Asianet Suvarna News Asianet Suvarna News

Lucky Parents: ಈ ರಾಶಿಯ ಮಕ್ಕಳನ್ನು ಹೊಂದಿರೋರು ನಿಜವಾಗಿಯೂ ಲಕ್ಕಿ!

ಎಲ್ಲ ಜನ್ಮರಾಶಿಯ ಮಕ್ಕಳೂ ಬಾಲ್ಯದಲ್ಲಿ ತಮ್ಮ ತಂದೆತಾಯಿಗೆ ಹೆಮ್ಮೆಯನ್ನೂ ಆನಂದವನ್ನೂ ಉಂಟುಮಾಡುತ್ತಾರೆ. ಇನ್ನು ಕೆಲವರು ದೊಡ್ಡವರಾದಂತೆ, ತುಂಬಾ ಅದೃಷ್ಟವನ್ನು ತರುತ್ತಾರೆ. ಅವರ್ಯಾರು ಅಂತ ನೋಡೋಣ.

 

 

children with these  zodiac signs are very lucky for parents
Author
Bengaluru, First Published Mar 5, 2022, 3:31 PM IST

ಹೆತ್ತವರಿಗೆ ಖುಷಿ ಅಚ್ಚರಿಗಳನ್ನು ತರುವಂತೆ ಅದೃಷ್ಟವನ್ನೂ ತರುವ ಮಕ್ಕಳಿದ್ದಾರೆ. ಈ ಕೆಳಗಿನ ಆರು ರಾಶಿಯ ಮಕ್ಕಳು ತಂದೆತಾಯಿಯ ಪಾಲಿಗೆ ನಿಜಕ್ಕೂ ಲಕ್ಕೀ ಚಾಂಪ್ಸ್.

ಮಿಥುನ ರಾಶಿ (Gemini)

ಮಿಥುನ ರಾಶಿಯ ಮಕ್ಕಳು (Children) ನಿಮ್ಮನ್ನು ಆನಂದದಲ್ಲಿ ತೇಲಿಸುತ್ತಾರೆ. ಮಿಥುನ ರಾಶಿಯ ಗಂಡುಮಕ್ಕಳು ಸಾಮಾನ್ಯವಾಗಿ ಪ್ರಬುದ್ಧರು ಆಗಿರುತ್ತಾರೆ. ಅವರು ಅಪ್ಪ- ಅಮ್ಮನ ನಡುವೆ ಯಾವಾಗಲೂ ಸವಿಯಾದ ಬಾಂಧವ್ಯವನ್ನು ನೋಡಲು ಇಷ್ಟಪಡುತ್ತಾರೆ. ಮಿಥುನದ ಮಕ್ಕಳು ಇದ್ದಲ್ಲಿ ತಂದೆ ತಾಯಿ ಜಗಳವಾಡುವುದು ಕಡಿಮೆ. ಯಾಕೆಂದರೆ ಮಗುವಿನ ಕಾಲ್ಗುಣ ತಂದೆ ತಾಯಿ ನಡುವೆ ಜಗಳವಾಗಲು ಬಿಡೊಲ್ಲ. ಮಂಗಳ ಗ್ರಹದ ಪರಿಪೂರ್ಣ ಕೃಪೆ ಈ ಮಕ್ಕಳ ಮೇಲೂ ಹೆತ್ತವರ ಮೇಲೂ ಸಾಕಷ್ಟು ಇರುವುದರಿಂದ, ಸಂಸಾರದಲ್ಲಿ ಯಾವಾಗಲೂ ಅನ್ಯೋನ್ಯತೆ ನೆಲೆಸಿರುತ್ತದೆ. ಇದೇ ನೆಮ್ಮದಿಯ ಬದುಕಿಗೂ ಕಾರಣ ಅಲ್ಲವೇ?

ಕಟಕ ರಾಶಿ (Cancer)

