ಅವಿವಾಹಿತರಿಗೆ ಕಂಕಣ ಭಾಗ್ಯ ಕರುಣಿಸುವ ಚಾಮರಾಜೇಶ್ವರ ಜಾತ್ರೆ

ಆಷಾಢ ಮಾಸದಲ್ಲೂ ನವದಂಪತಿಗಳನ್ನು ಒಂದುಗೂಡಿಸುವ ಹಾಗೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕರುಣಿಸುವ ಚಾಮರಾಜೇಶ್ವರ ಜಾತ್ರೆ ಸೋಮವಾರ ನಡೆಯಿತು. 

Chamarajeshwara fair which grants bracelets to the unmarried sat

ವರದಿ - ಪುಟ್ಟರಾಜು. ಆರ್. ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್

ಚಾಮರಾಜನಗರ (ಜು.03): ಆಷಾಢ  ಮಾಸದಲ್ಲಿ ನವದಂಪತಿಗಳು  ಒಂದು  ತಿಂಗಳು ದೂರ ಇರುವುದು ಸಂಪ್ರದಾಯ. ಆದ್ರೆ  ಗಡಿಜಿಲ್ಲೆಯಲ್ಲಿ  ನಡೆಯುವ ರಥೋತ್ಸವ ದೂರವಾಗಿರುವ ದಂಪತಿಗಳನ್ನು ಜೊತೆ ಮಾಡುತ್ತದೆ. ಈ ಜಾತ್ರೆ ನವ ದಂಪತಿಗಳ ಜಾತ್ರೆ ಎಂದೇ ಫೇಮಸ್ ಆಗಿದೆ. ಅದ್ಯಾಕೆ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ..

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶ್ರೀ ಚಾಮರಾಜೇಶ್ವರ ರಥೋತ್ಸವ ನಡೆಯಿತು. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಅಷ್ಟೇ ವೈಭವದಿಂದ ರಥೋತ್ಸವ ಜರುಗಿದೆ. ಆಷಾಢ ಮಾಸದ ಪೂರ್ಣಿಮೆಯ ದಿನವಾದ ಇಂದು  ಪೂರ್ವಾಷಾಡ ನಕ್ಷತ್ರದಲ್ಲಿ ಮಧ್ಯಾಹ್ನ 12  ರಿಂದ 1 ರವರೆಗೂ ಶುಭ ಕನ್ಯಾ ಲಗ್ನದಲ್ಲಿ ಚಾಮರಾಜೇಶ್ವರ ರಥೋತ್ಸವಕ್ಕೆ ಚಾಲನೆ ದೊರೆಯಿತು. ಚಾಮರಾಜೇಶ್ವರನ ರಥಕ್ಕೂ ಮೊದಲು ಗಣಪತಿ, ಸುಬ್ರಹ್ಮಣ್ಯ ರಥಗಳು ಹಾಗು  ಮೈಸೂರು ಮಹಾರಾಜರಾಗಿದ್ದ ಖಾಸಾ ಚಾಮರಾಜ ಒಡೆಯರ್ ಅವರ ಉತ್ಸವ ಮೂರ್ತಿ ಮುಂದೆ  ಚಲಿಸಿದವು. ಬಳಿಕ ಚಾಮರಾಜೇಶ್ವರ ದೊಡ್ಡ ರಥ ಅದರ ನಂತರ ಕೆಂಪನಂಜಾಂಬ ರಥಗಳು ರಥದ ಬೀದಿಯಲ್ಲಿ  ಸುಮಾರು ಮೂರು ಗಂಟೆಗಳ ಕಾಲ ಸಾಗಿ ಸ್ವಸ್ಥಾನ ಸೇರಿದವು. 

