲವೇ ಯಾವುದೋ ವಿಚಿತ್ರ ಘಟನೆ ಅಥವಾ ದೃಶ್ಯಗಳು ಕನಸಿನಲ್ಲಿ ಬರುತ್ತವೆ. ಅಷ್ಟೇ ಅಲ್ಲದೆ ಕನಸಿನಲ್ಲಿ ಜೀವ-ಜಂತುಗಳು ಸಹ ಕಾಣುತ್ತವೆ. ಹೀಗೆ ನಾನಾ ವಿಧದ ಕನಸುಗಳು ದಿನಲೂ ಬೀಳುತ್ತವೆ. ಅವೆಲ್ಲವಕ್ಕೂ ಒಂದೊಂದು ಅರ್ಥವಿರುತ್ತದೆ.

ಹೌದು. ಕಾಳ ಸರ್ಪ ದೋಷವಿದ್ದರೆ ಹಾವಿನ ಕನಸು ಬೀಳುತ್ತದೆ ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ, ಹಾವಿನ ಕನಸು ಬಿತ್ತೆಂದರೆ ಅದು ಕಾಳಸರ್ಪ ದೋಷವಿದೆ ಎಂದು ಅರ್ಥವಲ್ಲ. ಕಾಳಸರ್ಪ ದೋಷವನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿಯೂ ಸಹ ಹಾವಿನ ಅನೇಕ ಕನಸುಗಳು ಬೀಳುತ್ತವೆ.

ಇದನ್ನು ಓದಿ: ಈ ನಾಲ್ಕು ರಾಶಿಯವರು ಮಾತಿನಿಂದಲೇ ಮೋಡಿ ಮಾಡುವರು…! 

ಈ ಸಂಕೇತದ ಕನಸು ಕಾಳಸರ್ಪ ದೋಷ ಸೂಚಿಸುತ್ತೆ

ಸ್ವಪ್ನ ಶಾಸ್ತ್ರದ ಪ್ರಕಾರ ಹಾವಿನ ಕನಸುಗಳಿಗೆ ಹಲವು ಅರ್ಥಗಳಿವೆ. ಕನಸಿನಲ್ಲಿ ಹಾವು ಕಾಣಿಸುವುದಕ್ಕೆ ಇರುವ ಬೇರೆ ಬೇರೆ ಕಾರಣಗಳನ್ನು ವಿಶ್ಲೇಷಿಸಲಾಗಿದೆ. ಕನಸಿನಲ್ಲಿ ಹಾವು ನಿಮ್ಮನ್ನು ಹಿಂಬಾಲಿಸುತ್ತಾ ಬರುತ್ತಿದೆ ಎಂದಾದರೆ ಅದು ಕಾಳಸರ್ಪ ದೋಷಕ್ಕೆ ಸಂಬಂಧಿಸಿದ್ದಾಗಿರಬಹುದು. ಅಷ್ಟೇ ಅಲ್ಲದೆ ಹಾವು ನೀರಿನಲ್ಲಿ ಈಜುತ್ತಿರುವ ಕನಸು ಬಿದ್ದರೆ, ಅದ ಸಹ ಕಾಳಸರ್ಪ ದೋಷಕ್ಕೆ ಸಂಬಂಧಿಸಿದ್ದೆಂದು ಹೇಳಲಾಗುತ್ತದೆ.
ಕೆಲವು ಬಾರಿ ಹಾವು ಜಿಗಿಯುತ್ತಿರುವಂತೆ ಕನಸು ಕಂಡರೆ ಅಥವಾ ಕೈ- ಕಾಲಿಗೆ ಸುತ್ತಿಕೊಂಡಂತೆ ಕನಸು ಕಂಡರೆ ಅದು ಕಾಳಸರ್ಪ ದೋಷಕ್ಕೆ ಸಂಬಂಧಿಸಿದ್ದೆಂದು ಹೇಳಲಾಗುತ್ತದೆ. 

Dreaming snake in astrology and interpretation


ಪದೇ ಪದೆ  ಹಾವು ಕನಸಿನಲ್ಲಿ ಕಂಡರೆ, ಹಾವು ಕಚ್ಚಿದಂತೆ ಸ್ವಪ್ನ ಬಿದ್ದರೆ ಮತ್ತು ಹಾವುಗಳು ಪರಸ್ಪರ ಜಗಳವಾಡುತ್ತಿರುವ ದೃಶ್ಯ ಕನಸಿನಲ್ಲಿ ಕಂಡರೆ ಕಾಳಸರ್ಪ ದೋಷವಿದೆ ಎಂದು ಹೇಳಲಾಗುತ್ತದೆ. ಇಂಥ ಕನಸುಗಳು ಬಿದ್ದಾಗ ಜಾತಕದಲ್ಲಿ ಕಾಳಸರ್ಪ ದೋಷವಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಕಾಳಸರ್ಪ ದೋಷವಿದೆ ಎಂದಾದಲ್ಲಿ ಅದಕ್ಕೆ ತಕ್ಕ ಪರಿಹಾರವನ್ನು ಸರ್ಪಗಳಿಗೆ ಸಂಬಂಧಿಸಿದ ಪುಣ್ಯಕ್ಷೇತ್ರಗಳಿಗೆ ತೆರಳಿ ಅಲ್ಲಿಯೇ ಮಾಡಿಸಿಕೊಳ್ಳುವುದು ಉತ್ತಮ. ಅದು ಸಾಧ್ಯವಿಲ್ಲದ ಪಕ್ಷದಲ್ಲಿ ಅದಕ್ಕೆ ತಕ್ಕ ಶಾಂತಿಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. 

