Asianet Suvarna News Asianet Suvarna News

ಶ್ರೀರಾಮನು ಆರಂಭಿಸಿದ ಶರನ್ನವರಾತ್ರಿ ದಿನಾಂಕ, ಪೂಜಾವಿಧಿ, ಮಂತ್ರ ವಿವರಗಳಿಲ್ಲಿವೆ..

ಶರನ್ನವರಾತ್ರಿಗೆ ದಿನಗಣನೆ ಆರಂಭವಾಗಿದೆ. ಎಲ್ಲೆಡೆ ಸಂಭ್ರಮದ ದಿನಗಳಿಗಾಗಿ ಎದುರು ನೋಡಲಾಗುತ್ತಿದೆ. ಈ ನವರಾತ್ರಿ ಆರಂಭ ಯಾವಾಗ? ಪೂಜಾ ವಿಧಿಯೇನು?

Navratri 2022 date time Puja vidhi mythological story and mantra skr
Author
First Published Sep 18, 2022, 12:40 PM IST

ಹಿಂದೂ ಧರ್ಮದಲ್ಲಿ ದೇವಿ ಅಂದರೆ ತಾಯಿ. ಆಕೆ ಮಹಾ ಶಕ್ತಿ. ಆಕೆಯನ್ನು ವಿಜೃಂಭಿಸುವ ಹಬ್ಬ ನವರಾತ್ರಿ. ಇದರಲ್ಲಿ ಮಾತೃದೇವತೆಯ ಒಂಬತ್ತು ರೂಪಗಳನ್ನು 9 ದಿನಗಳವರೆಗೆ ಪೂಜಿಸಲಾಗುತ್ತದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಮೊದಲ ದಿನ ಕಲಶವನ್ನು ಸ್ಥಾಪಿಸಿ ತಾಯಿಯನ್ನು ಮನೆಯ ಪೂಜಾ ಕೋಣೆಯಲ್ಲಿ ಕೂರಿಸಲಾಗುತ್ತದೆ. ಅದರ ನಂತರ ಒಂಬತ್ತು ದಿನಗಳ ಕಾಲ ಮಾತೆಯು ಭಕ್ತರ ಮನೆಯಲ್ಲಿ ನೆಲೆಸುತ್ತಾಳೆ. ಈ ಸಮಯದಲ್ಲಿ ಜನರು ಉಪವಾಸ ಮಾಡುತ್ತಾರೆ. ತಾಯಿಗೆ ಪೂಜೆ, ಅರ್ಚನ, ಆರತಿ ಮಾಡಲಾಗುತ್ತದೆ. ಒಂದು ವರ್ಷದಲ್ಲಿ ನಾಲ್ಕು ನವರಾತ್ರಿಗಳಿದ್ದು, ಅದರಲ್ಲಿ ಚೈತ್ರ ಮತ್ತು ಶಾರದೀಯ ನವರಾತ್ರಿಗೆ ವಿಶೇಷ ಮಹತ್ವವಿದೆ. ಶಾರದೀಯ ನವರಾತ್ರಿಯ ನಂತರ, ಉತ್ಸವಗಳ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಈ ವರ್ಷ ಶಾರದೀಯ ನವರಾತ್ರಿ ಯಾವಾಗ ಆರಂಭವಾಗುತ್ತದೆ ಎಂದು ತಿಳಿಯೋಣ. ನವರಾತ್ರಿಯ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ ಮತ್ತು 9 ದಿನಗಳವರೆಗೆ ಯಾವ ಒಂಬತ್ತು ದೇವತೆಗಳನ್ನು ಪೂಜಿಸಲಾಗುತ್ತದೆ ಎಂದು ಅರಿಯೋಣ..

