ಉಡುಪಿ: ಕಡಿಯಾಳಿ ದೇವಸ್ಥಾನದಲ್ಲಿ ಧ್ವಜ ಪ್ರತಿಷ್ಠೆ ಧೂಳಿ ಮಂಡಲ

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಾ. 24 ರಂದು ಧ್ವಜ ಪ್ರತಿಷ್ಠೆ ಮತ್ತು ಧೂಳಿ ಮಂಡಲ ಸೇವೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ. ಕಟ್ಟೆ ರವಿರಾಜ್. ವಿ.ಆಚಾರ್ಯ ತಿಳಿಸಿದರು. 

dhwaja pratishte and huja Mandal in Kadiyali temple at udupi rav

ಉಡುಪಿ (ಮಾ.16) : ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಾ. 24 ರಂದು ಧ್ವಜ ಪ್ರತಿಷ್ಠೆ ಮತ್ತು ಧೂಳಿ ಮಂಡಲ ಸೇವೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ. ಕಟ್ಟೆ ರವಿರಾಜ್. ವಿ.ಆಚಾರ್ಯ ತಿಳಿಸಿದರು. 

ಅವರು ಬುಧವಾರ, ಕಡಿಯಾಳಿ ದೇವಳ(Kadiyali devala)ದ ಶಾರ್ವಣಿ ಮಂಟಪದಲ್ಲಿ ಶ್ರೀ ದೇವಳದ ಧ್ವಜಸ್ಥಂಭ ಪ್ರತಿಷ್ಠಾಪನೆ ಹಾಗು ವ್ಯಾಘ್ರ ಪಿಲಿಚಾಮುಂಡಿ ದೈವ(Pili chamundi daiva)ದ ಜೀರ್ಣೋದ್ಧಾರ ವಿಜ್ಞಾಪನೆ ಆಮಂತ್ರಣವನ್ನು ಬಿಡುಗಡೆಗೊಳಿಸಿ ಮಾಹಿತಿ ವಿವರಿಸಿದರು. 

ಪೆರ್ಣಂಕಿಲ ದೇವಳದ ಜೀರ್ಣೋದ್ಧಾರ: ದೇವಳಗಳ ಜೀರ್ಣೋದ್ದಾರದಿಂದ ಊರಿಗೆ ಶ್ರೇಯಸ್ಕರ - ಪೇಜಾವರ ಶ್ರೀ

ಮಾ. 24 ರ ಬೆಳಗ್ಗೆ 6 ರಿಂದ ಪುಣ್ಯಹವಾಚನ, ಗಣಯಾಗ, 7 ಗಂಟೆಗೆ ಮೀನ ಲಗ್ನದಲ್ಲಿ ಧ್ವಜ ಪ್ರತಿಷ್ಠೆ ಕಲಶಾಭಿಷೇಕ, 9.45 ಕ್ಕೆ ಒದಗುವ ವೃಷಭಲಗ್ನ ಸುಮುಹೂರ್ತದಲ್ಲಿ ಶ್ರೀ ದೇವಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ನಾಗಸನ್ನಿಧಿಯಲ್ಲಿ ಕಲಶಾಭಿಷೇಕ, ಆಶ್ಲೇಷಾಬಲಿ, ಮಹಾಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರುಗಲಿದೆ‌. ಸಂಜೆ 5 ರಿಂದ ಹಾಲಿಟ್ಟು ಸೇವೆ, ಧೂಳಿ ಮಂಡಲ(Dhooli mandala) ಸೇವೆ ಹಾಗು ರಾತ್ರಿ ಸಣ್ಣರಂಗಪೂಜೆ ನಡೆಯಲಿದೆ ಎಂದವರು ಹೇಳಿದರು

ಮಾ.21 ರಂದು ಸಂಜೆ ಶ್ರೀ ಕೃಷ್ಣ ಮಠದಿಂದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದವರೆಗೆ ವೈಭವದ ಹಸಿರು ಹೊರಕಾಣಿಕೆ ಮೆರವಣಿಗೆ ನಡೆಯಲಿದೆ. ಮಾ. 24 ರಂದು ಸುಮಾರು 40 ಸಾವಿರ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಭಕ್ತಾದಿಗಳು ಹೊರಕಾಣಿಕೆ ನೀಡಬೇಕೆಂದು ವಿನಂತಿಸಿದರು. 

Kukke subramanya Temple: ಶ್ರೀ ರವಿಶಂಕರ ಗುರೂಜಿ ನಾಗಪ್ರತಿಷ್ಠಾ ಸೇವೆ

ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ, ಪ್ರ.ಕಾರ್ಯದರ್ಶಿ ರಾಘವೇಂದ್ರ ಕಿಣಿ, ಉಪಾಧ್ಯಕ್ಷರಾದ ಭಾಸ್ಕರ್ ಶೇರಿಗಾರ್, ಭಾರತಿ ಚಂದ್ರಶೇಖರ್, ಕೋಶಾಧಿಕಾರಿ ಸತೀಶ್ ಕುಲಾಲ್, ಅರ್ಚಕ ರತ್ನಾಕರ ಉಪಾಧ್ಯಾಯ, ವ್ಯವಸ್ಥಾಪನ ಸಮಿತಿ ಸದಸ್ಯ ಮಂಜುನಾಥ್ ಹೆಬ್ಬಾರ್ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios