Asianet Suvarna News Asianet Suvarna News

Chanakya Niti: ಈ ವಿಷಯಗಳಲ್ಲಿ ಸ್ತ್ರೀಯರು ಪುರುಷರಿಗಿಂತ ಎಂಟು ಪಟ್ಟು ಸ್ಟ್ರಾಂಗ್ ಅಂತೆ!

ಸ್ತ್ರೀಯರ ವಿಷಯದಲ್ಲಿ ಆಚಾರ್ಯ ಚಾಣಕ್ಯ ಖಂಡಿತ ಒಂದು ಪಿಎಚ್‌ಡಿಗೆ ಆಗುವಷ್ಟು ಸರಕು ಬರೆದಿಟ್ಟು ಹೋಗಿದ್ದಾನೆ. ಅವನು ಬರೆದ ನೀತಿ ಸೂತ್ರಗಳಲ್ಲಿ, ಯಾವ ವಿಷಯಗಳಲ್ಲಿ ಸ್ತ್ರೀಯರು ಪುರುಷರಿಗಿಂತ ಎಂಟು ಪಟ್ಟು ಚುರುಕು ಎಂಬುದೂ ಒಂದು.

chanakya niti says in these traits women are 8 times stronger than men
Author
First Published Jan 18, 2024, 4:45 PM IST | Last Updated Jan 18, 2024, 4:44 PM IST

ಆಚಾರ್ಯ ಚಾಣಕ್ಯರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಚಾಣಕ್ಯ ನೀತಿ ತುಂಬಾ ವಿಶೇಷ. ಬದುಕಿನ ನೀತಿಗೆ ಸಂಬಂಧಿಸಿದ ಸಂಬಂಧಗಳು ಪೋಷಕರು, ಸ್ನೇಹಿತರು, ಹೆಂಡತಿ ಮತ್ತು ಸಹೋದರರ ಜೊತೆಗೆ ಹೇಗೆ ಇರಬೇಕು ಎಂಬುದರ ಬಗ್ಗೆಯೂ ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಜಾಣ್ಮೆಯ ವಿಚಾರದಲ್ಲಿ ಚಾಣಕ್ಯನ ನೀತಿ ಮಾತುಗಳನ್ನು ಅನುಸರಿಸಿದರೆ ವ್ಯಕ್ತಿ ಖಂಡಿತವಾಗಿಯೂ ತನ್ನ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಕೆಲವು ವಿಚಾರಗಳಲ್ಲಿ ಅಂದು ಚಾಣಕ್ಯ ಹೇಳಿದ ಮಾತುಗಳು ಇಂದು ಅಷ್ಟೊಂದು ಸಮ್ಮತ ಅಲ್ಲದೇ ಇರಬಹುದು. ಆದರೂ ಅವುಗಳನ್ನು ಓದುವುದು ಮಜಾ ಕೊಡುತ್ತದೆ. ಅದರಲ್ಲಿ ಇದೊಂದು. ಪುರುಷರಿಗಿಂತ ಮಹಿಳೆಯರಲ್ಲಿ ಕೆಲವು ವಿಷಯಗಳಲ್ಲಿ ಅನೇಕ ಪಟ್ಟು ಹೆಚ್ಚು ಬಯಕೆಗಳು ಇರುತ್ತದೆ ಎಂದಿದ್ದಾನೆ.  ಬನ್ನಿ ಅವು ಯಾವುವು ತಿಳಿದುಕೊಳ್ಳೋಣ,