ಹಿಂದೂ ನಂಬಿಕೆಯ ಪ್ರಕಾರ, ಶಾರದೀಯ ನವರಾತ್ರಿಯ ಹಬ್ಬವನ್ನು ಅಶ್ವಿನ್ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಿಂದ ನವಮಿ ತಿಥಿಯವರೆಗೆ ಆಚರಿಸಲಾಗುತ್ತದೆ. ಈ ವರ್ಷ ಶಾರದೀಯ ನವರಾತ್ರಿ ಸೆಪ್ಟೆಂಬರ್ 26 ಸೋಮವಾರದಿಂದ ಆರಂಭವಾಗಲಿದೆ. ಒಂಬತ್ತು(Sharad Navratri 2022) ದಿನಗಳ ಈ ಹಬ್ಬವನ್ನು ಅಕ್ಟೋಬರ್ 4, ಮಂಗಳವಾರದವರೆಗೆ ಆಚರಿಸಲಾಗುತ್ತದೆ. ಶಾರದೀಯ ನವರಾತ್ರಿಯು ನವಮಿ ತಿಥಿಯಂದು ಕೊನೆಗೊಳ್ಳುತ್ತದೆ, ಅದರ ನಂತರ ದಸರಾ ಹಬ್ಬವನ್ನು ಮರುದಿನ ಅಂದರೆ ದಶಮಿ ತಿಥಿಯಂದು ಆಚರಿಸಲಾಗುತ್ತದೆ. ಈ ಬಾರಿಯ ದಸರಾ ಅಕ್ಟೋಬರ್ 5ರಂದು. 

ಭಾನುವಾರದ ದಿನ ಈ ಸೂರ್ಯ ಮಂತ್ರಗಳನ್ನು ಪಠಿಸಿ, ಬಯಸಿದ್ದು ಗಳಿಸಿ

ರಾಮ ಆರಂಭಿಸಿದ ನವರಾತ್ರಿ
ಭಗವಾನ್ ವಿಷ್ಣುವಿನ ಅವತಾರವಾದ ಶ್ರೀರಾಮ(Lord Rama)ನು ಶಾರದೀಯ ನವರಾತ್ರಿಯನ್ನು ಪ್ರಾರಂಭಿಸಿದನು ಎಂದು ನಂಬಲಾಗಿದೆ. ಶ್ರೀರಾಮನು ರಾವಣನಿಂದ ತಾಯಿ ಸೀತೆಯನ್ನು ಬಿಡಿಸಲು ಹೋರಾಡಲು ಹೊರಟಿದ್ದಾಗ, ರಾಮೇಶ್ವರಂನಲ್ಲಿ ಸಮುದ್ರದ ದಡದಲ್ಲಿ 9 ದಿನಗಳ ಕಾಲ ತಾಯಿ ಶಕ್ತಿಯನ್ನು ಪೂಜಿಸಿ ಶಾರದೀಯ ನವರಾತ್ರಿಯನ್ನು ಪೂಜಿಸಿದನು. ಹತ್ತನೇ ದಿನ, ಶ್ರೀರಾಮನು ರಾವಣನನ್ನು ಸೋಲಿಸಿ ಲಂಕೆಯನ್ನು ಗೆದ್ದನು. ಈ ಕಾರಣಕ್ಕಾಗಿ, ನವರಾತ್ರಿ ಪೂಜೆಯ ಒಂಬತ್ತು ದಿನಗಳ ನಂತರ, ಹತ್ತನೇ ದಿನದಂದು ದಸರಾವನ್ನು ಆಚರಿಸಲಾಗುತ್ತದೆ.

ಮತ್ತೊಂದು ದಂತಕಥೆಯ ಪ್ರಕಾರ, ಮಹಿಷಾಸುರ(Mahishasura) ಎಂಬ ರಾಕ್ಷಸನಿಗೆ ಬ್ರಹ್ಮ ವರ ನೀಡಿದನು- ಅದರಂತೆ ಭೂಮಿಯ ಮೇಲೆ ವಾಸಿಸುವ ಯಾವುದೇ ದೇವರು, ರಾಕ್ಷಸ, ವ್ಯಕ್ತಿ ಅವನನ್ನು ಕೊಲ್ಲಲು ಸಾಧ್ಯವಿರಲಿಲ್ಲ. ವರವನ್ನು ಸ್ವೀಕರಿಸಿದ ನಂತರ, ಮಹಿಷಾಸುರನು ಭೂಮಿಯ ಮೇಲೆ ಭಯವನ್ನು ಸೃಷ್ಟಿಸಿದನು. ಆಗ ಮಾತೆ ದುರ್ಗೆಯು ಮಹಿಷಾಸುರನನ್ನು ಕೊಲ್ಲಲು ಅವತಾರವೆತ್ತಿದಳು. ಮಾತೆ ದುರ್ಗಾ ಮತ್ತು ಮಹಿಷಾಸುರ ನಡುವೆ ಒಂಬತ್ತು ದಿನಗಳ ಕಾಲ ಯುದ್ಧ ನಡೆಯಿತು ಮತ್ತು ಕೊನೆಯಲ್ಲಿ ಮಾತೆ ದುರ್ಗೆ ಮಹಿಷಾಸುರನನ್ನು ಕೊಂದಳು. ದುರ್ಗಾ ದೇವಿಯು ಕಾಳಿ ದೇವತೆ ಮತ್ತು ಶಕ್ತಿ ದೇವತೆ ಸ್ತ್ರೀ ಶಕ್ತಿ ಮತ್ತು ವಿಮೋಚನೆಯನ್ನು ಪ್ರತಿನಿಧಿಸುತ್ತಾಳೆ.

ನವರಾತ್ರಿಯ ಸಮಯದಲ್ಲಿ ದೇವಿಯ ಈ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ..

Bhavana Nagaiah ಅಪ್ಪನ ಜೊತೆ ಹೀಗೋಂದು ಕಾಶೀಯಾತ್ರೆ
 
ಮೊದಲ ರೂಪ- ತಾಯಿ ಶೈಲಪುತ್ರಿ
ಎರಡನೆಯ ರೂಪ- ತಾಯಿ ಬ್ರಹ್ಮಚಾರಿಣಿ
ಮೂರನೆಯ ರೂಪ- ಮಾ ಚಂದ್ರಘಂಟಾ
ನಾಲ್ಕನೆಯ ರೂಪ- ಮಾ ಕೂಷ್ಮಾಂಡ
ಐದನೆಯ ರೂಪ- ಮಾ ಸ್ಕಂದಮಾತಾ
ಆರನೆಯ ರೂಪ- ಮಾ ಕಾತ್ಯಾಯನಿ
ಏಳನೆಯ ರೂಪ- ತಾಯಿ ಕಾಳರಾತ್ರಿ
ಎಂಟನೆಯ ರೂಪ- ಮಾ ಮಹಾಗೌರಿ
ಒಂಬತ್ತನೆಯ ರೂಪ- ತಾಯಿ ಸಿದ್ಧಿದಾತ್ರಿ

ಪೂಜಾ ವಿಧಿ(Puja Vidhi)
ನವರಾತ್ರಿಯ ಅಷ್ಟೂ ದಿನಗಳು ಭಕ್ತರು ಬೇಗ ಎದ್ದು ಸ್ನಾನ ಮಾಡಬೇಕು. ಅವರು ಹೂವು, ರೋಲಿ, ಚಂದನ ಮುಂತಾದ ಎಲ್ಲಾ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ತಾಯಿ ದುರ್ಗೆಗೆ ಅರ್ಪಿಸಬೇಕು. ನಂತರ ಮಂತ್ರಗಳನ್ನು ಪಠಿಸಬೇಕು ಮತ್ತು ಮಾತೆಯ ದುರ್ಗಾ ಆರತಿಯನ್ನು ಮಾಡುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಬೇಕು.

ತಾಯಿಯ ಮಂತ್ರಗಳು:
ಯಾ ದೇವಿ ಸರ್ವಭೂತೇಷು ಮಾ ಬ್ರಹ್ಮಚಾರಿಣೀ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ದಧಾನ ಕರ ಪದ್ಮಾಭ್ಯಾಮ ಅಕ್ಷಮಲಾ ಕಾಮಂಡಳು |ದೇವಿ ||ಪ್ರಸೀದಾತುಮಾ||
ಓಂ ದೇವಿ ಶೈಲಪುತ್ರ್ಯೈ ನಮಃ॥
ಯಾ ದೇವಿ ಸರ್ವ ಭೂತೇಷು ಶಕ್ತಿ ರೂಪೇಣ ಸಂಸ್ಥಿತಃ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

Follow Us:
Download App:
  • android
  • ios