Asianet Suvarna News Asianet Suvarna News

ಪರಿಪೂರ್ಣತೆ ಬಯಸುವ ಕನ್ಯಾ ರಾಶಿಯವರು ತಮ್ಮ ಬಾಳಸಂಗಾತಿಗಳಲ್ಲಿ ಏನಿಷ್ಟಪಡುತ್ತಾರೆ ಗೊತ್ತೇ?

ಕನ್ಯಾ ರಾಶಿಯವರು ಪರಿಪೂರ್ಣತಾವಾದಿಗಳು. ಇವರನ್ನು ತಮ್ಮ ಬಾಳಸಂಗಾತಿಯಲ್ಲಿ ಅಪೇಕ್ಷಿಸುವ ಗುಣಗಳೂ ಶ್ರೇಷ್ಠ ಮಟ್ಟದ್ದಾಗಿರಬೇಕೆಂದು ಬಯಸುತ್ತಾರೆ.

 

 

character traits Virgo Zodiac sign born wish to have in their life partner
Author
Bengaluru, First Published Sep 24, 2021, 5:03 PM IST
  • Facebook
  • Twitter
  • Whatsapp

ಕನ್ಯಾ ರಾಶಿ(Virgo) ಜ್ಯೋತಿಷ್ಯದ ಪ್ರಕಾರ ಆರನೇ ರಾಶೀಚಕ್ರ ಚಿಹ್ನೆ. ಈ ರಾಶಿಯವರು ಪರಿಪೂರ್ಣತಾವಾದಿಗಳು. ಈ ರಾಶಿಯಲ್ಲಿ ಜನಿಸಿದ ಹೆಚ್ಚಿನವರು ಕುಟುಂಬ, ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗೆ ಪ್ರಾಮಾಣಿಕರಾಗಿರುತ್ತಾರೆ ಹಾಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಈ ರಾಶಿಯಡಿಯಲ್ಲಿ ಜನಿಸಿದವರು ಇತರರಿಗೆ ಸಹಾಯ ಮಾಡುವ ಮುಕ್ತ ಮನಸ್ಸನ್ನು ಹೊಂದಿರುತ್ತಾರೆ. ಕನ್ಯಾ ರಾಶಿ ಶುದ್ಧತೆಯನ್ನು ಸಂಕೇತಿಸುತ್ತದೆ. ಇವರು ಒಳ್ಳೆಯ ಗುಣಗಳನ್ನೂ, ಕೆಟ್ಟ ಗುಣಗಳನ್ನೂ ಹೊಂದಿರುತ್ತಾರೆ. ಜನರ ಅಂತರಂಗದ ಉದ್ದೇಶವನ್ನು ಗ್ರಹಿಸುವ ವಿಲಕ್ಷಣ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇತರರೊಂದಿಗೆ ವ್ಯವಹಾರಿಸುವಾಗಲೂ ಅವರನ್ನು ಬಹಳ ಗಮನವಿಟ್ಟು ಅವಲೋಕಿಸುತ್ತಾರೆ. ಪರಿಸ್ಥಿತಿಗೆ ತಕ್ಕಂತೆ ಚುರುಕಾಗಿರುತ್ತಾರೆ.

ಸ್ವಚ್ಛತೆಯ ಗೀಳು
ಕನ್ಯಾ ರಾಶಿಯಡಿಯಲ್ಲಿ ಜನಿಸಿದವರು ಸ್ವಚ್ಛತೆಯ ಬಗ್ಗೆ ಗೀಳನ್ನು ಹೊಂದಿರುತ್ತಾರೆ. ಹೀಗಾಗಿ ತಮ್ಮ ಬಾಳಸಂಗಾತಿಯಲ್ಲೂ ಇದನ್ನು ಬಯಸುತ್ತಾರೆ. ಎಷ್ಟು ಎಂದರೆ ಜೋರಾಗಿ ಸೀನುವುದನ್ನೂ ಇಷ್ಟಪಡುವುದಿಲ್ಲ. ಇದು ಸಂಗಾತಿಗೆ ಕಿರಿಕಿರಿಯನ್ನುಂಟು ಮಾಡಬಹುದು. ಬುದ್ಧಿವಂತರಾಗಿದ್ದರೂ ತಮ್ಮ ಕೆಲಸಗಳ ಬಗ್ಗೆ ಕೆಲವೊಮ್ಮೆ ಗೊಂದಲ ಉಂಟಾಗಿ ಸಂಗಾತಿಯಿಂದ ನೆರವು ಅಪೇಕ್ಷಿಸುತ್ತಾರೆ. ಅತಿಯಾದ ಜವಾಬ್ದಾರಿಯು ಕೆಲವೊಮ್ಮೆ ತೀವ್ರ ಒತ್ತಡಕ್ಕೆ ಕಾರಣವಾಗಿದ್ದರೂ ಸಂಗಾತಿಗಳು ಭಾವನಾತ್ಮಕ ಜೀವಿಗಳಾಗಿರಲು ಬಯಸುತ್ತಾರೆ. ತಮ್ಮ ಭಾವನೆಗಳನ್ನು ಹೊರಗೆ ತೋರ್ಪಡಿಸುವುದು ಅಪರೂಪ. ತಮ್ಮೊಳಗೇ ಅದನ್ನು ಇರಿಸಿಕೊಳ್ಳಲು ಬಯಸುತ್ತಾರೆ, ಇದು ಕೆಲವೊಮ್ಮೆ ಇವರ ಸಂಗಾತಿ (Companion)ಗಳಲ್ಲಿ ಒತ್ತಡವನ್ನು ಹೆಚ್ಚಿಸಬಹುದು.

ನೇರ ಸ್ವಭಾವದ ಸಿಂಹ ರಾಶಿಯವರಿಗೆ ಸಂಗಾತಿ ಹೇಗಿರಬೇಕತ್ತಂತೆ ಗೊತ್ತಾ?

​ನಿಷ್ಠೆಯನ್ನು ಬಯಸುತ್ತಾರೆ
ಕನ್ಯಾ ರಾಶಿಯವರು ಅತ್ಯುತ್ತಮ ಪ್ರೇಮಿಯೂ (lover) ಹೌದು. ಇಂದ್ರಿಯಗಳನ್ನು ನಿಗ್ರಹಿಸುತ್ತಾರೆ ಹಾಗೂ ಹೆಚ್ಚಿನ ತಾಳ್ಮೆಯನ್ನು ಹೊಂದಿರುತ್ತಾರೆ. ಆದರೆ ಇವರು ತಮ್ಮ ಜೀವನಸಂಗಾತಿಯಲ್ಲಿ (Life partner) ಒಳ್ಳೆಯದನ್ನು ಹುಡುಕಲು ಸಮಯ ತೆಗೆದುಕೊಳ್ಳುತ್ತಾರೆ. ತಮ್ಮ ಸಂಗಾತಿಯ ಅಗತ್ಯಗಳನ್ನು ಅತೀ ಮುಖ್ಯವೆಂದು ಭಾವಿಸುತ್ತಾರೆ. ಸಂಗಾತಿಯ ಮೇಲೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸದಿದ್ದರೂ, ಅಂತರಂಗದಲ್ಲಿ ಬಹಳಷ್ಟು ಪ್ರೀತಿ (love), ಕಾಳಜಿಯನ್ನು ಹೊಂದಿರುವ ವಿಶೇಷ ವ್ಯಕ್ತಿತ್ವ (Special Personality) ಇವರದ್ದು. ತಮ್ಮ ಸಂಗಾತಿಗೆ ನಿಷ್ಠರಾಗಿರುತ್ತಾರೆ. ಸಂಗಾತಿ (Partner) ಕೂಡ ತಮಗೆ ತುಂಬಾ ನಿಷ್ಠರಾಗಿರಬೇಕು ಎಂದು ಅಪೇಕ್ಷಿಸುತ್ತಾರೆ. ಸಂಗಾತಿಯೊಂದಿಗೆ ಹಾಗೂ ಸ್ನೇಹಿತರೊಂದಿಗೆ ಅತ್ಯಂತ ನಿಕಟವಾಗಿರುತ್ತಾರೆ. ಇವರನ್ನು ಸಂತೋಷವಾಗಿಡಲು ಹೆಚ್ಚಿನ ಪ್ರಯತ್ನ ಮಾಡುತ್ತಾರೆ. ಸಂಗಾತಿಗೆ ಅಗತ್ಯವಿರುವಾಗ ಹತ್ತಿರದಲ್ಲಿರಲು ಇಷ್ಟಪಡುತ್ತಾರೆ. ತಮಗೆ ಸಣ್ನ ತಲೆನೋವಾದರೂ ಸಂಗಾತಿ ಪಕ್ಕದಲ್ಲಿ ಇರಬೇಕು ಎಂದು ಬಯಸುತ್ತಾರೆ.

ಸಂತುಲಿತ ಜೀವನಶೈಲಿ
ಕನ್ಯಾ ರಾಶಿಯವರು ಆರೋಗ್ಯ ಪ್ರಜ್ಞೆ (Health Conscious) ಇರುವವರು. ವ್ಯಾಯಾಮದ ಜೊತೆಗೆ ಸಮತೋಲಿತ ಜೀವನಶೈಲಿ ಹೊಂದಿರುವರನ್ನು ಇಷ್ಟಪಡುತ್ತಾರೆ. ಸಂಗಾತಿಯ ಅನಾರೋಗ್ಯಗಳು ಇವರನ್ನು ತೀವ್ರ ಒತ್ತಡ ಆತಂತಕ್ಕೆ ಗುರಿಪಡಿಸುತ್ತವೆ. ಇದರಿಂದ ಇವರಿಗೆ ಮಾಸಿಕ ಸಮಸ್ಯೆಯೂ ಉಂಟಾಗಬಹುದು. ಸಂಗಾತಿಗಳು ತಮ್ಮ ಆರೋಗ್ಯದ ನಿಗಾ ತಾವೇ ತೆಗೆದುಕೊಳ್ಳುವವರಾದರೆ ಇವರಿಗೆ ಖುಷಿಯಾಗುತ್ತದೆ.

