Ganesh Chaturthi: ಗಣೇಶನಿಗೆ ದೂರ್ವೆ ಬೇಕು, ತುಳಸಿ ಇಡಬಾರದು!
ಗಣೇಶನ ಪೂಜೆ ಮಾಡುವಾಗ ಕೆಲವು ವಸ್ತುಗಳನ್ನು ಬಳಕೆ ಮಾಡಬಾರದು. ಅವುಗಳಿಂದ ಪೂಜಿಸುವವರಿಗೆ ಹಾನಿಯಾಗುತ್ತದೆ. ಏಕೆಂದರೆ, ಮಂಗಳ ಮೂರುತಿ ಗಣೇಶನಿಗೆ ಕೆಲವು ವಸ್ತುಗಳನ್ನು ಕಂಡರೆ ಸ್ವಲ್ಪವೂ ಇಷ್ಟವಿಲ್ಲ. ಅದರಿಂದ ಆತ ಸಂಪ್ರೀತಿಗೊಳ್ಳುವುದಿಲ್ಲ.

ಗಣೇಶ ಮಂಗಳ ಮೂರ್ತಿ. ಜಗದಂಬೆಯ ಸುತ. ಕರುಣೆಯಿಂದ ಭಕ್ತರನ್ನು ಪೊರೆಯುವ ದೇವ. ಮೂಷಿಕವೇರಿ ರಂಜಿಪ ಲೋಕದ ಪೂಜ್ಯ. ಸಿಂಧೂರ ಭೂಷಿತ. ಚಂದ್ರನ ಗರ್ವವನ್ನು ಮುರಿದಾತ. ಚಂದನ ಲೇಪಿತ ಚಂದ್ರಮೌಳಿಯ ಪುತ್ರ. ಎಲ್ಲಕ್ಕಿಂತ ಮಿಗಿಲಾಗಿ ಆತ ಜ್ಞಾನದ ಗಣಿ. ಆತನ ಪೂಜೆ ಮಾಡುವುದರಿಂದ ಯಶಸ್ಸು, ನೆಮ್ಮದಿ ಲಭಿಸುತ್ತದೆ. ವಿಘ್ನ ನಿವಾರಕನನ್ನು ಪೂಜಿಸುವುದರಿಂದ ಜೀವನದ ಸಕಲ ಅಡೆತಡೆಗಳು ನಿವಾರಣೆಯಾಗಿ ಯಶಸ್ಸು ಲಭಿಸುತ್ತದೆ. ಎಲ್ಲ ರೀತಿಯ ವಿಘ್ನಗಳೂ ದೂರವಾಗುತ್ತವೆ. ಆದರೆ, ಗಣಪತಿ ಪೂಜೆಯಲ್ಲಿ ಕೆಲವು ವಸ್ತುಗಳನ್ನು ಎಂದಿಗೂ ಬಳಕೆ ಮಾಡಬಾರದು. ಗಣೇಶನ ಪೂಜೆಗೆ ಅವುಗಳನ್ನು ಬಳಕೆ ಮಾಡುವುದರಿಂದ ಪಾಪ ಬರುತ್ತದೆ ಎಂದು ಹೇಳಲಾಗುತ್ತದೆ. ತನಗೆ ಸಲ್ಲದ ವಸ್ತುಗಳನ್ನು ಇಟ್ಟು ಪೂಜಿಸುವುದರಿಂದ ಆತ ಕೋಪಿಸಿಕೊಳ್ಳುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳಿಂದ ಗಣೇಶನ ಪೂಜೆ ಮಾಡುವುದು ವರ್ಜನೀಯ.
ತುಂಡಾದ ಅಕ್ಕಿ ಕಾಳುಗಳು (Broken Rice)
ಗಣೇಶ ಪೂಜೆಯಲ್ಲಿ (Ganesha Worship) ಸಾಮಾನ್ಯವಾಗಿ ಅಕ್ಷತೆಯನ್ನು ಬಳಕೆ ಮಾಡಲಾಗುತ್ತದೆ. ಮನೆಯಲ್ಲಿರುವ ಅಕ್ಕಿಗೆ ಸ್ವಲ್ಪ ಅರಿಶಿಣ, ಕುಂಕುಮ ಸೇರಿಸಿ ಅಕ್ಷತೆ ಮಾಡುತ್ತೇವೆ. ಆದರೆ, ಈ ಅಕ್ಷತೆಗೆ ತುಂಡಾದ ಅಕ್ಕಿಯ ಕಾಳುಗಳನ್ನು ಬಳಸಬಾರದು. ತುಂಡಾದ ಅಕ್ಕಿ ಕಾಳುಗಳಿಂದ ಗಣೇಶ ಸುಪ್ರೀತನಾಗುವುದಿಲ್ಲ. ಅಕ್ಷತೆಗೆ ಬಳಸುವ ಅಕ್ಕಿಯನ್ನು ಸಾಣೆ ಹಿಡಿದು, ಇಡಿಯ (Whole) ಕಾಳುಗಳನ್ನು ಮಾತ್ರವೇ ಬಳಕೆ ಮಾಡಿ. ಇಡಿಯ ಅಕ್ಕಿ ಕಾಳುಗಳ ಅಕ್ಷತೆಯಿಂದ ಅರ್ಚನೆ ಮಾಡಿದರೆ ಜೀವನದ ಎಲ್ಲ ಸಮಸ್ಯೆಗಳೂ (Problems) ತುಂಡಾಗಿ (Cut) ಹೋಗುತ್ತವೆ ಎಂದು ನಂಬಲಾಗುತ್ತದೆ.
