Asianet Suvarna News Asianet Suvarna News

Numerology:ಈ ಜನ್ಮಸಂಖ್ಯೆಗೆ ಇಂದು ಸಮಾಜದಲ್ಲಿ ಗೌರವ ಹೆಚ್ಚಳ

ಜನವರಿ 3rd 2023 ಮಂಗಳವಾರ ನಿಮ್ಮ ಜನ್ಮಸಂಖ್ಯೆಗೆ ಈ ದಿನ ಹೇಗಿರಲಿದೆ? ಸಂಖ್ಯಾ ಭವಿಷ್ಯವು ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಈ ದಿನದ ಭವಿಷ್ಯದ ಬಗ್ಗೆ ತಿಳಿಸುತ್ತದೆ.

Daily Numerology predictions of January 3rd 2023 in Kannada
Author
First Published Jan 3, 2023, 7:00 AM IST

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28ರಂದು ಜನಿಸಿದ ಜನರು)
ಕುಟುಂಬದ ಹಿರಿಯ ವ್ಯಕ್ತಿಗಳಿಂದ ಕೆಲಸಗಳಲ್ಲಿ ನಿಮಗೆ ನೆರವು ಸಿಗಲಿದೆ. ಮನೆಯ ಹಿರಿಯರನ್ನು ಗೌರವಿಸಿ. ಖರ್ಚು ಹೆಚ್ಚಿ ಮನಸ್ಸಿನಲ್ಲಿ ಚಿಂತೆ ಮೂಡಲಿದೆ. ಆದರೆ, ಆದಾಯದ ಮೂಲವೂ ಸಿಗಲಿದೆ. ನಕಾರಾತ್ಮಕ ಕಾಮೆಂಟ್ ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಇನ್ನೊಬ್ಬರ ಬಗ್ಗೆ ಹೆಚ್ಚು ಯೋಚಿಸಬೇಡಿ. ದಿನವನ್ನು ಖುಷಿಯಿಂದ ಕಳೆಯುತ್ತೀರಿ. 

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ಇಂದು ನಿಮ್ಮ ಗಮನವನ್ನು ಸಂಪೂರ್ಣವಾಗಿ ಕೆಲಸದ ಮೇಲೆ ಕೇಂದ್ರೀಕರಿಸಿ. ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಗಳಿಸುತ್ತೀರಿ. ಚಿಕ್ಕಪುಟ್ಟ ವಿಷಯಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಯಾವುದೇ ವಿಚಾರದ ಬಗ್ಗೆ ಹೆಚ್ಚು ಭಾವನಾತ್ಮಕವಾಗಿ ಚಿಂತಿಸುವುದನ್ನು ಬಿಡಿ. ನಿಮ್ಮ ಒಳ್ಳೆಯತನ ಸದಾ ನಿಮ್ಮನ್ನು ಕಾಪಾಡುತ್ತದೆ. ಸ್ವಲ್ಪ ಮಟ್ಟಿಗಿನ ಒತ್ತಡ ನಿಮ್ಮ ಕೆಲಸದ ಸಾಮರ್ಥ್ಯದ ಮೇಲೆ ಪ್ರಭಾವ ಬೀರಲಿದೆ. 

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಭವಿಷ್ಯಕ್ಕೆ ಸಂಬಂಧಿಸಿ ನೀವು ಕಂಡಿರುವ ಕನಸುಗಳು ಇಂದು ಪೂರ್ಣಗೊಳ್ಳಲಿವೆ. ನಿಮ್ಮ ಕೋಪ ಹಾಗೂ ಆಲೋಚನೆಗಳನ್ನು ನಿಯಂತ್ರಿಸಿ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ ಮುಂದುವರಿಯಿರಿ. ಪತಿ ಹಾಗೂ ಪತ್ನಿ ಪರಸ್ಪರ ಗೌರವ ಭಾವದಿಂದ ನಡೆದುಕೊಳ್ಳುವ ಕಾರಣ ಸಂಬಂಧ ಮಧುರವಾಗಿರುತ್ತದೆ..

ಪೂಜೆ ಮಾಡೋ ಜಾಗದಲ್ಲಿ ಇವನ್ನೆಲ್ಲ ಇಡ್ಬೇಡಿ, ಮೆಚ್ಚೋಲ್ಲ ದೇವರು!

