ಅನಾದಿಕಾಲದಿಂದಲೂ ನಮ್ಮ ನಡುವಿನ ಅನೇಕ ಆಚರಣೆಗಳು ನಮ್ಮನ್ನೆ ನಿಬ್ಬೆರಗಾಗಿಸುತ್ತವೆ. ಕೆಲ ಆಚರಣೆಗಳು ನಮ್ಮನ್ನ ಅಚ್ಚರಿಗೊಳಸುತ್ತವೆ. ಕರಾವಳಿ ಭಾಗದ ಭೂತ ಕೋಲ ಆಚರಣೆ, ದಸರಾ-ದೀಪಾವಳಿ ಸಮಯದಲ್ಲಿ ಕೆಲವೆಡೆ ನಡೆಯೋ ಬಡಿಗೆ ಜಾತ್ರೆ.

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ನ.30): ಅನಾದಿಕಾಲದಿಂದಲೂ ನಮ್ಮ ನಡುವಿನ ಅನೇಕ ಆಚರಣೆಗಳು ನಮ್ಮನ್ನೆ ನಿಬ್ಬೆರಗಾಗಿಸುತ್ತವೆ. ಕೆಲ ಆಚರಣೆಗಳು ನಮ್ಮನ್ನ ಅಚ್ಚರಿಗೊಳಸುತ್ತವೆ. ಕರಾವಳಿ ಭಾಗದ ಭೂತ ಕೋಲ ಆಚರಣೆ, ದಸರಾ-ದೀಪಾವಳಿ ಸಮಯದಲ್ಲಿ ಕೆಲವೆಡೆ ನಡೆಯೋ ಬಡಿಗೆ ಜಾತ್ರೆ. ಹೀಗೆ ಅನೇಕ ಜಾತ್ರೆಗಳು ನಮ್ಮನ್ನ ಅಚ್ಚರಿಗೊಳಿಸುತ್ತವೆ. ಇಂಥ ವಿಶೇಷ ಆಚರಣೆಗಳ ಸಾಲಿನಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ನಡೆಯೋ ವಿಚಿತ್ರ ಆಚರಣೆ.

ಬಂಡೆಗೆ ತಲೆ ಜಜ್ಜಿಕೊಂಡು ದೇವರಿಗೆ ನಮಸ್ಕಾರ: ಹೌದು, ಗಣಿ ಗ್ರಾಮದಲ್ಲಿ ನಡೆಯುವ ಗ್ರಾಮ ದೇವರು ಸೋಮೇಶ್ವರ ದೇವರ ಜಾತ್ರೆಯಲ್ಲಿ ಇಂಥಹ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ ಈ ಜಾತ್ರೆ ಬಲು ವಿಚಿತ್ರ. ಇಲ್ಲಿ ಭಕ್ತರು ದೇವರಿಗೆ ನಮಿಸಲು ಓಡೋಡಿ ಬಂದು ಬಂಡೆಗೆ ತಲೆ ಜಜ್ಜಿಕೊಳ್ತಾರೆ‌. ಹೀಗೆ ಗ್ರಾಮದ ಬಹುತೇಕರು ವಿಶೇಷ ರೀತಿಯಲ್ಲಿ ದೇವರಿಗೆ ನಮಸ್ಕರಿಸುತ್ತಾರೆ. 

Ticket Fight: ಯತ್ನಾಳ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ 20 ಆಕಾಂಕ್ಷಿಗಳು

ಮೂರು ಸಲ ಬಂಡೆಗೆ ತಲೆ ಜಜ್ಜಿಕೊಳ್ಳಬೇಕು: ಗ್ರಾಮದ ನೂರಾರು ಜನರಿಂದ‌ ನಡೆಯುವ ಈ ವಿಚಿತ್ರ ಜಾತ್ರೆಯಲ್ಲಿ ದೇವರಿಗೆ ಸಮಸ್ಕಾರ ಮಾಡುವ ರೀತಿಯೆ ಎಲ್ಲರನ್ನ ಅಚ್ಚರಿಗೊಳಿಸುತ್ತೆ. ಸಾಧಾರಣವಾಗಿ ದೇಗುಲಗಳಲ್ಲಿ ನಮಸ್ಕರಿಸುವಾಗ ಬಾಗಿ ನಮಸ್ಕರಿಸುತ್ತೇವೆ, ದೀರ್ಧದಂಡ ನಮಸ್ಕಾರ ಹಾಕ್ತೇವೆ. ಸಾಷ್ಟಾಂಗ ನಮಸ್ಕಾರ ಹಾಕ್ತೇವೆ. ಆದ್ರೆ ಗಣಿ ಗ್ರಾಮದಲ್ಲಿ ಬಂಡೆಗೆ ತಲೆ ಜಜ್ಜಿಕೊಂಡೆ ನಮಸ್ಕರಿಸಬೇಕು. ಅದ್ರಲ್ಲು ಮೂರು ಬಾರಿ ಓಡೋಡಿ ಬಂದು ಬಂಡೆಗೆ ತಲೆ ಹೊಡೆದುಕೊಂಡು ನಮಸ್ಕಾರ ಮಾಡಬೇಕಂತೆ. ಹೀಗೆ ಮಾಡಿದ್ರೆ ಒಳಿತಾಗುತ್ತೆ ಅನ್ನೋ ನಂಬಿಕೆ ಇದೆ.

