Thursday Special: ಈ ದಿನ ತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ, ಬಡತನ ಬರಬಹುದು!

ದಾನ ಕಾರ್ಯ ಯಾವಾಗಲೂ ಒಳ್ಳೆಯದೇ. ಆದರೆ, ಯಾವ ದಿನ ಯಾವುದರ ದಾನ ಮಾಡಬೇಕು, ಯಾವುದನ್ನು ದಾನ ಮಾಡಬಾರದು ಎಂಬ ಅರಿವಿರಬೇಕು. ಏಕೆಂದರೆ, ದಾನಕ್ಕೂ ಗ್ರಹದೋಷಕ್ಕೂ ಸಂಬಂಧವಿದೆ. ಗುರುವಾರದ ದಿನ ನೀವು ಯಾವೆಲ್ಲ ವಸ್ತುಗಳನ್ನು ದಾನ ಮಾಡಬಾರದು ಎಂಬುದನ್ನು ತಿಳಿಸುತ್ತೇವೆ. 

Do not donate these things even by mistake on Thursday skr

ಗುರುವಾರ ವಾರದ ಶ್ರೇಷ್ಠ ದಿನಗಳಲ್ಲೊಂದು. ಈ ದಿನ ವಿಷ್ಣುವಿನ ಪೂಜೆಗೆ ಮೀಸಲಾಗಿದೆ. ಹಾಗೆಯೇ ಗುರು ಗ್ರಹಕ್ಕೆ ಸಂಬಂಧಿಸಿದೆ. ಧರ್ಮಗ್ರಂಥಗಳಲ್ಲಿ, ಗುರುವಾರ ಅನೇಕ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಈ ಕಾರ್ಯಗಳಲ್ಲಿ ಉಗುರುಗಳನ್ನು ಕತ್ತರಿಸುವುದು, ಕೂದಲು ತೊಳೆಯುವುದು, ಬಟ್ಟೆ ಒಗೆಯುವುದು, ಕೂದಲಿಗೆ ಎಣ್ಣೆ ಹಚ್ಚುವುದು ಸೇರಿವೆ. ಅದೇ ಸಮಯದಲ್ಲಿ, ಈ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ಹಾಗಂಥ ಗುರುವಾರ ದಾನ ಮಾಡಲೇಬಾರದೆಂದಲ್ಲ. ಗುರುವಾರ ಕೆಲ ವಸ್ತುಗಳನ್ನು ದಾನ ಮಾಡುವುದರಿಂದ ಗುರು ದೋಷ ಉಂಟಾಗಬಹುದು. ಗುರುವಾರದಂದು ಯಾವ ವಸ್ತುಗಳನ್ನು ದಾನ ಮಾಡಬಾರದು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. 

ಹಣದ ದೇಣಿಗೆ
ಗುರುವಾರ, ನೀವು ಯಾರಿಗೂ ಹಣವನ್ನು ದಾನ ಮಾಡಬಾರದು. ಈ ದಿನದಂದು ಹಣವನ್ನು ನೀಡಿದರೆ, ನಿಮ್ಮ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು ಎಂದು ನಂಬಲಾಗಿದೆ. ಅದಕ್ಕಾಗಿಯೇ ಈ ದಿನ ತುಂಬಾ ಅಗತ್ಯವಿದ್ದರೂ ಸಹ ಹಣವನ್ನು ವಿನಿಮಯ ಮಾಡಿಕೊಳ್ಳುವ ತಪ್ಪನ್ನು ಮಾಡಬೇಡಿ. ಬದಲಿಗೆ ಅದನ್ನು ಇತರೆ ದಿನಗಳಲ್ಲಿ ಮಾಡಿ. 

ಅನ್ನ ದಾನ
ಗುರುವಾರ ಬಿಳಿ ಅಕ್ಕಿಯನ್ನು ದಾನ ಮಾಡಬಾರದು. ಹೀಗೆ ಮಾಡುವುದರಿಂದ ಹಣದ ನಷ್ಟವಾಗುತ್ತದೆ. ಯಾವುದೇ ಕಾರಣಕ್ಕೆ ಅನ್ನ ದಾನ ಮಾಡಲೇಬೇಕಾದರೆ ಅದರಲ್ಲಿ ಅರಿಶಿನ ಬೆರೆಸಿ ನಂತರ ದಾನ ಮಾಡಿ. ವಾಸ್ತವವಾಗಿ, ಅಕ್ಕಿ ಅಥವಾ ಯಾವುದೇ ಬಿಳಿ ವಸ್ತುವು ಶುಕ್ರ ಗ್ರಹಕ್ಕೆ ನೇರವಾಗಿ ಸಂಬಂಧಿಸಿದೆ ಮತ್ತು ಈ ಕಾರಣಕ್ಕಾಗಿ, ಶುಕ್ರವಾರದಂದು ಬಿಳಿ ಅಕ್ಕಿಯನ್ನು ದಾನ ಮಾಡಿದರೆ ಅದು ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. 