Ganesha Chaturthi 2023: ಗಣೇಶ ಹಬ್ಬದ ಮಂಗಳಕರ ಸಮಯ, ಸರಿಯಾದ ದಿನಾಂಕ ತಿಳಿಯಿರಿ
ಬಿಳಿಯ ಹೂವು (White Flower)
ಗಣೇಶ ದೇವರಿಗೆ ಬಿಳಿಯ ಹೂವುಗಳೆಂದರೆ ಆಗಿಬರುವುದಿಲ್ಲ. ಆತ ಎಂದಿಗೂ ಕೆಂಪು (Red) ಹೂವಿಗೆ ಮನಸೋಲುತ್ತಾನೆ. ಬಿಳಿಯ ಹೂವುಗಳೆಂದರೆ ಆತನಿಗೆ ಇಷ್ಟವಿಲ್ಲ. ಕೆಂಪು ದಾಸವಾಳ, ಕೆಂಪು ಕಣಗಿಲೆ ಹೂವುಗಳಿಂದ ಪೂಜಿಸುವುದು ಶ್ರೇಯಸ್ಕರ.
ಬಾಡಿದ (Dry) ಹೂವುಗಳು
ದೇವರಿಗೆ ಎಂದಿಗೂ ಬಾಡಿದ ಹೂವುಗಳನ್ನಿಟ್ಟು ಪೂಜಿಸಬಾರದು. ಬಾಡಿದ ಹೂವುಗಳಿಂದ ಗಣೇಶನ ಅರ್ಚನೆ ಮಾಡಬೇಡಿ. ಬಾಡಿದ ಹೂವುಗಳನ್ನು ಬಳಕೆ ಮಾಡುವುದರಿಂದ ಮನೆಯಲ್ಲಿ ದಾರಿದ್ರ್ಯ (Poor) ವಾಸ ಮಾಡುತ್ತದೆ ಎನ್ನಲಾಗುತ್ತದೆ. ಹಬ್ಬಕ್ಕೆಂದು ಎರಡು ದಿನ ಮುನ್ನವೇ ಹೂವುಗಳನ್ನು ಖರೀದಿ ಮಾಡಿ ತಂದರೂ ಅವು ಬಾಡದಂತೆ ನೋಡಿಕೊಳ್ಳುವುದು ಅಗತ್ಯ.
ಬಿಳಿ ಬಟ್ಟೆ (White Cloth) ಸಲ್ಲದು
ಮೊದಲೇ ಹೇಳಿದಂತೆ ಗಣೇಶನಿಗೆ ಬಿಳಿ ಬಣ್ಣವೆಂದರೆ ಆಗದು. ಹೀಗಾಗಿ, ಗಣೇಶನ ಪೂಜೆ ಸಮಯದಲ್ಲಿ ಬಿಳಿ ಬಣ್ಣದ ಬಟ್ಟೆ ಧರಿಸುವುದು ಶ್ರೇಯಸ್ಕರವಲ್ಲ. ಇದಕ್ಕೂ ಒಂದು ಪೌರಾಣಿಕ ಕತೆಯಿದೆ. ಅದೇ ಚಂದ್ರ ಮತ್ತು ಗಣೇಶರ ಕತೆ. ಎಲ್ಲರಿಗೂ ಗೊತ್ತಿರುವಂತೆ, ಗಣೇಶನ ಹೊಟ್ಟೆ ನೋಡಿ ಚಂದ್ರ ಅಪಹಾಸ್ಯ ಮಾಡಿದ್ದ. ಆಗ ಗಣೇಶ ಚಂದ್ರನಿಗೆ ಶಾಪ ನೀಡಿ ಗರ್ವವನ್ನು ಮುರಿದಿದ್ದ. ಅದರಿಂದಾಗಿ, ಆ ದಿನ ಚಂದ್ರನನ್ನು ನೋಡಬಾರದು ಎಂದು ಹೇಳುತ್ತಾರೆ. ಚಂದ್ರನೂ ಬಿಳಿಯ ಬಣ್ಣದಲ್ಲಿರುವುದರಿಂದ ಗಣೇಶನಿಗೆ ಬಿಳಿಯ ಬಣ್ಣದ ಬಗ್ಗೆ ಒಲವಿಲ್ಲ ಎನ್ನಲಾಗುತ್ತದೆ.
ಬುಧವಾರ ಗಣೇಶನಿಗೆ ಪ್ರಿಯ, ಶುಭ ಲಾಭಕ್ಕಾಗಿ ಗಣೇಶನಿಗೆ ಇವುಗಳನ್ನು ಅರ್ಪಿಸಿ..!
ತುಳಸಿಯನ್ನಿಡಬಾರದು
ಗಣೇಶನ ಪೂಜೆಗೆ ಎಂದಿಗೂ ತುಳಸಿಯನ್ನು (Tulsi) ಇಡಬಾರದು. ಪೌರಾಣಿಕ ಕತೆಯ (Story) ಪ್ರಕಾರ, ತುಳಸಿ ಮತ್ತು ಗಣೇಶರ ಮದುವೆ (Marriage) ಪ್ರಸ್ತಾಪ ಬಂದಾಗ, ಅದನ್ನು ಗಣೇಶ ತಿರಸ್ಕರಿಸಿದ್ದ. ಆಗ ತುಳಸಿ ಕೋಪದಿಂದ ಆತನಿಗೆ ಎರಡು ಮದುವೆಯಾಗುವಂತೆ ಶಾಪ ಇತ್ತಿದ್ದಳು. ಹೀಗಾಗಿ, ಚತುರ್ಥಿ ಹಬ್ಬದಲ್ಲಿ ತುಳಸಿಯನ್ನು ಬಳಕೆ ಮಾಡುವುದು ಸಲ್ಲದು.