ಮಸ್ಕಿ: ಬೇಡಿದ ವರ ನೀಡುವ ಬಯಲು ಆಂಜನೇಯ..!
ಶ್ರಾವಣ ಮಾಸದ ಕಡೆಯ ಶನಿವಾರ ನಿಮಿತ್ತ ವಿಶೇಷ ಅಲಂಕಾರ, ಪೂಜೆ, ಹರಿದು ಬಂದ ಭಕ್ತರ ಸಾಗರ, ಭಕ್ತರಿಗೆ ಕಮೀಟಿಯಿಂದ ಪ್ರಸಾದ ವ್ಯವಸ್ಥೆ, ದೇವರ ದರ್ಶನ ಪಡೆದ ಶಾಸಕ ಆರ್. ಬಸನಗೌಡ ತುರ್ವಿಹಾಳ.
ಇಂದರಪಾಷ ಚಿಂಚರಕಿ
ಮಸ್ಕಿ(ಸೆ.10): ಇಲ್ಲಿನ ಬೆಟ್ಟದ ಹಿಂದಿನ ಬಯಲು ಆಂಜನೇಯ ಸ್ವಾಮಿಯ ವಿಶೇಷ ಶಕ್ತಿಯೊಂದಿಗೆ ಉದ್ಬವವಾಗಿ ನಂಬಿದ ಭಕ್ತರ ಇಷ್ಟಾರ್ಥ ಸಿದ್ಧಿಗಳ ನೀಡುವ ಮೂಲಕ ಭಕ್ತರಿಗೆ ಬಯಲು ಆಂಜನೇಯ ಬೇಡಿದವರವನ್ನು ನೀಡುವ ಆರಾಧ್ಯ ದೈವವಾಗಿದ್ದಾರೆ.
ಶ್ರಾವಣ ಮಾಸದ ಕೊನೆಯ ಶನಿವಾರ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಂಜನೇಯ ದೇವರ ದರ್ಶನ ಪಡೆದುಕೊಂಡು ಪುನಿತರಾದರು. ಭಕ್ತರೆಲ್ಲರೂ ಸೇರಿ ರುದ್ರಾಭಿಷೇಕ ವಿಶೇಷ ಪೂಜೆ ಬಿಲ್ವಾರ್ಚನೆಗಳ ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸುತ್ತಾರೆ.
ಬುಧವಾರ ಗಣೇಶನಿಗೆ ಪ್ರಿಯ, ಶುಭ ಲಾಭಕ್ಕಾಗಿ ಗಣೇಶನಿಗೆ ಇವುಗಳನ್ನು ಅರ್ಪಿಸಿ..!
ಬಯಲು ಆಂಜನೇಯ ಭಕ್ತರಿಗೆ ಬೇಡಿದ ವರ ಕೊಡುವ ನಂಬಿಕೆ ಹಿನ್ನೆಲೆಯಲ್ಲಿ ಪ್ರತಿ ದಿನ ಹಾಗೂ ವಿಶೇಷವಾಗಿ ಶನಿವಾರ ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅಲ್ಲದೇ ಕಷ್ಟ ಕಾರ್ಪಣ್ಯಗಳು ನಿವಾರಣೆಗಾಗಿ ಇಲ್ಲಿಯೇ ರಾತ್ರಿ ವಾಸ್ತವ್ಯ ಮಾಡಿ ದೇವರ ಪ್ರೀತಿಗೆ ಪಾತ್ರರಾಗುತ್ತಾರೆ. ಭಕ್ತರಿಗೆ ಬೇಡಿದ ಇಷ್ಟಾರ್ಥಗಳು ಈಡೇರುವುದು ಎನ್ನುವ ನಂಬಿಕೆ ಬಲವಾಗಿ ಭಕ್ತರಲ್ಲಿರುವುದರಿಂದ ಸಹಸ್ರಾರು ಭಕ್ತರು ಆಗಮಿಸಿ ದರ್ಶನ ಪಡೆದುಕೊಳ್ಳುತ್ತಾರೆ.
ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ:
ಶ್ರಾವಣ ಮಾಸದ ಕೊನೆಯ ಶನಿವಾರ ಇರುವುದರಿಂದ ಗುಡ್ಡದ ಬಳಿಯಿರುವ ಬಯಲು ಆಂಜನೇಯ ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಭಕ್ತರಿಗೆ ವಿಶೇಷವಾದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ಬರುವ ಭಕ್ತರಿಗೆ ಉಪಹಾರ ಹಾಗೂ ಮಧ್ಯಾಹ್ನ ಹುಗ್ಗಿ, ಅನ್ನ, ಸಾಂಬಾರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದರ್ಶನಕ್ಕಾಗಿ ಬಂದ ಭಕ್ತರಿಗೆ ಅಚ್ಚುಕಟ್ಟಾಗಿ ಪ್ರಸಾದ ಉಣಬಡಿಸಿದರು. ಸುಮಾರು ಎರಡು ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.
ದರ್ಶನ ಪಡೆದ ಶಾಸಕ:
ಶ್ರಾವಣ ಮಾಸದ ಕೊನೆಯ ಶನಿವಾರದ ನಿಮಿತ್ತ ಶಾಸಕ ಆರ್. ಬಸಗೌಡ ತುರ್ವಿಹಾಳ ಅವರು ಗುಡ್ಡದ ಬಳಿ ಇರುವ ಬಯಲು ಆಂಜನೇಯ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಅಮರೇಶ ಮಿಟ್ಟಿಮನಿ, ಉದಯ ಕೊಡಿಹಾಳ, ಸಿದ್ರಾಮಯ್ಯ ಸ್ವಾಮಿ, ಸಿದ್ದನಗೌಡ ಉದ್ಬಾಳ್, ಮಲ್ಲಯ್ಯ ಬಳ್ಳಾ, ಹನುಂತಪ್ಪ ವೆಂಕಟಾಪೂರು, ಶರಣಪ್ಪ ಎಲಿಗಾರ್, ರಮೇಶ ಕಾಸ್ಲಿ, ನಾಗರಾಜ ಗುಡಿಸಲಿ, ಶಿವುಬ್ಯಾಳಿ, ದುಗೇಶ ಸೇರಿದಂತೆ ಇತರರು ಇದ್ದರು.
ಲಕ್ಷ್ಮಿ ದೇವಿ ಒಲಿಯಲು ಹೀಗೆ ಮಾಡಿ...ಸಂಪತ್ತಿನೊಡನೆ ಹರಿಯುತ್ತದೆ ಹಣದ ಹೊಳೆ
ಬಯಲು ಆಂಜನೇಯ ದೇವಸ್ಥಾನಕ್ಕೆ ಮುಖ್ಯವಾಗಿ ಊಟದ ಕೋಣೆ ಹಾಗೂ ಇನ್ನಿತರ ಮೂಲ ಸೌಲಭ್ಯಗಳನ್ನು ಅಭಿವೃದ್ಧಿ ಮಾಡಬೇಕಿದೆ. ಇದರಿಂದ ಬರುವ ಭಕ್ತರಿಗೆ ಅನೂಕೂಲವಾಗಲಿದೆ ಎಂದು ಮಸ್ಕಿಯ ಬಯಲು ಆಂಜನೇಯ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ್ ಹೇಳಿದ್ದಾರೆ.
ಗುಡ್ಡದ ಬಳಿ ಇರುವ ಬಯಲು ಆಂಜನೇಯ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬರುವುದರಿಂದ ಮುಖ್ಯವಾಗಿ ಪ್ರಸಾದ ವ್ಯವಸ್ಥೆಗಾಗಿ ಕೋಣೆ ಸೇರಿದಂತೆ ಭಕ್ತರ ಅನೂಕೂಲಕ್ಕಾಗಿ ಅಲ್ಲಿಬೇಕಾದ ಅಭಿವೃದ್ಧಿ ಮಾಡಲಾಗುವುದು ಎಂದಯ ಶಾಸಕ ಆರ್.ಬಸನಗೌಡ ತುರ್ವಿಹಾಳ ತಿಳಿಸಿದ್ದಾರೆ.