ಯುಗಾದಿ ಅಮವಾಸ್ಯೆ ದಿನ ಹಿರೇಹಡಗಲಿ ಶಿವಲಿಂಗಕ್ಕೆ ಸೂರ್ಯ ಕಿರಣ ಸ್ಪರ್ಶ..

ಹೂವಿನ ಹಗಡಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಕಟ್ಟಿ ಬಸವೇಶ್ವರ ಐತಿಹಾಸಿಕ ದೇಗುಲದಲ್ಲಿ ಶಿವ ಲಿಂಗ ದರ್ಶನಕ್ಕೆ ಯುಗಾದಿ ಅಮವಾಸ್ಯೆ ದಿನ ಸೂರ್ಯ ಬರುತ್ತಾನೆಂಬುದು ನಂಬಿಕೆ.

devotees throng to Hire Hadagali Katti Basaveshwara Temple to witness Sunrays on Shivling skr

ವಿಜಯನಗರ: ಚಾಲುಕ್ಯರ ಕಾಲದ ಐತಿಹಾಸಿಕ ದೇವಾಲಯ ಕಟ್ಟಿ ಬಸವೇಶ್ವರ ದೇಗುಲದಲ್ಲಿ ಪ್ರತಿ ವರ್ಷ ಯುಗಾದಿ ಅಮವಾಸ್ಯೆ ದಿನ ಸೂರ್ಯನ ಕಿರಣಗಳು ಸ್ಪರ್ಶಿಸುತ್ತವೆ. ಈ ಬಾರಿಯೂ ಈ ಅಪರೂಪದ ವಿದ್ಯಮಾನಕ್ಕೆ ದೇಗುಲ ಸಾಕ್ಷಿಯಾಯಿತು. 

ಹೂವಿನ ಹಗಡಲಿ ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಕಟ್ಟಿ ಬಸವೇಶ್ವರ ಐತಿಹಾಸಿಕ ದೇಗುಲದಲ್ಲಿ ಶಿವ ಲಿಂಗ ದರ್ಶನಕ್ಕೆ ಯುಗಾದಿ ಅಮವಾಸ್ಯೆ ದಿನ ಬರುವ ಸೂರ್ಯನನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಆಗಮಿಸಿದ್ದರು. 1 ನಿಮಿಷ ಕಾಲ ಲಿಂಗದ ಮೇಲೆ ಸೂರ್ಯನ ಕಿರಣಗಳ ಸ್ಪರ್ಶವಾದುದನ್ನು ಕಣ್ತುಂಬಿಕೊಂಡು ಹರ ಹರ ಮಹಾದೇವ ಘೋಷಣೆ ಮಾಡಿದರು. 

ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಾಲಯದ ಶಿವಲಿಂಗ ‘ಕಟ್ಟಿಲಿಂಗ’ ಎಂದೇ ಜನಪ್ರಿಯ. ರಾಜ್ಯದ ನಾನಾ ಭಾಗಗಳಿಂದ ಭಕ್ತಾದಿಗಳು ಈ ದೇಗುಲಕ್ಕೆ ನಿತ್ಯ ಭೇಟಿ ನೀಡಿ ಶಿವನನ್ನು ಕಣ್ತುಂಬಿಕೊಳ್ಳುತ್ತಾರೆ.

ಇದರ ನಿರ್ಮಾಣವೇ ವಿಶೇಷವಾಗಿದ್ದು ಪುರಾತನ ವಾಸ್ತುತಜ್ಞತೆ ಹಾಗೂ ಶಿಲ್ಪಿಗಳ ಚಾಕಚಕ್ಯತೆ ಫಲವಾಗಿ ಪ್ರತಿ ವರ್ಷ ಯುಗಾದಿ ಅಮಾವಾಸ್ಯೆಯಂದು ಇಲ್ಲಿನ ಶಿವಲಿಂಗ ಹಾಗೂ ನಂದಿ ಮೇಲೆ ಸೂರ್ಯನ ಬೆಳಕು ಚೆಲ್ಲುತ್ತದೆ. ಈ ಅಭೂತಪೂರ್ವ ಸಮಯ ಕಣ್ತುಂಬಿಕೊಳ್ಳಲು ಹೆಚ್ಚಿನ ಭಕ್ತರು ಈ ದಿನ ಬರುತ್ತಾರೆ. 

******

ಭೂತಾದಿ ಅಮವಾಸ್ಯೆ ದಿನಾಂಕ, ವಿಶೇಷತೆ

ಈ ಬಾರಿ ಚೈತ್ರ ಮಾಸದ ಅಮವಾಸ್ಯೆ ಮಾರ್ಚ್ 21ರಂದು. ಇದನ್ನು ಭೂತ್ರಿ ಅಮಾವಾಸ್ಯೆ ಎನ್ನುತ್ತಾರೆ. ಇದು ಮಂಗಳವಾರದ ದಿನ ಬರುವುದರಿಂದ ಭೌಮವತಿ ಅಮಾವಾಸ್ಯೆ(Bhoumavati Amavasya) ಎಂದೂ ಕರೆಯುತ್ತಾರೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸಂಯೋಜನೆಯಿಂದಾಗಿ, ಈ ದಿನ ಶುಭ, ಶುಕ್ಲ ಮತ್ತು ಸಿದ್ಧಿ ಎಂಬ 3 ಯೋಗಗಳು ಸಹ ರೂಪುಗೊಳ್ಳುತ್ತವೆ. ಅಷ್ಟೊಂದು ಶುಭ ಯೋಗಗಳು ಇರುವುದರಿಂದ ಈ ತಿಥಿಯ ಮಹತ್ವ ಇನ್ನಷ್ಟು ಹೆಚ್ಚಿದೆ.

ಭೂತ್ರಿ ಅಮವಾಸ್ಯೆ ವಿಶೇಷತೆ
ವರ್ಷದಲ್ಲಿ 12 ಅಮಾವಾಸ್ಯೆಗಳಿದ್ದರೂ ಭೂತಾದಿ ಅಮವಾಸ್ಯೆ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ಇದಕ್ಕೆ ಭೂತಾದಿ ಎಂದು ಹೆಸರಿಡಲು ಹಲವು ಕಾರಣಗಳಿವೆ. ಕೆಲವು ಅತೃಪ್ತ ಆತ್ಮಗಳು ತಮ್ಮ ಈಡೇರದ ಆಸೆಗಳನ್ನು ಪೂರೈಸಲು ಜೀವಂತ ಜನರನ್ನು ಹೊಂದಲು ಪ್ರಯತ್ನಿಸುತ್ತವೆ. ಮತ್ತು ಈ ಅನುಕ್ರಮದಲ್ಲಿ, ಅವರು ಉಗ್ರ ರೂಪವನ್ನು ಪಡೆದುಕೊಳ್ಳುತ್ತಾರೆ. ಅವರ ಉಗ್ರತೆಯನ್ನು ಶಾಂತಗೊಳಿಸಲು, ನಕಾರಾತ್ಮಕ ಶಕ್ತಿಯಿಂದ ಪ್ರಭಾವಿತರಾದ ಜನರು ಭೂತ್ರಿ ಅಮವಾಸ್ಯೆಯಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಾರೆ. ಈ ಅಮವಾಸ್ಯೆಯು ಪಿತೃ ತರ್ಪಣ ಮುಂತಾದ ಆಚರಣೆಗಳಿಗೂ ಹೆಸರುವಾಸಿಯಾಗಿದೆ. ಈ ಅಮವಾಸ್ಯೆ ಹಿಂದೂ ವರ್ಷದ ಕೊನೆಯ ದಿನವಾಗಿದೆ. 
 ಈ ದಿನಾಂಕದಂದು ದೇಶದ ಪ್ರಮುಖ ನದಿಗಳ ದಡದಲ್ಲಿ ಜಾತ್ರೆಗಳನ್ನು ಆಯೋಜಿಸಲಾಗುತ್ತದೆ. ನಕಾರಾತ್ಮಕ ಶಕ್ತಿಗಳಿಂದ(negative energies) ಜೀವನದಲ್ಲಿ ಅಡೆತಡೆಗಳಿಂದ ಮುಳುಗಿರುವ ಜನರು, ಈ ದಿನ ನದಿಯಲ್ಲಿ ಸ್ನಾನ ಮಾಡಿದರೆ, ಅವರ ಸಮಸ್ಯೆಗಳು ಪರಿಹಾರವಾಗುತ್ತವೆ. ಈ ದಿನವು ವಿಶೇಷವಾಗಿ ಭೂತಗಳಿಗೆ ಸಂಬಂಧಿಸಿರುವುದರಿಂದ ಇದನ್ನು ಭೂತ್ರಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.

Latest Videos
Follow Us:
Download App:
  • android
  • ios