ಮಂಗಳವಾರ ಈ ವಸ್ತು ಖರೀದಿಸಿದರೆ ಧನಹಾನಿ; ಹನುಮಂತನ ಕೋಪಕ್ಕೆ ಗುರಿ..!

ಪುರಾಣಗಳ ಪ್ರಕಾರ ಹನುಮಂತನು ಮಂಗಳವಾರ ಜನಿಸಿದನು ಎಂದು ನಂಬಲಾಗಿದೆ. ಆದ್ದರಿಂದ ಈ ದಿನ ಹನುಮಂತನನ್ನು ಪೂಜಿಸುವುದರಿಂದ ವಿಶೇಷ ಪುಣ್ಯಗಳು ದೊರೆಯುತ್ತವೆ. ಇನ್ನು ಮಂಗಳವಾರ ಕೆಲವು ವಸ್ತುಗಳನ್ನು ಖರೀದಿಸಬಾರದು. ಇದರಿಂದ ಆರ್ಥಿಕ ನಷ್ಟಕ್ಕೆ ಉಂಟಾಗುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

do not buy these things by mistake on tuesday suh

ಪುರಾಣಗಳ ಪ್ರಕಾರ ಹನುಮಂತನು ಮಂಗಳವಾರ ಜನಿಸಿದನು ಎಂದು ನಂಬಲಾಗಿದೆ. ಆದ್ದರಿಂದ ಈ ದಿನ ಹನುಮಂತನನ್ನು ಪೂಜಿಸುವುದರಿಂದ ವಿಶೇಷ ಪುಣ್ಯಗಳು ದೊರೆಯುತ್ತವೆ. ಇನ್ನು ಮಂಗಳವಾರ ಕೆಲವು ವಸ್ತುಗಳನ್ನು ಖರೀದಿಸಬಾರದು. ಇದರಿಂದ ಆರ್ಥಿಕ ನಷ್ಟಕ್ಕೆ ಉಂಟಾಗುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.

ಮಂಗಳವಾರ ರಾಮಧೂತ ಹನುಮಂತ (hanuman) ನನ್ನು ಪೂಜಿಸಿದರೆ ಎಲ್ಲಾ ತೊಂದರೆಗಳಿಂದ ಪರಿಹಾರ ಸಿಗಲಿದೆ. ಮಂಗಳವಾರದಂದು ಹನುಮಾನ್ ದೇವಸ್ಥಾನಕ್ಕೆ ಹೋಗಿ ಪೂಜಿಸಿದರೆ ನೀವು ಎಲ್ಲಾ ರೋಗಗಳು, ದೋಷಗಳು ಮತ್ತು ತೊಂದರೆಗಳಿಂದ ಪಾರಾಗುತ್ತೀರಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ (Tuesday) ದಂದು ಯಾವುದೇ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೂ ಮಂಗಳವಾರದಂದು ಕೆಲವು ವಸ್ತುಗಳನ್ನು ಖರೀದಿಸಿದರೆ ಧನಹಾನಿ ಉಂಟಾಗುತ್ತದೆ ಎಂದು ನಂಬಲಾಗಿದೆ. ಇಂದಿನ ಲೇಖನದಲ್ಲಿ ಮಂಗಳವಾರದಂದು ಯಾವ ವಸ್ತುಗಳನ್ನು ಖರೀದಿಸಬಾರದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ

ಗಾಜಿನ ವಸ್ತುಗಳ ಖರೀದಿ ಬೇಡಿ

ಮಂಗಳವಾರದಂದು ಗಾಜಿನ ವಸ್ತು (Glass material) ಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರದಂದು ಯಾವುದೇ ಗಾಜಿನ ವಸ್ತುವನ್ನು ಖರೀದಿಸುವುದರಿಂದ ಹಣದ ನಷ್ಟವಾಗುತ್ತದೆ. ಈ ದಿನದಂದು ಗಾಜಿನ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು, ಇದು ಹಣದ ವ್ಯರ್ಥಕ್ಕೆ ಕಾರಣವಾಗುತ್ತದೆ.

ಭೂಮಿಯನ್ನು ಕೊಳ್ಳಬಾರದು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರದಂದು ಭೂಮಿಯನ್ನು ಕೊಳ್ಳಬಾರದು ಅಥವಾ ಪೂಜೆ ಮಾಡಬಾರದು. ಮಂಗಳವಾರದಂದು ಭೂಮಿ ಖರೀದಿಸುವುದು  (Buying land) ಅಥವಾ ಭೂಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ರೋಗ ಮತ್ತು ಬಡತನ ಬರುತ್ತದೆ ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಮನೆಯ ಮುಖ್ಯಸ್ಥರು ಮತ್ತು ಇತರ ಸದಸ್ಯರು ಅನಾರೋಗ್ಯಕ್ಕೆ ಒಳಗಾಗಬಹುದು. 

