120 ದಿನಗಳ ಯೋಗ ನಿದ್ರೆಯಿಂದ ಏಳಲಿರುವ ವಿಷ್ಣು, ಈ ರಾಶಿಗೆ ರಾಜಯೋಗ
ಶ್ರೀ ಹರಿ ಕಾರ್ತೀಕ ಮಾಸದ ಏಕಾದಶಿಯಂದು ನಿದ್ರೆಯಿಂದ ಏಳಲಿದ್ದಾನೆ. ವಿಷ್ಣು ಕಣ್ಣು ಬಿಡ್ತಿದ್ದಂತೆ ಕೆಲವರ ಬಾಳಲ್ಲಿ ಭಾಗ್ಯೋದಯವಾಗಲಿದೆ. ಕೆಲ ರಾಶಿಯವರ ಅದೃಷ್ಟ ಬದಲಾಗಲಿದೆ.
ಯೋಗ ನಿದ್ರೆಯಲ್ಲಿರುವ ಶ್ರೀ ವಿಷ್ಣು (Sri Vishnu) ಎದ್ದೇಳುವ ಸಮಯ ಬರ್ತಿದೆ. 120 ದಿನಗಳ ನಿದ್ರೆಯಿಂದ ವಿಷ್ಣು ಏಳುವ ಕಾರಣ ಈ ದಿನವನ್ನು ದೇವ ಉತ್ಥಾನ ಏಕಾದಶಿ (Dev Uthana Ekadashi) ಎಂದು ಕರೆಯಲಾಗುತ್ತದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವ ಉತ್ಥಾನ ಏಕಾದಶಿಯಾಗಿ ಆಚರಣೆ ಮಾಡಲಾಗುತ್ತದೆ. ಎಲ್ಲ ಏಕಾದಶಿಗಿಂತ ಇದು ಹೆಚ್ಚು ಪವಿತ್ರವಾಗಿದೆ. ಈ ವರ್ಷ ನವೆಂಬರ್ 12ರಂದು ವಿಷ್ಣು ನಿದ್ರೆಯಿಂದ ಏಳಲಿದ್ದಾನೆ.
ದೇವ ಉತ್ಥಾನ ಏಕಾದಶಿ ದಿನದಿಂದ ಎಲ್ಲ ಶುಭ ಕಾರ್ಯಗಳು ಶುರುವಾಗುತ್ತವೆ. ಚಾತುರ್ಮಾಸ ಮುಗಿಯುವ ಜೊತೆಗೆ ಮದುವೆ (Marriage), ಮುಂಜಿ, ಮನೆ ಪ್ರವೇಶ ಸೇರಿದಂತೆ ಎಲ್ಲ ಶುಭಕಾರ್ಯಗಳನ್ನು ಜನರು ಶುರು ಮಾಡ್ತಾರೆ. ಈ ಬಾರಿ ದೇವ ಉತ್ಥಾನ ಏಕಾದಶಿ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಹರ್ಷಣ ಯೋಗ (Harshana Yoga) ಹಾಗೂ ಸರ್ವಾರ್ಥ ಸಿದ್ಧಿ ಯೋಗ (Sarvartha Siddhi Yoga) ಕೂಡಿ ಬಂದಿದೆ. 120 ದಿನಗಳ ನಂತ್ರ ವಿಷ್ಣು ನಿದ್ರೆಯಿಂದ ಎದ್ದೇಳು ಈ ಶುಭ ಸಮಯದಲ್ಲಿ ಈ ಎರಡೂ ಯೋಗಗಳು ಬಂದಿರುವುದು ಕೆಲ ರಾಶಿಯವರ ಜೀವನದಲ್ಲಿ ಬದಲಾವಣೆ ತರಲಿದೆ. ನಾಲ್ಕು ರಾಶಿಯವರಿಗೆ ಲಾಭವಾಗಲಿದೆ.
ಶನಿಯ ನೇರ ಸಂಚಾರದಿಂದ ಈ 4 ರಾಶಿಗೆ ಕಷ್ಟ, ಆರೋಗ್ಯ ಉದ್ಯೋಗದ ಮೇಲೆ ಕೆಟ್ಟ ದೃಷ್ಟಿ
ಮೇಷ ರಾಶಿ : ದೇವ ಉತ್ಥಾನ ಏಕಾದಶಿ ದಿನದಿಂದ ಮೇಷ ರಾಶಿಯವರ ಅದೃಷ್ಟ ಬದಲಾಗಲಿದೆ. ಆರ್ಥಿಕ ಕ್ಷೇತ್ರದಲ್ಲಿ ವೃದ್ಧಿಯಾಗಲಿದೆ. ಅಚಾನಕ್ ಆಗಿ ಧನ ಪ್ರಾಪ್ತಿಯಾಗುವ ಸಾಧ್ಯತೆ ಹೆಚ್ಚಿದೆ. ಶ್ರೀ ಹರಿಯ ಕೃಪೆಯಿಂದ ಜೀವನದಲ್ಲಿ ಸಂತೋಷದ ಘಟನೆಗಳು ನಡೆಯಲಿವೆ. ಒಳ್ಳೆ ದಿನಗಳು ಅಂದಿನಿಂದ ಶುರುವಾಗಲಿವೆ.
ಕರ್ಕ : ವಿಷ್ಣುವಿನ ಆಶೀರ್ವಾದ ಕರ್ಕ ರಾಶಿಯ ಜನರಿಗೆ ಸಿಗಲಿದೆ. ಬ್ಯುಸಿನೆಸ್ ನಲ್ಲಿ ಏಳ್ಗೆಯನ್ನು ಇವರು ಕಾಣಲಿದ್ದಾರೆ. ಹಣ ಪ್ರಾಪ್ತಿಗೆ ಇದು ಅತ್ಯಂತ ಸೂಕ್ತ ಸಮಯ. ಹೊಸ ಕೆಲಸವನ್ನು ಪ್ರಾರಂಭಿಸುವ ಆಲೋಚನೆಯಲ್ಲಿದ್ದರೆ ಇದು ಅತ್ಯುತ್ತಮ ಸಮಯವಾಗಿದ್ದು, ಯಾವುದೇ ಹಿಂಜರಿಕೆಯಿಲ್ಲದೆ ನೀವು ಕೆಲಸ ಶುರು ಮಾಡಬಹುದು.
ತುಲಾ : ತುಲಾ ರಾಶಿಯ ಜನರು ಅನೇಕ ದಿನಗಳಿಂದ ಕಾಯ್ತಿದ್ದ ಕಾಲ ಬರಲಿದೆ. ಅವರ ವೃತ್ತಿ ಜೀವನದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಉನ್ನತ ಸ್ಥಾನ ಪ್ರಾಪ್ತಿಯಾಗಲಿದೆ. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ. ದೇವ ಉತ್ಥಾನ ಏಕಾದಶಿ ನಂತರ ತುಲಾ ರಾಶಿಯವರ ಆರ್ಥಿಕ ಸ್ಥಿತಿ ಬಲಪಡೆಯಲಿದೆ.
ವೃಶ್ಚಿಕ : ವೃಶ್ಚಿಕ ರಾಶಿಯವರಿಗೂ ದೇವ ಉತ್ಥಾನ ಏಕಾದಶಿ ಶುಭ ತರಲಿದೆ. ಈ ರಾಶಿಯವರು ಮಾಡುವ ಎಲ್ಲ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷ, ನೆಮ್ಮದಿ ಸಿಗಲಿದೆ. ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಸಮಯ ಎನ್ನಬಹುದು.
ಕಾರ್ತಿಕದಲ್ಲಿ ಈ ರಾಶಿಯವರಿಗೆ ರಾಜವೈಬೋಗ, ಪ್ರಮೋಷನ್, ಲಾಟರಿ ಹೊಡೆಯೋದು ಫಿಕ್ಸ್
ದೇವ ಉತ್ಥಾನ ಏಕಾದಶಿ ದಿನ ಏನು ಮಾಡಬೇಕು? : ಈ ಬಾರಿ ಕಾರ್ತೀಕ ಮಾಸದ ಏಕಾದಶಿ, ನವೆಂಬರ್ 11ರಂದು ಸಂಜೆ 6 ಗಂಟೆ 46 ನಿಮಿಷಕ್ಕೆ ಶುರುವಾಗುತ್ತದೆ. ನವೆಂಬರ್ 12 ಸಂಜೆ 4 ಗಂಟೆ 4 ನಿಮಿಷದವರೆಗೆ ಇರಲಿದೆ. ನವೆಂಬರ್ 12ರಂದು ಏಕಾದಶಿ ಆಚರಣೆ ಮಾಡಲಾಗ್ತಿದೆ. ಆ ದಿನ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಎದ್ದು, ನಿತ್ಯ ಕರ್ಮಗಳನ್ನು ಮುಗಿಸಿ, ಹಸಿರು ಬಟ್ಟೆಯನ್ನು ಧರಿಸಿ, ನಾರಾಯಣನ ಪೂಜೆಯನ್ನು ಮಾಡಬೇಕು. ಇಡೀ ದಿನ ನಾರಾಯಣನ ನಾಮಸ್ಮರಣೆ ಮಾಡುವುದರಿಂದ ಹರಿಯ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ. ಕಬ್ಬು, ಎಳನೀರು ಮತ್ತು ಹಳದಿ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಭಗವಂತನಿಗೆ ಅರ್ಪಿಸಿ.