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ಬದುಕಿನ ಮಹತ್ವವಾದ ನಿರ್ಣಯವನ್ನು ಇಂದು ಕೈಗೊಳ್ಳಲಿದ್ದೀರಿ. ಶಾಂತವಾದ ಮನಸ್ಸಿನಿಂದ ಯೋಚಿಸಿ ಮುಂದಡಿ ಇಡಿ. ಯಾರ ಬಗ್ಗೆಯೂ ನಕಾರಾತ್ಮಕವಾಗಿ ಮಾತನಾಡಲು ಮುಂದಾಗಬೇಡಿ. ಸಂತಸದಿಂದ ಸಮಯ ಕಳೆಯಿರಿ. ಎಲ್ಲರೊಂದಿಗೂ ಬೆರೆತು ಖುಷಿಯಿಂದ ಸಮಯ ಕಳೆಯಿರಿ. 

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ನಿಮ್ಮ ಕಾರ್ಯಗಳ ಬಗ್ಗೆ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ.  ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಕಠಿಣ ಪರಿಶ್ರಮಪಡೋದು ಅಗತ್ಯ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ಉದ್ಯಮದಲ್ಲಿ ಯಶಸ್ಸು ಸಿಗಲಿದೆ. ಭವಿಷ್ಯದ ಬಗ್ಗೆ ಸಾಕಷ್ಟು ಯೋಚಿಸಿ ನಿರ್ಧಾರ ಕೈಗೊಳ್ಳುತ್ತೀರಿ. ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸಾಧ್ಯತೆ. 

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ಪರರ ಕಷ್ಟಕ್ಕೆ ಸ್ಪಂದಿಸುವ ಗುಣದಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ಈ ಸಮಯದಲ್ಲಿ ಪ್ರತಿ ವಿಚಾರವನ್ನು ಎಚ್ಚರಿಕೆಯಿಂದ ನಿರ್ವಹಿಸಿ. ವೆಚ್ಚ ಹೆಚ್ಚಳದಿಂದ ತೊಂದರೆಯುಂಟಾಗಲಿದೆ. ಅನ್ಯರ ಮಾತುಗಳಿಂದ ಮನಸ್ಸಿಗೆ ನೋವುಂಟಾಗಬಹುದು. ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ. 

Hindu Religion : ಮಹಿಳೆ ಜನಿವಾರ ಧರಿಸಬಾರಾದಾ?

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ಹಿಂದಿನ ಕೆಲವು ಘಟನೆಗಳ ಬಗ್ಗೆ ಯೋಚಿಸೋದ್ರಿಂದ ಮನಸ್ಸಿಗೆ ಬೇಸರ. ಆತ್ಮೀಯ ಬಂಧುವಿನ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ. ಕೆಲಸದೊತ್ತಡ ಹೆಚ್ಚಿ ಮನಸ್ಸಿಗೆ ಕಿರಿಕಿರಿ. ಯಾರನ್ನೂ ಅತೀಯಾಗಿ ನಂಬಲು ಹೋಗಬೇಡಿ. ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಗುಣ ಸ್ನೇಹಿತರ ಸಂಖ್ಯೆಯನ್ನು ಹೆಚ್ಚಿಸುತ್ತದೆ. 

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ಮಕ್ಕಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ರೂ ಇಂದು ಬಗೆಹರಿಯಲಿದೆ. ನಿರೀಕ್ಷೆಗಿಂತ ವೆಚ್ಚ ಹೆಚ್ಚಿರುತ್ತದೆ. ಹಣಕಾಸಿನ ಪರಿಸ್ಥಿತಿ ಮೇಲೆ ಗಮನ ಕೇಂದ್ರೀಕರಿಸಿ. ಈ ಸಮಯದಲ್ಲಿ ತಾಳ್ಮೆ ಕಾಯ್ದುಕೊಳ್ಳಿ. ಆತ್ಮೀಯ ಸ್ನೇಹಿತನಿಂದ ಮೋಸ ಹೋಗುವ ಸಾಧ್ಯತೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ವೃತ್ತಿ ಕ್ಷೇತ್ರದಲ್ಲಿ ಹೊಸ ಯೋಜನೆಗಳಿಗೆ ಚಾಲನೆ ನೀಡುತ್ತೀರಿ.  ನಿಮ್ಮ ಸೌಮ್ಯ ಸ್ವಭಾವದಿಂದ ಎಲ್ಲರನ್ನೂ ಆಕರ್ಷಿಸುವ ಸಾಮರ್ಥ್ಯ ನಿಮಗಿದೆ. ಇಂದು ಇದೇ ನಿಮಗೆ ವರವಾಗಲಿದೆ.  ಬಂಧುಗಳಿಗೆ ಅವರ ಕೆಲಸದಲ್ಲಿ ನೆರವು ನೀಡಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 

Follow Us:
Download App:
  • android
  • ios