Daily Horoscope: ಇಂದು ಈ ರಾಶಿಯವರು ಪ್ರಯಾಣ ಮಾಡಬೇಡಿ; ಅಪಾಯ ತಪ್ಪಿದ್ದಲ್ಲ.!

 

ಕಪ್ಪು ಬಟ್ಟೆಗಳನ್ನು ಖರೀದಿಸಬಾರದು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರದಂದು ಕಪ್ಪು ಬಟ್ಟೆ (black clothes) ಗಳನ್ನು ಖರೀದಿಸಬಾರದು ಅಥವಾ ಧರಿಸಬಾರದು. ಮಂಗಳವಾರದಂದು ಕೆಂಪು ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಂಗಳವಾರದಂದು ಕೆಂಪು ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಮಂಗಳದೋಷ ಕಡಿಮೆಯಾಗಿ ಆರೋಗ್ಯ ಸುಧಾರಿಸುತ್ತದೆ. ಇದರೊಂದಿಗೆ ಮಂಗಳವಾರದಂದು ಕಬ್ಬಿಣವನ್ನು ಖರೀದಿಸುವುದು ಕೂಡ ಅಶುಭವೆಂದು ಪರಿಗಣಿಸಲಾಗಿದೆ.

ಮೇಕಪ್ ವಸ್ತುಗಳ ಖರೀದಿ ದುರದೃಷ್ಟಕರ

ಮಂಗಳವಾರದಂದು ಮೇಕಪ್  (Makeup) ವಸ್ತುಗಳನ್ನು ಖರೀದಿಸುವುದು ದುರದೃಷ್ಟಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಸಿಂಧೂರವನ್ನು ಹನುಮಾನ್‌ಗೆ ಅರ್ಪಿಸಲಾಗುತ್ತದೆ. ಆದ್ದರಿಂದ ಈ ದಿನ ಸಿಂಧೂರ ಅಥವಾ ಇತರ ಮೇಕಪ್ ವಸ್ತುಗಳನ್ನು ಖರೀದಿಸಬಾರದು. ಹೀಗೆ ಮಾಡುವುದರಿಂದ ಹೆಚ್ಚು ಹಣ ಖರ್ಚಾಗತೊಡಗುತ್ತದೆ ಎಂದು ನಂಬಲಾಗಿದೆ. ಮಂಗಳವಾರ ಮೇಕಪ್ ವಸ್ತುಗಳನ್ನು ಖರೀದಿಸುವುದು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

Hindu Rituals : ಮದುವೆಯಲ್ಲಿ ವರ್ತುಲ ಪದ್ಧತಿ: ಇದರ ಬಗ್ಗೆ ಎಷ್ಟು ಹಿಂದೂಗಳಿಗೆ ಗೊತ್ತು..?

 

ಹಾಲಿನ ಉತ್ಪನ್ನ ಹಾಗೂ ಸಿಹಿತಿಂಡಿ

ಮಂಗಳವಾರದಂದು ಹಾಲಿನ ಉತ್ಪನ್ನಗಳು ಮತ್ತು ಸಿಹಿತಿಂಡಿ (dessert) ಗಳನ್ನು ಯಾರಿಗೂ ಖರೀದಿಸಬಾರದು ಅಥವಾ ದಾನ ಮಾಡಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ಮನೆಯಲ್ಲಿ ಜಗಳ ಹೆಚ್ಚುತ್ತದೆ. ಮಂಗಳವಾರ ಹನುಮಾನ್‌ಜಿಗೆ ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸುವುದರಿಂದ ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ.

ಮಾಂಸ ಮತ್ತು ಮದ್ಯ ಸೇವನೆಯನ್ನು ಮಂಗಳವಾರ ನಿಷೇಧಿಸಲಾಗಿದೆ ಎಂದು ಪರಿಗಣಿಸಲಾಗಿದೆ. ಈ ದಿನ ಮಾಂಸಾಹಾರ ಮತ್ತು ಮದ್ಯವನ್ನು ಸೇವಿಸುವುದು ಅಥವಾ ಖರೀದಿಸುವುದು ಒಳ್ಳೆಯದಲ್ಲ. ಇದರಿಂದ ಧನಹಾನಿ ಉಂಟಾಗುತ್ತದೆ ಮತ್ತು ರೋಗಗಳು ಕೂಡ ಬರುತ್ತವೆ. ಬೆಳ್ಳುಳ್ಳಿ-ಈರುಳ್ಳಿಯನ್ನು ಮಂಗಳವಾರದಂದು ತಿನ್ನಬಾರದು ಏಕೆಂದರೆ ಇದನ್ನು ತಾಮಸಿಕ ಆಹಾರವೆಂದು ಪರಿಗಣಿಸಲಾಗಿದೆ.

Latest Videos
Follow Us:
Download App:
  • android
  • ios