Ram Navami 2023: ಭೇಟಿ ನೀಡಲೇಬೇಕಾದ ರಾಮಾಯಣ ತಾಣಗಳು

ಸಾಸಿವೆ ಎಣ್ಣೆ ದಾನ
ಗುರುವಾರ ಸಾಸಿವೆ ಎಣ್ಣೆಯನ್ನು ಯಾರಿಗೂ ದಾನ ಮಾಡಬೇಡಿ. ಸಾಸಿವೆ ಎಣ್ಣೆಯನ್ನು ಶನಿ ಗ್ರಹಕ್ಕೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಇದನ್ನು ದಾನ ಮಾಡಲು ಶನಿವಾರ ಉತ್ತಮ ದಿನವಾಗಿದೆ. ಗುರುವಾರದಂದು ಈ ಎಣ್ಣೆಯನ್ನು ದಾನ ಮಾಡುವುದರಿಂದ ನಿಮಗೆ ಹಾನಿಯಾಗಬಹುದು. ಈ ಎಣ್ಣೆಯು ಬೇರೆ ದಿನಗಳಲ್ಲಿ ಮನೆಯಿಂದ ಹೊರ ಹೋಗಬಾರದು ಎಂದು ನಂಬಲಾಗಿದೆ.

ಕಪ್ಪು ಬಟ್ಟೆ ದಾನ
ಗುರುವಾರದಂದು ಬಟ್ಟೆಗಳನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದರೆ ಈ ದಿನ ಕಪ್ಪು ಬಣ್ಣದ ಬಟ್ಟೆಗಳನ್ನು ದಾನ ಮಾಡಬೇಡಿ. ಈ ದಿನ ನೀವು ಕಪ್ಪು ಹೊದಿಕೆಯನ್ನು ಸಹ ದಾನ ಮಾಡಬಾರದು. ಹೀಗೆ ಮಾಡಿದರೆ ಮನೆಯಲ್ಲಿ ತೊಂದರೆ, ಕಷ್ಟಗಳು ಹೆಚ್ಚಾಗುತ್ತವೆ. ನೀವು ಬಟ್ಟೆಗಳನ್ನು ದಾನ ಮಾಡಲು ಬಯಸಿದರೆ, ಹಳದಿ ಮತ್ತು ಕಿತ್ತಳೆ ಬಣ್ಣದ ಬಟ್ಟೆಗಳನ್ನು ದಾನ ಮಾಡುವುದು ಈ ದಿನದಂದು ಉತ್ತಮವೆಂದು ಪರಿಗಣಿಸಲಾಗುತ್ತದೆ.

Zodiac Sign: ಪ್ರಾಮಾಣಿಕವಾಗಿ ಭಾವನೆ ಹಂಚ್ಕೊಳೋಕೆ ಸೋಲ್ತಾರೆ ಈ ಜನ

ಕಪ್ಪು ಮಸೂರ ದಾನ
ನೀವು ಗುರುವಾರದಂದು ಬಡವರು ಅಥವಾ ನಿರ್ಗತಿಕರಿಗೆ ಕಪ್ಪು ಮಸೂರವನ್ನು ದಾನ ಮಾಡಿದರೆ, ಈ ದಾನವು ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಕಪ್ಪು ಬಣ್ಣವು ಶನಿ ಗ್ರಹವನ್ನು ಪ್ರತಿನಿಧಿಸುತ್ತದೆ ಮತ್ತು ಈ ಧಾನ್ಯವನ್ನು ಶನಿವಾರದಂದು ದಾನ ಮಾಡಿದರೆ ಅದು ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ. ನೀವು ಗುರುವಾರ ಯಾರಿಗಾದರೂ ಧಾನ್ಯಗಳನ್ನು ದಾನ ಮಾಡಲು ಬಯಸಿದರೆ, ಹಳದಿ ಬೇಳೆ ಕಾಳುಗಳನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios