Asianet Suvarna News Asianet Suvarna News

ಕಲಬುರಗಿ ವೀರಭದ್ರೇಶ್ವರ ಜಾತ್ರೆ: ಕೆಂಡ ಹಾಯ್ದ ಸಾವಿರಾರು ಭಕ್ತರು!

ಅದು ನಿಗಿ ನಿಗಿ ಕೆಂಡ. ಹತ್ತಾರು ಟನ್ ಕಟ್ಟಿಗೆಯನ್ನು ಸುಟ್ಟ ಆ ಕೆಂಡದ ಮೇಲೆ ಭಕ್ತರು ನಡೆದುಕೊಂಡು ಹೋಗುತ್ತಾರೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು, ಮಕ್ಕಳೂ ಸಹ ಕೆಂಡದ ಮೇಲೆ ಕಾಲ್ನಡಿಗೆ ಮೂಲಕ ಹೋಗುವುದು ಮೈ ಜುಮ್ ಎನ್ನಿಸುತ್ತದೆ.

devotees held kendotsav in virabhadreshwar fair kalburagi rav
Author
First Published Nov 6, 2022, 3:56 PM IST | Last Updated Nov 6, 2022, 4:00 PM IST

ಕಾರವಾರ (ನ.6) : ಕಾರವಾರ (ನ.6) : ಅದು ನಿಗಿ ನಿಗಿ ಕೆಂಡ. ಹತ್ತಾರು ಟನ್ ಕಟ್ಟಿಗೆಯನ್ನು ಸುಟ್ಟ ಆ ಕೆಂಡದ ಮೇಲೆ ಭಕ್ತರು ನಡೆದುಕೊಂಡು ಹೋಗುತ್ತಾರೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು, ಮಕ್ಕಳೂ ಸಹ ಕೆಂಡದ ಮೇಲೆ ಕಾಲ್ನಡಿಗೆ ಮೂಲಕ ಹೋಗುವುದು ಮೈ ಜುಮ್ ಎನ್ನುತ್ತದೆ

ಅಬ್ಬಾ! ನಿಗಿ ನಿಗಿ ಕೆಂಡದ ಮೇಲೆ ಈ ಜನ ಅದೆಷ್ಟು ನಿರ್ಭಯದಿಂದ ತೆರಳುತ್ತಿದ್ದಾರೆ‌. ಅದೂ ಸಹ ಒಬ್ಬರು ಇಬ್ಬರು ಅಲ್ಲ. ಸಾವಿರಾರು ಜನ. ಮಹಿಳೆಯರು, ಮಕ್ಕಳು, ವಯೋವೃದ್ದರೂ ಸಹ ಈ ಕೆಂಡದ ಮೇಲೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದಾರೆ. ಈ ದೃಶ್ಯಗಳು ನೋಡಿದ್ರೆನೇ ಮೈ ಜುಮ್ ಎನ್ನುತ್ತದೆ. ಇಂತಹ ವಿಶಿಷ್ಠ ಆಚರಣೆ ಕಂಡು ಬಂದಿದ್ದು ಕಲಬುರಗಿ ನಗರದ ರೋಜಾ ಬಡಾವಣೆಯಲ್ಲಿನ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ. ಮಹಿಳೆಯೊಬ್ಬರು ಅಗ್ನಿಯ ಮೇಲೆ ಕಾಲ್ನಡಿಗೆಯ ಮೂಲಕ ಹೋಗುವಾಗ ಇನ್ನೇನು ಅಗ್ನಿಯಲ್ಲಿ ಬೀಳುತ್ತಿದ್ದರು. ಆದರೆ ಸಮೀಪದಲ್ಲಿದ್ದ ಇತರೇ ಭಕ್ತರು ಅವರನ್ನು ಹಿಡಿದೆಳೆದು ರಕ್ಷಿಸಿ ಅನಾಹುತ ತಪ್ಪಿಸಿದರು. ಅದಾಗ್ಯೂ ಸಾವಿರಾರು ಭಕ್ತರು ಕೆಂಡದ ಮೇಲೆ ನಡೆದು ಭಕ್ತಿ ಮೆರೆದರು. 

ವೀರಭದ್ರೇಶ್ವರ ದೇವರ ಜಾತ್ರೆ ಅಂದ ಮೇಲೆ ಕೇಳಬೇಕೇ ? ಅಲ್ಲಿ ಪುರವಂತಿಕೆ ಪ್ರದರ್ಶನ ಇರಲೇಬೇಕು. ಇಲ್ಲಿಯೂ ಸಹ ಹತ್ತಾರು ಜನ ಪುರವಂತರು ರೋಮಾಂಚನಗೊಳಿಸುವ ಪ್ರದರ್ಶನ ನೀಡಿದರು. ಮೊನಚಾದ ತಂತಿಯಂತಿರುವ ಶಸ್ತ್ರಗಳನ್ನು ಚರ್ಮದೊಳಗೆ ಚುಚ್ಚಿಕೊಂಡು ಹೊರತೆಗೆಯುವ ಪುರವಂತರ ಪ್ರದರ್ಶನವಂತೂ ನೋಡುಗರ ಮೈ ಜುಂ ಎನ್ನಿಸುವಂತಿತ್ತು. 

ನಗರ ಪ್ರದೇಶಗಳ ಜನ ಆಧುನಿಕತೆಯ ಹಿಂದೆ ಬಿದ್ದು ಹಳೆಯ ಆಚರಣೆಗಳನ್ನು ಮರೆಯುತ್ತಿರುವ ಸಂದರ್ಭದಲ್ಲಿಯೂ ಕಲಬುರಗಿ ನಗರದಲ್ಲಿ ನಡೆದ ವೀರಭದ್ರೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡ ಜನಸ್ತೋಮ ಈ ಮಾತಿಗೆ ಅಪವಾದದಂತಿತ್ತು. 

ಕೆಂಡ ಹಾಯ್ದ ನಾಲ್ಕು ರಾಜ್ಯಗಳ 3 ಸಾವಿರ ಭಕ್ತರು!

Latest Videos
Follow Us:
Download App:
  • android
  • ios