ಬಂಡೆಗೆ ಹೊಡೆದುಕೊಂಡ್ರು ಯಾವುದೇ ಗಾಯವಾಗಲ್ಲ: ವಿಸ್ಮಯಕಾರಿ ವಿಚಾರ ಅಂದ್ರೆ ಗಣಿ ಗ್ರಾಮದಲ್ಲಿ ನಡೆಯೋ ಸೋಮೇಶ್ವರ ಜಾತ್ರೆಯಲ್ಲಿ ಹೀಗೆ ಓಡೋಡಿ ಬಂದು ಬಂಡೆಗೆ ತಲೆ ಜಜ್ಜಿಕೊಂಡ್ರೆ ಏನು ಆಗೋದಿಲ್ಲವಂತೆ. ಅಂದ್ರೆ ತಲೆಗೆ ಗಾಯ, ತಲೆ‌ ನೋವು ಯಾವುದೇ ಸಮಸ್ಯೆ ಆಗಲ್ಲವಂತೆ. ಇದನ್ನ ಸೋಮೇಶ್ವರ ದೇವರ ಪವಾಡ ಎನ್ನಲಾಗ್ತಿದೆ. ಅದೇಷ್ಟೋ ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದ್ದರು ಈ ವರೆಗೆ ಯಾರೊಬ್ಬರೂ ಸಣ್ಣ ಗಾಯವಾಗಿಲ್ಲ.‌ ಮೂರು ಮೂರು ಬಾರಿ ಬಂಡೆಗೆ ಡಿಕ್ಕಿ ಹೊಡೆದರು ಹನಿ ರಕ್ತ ಸಹ ಕಂಡಿಲ್ಲವಂತೆ. ಸ್ಥಳೀಯರು ಹಾಗೂ ಭಕ್ತರು ಇದೆಲ್ಲ ಸೋಮೇಶ್ವರ ದೇವರ ಪವಾಡ ಅಲ್ಲದೆ ಮತ್ತೇನು ಅಲ್ಲಾ ಎನ್ತಾರೆ.

ಗುಮ್ಮಟನಗರಿಯಲ್ಲಿ ರೈತನ ಕೈ ಹಿಡಿದ ಸೀತಾಫಲ: ಶೂನ್ಯ ಬಂಡವಾಳದ ಮೂಲಕ ಲಕ್ಷ-ಲಕ್ಷ ಲಾಭ

ಮಾಮೂಲಿ ದಿನಗಳಲ್ಲಿ ಡಿಕ್ಕಿ ಹೊಡೆದರೆ ಗಾಯ: ಇನ್ನೊಂದು ವಿಚಿತ್ರ ಅಂದ್ರೆ ಜಾತ್ರೆಯ ವೇಳೆ ಹೀಗೆ ಡಿಕ್ಕಿ ಹೊಡೆದು ನಮಸ್ಕಾರ ಮಾಡಿದ್ರೆ ಯಾವುದೆ ಗಾಯವಾಗಲ್ಲ, ಹನಿ ರಕ್ತ ಸುರಿಯಲ್ಲ. ಅಷ್ಟೇಯಾಕೆ ಕೊಂಚ ನೋವು ಸಹ ಆಗಲ್ಲವಂತೆ. ಆದ್ರೆ ಅದೆ ಮಾಮೂಲಿ ದಿನಗಳಲ್ಲಿ ಬಂಡೆಗೆ ಡಿಕ್ಕಿ ಹೊಡೆದರೆ ಗಾಯವಾಗುತ್ತೆ. ಇದೆಲ್ಲ ದೇವರ ಪವಾಡವಂತೆ‌. ಇದನ್ನ ಪರೀಕ್ಷಿಸಲು ಹೋದವರಿಗು ಅಚ್ಚರಿ ಮೂಡಿಸಿದೆ.