ಕಟಕ ರಾಶಿಯವರು ತಮ್ಮ ಸಂಗಾತಿಯಲ್ಲಿ ಈ ಗುಣಗಳನ್ನು ನಿರೀಕ್ಷಿಸುತ್ತಾರೆ!

​ಪರಿಶ್ರಮಿಗಳು ಇಷ್ಟ
ಶಿಸ್ತುಬದ್ಧ (disciplined), ಪ್ರಾಮಾಣಿಕತೆ (Honesty) ಮತ್ತು ಕಠಿಣ ಪರಿಶ್ರಮ (Hard Work)ದಿಂದ ವೃತ್ತಿಜೀವನ (Professional Life)ದಲ್ಲಿ ಯಶಸ್ಸನ್ನು ಗಳಿಸುವವರನ್ನು ಇವರು ಇಷ್ಟಪಡುತ್ತಾರೆ. ವೃತ್ತಿಯನ್ನು ಸಮಯ ಕಳೆಯುವುದಕ್ಕೆಂದು ಮಾಡುವವರು ಇಷ್ಟವಾಗುವುದಿಲ್ಲ. ಕೆಲಸದಲ್ಲಿ ಪರಿಪೂರ್ಣತೆಯನ್ನು ಕಾಣುವ ಸಂಗಾತಿಗಳೆಂದರೆ ಇಷ್ಟ. ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ವೃತ್ತಿಗಳಾದ ಗಣಿತ (Maths), ಭೌತಶಾಸ್ತ್ರ(Physics), ಹಣಕಾಸು (Economics), ಇಂಜಿನಿಯರಿಂಗ್‌ (Engineering), ಸಂಶೋಧನೆ (research), ವೈದ್ಯಕೀಯ (medicine), ವಾಸ್ತುಶಿಲ್ಪ (Architecture), ಹೂಡಿಕೆ (Investment) ಮತ್ತು ಶೇರು ಮಾರುಕಟ್ಟೆಯಲ್ಲಿ ಪರಿಶ್ರಮ ಪರಿಣತಿ ಹೊಂದಿದವರನ್ನು ಸಂಗಾತಿಗಳಾಗಿ ಹೊಂದಲು ಬಯಸುತ್ತಾರೆ. ಶಿಸ್ತುಬದ್ಧ, ನಿಖರ, ವಿಶ್ಲೇಷಣಾತ್ಮಕ ಮತ್ತು ಮಾನಸಿಕವಾಗಿ ಚುರುಕು ಬುದ್ಧಿಯುಳ್ಳವರನ್ನು ಸಂಗಾತಿಗಳಾಗಿ ಬಯಸುತ್ತಾರೆ. ಚಿಂತನಶೀಲತೆ, ಸೂಕ್ಷ್ಮತೆ, ದಕ್ಷತೆ, ಜಾಗರೂಕತೆ, ಬುದ್ಧಿವಂತಿಕೆ, ವಿವೇಕ, ಶ್ರಮ, ಕ್ರಿಯಾಶೀಲ ದೃಷ್ಟಿಕೋನ, ಪರಿಪೂರ್ಣತೆ ಇರುವವರೆಂದರೆಇಷ್ಟ. ಸ್ವಾರ್ಥ, ಕಿರಿಕಿರಿ, ಆತಂಕ, ರಹಸ್ಯ, ಸಂದೇಹ, ಸ್ಪಂದಿಸದಿರುವಿಕೆ, ನಿರ್ಣಯ, ಅಲ್ಪ ಸ್ವಭಾವ, ಅಂಜುಬುರುಕತೆ, ಲೆಕ್ಕಾಚಾರದ ವಿಧಾನ ಮುಂತಾದ ನಕಾರಾತ್ಮಕ ಗುಣ (Positive Quality) ಗಳಿರುವವರನ್ನು ಸಂಗಾತಿಗಳಾಗಿ ಬಯಸುವುದಿಲ್ಲ.

ಮಿಥುನ ರಾಶಿಯವರು ತಮ್ಮ ಲೈಫ್ ಪಾರ್ಟ್‌ನರ್ ಹೇಗಿರ್ಬೇಕು ಅಂತ ಬಯಸ್ತಾರೆ ಗೊತ್ತಾ?

Follow Us:
Download App:
  • android
  • ios