ಇದನ್ನು ಓದಿ: ಗುರುವಾರ ಹೀಗೆ ಮಾಡಿ ಜೀವನ-ಉದ್ಯೋಗದಲ್ಲಿ ಯಶಸ್ಸು ಗಳಿಸಿ..! 

ಹಾವಿಗೆ ಸಂಬಂಧಿಸಿದ ಶುಭ ಸ್ವಪ್ನಗಳು
ಹಾವಿನ ಬಗ್ಗೆ ಬೀಳುವ ಕನಸುಗಳೆಲ್ಲವೂ ಅಶುಭವೆಂದಲ್ಲ. ಹಾವಿನ ಕನಸುಗಳು ಕೆಲವೊಂದು ಶುಭ  ಸಂಕೇತವನ್ನು ಸೂಚಿಸುತ್ತವೆ. ಹಾಗಾದರೆ ಅವು ಯಾವುವು ಎಂದು ತಿಳಿಯೋಣ..

- ಹಾವು ದೇವಸ್ಥಾನದಲ್ಲಿರುವಂತೆ ಕನಸಿನಲ್ಲಿ ಕಂಡರೆ ಇದರ ಅರ್ಥ ಕೆಲ ದಿನಗಳಲ್ಲಿ ನಿಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ಸಂಕೇತವನ್ನು ಸೂಚಿಸುತ್ತದೆ.

- ಹಾವು ಮರದ ಮೇಲೆ ಹತ್ತುತ್ತಿರುವಂತೆ ಕನಸಿನಲ್ಲಿ ಕಂಡರೆ ಮುಂಬರುವ ದಿನಗಳಲ್ಲಿ ಬರಬೇಕಿದ್ದ ಹಣ ವಾಪಸ್ ಬರುತ್ತದೆ ಎಂಬ ಸಂಕೇತವನ್ನು ಸೂಚಿಸುತ್ತದೆ.

- ಸ್ವಪ್ನದಲ್ಲಿ ಹಾವು ಶಿವಲಿಂಗವನ್ನು ಸುತ್ತಿಕೊಂಡಿರುವಂತೆ ಕಂಡರೆ ನಿಮ್ಮ ಮೇಲೆ ಸದಾಶಿವನ ಕೃಪೆ ಇದೆ ಎಂದರ್ಥ. ಅಷ್ಟೇ ಅಲ್ಲದೆ ಮಾಡುವ ಕೆಲಸಗಳಲ್ಲಿ ಸಫಲತೆ ಸಿಗುತ್ತದೆ.

- ಶ್ವೇತ ವರ್ಣದ ಸರ್ಪವನ್ನು ಅಥವಾ ಹಾವನ್ನು ನೋಡಿದರೆ ಶುಭವೆಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ನಕ್ಷತ್ರದಲ್ಲಿ ಜನಿಸಿದವರು ಅದೃಷ್ಟವಂತರು...! 

ಹಾವಿಗೆ ಸಂಬಂಧಿಸಿದ ಅಶುಭ ಕನಸುಗಳು

- ಕನಸಿನಲ್ಲಿ ಸತ್ತಿರುವ ಹಾವನ್ನು ಕಂಡರೆ ಅದು ಅತ್ಯಂತ ಸಂಕಷ್ಟದ ಮುನ್ಸೂಚನೆಯ ಸೂಚಕವೆಂದು ಹೇಳಲಾಗುತ್ತದೆ.

- ಕನಸಿನಲ್ಲಿ ಹಾವು ಮರದಿಂದ ಇಳಿಯುತ್ತಿರುವಂತೆ ಕಂಡರೆ ಅದು ಧನಹಾನಿಯ ಸೂಚಕವೆಂದು ಹೇಳಲಾಗುತ್ತದೆ.

- ಎರಡು ಹಾವುಗಳು ಒಟ್ಟಿಗೆ ಇರುವ ದೃಶ್ಯವನ್ನು ಕನಸಿನಲ್ಲಿ ಕಂಡರೆ ಅದು ಅಶುಭದ ಸಂಕೇತವೆಂದು ಹೇಳಲಾಗುತ್ತದೆ.

- ಹಾವು ಕಡಿಯುವಂತೆ ಕನಸು ಕಂಡರೆ ಅದು ಗಂಭೀರವಾದ ರೋಗಕ್ಕೆ ತುತ್ತಾಗುವ ಸೂಚನೆಯನ್ನು ನೀಡುತ್ತದೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗುತ್ತದೆ.

Follow Us:
Download App:
  • android
  • ios