Asianet Suvarna News Asianet Suvarna News

Chanakya Niti : ಸೋತು ಗೆಲ್ತಾರೆ ಈ ಜನ, ಅದೇ ಅವರ ವಿಶೇಷ ಗುಣ!

ಗೆಲುವಿಗಾಗಿಯೇ ಪ್ರತಿಯೊಬ್ಬರ ಹೋರಾಟವಿರುತ್ತದೆ. ಆದ್ರೆ ಎಲ್ಲರಿಗೂ ಸುಲಭವಾಗಿ ಗೆಲುವು ಸಾಧ್ಯವಿಲ್ಲ. ಅನೇಕ ಪ್ರಯತ್ನದ ನಂತ್ರವೂ ಸೋತ ವ್ಯಕ್ತಿ, ಒಂದೇ ಬಾರಿಗೆ ಗೆದ್ದ ವ್ಯಕ್ತಿಗಿಂತ ಶ್ರೇಷ್ಠ ಎನ್ನುತ್ತಾರೆ ಆಚಾರ್ಯ ಚಾಣಕ್ಯ.
 

Chanakya Niti In This Situation Man Wins Even After Defeat Failure Does Not Bother
Author
First Published Sep 7, 2022, 5:22 PM IST

ಸಾರ್ಥಕ ಬದುಕಿಗೆ ಗುರಿ ಇರಬೇಕು. ಗುರಿಯಿಲ್ಲದ ಜೀವನ ಅರ್ಥಹೀನ.   ಬುಲೆಟ್ ಇಲ್ಲದ ಬಂದೂಕು ಹೇಗೆ ನಿಷ್ಪ್ರಯೋಜಕವೋ, ಅದೇ ರೀತಿ ಜೀವನದಲ್ಲಿ ಗುರಿಯಿಲ್ಲದೆ ಹೋದ್ರೆ ಯಾವುದೇ ಪ್ರಯೋಜನವಿಲ್ಲ. ಅಂಥ ಜನರಿಗೆ ಯಾವುದೇ ನೆಲೆ ಇರೋದಿಲ್ಲ. ಅವರು ಸದಾ ಅಲೆದಾಡುತ್ತಲಿರುತ್ತಾರೆ. ಗುರಿ ಇಟ್ಟುಕೊಳ್ಳೋದು ಮತ್ತೆ ಆ ಗುರಿ ತಲುಪೋದು ಈ ಎರಡೂ ಹೇಳಿದಷ್ಟು ಸುಲಭವಲ್ಲ. ಈಗಿನ ದಿನಗಳಲ್ಲಿ ಜನರಿಗೆ ಸೋಲಿಲ್ಲದ ಗೆಲುವು ಬೇಕು. ಯಾವುದೇ ಪರಿಶ್ರಮವಿಲ್ಲದೆ ಒಂದೇ ಬಾರಿ ಆಕಾಶಕ್ಕೆ ನೆಗೆಯಬೇಕೆಂದು ಬಯಸ್ತಾರೆ. ಆದ್ರೆ ಈ ಗೆಲುವು ಹಾಗೂ ಪರಿಶ್ರಮದಿಂದ ಮೇಲೆ ಬರುವ ಗೆಲುವಿಗೂ ಸಾಕಷ್ಟು ಅಂತರವಿದೆ. ಪರಿಶ್ರಮದಿಂದ ಸಿಗುವ ಗೆಲುವಿನಲ್ಲಿ ಒಬ್ಬ ವ್ಯಕ್ತಿ ಅನೇಕ ಬಾರಿ ಬೀಳುತ್ತಾನೆ. ಸಾಕಷ್ಟು ಸೋಲು, ನೋವುಗಳನ್ನು ಆತ ಎದುರಿಸಬೇಕಾಗುತ್ತದೆ. ಸೋತ ನಂತ್ರವೂ ಆತ ಹೇಗೆ ಗೆಲ್ಲುತ್ತಾನೆ ಎಂಬುದನ್ನು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಆಚಾರ್ಯ ಚಾಣಕ್ಯ ವ್ಯಕ್ತಿಯ ಯಶಸ್ಸಿಗೆ ಬೇಕಾದ ಅನೇಕ ಸಂಗತಿಗಳನ್ನು ಹೇಳಿದ್ದಾರೆ. ಇಂದು, ಚಾಣಕ್ಯನ ಪ್ರಕಾರ ಸೋತ ನಂತ್ರವೂ ಗೆಲ್ಲುವ ವ್ಯಕ್ತಿ ಯಾರು ಎಂದು ನಾವು ಹೇಳ್ತೇವೆ. 