ಕಟಕ ರಾಶಿಯ ಹೆಣ್ಣಮಕ್ಕಳು (Daughters) ಇದ್ದಲ್ಲಿ ನಿಮ್ಮ ಮನೆ ನಂದನವನ ಎಂದೇ ತಿಳಿಯಿರಿ. ಇವರು ಇದ್ದ ಮನೆಯಲ್ಲೂ, ಹೋದ ಮನೆಯಲ್ಲೂ ಆನಂದವೇ ಆನಂದ ಯಾವಾಗಲೂ ತಾಂಡವ ಆಡುತ್ತಿರುತ್ತದೆ. ಇವರ ಕಾಲ್ಗುಣ ಹಾಗಿರುವುದು. ಇವರು ಇದ್ದಲ್ಲಿ ಇವರ ಹಿರಿಯರಿಗೆ ಅಕಾಲ ಮೃತ್ಯು ಬಾಧಿಸುವುದಿಲ್ಲ. ಅಕಾಲಿಕ ಕಾಯಿಲೆಗಳು ಬಂದಡರುವುದಿಲ್ಲ. ಇವರಿದ್ದರೆ ಅನವಶ್ಯಕ ಕಿರಿಕಿರಿಗಳು ಇರುವುದಿಲ್ಲ. ಇವರಿದ್ದರೆ ಹೆತ್ತವರು ಬಡವರಾಗುವುದಿಲ್ಲ. ಇವರು ಹುಟ್ಟಿದಂದಿನಿಂದ ಮನೆಯ ಘನತೆ ಉನ್ನತಿಯನ್ನು ಕಾಣುತ್ತ ಹೋಗುತ್ತದೆ. ಇವರಲ್ಲಿ ಗಂಡುಮಕ್ಕಳೂ ನಿಮಗೆ ಅದೃಷ್ಟದಾತರೇ ಆಗಿರುತ್ತಾರೆ.

Planets in astrology: ವಯಸ್ಸಿಗೆ ಮುಂಚೆ ಕಾಡ್ತಿರುವ ನಿಮ್ಮ ಬಿಳಿ ಕೂದಲಿನ ಸಮಸ್ಯೆಗೆ ಗ್ರಹ ದೋಷ ಕಾರಣ!

ಕನ್ಯಾ ರಾಶಿ (Virgo)

ಕನ್ಯಾ ರಾಶಿಯ ಗಂಡಮಕ್ಕಳು (Son) ಅದೃಷ್ಟವಂತರು. ಹೆಣ್ಣುಮಕ್ಕಳು ಅವರಿಗಿಂತಲೂ ಅದೃಷ್ಟವಂತರು. ಇವರು ತಮ್ಮ ಕಾಲ್ಗುಣದಿಂದಾಗಿಯೇ ತಮ್ಮ ಅಪ್ಪ- ಅಮ್ಮಂದಿರಿಗೆ ಅನೇಕ ಸುಖ, ಸೌಕರ್ಯಗಳನ್ನು ತಂದುಕೊಡುತ್ತಾರೆ. ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದವರು ಕಾರು ಕೊಳ್ಳಬಹುದು. ಬಾಡಿಗೆ ಮನೆಯಲ್ಲಿ ಇರುವವರು ಸ್ವಂತ ಮನೆ ಕೊಳ್ಳಬಹುದು. ಕನ್ಯಾ ರಾಶಿಯ ಮಗು ಹುಟ್ಟಿದರೆ, ನೀವು ಎಂದೂ ಕಾಣದ ಕನಸನ್ನು ಕಾಣುವಂತೆಯೂ, ಆ ಕನಸು ನನಸಾಗಿಸುವಂತೆಯೂ ನೋಡಿಕೊಳ್ಳುತ್ತಾರೆ. ನಿಮ್ಮನ್ನು ಜೀವನದ ಸಂಧ್ಯಾಕಾಲದಲ್ಲೂ ಇವರು ಕೈ ಹಿಡಿದು ಮುನ್ನಡೆಸುತ್ತಾರೆ. ಇದು ನಿಶ್ಚಯ.

ವೃಶ್ಚಿಕ ರಾಶಿ (Scorpio)

ವೃಶ್ಚಿಕ ರಾಶಿಯ ಮಕ್ಕಳು ಸ್ವಲ್ಪ ಒರಟರಾಗಿರಬಹುದು. ಆದರೆ ಇವರು ಹೃದಯವಂತರು. ಹೀಗಾಗಿ ಇವರಿಂದ ಯಾವತ್ತೂ ಹೆತ್ತವರಿಗೆ ಕೆಡುಕು ಉಂಟಾಗುವುದಿಲ್ಲ. ಬದಲು ಒಳಿತೇ ಸಂಭವಿಸುತ್ತ ಹೋಗುತ್ತದೆ. ಇವರಿಂದ ನೀವು ಚಿನ್ನಾಭರಣಗಳನ್ನು ಕೊಳ್ಳುವಂತಾಗಬಹುದು. ಸಂಪತ್ತಿನ ವಿಚಾರದಲ್ಲಿ ನೀವು ಈ ಮಕ್ಕಳ ಕಾಲ್ಗುಣದಿಂದಾಗಿ ಶ್ರೀಮಂತರಾಗಬಹುದು. ಈ ಮಕ್ಕಳ ಅನುಪಸ್ಥಿತಿಯಲ್ಲಿ ನೀವು ಮಾಡಲು ಹೊರಡುವ ಕೆಲಸಗಳು ಕೈಕೊಡಬಹುದು- ಅದನ್ನು ನೋಡಿಯೇ ಇವರು ನಿಮ್ಮ ಜೀವನದಲ್ಲಿ ಎಷ್ಟು ಇಪಾರ್ಟೆಂಟು ಎಂದು ಅರ್ಥ ಮಾಡಿಕೊಳ್ಳಿ.

