Asianet Suvarna News Asianet Suvarna News

ನಾಗರ ಪಂಚಮಿ ಹಿಂದಿನ ರಾತ್ರಿ ಈ ರೀತಿ ಮಾಡಿದ್ರೆ ಶ್ರೀಮಂತಿಕೆ ಬರುತ್ತೆ!

ನಾಗ ಪಂಚಮಿಯ ದಿನದಂದು ಶಿವನನ್ನು ಪೂಜಿಸಲಾಗುತ್ತದೆ. ಆತ ಬಹು ಬೇಗನೆ ಸಂತುಷ್ಟನಾಗುತ್ತಾನೆ. ನಾಗರ ಪಂಚಮಿಯ ಹಿಂದಿನ ದಿನ ಈ ಒಂದು ಉಪಾಯ ಕೈಗೊಳ್ಳುವುದರಿಂದ, ಶಿವನ ಕೃಪೆಯಿಂದ ಅಪಾರ ಸಂಪತ್ತು ಮತ್ತು ಅಪೇಕ್ಷಿತ ಫಲಿತಾಂಶಗಳು ದೊರೆಯುತ್ತವೆ.

Do this remedy on the night before Nag Panchami you will become rich skr
Author
Bangalore, First Published Aug 1, 2022, 3:38 PM IST | Last Updated Aug 1, 2022, 3:38 PM IST

ಶ್ರಾವಣ ಮಾಸ ನಡೆಯುತ್ತಿದೆ. ಈ ತಿಂಗಳು ಶಿವನಿಗೆ ಅತ್ಯಂತ ಪ್ರಿಯವಾದ ತಿಂಗಳು. ಈ ಮಾಸವು ಆಗಸ್ಟ್ 27ರಂದು ಕೊನೆಗೊಳ್ಳುತ್ತದೆ. ಈ ತಿಂಗಳಲ್ಲಿ 4 ಸೋಮವಾರಗಳು ಇವೆ. ಶ್ರಾವಣ ಸೋಮವಾರ 2022 ಭಗವಾನ್ ಶಿವನಿಗೆ ಸಮರ್ಪಿತವಾಗಿದೆ. ಶ್ರಾವಣ ಸೋಮವಾರದಂದು ಶಿವನ ಆರಾಧನೆ ಮತ್ತು ಈ ಒಂದು ಪರಿಹಾರವನ್ನು ತೆಗೆದುಕೊಳ್ಳುವುದರಿಂದ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.

ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ, ಭಗವಾನ್ ಶಿವನನ್ನು ಮೆಚ್ಚಿಸಲು ಮತ್ತು ಆತನ ಅನಂತ ಅನುಗ್ರಹವನ್ನು ಪಡೆಯಲು ಒಂದು ಮಾರ್ಗವಿದೆ, ಇದು ಶ್ರಾವಣ ಸೋಮವಾರ ರಾತ್ರಿ ಮಾಡಬೇಕಾದ ನಿಯಮವಾಗಿದೆ. ಈ ಬಾರಿ ಶ್ರಾವಣದ ಮೊದಲ ಸೋಮವಾರವು ನಾಗರ ಪಂಚಮಿಗೆ ಒಂದು ದಿನ ಮುಂಚಿತವಾಗಿ ಬೀಳುತ್ತಿದೆ. ಹಾಗಾಗಿ ನಾಗರ ಪಂಚಮಿಯ ಹಿಂದಿನ ರಾತ್ರಿಯಂದು ಈ ಪರಿಹಾರವನ್ನು ತೆಗೆದುಕೊಳ್ಳುವುದರಿಂದ, ಅದರ ಪುಣ್ಯ ಫಲವು ಹಲವಾರು ಪಟ್ಟು ಹೆಚ್ಚಾಗುತ್ತದೆ. ಈ ಪರಿಹಾರವನ್ನು ತೆಗೆದುಕೊಳ್ಳುವುದರಿಂದ ಶಿವನು ತನ್ನ ಭಕ್ತರ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ.

ನಾಗರ ಪಂಚಮಿಯ ದಿನದಂದು 12 ದೇವ ಸರ್ಪಗಳಿಗೆ ಮಾಡಿ ಪೂಜೆ

ಶ್ರಾವಣ ಸೋಮವಾರದ ಪರಿಹಾರ

  • ಶ್ರಾವಣ ಸೋಮವಾರ ರಾತ್ರಿ ಶಿವನ ದೇವರ ಯಾವುದೇ ದೇವಾಲಯಕ್ಕೆ ಹೋಗಿ. ರಾತ್ರಿ ಅಲ್ಲಿಗೆ ಹೋಗಿ ದೇವಸ್ಥಾನವನ್ನು ಸ್ವಚ್ಛಗೊಳಿಸಿ. ಅದರ ನಂತರ ಶಿವನ ಮುಂದೆ ಸ್ಥಳೀಯ ಹಸುವಿನ ಶುದ್ಧ ತುಪ್ಪದ ದೀಪವನ್ನು ಬೆಳಗಿಸಿ. ಈಗ ಅಲ್ಲಿ ಕುಳಿತು, 'ಓಂ ನಮಃ ಶಿವಾಯ' ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸಿ. ಇದರ ನಂತರ, ನಿಮ್ಮ ಇಚ್ಛೆಯನ್ನು ಶಿವನ ಮುಂದೆ ಬಹಳ ಗೌರವದಿಂದ ಹೇಳಿಕೊಳ್ಳಿ. ಈ ರೀತಿ ಮಾಡುವುದರಿಂದ ಬಡವರಲ್ಲಿ ಬಡವರೂ ಶ್ರೀಮಂತರಾಗಬಹುದು ಎಂಬ ನಂಬಿಕೆ ಇದೆ.
  • ಇದಲ್ಲದೆ, ಈ ದಿನ 21 ಬಿಲ್ಪತ್ರೆಯ ಮೇಲೆ ಬಿಳಿ ಚಂದನದಿಂದ 'ಓಂ ನಮಃ ಶಿವಾಯ' ಎಂದು ಬರೆಯಿರಿ ಮತ್ತು ಅದನ್ನು ಶಿವಲಿಂಗಕ್ಕೆ ಅರ್ಪಿಸಿ. ಈ ಪರಿಹಾರವು ನಿಮ್ಮ ಎಲ್ಲ ಆಸೆಗಳನ್ನು ಪೂರೈಸುತ್ತದೆ.
  • ನೀರಿನಲ್ಲಿ ಹಾಲು ಮತ್ತು ಕಪ್ಪು ಎಳ್ಳನ್ನು ಸೇರಿಸಿ ಶಿವಲಿಂಗದ ಅಭಿಷೇಕ ಮಾಡಿ. ಇದರಿಂದ ರೋಗಗಳು ದೂರವಾಗುತ್ತವೆ.
  • ನೀವು ಶಿವಲಿಂಗವನ್ನು ನೀರಿನ ಬದಲು ಹಾಲು ಅಥವಾ ಇನ್ನಾವುದೇ ವಸ್ತುವಿನಿಂದ ಅಭಿಷೇಕ ಮಾಡಲು ಬಯಸಿದರೆ, ನೀವು ಅದನ್ನು ಸಹ ಮಾಡಬಹುದು, ಆದರೆ ಅದರ ನಂತರ ನೀವು ಶಿವಲಿಂಗದ ಮೇಲೆ ಸಾಕಷ್ಟು ಶುದ್ಧ ನೀರನ್ನು ಸಹ ಅರ್ಪಿಸಬೇಕಾಗುತ್ತದೆ, ಇಲ್ಲದಿದ್ದರೆ ನಿಮ್ಮ ಪೂಜೆಯು ಅಪೂರ್ಣವೆಂದು ಪರಿಗಣಿಸಲಾಗುತ್ತದೆ.
  • ಈ ದಿನ ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಪಠಿಸುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ. ಅಲ್ಲದೆ, ಈ ಮಂತ್ರವನ್ನು ಜಪಿಸುವುದರಿಂದ ನಿಮ್ಮ ಎಲ್ಲಾ ತೊಂದರೆಗಳು ಮತ್ತು ಮರಣ ದೋಷಗಳು ಸಹ ದೂರವಾಗುತ್ತವೆ.
  • ಈ ದಿನ ಶಿವಲಿಂಗಕ್ಕೆ ಹಸಿ ಹಸುವಿನ ಹಾಲನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಮಹಾದೇವನ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

    ನಾಗರಪಂಚಮಿ ಹಬ್ಬ 2022 ಯಾವಾಗ, ಮಹತ್ವವೇನು? ಆಚರಣೆ ಹೇಗೆ?

ನಾಗ ಪಂಚಮಿ ಶುಭ ಮುಹೂರ್ತ 
ಪಂಚಮಿ ತಿಥಿ ಪ್ರಾರಂಭ: ಆಗಸ್ಟ್ 2, 2022ರಂದು ಬೆಳಿಗ್ಗೆ 05:14 ರಿಂದ.
ಪಂಚಮಿ ತಿಥಿ ಮುಕ್ತಾಯ: ಆಗಸ್ಟ್ 3, 2022ರಂದು ಬೆಳಿಗ್ಗೆ 05:42ಕ್ಕೆ.
ನಾಗರ ಪಂಚಮಿ ಪೂಜೆ ಮುಹೂರ್ತ: 2ನೇ ಆಗಸ್ಟ್ 2022ರಂದು ಬೆಳಿಗ್ಗೆ 05:42ರಿಂದ 08:24ರವರೆಗೆ.
ಮುಹೂರ್ತದ ಅವಧಿ: 2 ಗಂಟೆ 41 ನಿಮಿಷಗಳು.

(ಈ ಮಾಹಿತಿಯು ಎಲ್ಲೆಡೆ ಪ್ರಚಲಿತದಲ್ಲಿರುವ ನಂಬಿಕೆಗನುಗುಣವಾಗಿ ನೀಡಲಾಗಿದೆ. ಏಷ್ಯಾನೆಟ್ ನ್ಯೂಸ್ ಕನ್ನಡ ಈ ಸುದ್ದಿಯನ್ನು ದೃಢೀಕರಿಸುವುದಿಲ್ಲ)

Latest Videos
Follow Us:
Download App:
  • android
  • ios