ಪ್ರಯತ್ನ (Effort) ದ ಹಿಂದೆ ಇದೆ ದೊಡ್ಡ ಫಲ : ನೀವು ಸತತ ಪ್ರಯತ್ನದ  ನಂತರವೂ ವಿಫಲರಾದರೆ ಚಿಂತಿಸುವ ಅಗತ್ಯವಿಲ್ಲ. ಈ ವಿಫಲತೆಯೇ ನಿಮ್ಮ ಗೆಲುವು. ಯಾಕೆಂದ್ರೆ ಸ್ವಲ್ಪವೂ ಪರಿಶ್ರಮವಿಲ್ಲದೆ ಯಶಸ್ಸು ಪಡೆಯುವ ವ್ಯಕ್ತಿಗಿಂತ ಸಾಕಷ್ಟು ಬಾರಿ ಪ್ರಯತ್ನಿಸಿ ವಿಫಲತೆ ಕಂಡ ವ್ಯಕ್ತಿ ಅತ್ಯುತ್ತಮನಾಗಬಲ್ಲ ಎಂದು ಚಾಣಕ್ಯ (Chanakya) ನೀತಿಯಲ್ಲಿ ಹೇಳಲಾಗಿದೆ. 

ಛಲ ಬಿಡದ ವ್ಯಕ್ತಿಗೆ ಗೆಲುವು (Victory) ಖಚಿತ : ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿ, ತನ್ನ ಗುರಿ ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಸತತವಾಗಿ ಸೋಲು (defeat) ತ್ತಿದ್ದರೆ ಅಂತಹ ವ್ಯಕ್ತಿ ವಿಜೇತರಿಗಿಂತ ಉತ್ತಮವೆಂದು ಪರಿಗಣಿಸಬೇಕು. ತನ್ನ ಗುರಿಯನ್ನು ತಲುಪಲು ಕಷ್ಟಪಟ್ಟು ಕೊನೆಯವರೆಗೂ ಛಲ ಬಿಡದವನು,ಪ್ರಯತ್ನವಿಲ್ಲದೆ ಶಾರ್ಟ್‌ಕಟ್‌ನಲ್ಲಿ ಗೆಲುವು ಸಾಧಿಸಿದವನಿಗಿಂತ ಉತ್ತಮ. ಯಾಕೆಂದ್ರೆ ಅವನ ಬಳಿ ಹೆಚ್ಚಿನ ಅನುಭವವಿರುತ್ತದೆ. ಆತ ಎಂಥ ಕಷ್ಟವನ್ನಾದ್ರೂ ಎದುರಿಸುವ ಆತ್ಮಸ್ಥೈರ್ಯ ಹೊಂದಿರ್ತಾನೆ. 

ಮಹಿಳೆಯರು ಮೂಗುತಿಯನ್ನು ಎಡದಲ್ಲಿ ಧರಿಸಬೇಕೋ, ಬಲಮೂಗಿನಲ್ಲೋ?

ಪರಿಶ್ರಮ (Hard Work) ವ್ಯರ್ಥವಾಗುವುದಿಲ್ಲ : ಏನೂ ಮಾಡದೆ ಇರುವುದಕ್ಕಿಂತ ಏನಾದರೂ ಮಾಡುವುದು ಉತ್ತಮ ಎಂದು ಮಹಾತ್ಮಾ ಗಾಂಧಿ ಹೇಳಿದ್ದರು. ಯಶಸ್ಸಿನ ಹಿಂದೆ ಹೋರಾಟ ಅನಿವಾರ್ಯವಾಗುತ್ತದೆ. ಹೋರಾಟವಿಲ್ಲದೆ ಯಶಸ್ಸು ಸಿಗಲು ಸಾಧ್ಯವಿಲ್ಲ. ಗಮ್ಯಸ್ಥಾನವನ್ನು ತಲುಪಲು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.  ಬಿದ್ದ ನಂತರವೂ ಛಲ ಬಿಡದೆ ಗುರಿ ಸಾಧಿಸಲು ಮನಃಪೂರ್ವಕವಾಗಿ ಪ್ರಯತ್ನಿಸುವವರು ಗೆಲ್ಲಲ್ಲು ವಿಫಲರಾದರೂ, ಸೋತು ಆಟವನ್ನು ಗೆದ್ದಿರುತ್ತಾರೆ.  ಏಕೆಂದರೆ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಚಾಣಕ್ಯ ಹೇಳುತ್ತಾರೆ. ಈ ಸಮಯದಲ್ಲಿ ಯಶಸ್ಸು ಸಿಗದೆ ಹೋದ್ರೂ ಭವಿಷ್ಯದಲ್ಲಿ ಅವನು ಖಂಡಿತವಾಗಿಯೂ ಶ್ರಮದ ಫಲ ಪಡೆಯುತ್ತಾನೆಂದು ಚಾಣಕ್ಯ ಹೇಳ್ತಾರೆ. 

ಶ್ರಮವಿಲ್ಲದ ಗೆಲುವು ಪೊಳ್ಳು : ಪರಿಶ್ರಮವಿಲ್ಲದೆ ಸಿಗುವ ಗೆಲುವು ಅತ್ಯಂತ ಸುಲಭ ನಿಜ. ಆದ್ರೆ ಪ್ರಯತ್ನಿಸದೆ ಯಶಸ್ಸು ಸಿಕ್ಕರೆ ಅದು ಆ ಕ್ಷಣಕ್ಕೆ ಮಾತ್ರ ಸತ್ಯ. ಮುಂದಿನ ದಿನಗಳಲ್ಲಿ ಆತ ತೊಂದರೆ ಅನುಭವಿಸಬೇಕಾಗುತ್ತದೆ. ಯಾಕೆಂದ್ರೆ ಆತನ ಗೆಲುವು ಪೊಳ್ಳಾಗಿರುತ್ತದೆ ಎನ್ನುತ್ತಾರೆ ಚಾಣಕ್ಯ.

Astrology Tips: ಹನುಮಂತನ ಪೂಜೆಯಲ್ಲಿ ಈ ತಪ್ಪು ಮಾಡಿದ್ರೆ ಕಷ್ಟ ಫೇಸ್ ಮಾಡಬೇಕಾಗುತ್ತೆ!

ಪ್ರಾಮಾಣಿಕ (Honest) ಪರಿಶ್ರಮ : ಒಂದೇ ಬಾರಿ ಕೊನೆ ಮೆಟ್ಟಿಲು ತಲುಪಿದ್ರೆ ಹಿಂದಿನ ಮೆಟ್ಟಿಲಿನ ಬಗ್ಗೆ ಯಾವುದೇ ಜ್ಞಾನ (Knowlede) ಇರುವುದಿಲ್ಲ. ಹಾಗಾಗಿ ಆತನಿಗೆ ಭವಿಷ್ಯದಲ್ಲಿ ಸಮಸ್ಯೆ ಎದುರಾಗುತ್ತದೆ. ಅದೇ ಪ್ರತಿಯೊಂದು ಮೆಟ್ಟಿಲನ್ನು ಸೂಕ್ಷ್ಮವಾಗಿ ಗಮನಿಸಿ ಹೆಜ್ಜೆ ಇಟ್ಟಿರುವ ವ್ಯಕ್ತಿ ಅನುಭವಗಳ ಬಂಡಾರವಾಗಿರ್ತಾನೆ. ಯಾವ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂಬುದು ಆತನಿಗೆ ತಿಳಿದಿರುತ್ತದೆ. ಪ್ರಾಮಾಣಿಕತೆಯಿಂದ ಮಾಡಿದ ಅವನ ಶ್ರಮವು ತುಂಬಾ ಪ್ರಯೋಜನಕ್ಕೆ ಬರುತ್ತದೆ. 

Follow Us:
Download App:
  • android
  • ios