Asianet Suvarna News Asianet Suvarna News

ಚಂದ್ರಯಾನದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತೆ, ಇಲ್ಲಿದೆ ಗುಟ್ಟು

ಭಾರತದ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದಕ್ಕೆ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಆ ಸಂಭ್ರವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇನ್ನು ಈ ನಡುವೆ ಚಂದ್ರಯಾನ-3 ಯಶಸ್ವಿಯ ಬಗ್ಗೆ ಕೆಲವು ಜ್ಯೋತಿಷಿಗಳು ನಿಖರ ಮಾಹಿತಿ ನೀಡಿದ್ದಾರೆ.

chandrayaan3 live vikram lander soft landing on moon on 23 august suh
Author
First Published Aug 22, 2023, 3:24 PM IST

ಭಾರತದ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದಕ್ಕೆ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಆ ಸಂಭ್ರವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇನ್ನು ಈ ನಡುವೆ ಚಂದ್ರಯಾನ-3 ಯಶಸ್ವಿಯ ಬಗ್ಗೆ ಕೆಲವು ಜ್ಯೋತಿಷಿಗಳು ನಿಖರ ಮಾಹಿತಿ ನೀಡಿದ್ದಾರೆ.

ನಾಳೆ ಚಂದ್ರನ ಅಂಗಳಕ್ಕೆ ಇಸ್ರೋದ ಚಂದ್ರಯಾನ-3 ಲ್ಯಾಂಡರ್‌ ಯಶಸ್ವಿಯಾಗಿ ಇಳಿಯಲು ಪ್ರಯತ್ನಿಸಲಿದೆ. ಇದು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಸಮಯ. ಚಂದ್ರಯಾನ-3 ಲ್ಯಾಂಡರ್ ತನ್ನ ಗಮ್ಯಸ್ಥಾನವನ್ನು ತಲುಪುತ್ತಿದ್ದಂತೆ, ಭಾರತದ ಮೂರನೇ ಚಂದ್ರಯಾನ ಕಾರ್ಯಾಚರಣೆಯ ಯಶಸ್ಸಿಗಾಗಿ ದೇಶದ ವಿವಿಧೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ನಡೆಸಲಾಗುತ್ತಿದೆ. ಈ ಕುರಿತು ಯಶಸ್ಸಿನ ಗುಟ್ಟು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ.

ನಾಳೆ ಚಂದ್ರನ ಅಂಗಳಕ್ಕೆ ಚಂದ್ರಯಾನ-3 

ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ನಾಳೆ ಸಂಜೆ 6.04 ರ ಸುಮಾರಿಗೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ನಿರೀಕ್ಷೆಯಿದೆ ಎಂದು ಇಸ್ರೋ ತಿಳಿಸಿದೆ. ಇದು ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಇಳಿಯಲಿದೆ. ಚಂದ್ರಯಾನ-3 ಚಂದ್ರಯಾನ-2 ರ ಮುಂದುವರೆದ ಕಾರ್ಯಾಚರಣೆ ಆಗಿದ್ದು, ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮತ್ತು ರೋವಿಂಗ್‌  ಅಂತ್ಯದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

Chandrayaan-3 Updates: 70 ಕಿ.ಮೀ ದೂರದಿಂದ ಚಂದ್ರ ಕಾಣೋದು ಹೀಗೆ.. ಹೊಸ ಚಿತ್ರ ಕಳಿಸಿದ ವಿಕ್ರಮ್‌!

 

ಚಂದ್ರಯಾನ-3ಕ್ಕೆ ದೇವರ ಆಶೀರ್ವಾದ

ಭಾರತವು ತುಲಾ ಲಗ್ನದ ಪ್ರಕಾರ ಉಪಗ್ರಹ ಉಡಾವಣೆ ಮಾಡಿದೆ. ಭಾರತದ ಚಂದ್ರಯಾನ-3ಕ್ಕೆ ದೇವರ ಆಶೀರ್ವಾದ ಪೂರ್ಣವಾಗಿದೆ. ಅದರಲ್ಲಿಯೂ ಭಾರತೀಯ ವಿಜ್ಞಾನಿಗಳು ತಿರುಪತಿ ವೆಂಕಟರಮಣ ದೇವರ ಆಶೀರ್ವಾದ ಪಡೆದಿದ್ದಾರೆ. ಇದರಿಂದ ಚಂದ್ರಯಾನ 3 ನಿಧಾನಗತಿ ಪಡೆಯಲೇ ಇಲ್ಲ. ಇದು ಸಕ್ಸಸ್ ಆಗಲಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ. ಇನ್ನು ಚಂದ್ರಯಾನ-3 ಯಶಸ್ವಿಯಾಗಲಿದ್ದು, ದೇಶಕ್ಕೆ ಒಳಿತಾಗಲಿದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

Follow Us:
Download App:
  • android
  • ios