Asianet Suvarna News Asianet Suvarna News

Numerology: ಈ ಜನ್ಮಸಂಖ್ಯೆಯವರು ಇಂದು ವಾಹನ ಖರೀದಿಸಿದ್ರೆ ತೊಂದರೆ

ನವೆಂಬರ್ 19th 2022 ಶನಿವಾರ ನಿಮ್ಮ ಜನ್ಮಸಂಖ್ಯೆಗೆ ಈ ದಿನ ಹೇಗಿರಲಿದೆ? ಸಂಖ್ಯಾ ಭವಿಷ್ಯವು ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಈ ದಿನದ ಭವಿಷ್ಯದ ಬಗ್ಗೆ ತಿಳಿಸುತ್ತದೆ. 
 

Daily Numerology predictions of November 19th 2022 in Kannada
Author
First Published Nov 19, 2022, 7:15 AM IST

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28ರಂದು ಜನಿಸಿದ ಜನರು)
ಮಧ್ಯಾಹ್ನದ ಬಳಿಕ ನಿಮಗೆ ಉತ್ತಮ ಸಂದರ್ಭ ನಿರ್ಮಾಣವಾಗುತ್ತದೆ. ನೀವು ಬಯಸಿದ ಆರಾಮ ನಿಮಗೆ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅವರು ಬಯಸಿದ ಫಲಿತಾಂಶ ದೊರಕಿ, ಆತ್ಮವಿಶ್ವಾಸ ಹೆಚ್ಚುತ್ತದೆ. ಹತಾಶೆ ಹಾಗೂ ಭಾವನಾತ್ಮಕವಾಗಿ ತೆಗೆದುಕೊಂಡ ನಿರ್ಧಾರ ತಪ್ಪು ಎಂಬುದು ಸಾಬೀತಾಗುತ್ತದೆ. ಕೆಲವೊಂದು ಕನಸುಗಳು ಸಾಕಾರಗೊಳ್ಳದೆ ಮನಸ್ಸಿಗೆ ಅಸಮಾಧಾನ. ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ. ಮಹಿಳೆಯರು ಸಂಧಿ ನೋವು ಅಥವಾ ಸ್ತ್ರೀ ರೋಗಗಳಿಂದ ಬಳಲುವ ಸಾಧ್ಯತೆ.

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ತುಂಬಾ ಸಮಯದಿಂದ ತೊಂದರೆ ನೀಡುತ್ತಿದ್ದ ಸಂಗತಿಗಳು ಇಂದು ಮತ್ತೆ ವ್ಯವಸ್ಥಿತವಾಗಿ ಹಳಿಗೆ ಮರಳಿ ನೆಮ್ಮದಿ. ಇಂದು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಮನಸ್ಸಿನ ಮಾತನ್ನು ಆಲಿಸಿ. ಖಂಡಿತವಾಗಿಯೂ ನಿಮಗೆ ಸಮರ್ಪಕವಾದ ಸಲಹೆ ಸಿಗುತ್ತದೆ. ಒಡ ಹುಟ್ಟಿದವರ ಜೊತೆ ಮಧುರವಾದ ಸಂಬಂಧ ನಿರ್ವಹಣೆ ಮಾಡಿ. ಇಂದು ಯಾವುದೇ ಪ್ರಯಾಣ ಕೈಗೊಳ್ಳಬೇಡಿ. ಕುಟುಂಬ ಸದಸ್ಯರ ನಡುವಿನ ಸಮರ್ಪಕವಾದ ಹೊಂದಾಣಿಕೆಯಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣವಿರಲಿದೆ. 

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಅವಸರದಲ್ಲಿ ಯಾವುದೇ ಕೆಲಸ ಮಾಡಬೇಡಿ. ಕೆಲಸ ಕೈಗೊಳ್ಳುವ ಮುನ್ನ ಪ್ರತಿ ಹಂತದ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ. ನಿಮ್ಮ ಸಾಮರ್ಥ್ಯದ  ಮೇಲೆ ನಂಬಿಕೆಯಿಟ್ಟು ಕಾರ್ಯನಿರ್ವಹಿಸಿದರೆ ಯಶಸ್ಸು ಸಿಗಲಿದೆ. ನಿಮ್ಮ ಆತ್ಮವಿಶ್ವಾಸ ಹಾಗೂ ಕಾರ್ಯದಕ್ಷತೆ ಹೆಚ್ಚಾಗಲಿದೆ. ಕೆಲವೊಂದು ಕಾರಣಗಳಿಂದ ಮನೆಯ ವಾತಾವರಣ ಹದಗೆಡುವ ಸಾಧ್ಯತೆ. ಸಿಟ್ಟನ್ನು ನಿಯಂತ್ರಿಸಿ. ಪ್ರಮುಖ ಕೆಲಸಗಳಿಗೆ ಕೆಲವು ವಿಘ್ನಗಳು ಎದುರಾಗಬಹುದು. ಪತಿ ಹಾಗೂ ಪತ್ನಿ ನಡುವೆ ಉತ್ತಮ ಸಂಬಂಧ. 

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ಕುಟುಂಬ ಸದಸ್ಯರು ಹಾಗೂ ಹತ್ತಿರದ ಸಂಬಂಧಿಗಳ ನೆರವಿನಿಂದ ಕೆಲವು ಸಮಯದಿಂದ ಎದುರಾಗಿದ್ದ ಸಮಸ್ಯೆ ನಿವಾರಣೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಗೌರವ ಸಂಪಾದನೆ. ಹೆಚ್ಚುತ್ತಿರುವ ವೆಚ್ಚಗಳನ್ನು ಕಡಿತಗೊಳಿಸಲು ಇದು ಸರಿಯಾದ ಸಮಯ. ಯಾವುದೇ ಹೂಡಿಕೆಗೆ ಇದು ಪ್ರಸಕ್ತವಾದ ಸಮಯವಲ್ಲ. ಯಾವುದೇ ಚಿಕ್ಕ ಹಾಗೂ ದೊಡ್ಡ ನಿರ್ಣಯಗಳನ್ನು ಕೈಗೊಳ್ಳುವಾಗ ಆತ್ಮೀಯರ ಸಲಹೆ ಹಾಗೂ ಬೆಂಬಲ ಪಡೆದುಕೊಳ್ಳಿ.

ಪೂಜೆಯಲ್ಲಿ ಗರುಡ ಗಂಟೆಯನ್ನು ಏಕೆ ಬಳಸಬೇಕು?

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ಇಂದು ಪ್ರಮುಖವಾದ ಯಶಸ್ಸು ನಿಮಗಾಗಿ ಕಾಯುತ್ತಿದೆ. ಅದರಲ್ಲೂ ಮಹಿಳೆಯರಿಗೆ ಯಾವುದೇ ಕಾರ್ಯ ಕೈಗೊಳ್ಳಲು ಇಂದು ಅತ್ಯಂತ ಪ್ರಸಕ್ತವಾದ ಸಮಯ. ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಖಚಿತ. ವಿದ್ಯಾರ್ಥಿಗಳಿಗೆ ಯಾವುದೇ ಸಂದರ್ಶನ ಅಥವಾ ಸ್ಪರ್ಧೆಯಲ್ಲಿ ಯಶಸ್ಸು ಸಿಗಲಿದೆ. ಕೆಲವೊಮ್ಮೆ ಚಿಕ್ಕಪುಟ್ಟ ವಿಷಯಗಳಿಗೆ ಕಿರಿಕಿರಿ ಮಾಡಿಕೊಳ್ಳುವುದರಿಂದ ಮನೆಯ ವಾತಾವರಣ ಹದಗೆಡಲಿದೆ. ಅನಗತ್ಯವಾಗಿ ಖರ್ಚು ಮಾಡಬೇಡಿ. ಪತಿ-ಪತ್ನಿ ನಡುವಿನ ವೈಮನಸ್ಸು ದೂರ. 

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ಹಾಸ್ಯ ಪ್ರವೃತ್ತಿಯ ವ್ಯಕ್ತಿಗಳ ಭೇಟಿಯಿಂದ ಮನಸ್ಸಿಗೆ ಖುಷಿ. ಸಂದರ್ಶನದಲ್ಲಿನ ಯಶಸ್ಸು ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದೆ. ಅಸಹನೆ ಹಾಗೂ ಗಡಿಬಿಡಿಯಲ್ಲಿ ಮಾಡಿದ ಕೆಲಸ ಕೆಡಲಿದೆ. ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಯಾವುದೇ ವ್ಯಕ್ತಿಯನ್ನು ಇಂದು ನಂಬಲು ಹೋಗಬೇಡಿ. ಕೆಲಸಕ್ಕೆ ಸಂಬಂಧಿಸಿದ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಇಂದು ಸಕಾಲ.

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ಇಂದು ಸಂಖ್ಯೆ 7ರ ಜನರಿಗೆ ಶುಭದಿನ. ಯಾವುದೇ ಕಾರ್ಯ ಕೈಗೊಂಡರೂ ಯಶಸ್ಸು ಸಿದ್ಧಿಸಲಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಪ್ರಸಕ್ತ ಸನ್ನಿವೇಶದಲ್ಲಿ ಹಳೆಯ ನಕಾರಾತ್ಮಕ ವಿಚಾರಗಳ ಬಗ್ಗೆ ಯೋಚಿಸಬೇಡಿ. ಮಕ್ಕಳ ಕೆಲಸಗಳ ಮೇಲೆ ಒಂದು ಕಣ್ಣಿಟ್ಟಿರಿ. ಯುವ ಜನರಿಗೆ ಹೊಸ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆ. ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ದೂರವಾಗಲಿವೆ. 

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ರಾಜಕೀಯ ಅಥವಾ ಸರ್ಕಾರಿ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಯುವಜನರಿಗೆ ಅವರ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಇಗಲಿದೆ. ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿ ಮನಸ್ಸಿಗೆ ಬೇಸರ. ತಾಳ್ಮೆ ಕಳೆದುಕೊಳ್ಳದೆ ಶಾಂತವಾಗಿರಿ. ನಿಮ್ಮ ಸಮೀಪದ ವ್ಯಕ್ತಿಗಳೇ ನಿಮ್ಮ ಕಾರ್ಯಗಳಿಗೆ ವಿಘ್ನ ಉಂಟು ಮಾಡಬಹುದು. ಆಹಾರದಲ್ಲಿನ ವ್ಯತ್ಯಯದಿಂದ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕಾಡಬಹುದು. 

Bhagavad Gita ಹೇಳುವುದ ಕೇಳಿ, ಕೆಟ್ಟ ಅಭ್ಯಾಸ ಬಿಟ್ಟು ಯಶಸ್ಸು ನಿಮ್ಮದಾಗಿಸಿಕೊಳ್ಳಿ!

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ನಿಮ್ಮ ಕೆಲಸವನ್ನು ಗಂಭೀರವಾಗಿ ಹಾಗೂ ಸರಳವಾಗಿ ಮಾಡಿ. ಇದ್ರಿಂದ ಯಶಸ್ಸು ಸಿಗಲಿದೆ. ಸಕಾರಾತ್ಮಕ ವಿಚಾರಗಳು ಹಾಗೂ ಅನುಭವಿ ಜನರ ಸಲಹೆಗಳಿಂದ ನಿಮ್ಮ ಜೀವನಶೈಲಿ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ನಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಂದ ದೂರವಿರಿ. ವಾಹನ ಖರೀದಿಸುವ ಯೋಚನೆ ನಿಮಗೆ ಇದ್ದರೆ, ಇಂದು ಬೇಡ, ಮುಂದೂಡಿ. ಮನೆಯಲ್ಲಿ ಶಾಂತಿಯುತ ವಾತಾವರಣ ಇರುವಂತೆ ನೋಡಿಕೊಳ್ಳಿ. 
 

Follow Us:
Download App:
  • android
  • ios