ಜುಲೈ 18ರಿಂದ ಸಿಇಟಿ ದಾಖಲಾತಿ ಪರಿಶೀಲನೆ: ಈ ದಾಖಲೆ ತರುವುದು ಕಡ್ಡಾಯ

ಆಷಾಢ ಮಾಸದಲ್ಲೂ ನವದಂಪತಿ ಒಟ್ಟಾಗಿ ಪೂಜೆ:  ರಥೋತ್ಸವಕ್ಕೆ ಚಾಲನೆ ನೀಡುವ ಮೊದಲು ಚಾಮರಾಜೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇನ್ನೂ ಎಲ್ಲಾ ಕಡೆಯೂ ಕೂಡ ನವ ದಂಪತಿಗಳ ಕಲರವ ಜೋರಾಗಿತ್ತು. ಇನ್ನು ಚಾಮರಾಜೇಶ್ವರ ರಥೋತ್ಸವ ನವದಂಪತಿಗಳ ಜಾತ್ರೆ ಎಂದೇ ಪ್ರಸಿದ್ದಿ ಪಡೆದಿದೆ.ಆಷಾಢ ಮಾಸದಲ್ಲಿ ನಡೆಯುವ ಈ ರಥೋತ್ಸವ ವಿಶೇಷತೆಯಿಂದ ಕೂಡಿದೆ. ಆಷಾಡ ಮಾಸದ ನೆಪದಲ್ಲಿ ಒಂದು ತಿಂಗಳ ಕಾಲ ತಾತ್ಕಾಲಿಕವಾಗಿ ದೂರವಿರಬೇಕಾದ ನವವಿವಾಹಿತರು ರಥೋತ್ಸವದ ದಿನ ಒಂದಡೆ ಸೇರಿ ಚಾಮರಾಜೇಶ್ವರನಿಗೆ ಬಾಳೆ ಹಣ್ಣು, ಧವನ ಎಸೆದು ದೇವರ ಆಶಿರ್ವಾದ ಪಡೆಯುತ್ತಾರೆ. 

ಅವಿವಾಹಿತರಿಗೆ ಕಂಕಣ ಭಾಗ್ಯ: ತಮ್ಮ ದಾಂಪತ್ಯ ಜೀವನ ಸುಖವಾಗಿರಲೆಂದು ಪ್ರಾರ್ಥಿಸುತ್ತಾರೆ. ಆಷಾಡ ಮಾಸದಲ್ಲಿ ನವದಂಪತಿಗಳು ಒಟ್ಟಾಗಿ ಬೆರೆಯುವಂತಿಲ್ಲ. ಆದರೆ ಆಷಾಡ ಮಾಸದಲ್ಲು ನವಜೋಡಿಗಳು ಒಂದಡೆ ಸೇರಲು ಚಾಮರಾಜೇಶ್ವರ ರಥೋತ್ಸವ ಅವಕಾಶ ಕಲ್ಪಿಸುತ್ತದೆ. ಚಾಮರಾಜೇಶ್ವರ ರಥೋತ್ಸವದಲ್ಲಿ  ಭಾಗವಹಿಸಿ ದೇವರ ದರ್ಶನ ಪಡೆದು  ತೇರಿಗೆ ಹಣ್ಣು, ಧವನ ಎಸೆದು ಹರಕೆ ಹೊತ್ತರೆ ನವದಂಪತಿಗಳಿಗೆ  ಸಂತಾನ ಭಾಗ್ಯ, ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಗಂಡ-ಹೆಂಡ್ತಿ ಇಬ್ರೂ ಪೊಲೀಸ್‌: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾದ ಪತಿ

ಒಟ್ಟಾರೆ ನವದಂಪತಿಗಳ ಜಾತ್ರೆ ಎಂದೆ ಖ್ಯಾತಿಯಾಗಿರುವ ಚಾಮರಾಜೇಶ್ವರ ರಥೋತ್ಸವದಲ್ಲಿ ಎಲ್ಲಿ ನೋಡಿದರು ನವದಂಪತಿಗಳದ್ದೇ ಕಲರವ ಕಂಡುಬಂತು. ದೇವರಿಗೆ ಒಟ್ಟಾಗಿ ಸೇರಿ ಹಣ್ಣು, ಧವನ ಎಸೆದು ನಮಿಸುವುದು. ಕೈ, ಕೈ ಹಿಡಿದು ಸುತ್ತಾಡುವ ದೃಶ್ಯ ಸಾಮಾನ್ಯವಾಗಿತ್ತು.  ಒಟ್ಟಾರೆ ಚಾಮರಾಜೇಶ್ವರ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂಬುದೇ ಎಲ್ಲರ ಆಶಯ..

Latest Videos
Follow Us:
Download App:
  • android
  • ios