ಸ್ತ್ರೀನಾಂ ದ್ವಿಗುಣ ಆಹಾರೋ ಚಾಪಿ ಚತುರ್ಗುಣ
ಸಾಹಸಂ ಷಡ್ಗುಣಂ ಕಾಮಶ್ಚಾಷ್ಠಗುಣಃ ಸ್ಮೃತಃ

ಚಾಣಕ್ಯ ನೀತಿಯ ಈ ಶ್ಲೋಕದಲ್ಲಿ, ಆಚಾರ್ಯ ಚಾಣಕ್ಯರು ಮಹಿಳೆಯರಲ್ಲಿ ಹಸಿವು ಪುರುಷರಿಗಿಂತ ಎರಡು ಪಟ್ಟು ಹೆಚ್ಚು,  ನಾಚಿಕೆ ಪುರುಷರಿಗಿಂತ 4 ಪಟ್ಟು ಹೆಚ್ಚು, ಧೈರ್ಯವು ಪುರುಷರಿಗಿಂತ 6 ಪಟ್ಟು ಹೆಚ್ಚು ಮತ್ತು ಕಾಮದ ಮನೋಭಾವವು ಪುರುಷರಿಗಿಂತ 8 ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳಿದ್ದಾರೆ. ಪುರುಷರಿಗಿಂತ ಹೆಚ್ಚಿನ ಸಹನಶಕ್ತಿ ಅಥವಾ ತಾಳ್ಮೆ ಹಾಗೂ ನಾಚಿಕೆಯ ಪ್ರಜ್ಞೆಯನ್ನು ಹೊಂದಿರುವ ಮಹಿಳೆಯರು ಎಂದಿಗೂ ಕೂಡ ತಮ್ಮ ಬಯಕೆಯನ್ನು ಬಹಿರಂಗಪಡಿಸುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳುತ್ತಾರೆ.

ನೀವು ಈ ವಿಷ್ಯ ಸೀಕ್ರೆಟ್ ಆಗಿಟ್ರೆ ಮಾತ್ರ ಯಶಸ್ಸು ನಿಮ್ಮದು!

ಮೂರ್ಖಶಿಷ್ಯೋಪದೇಶೇನ್ ದುಷ್ಟಸ್ತ್ರೀಭರಣೇನ್ ಚ.
ದುಃಖಿತೈ: ಸಮ್ಪ್ರಯೋಗೆಣ ಪಂಡಿತೋ-ಪ್ಯನ್ವಸಿದತಿ.

ಈ ಶ್ಲೋಕದಲ್ಲಿ ಆಚಾರ್ಯ ಚಾಣಕ್ಯರು ಶಿಷ್ಯನು ಮೂರ್ಖನಾಗಿದ್ದರೆ ಅವನಿಗೆ ಉಪದೇಶ ಮಾಡುವುದು ವ್ಯರ್ಥ, ಮಹಿಳೆ ಕೆಟ್ಟವಳಾಗಿದ್ದರೆ ಅವಳನ್ನು ಪೋಷಿಸುವುದು ವ್ಯರ್ಥ ಎಂದು ಹೇಳಿದ್ದಾರೆ. ನಿಮ್ಮ ಹಣ ವ್ಯರ್ಥವಾದರೆ ಅಥವಾ ಅತೃಪ್ತ ವ್ಯಕ್ತಿಯೊಂದಿಗೆ ನೀವು ಬಾಂಧವ್ಯವನ್ನು ಹೊಂದಿದ್ದರೆ, ನೀವು ಎಷ್ಟೇ ಬುದ್ಧಿವಂತರಾಗಿದ್ದರೂ ಸಹ, ನೀವು ಕಷ್ಟಪಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಮನೆಯಲ್ಲಿ ಗೂಬೆ ಮೂರ್ತಿ ಇದ್ದರೆ ಸಂಪತ್ತು ಹೆಚ್ಚಾಗುತ್ತಾ?

ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯರು ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ ಪುರುಷರನ್ನು ಹೆಚ್ಚು ಇಷ್ಟಪಡುತ್ತಾರೆ. ಸುಳ್ಳು ಹೇಳುವವರನ್ನು ಅವರು ಎಂದಿಗೂ ಇಷ್ಟಪಡುವುದಿಲ್ಲ. ಪ್ರಾಮಾಣಿಕ ವ್ಯಕ್ತಿ ಯಾವಾಗಲೂ ಸತ್ಯದ ಮಾರ್ಗದಲ್ಲಿ ನಡೆಯುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಅವನು ಎಂದಿಗೂ ತಪ್ಪು ಕೆಲಸ ಮಾಡುವುದಿಲ್ಲ. ನಂಬಿಕೆಯಿಂದ ನೀವು ಯಾರನ್ನಾದರೂ ಗೆಲ್ಲಬಹುದು ಮತ್ತು ನಿಮ್ಮ ಜೀವನವನ್ನು ಸಂತೋಷಪಡಿಸಬಹುದು.

Latest Videos
Follow Us:
Download App:
  • android
  • ios