Intelligent Zodiacs: ಈ ರಾಶಿಯವರು ಬುದ್ಧಿವಂತಿಕೆಯಲ್ಲಿ ಒಂದು ಕೈ ಮೇಲೆಯೇ..

ಮಕರ ರಾಶಿ (Capricorn)

ಮಕರ ರಾಶಿಯ ಮಕ್ಕಳು ನಿಮ್ಮ ಆರೋಗ್ಯ (Health) ಹಾಗೂ ಐಶ್ವರ್ಯ (Wealth) ಎರಡಕ್ಕೂ ಉತ್ತರದಾಯಿಗಳಾಗಿರುತ್ತಾರೆ. ಇವರು ಇದ್ದಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಅಂದರೆ ಇವರ ಜಾತಕದಲ್ಲಿರುವ ಗ್ರಹಯೋಗಗಳು ಅಪ್ಪ ಅಮ್ಮಂದಿರ ಆರೋಗ್ಯವನ್ನು ಕಾಪಾಡುವ ಹೊಣೆ ಹೊತ್ತಿರುತ್ತವೆ. ಇನ್ನು ಐಶ್ವರ್ಯದ ಮಟ್ಟಿಗಂತೂ ಈ ಮಕ್ಕಳು ನಿಮ್ಮ ತಿಜೋರಿಯ ಭದ್ರ ಕೀಲಿಕೈ ಎಂದೇ ಹೇಳಬಹುದು. ನಿಮ್ಮ ಆದಾಯ ಹೆಚ್ಚಲು, ಆ ಆದಾಯ ಸೋರಿಹೋಗದಂತೆ ಮುಚ್ಚಳ ಹಾಕಲೂ ಈ ಮಕ್ಕಳ ಕಾಲ್ಗುಣ ನೆರವಾಗಲಿದೆ.

ಮೀನ ರಾಶಿ (Pisces)

ಮೀನ ರಾಶಿಯ ಮಕ್ಕಳು ನಿಮಗೆ ಜನಿಸಿದಲ್ಲಿ ನೀವು ಖಂಡಿತವಾಗಿಯೂ ಸ್ವಂತ ಬ್ಯುಸಿನೆಸ್‌ಗೆ (Bussyness) ಹಣ ಹಾಕಬಹುದು. ಅದು ಮರಳಿ ಬರುವ ಬಗ್ಗೆ ಚಿಂತಿಸಬೇಕಿಲ್ಲ. ಯಾಕೆಂದರೆ ಈ ಮಕ್ಕಳ ಕಾಲ್ಗುಣ, ನೀವು ಎಂದೆಂದೂ ಬಡವರಾಗದಂತೆ, ನಿಮ್ಮ ಕೈಯಿಂದ ಹಣ (Money) ಅನ್ಯಾಯವಾಗಿ ಸೋರಿ ಹೋಗದಂತೆ ಕಾಪಾಡುತ್ತದೆ. ವೃತ್ತಿಯಲ್ಲಿ (Proffession) ಎಂದೂ ನಿಮಗೆ ಅನ್ಯಾಯ ಆಗುವುದಿಲ್ಲ. ಆದರೆ ಉತ್ತರೋತ್ತರ ಅಭಿವೃದ್ಧಿ ಆಗುತ್ತಾ ಹೋಗುತ್ತದೆ. ಆದರೆ ಈ ಮಕ್ಕಳ ಆರೋಗ್ಯ ಸ್ವಲ್ಪ ನಾಜೂಕಾಗಿರುವುದರಿಂದ, ಹುಷಾರಾಗಿ ನೋಡಿಕೊಳ್ಳಬೇಕು.

Scorpions ಸಂಬಂಧದಲ್ಲಿ ಈ ತಪ್ಪು ಮಾಡುತ್ತಾರೆ!
 

Follow Us:
Download App:
  • android
  • ios