Bengaluru: ಇಸ್ಕಾನ್‌ನಲ್ಲಿ ಸಡಗರ ಸಂಭ್ರಮದ ಶ್ರೀ ಬಲರಾಮ ಜಯಂತಿ ಆಚರಣೆ
ಶ್ರಾವಣ ಮಾಸದ ಪೂರ್ಣಿಮೆಯಂದು ಶ್ರೀ ಕೃಷ್ಣನ ಅಣ್ಣ ಬಲರಾಮನ ಅವತಾರವಾದ ದಿವಸ. ಶ್ರೀ ಬಲರಾಮನು ರೋಹಿಣಿ ಮತ್ತು ವಸುದೇವರ ಏಳನೇ ಪುತ್ರನಾಗಿ ಅವತರಿಸಿದ. ಅವನನ್ನು ಬಲದೇವ, ಸಂಕರ್ಷಣ ಎಂದೂ ಕರೆಯುತ್ತಾರೆ.
ಬೆಂಗಳೂರು (ಆ.12): ಶ್ರಾವಣ ಮಾಸದ ಪೂರ್ಣಿಮೆಯಂದು ಶ್ರೀ ಕೃಷ್ಣನ ಅಣ್ಣ ಬಲರಾಮನ ಅವತಾರವಾದ ದಿವಸ. ಶ್ರೀ ಬಲರಾಮನು ರೋಹಿಣಿ ಮತ್ತು ವಸುದೇವರ ಏಳನೇ ಪುತ್ರನಾಗಿ ಅವತರಿಸಿದ. ಅವನನ್ನು ಬಲದೇವ, ಸಂಕರ್ಷಣ ಎಂದೂ ಕರೆಯುತ್ತಾರೆ.
ಇಸ್ಕಾನ್ ಬೆಂಗಳೂರು ದೇವಾಲಯದಲ್ಲಿ ಶ್ರೀ ಬಲರಾಮ ಜಯಂತಿ ಉತ್ಸವವು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು. ದೇವಾಲಯವನ್ನು ಕಂಗೊಳಿಸುವ ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿತ್ತು. ಮೂಲ ಅರ್ಚಾ ವಿಗ್ರಹಗಳಿಗೆ ಹೊಸ ಉಡುಗೆ ಮತ್ತು ಆಭರಣಗಳಿಂದ ಅಲಂಕರಿಸಲಾಗಿತ್ತು. ಭಜನೆ, ಹೋಮ ಹಾಗೂ ಸಂಗೀತೋತ್ಸವ ಗಳಿಂದ ಉತ್ಸವ ಆಚರಿಸಲಾಯಿತು.
ಸಂಜೆ 6 ಗಂಟೆಗೆ ಶ್ರೀ ಕೃಷ್ಣ ಮತ್ತು ಬಲರಾಮರ ಉತ್ಸವ ವಿಗ್ರಹಗಳಿಗೆ ಭವ್ಯವಾದ ಅಭಿಷೇಕವನ್ನು ಸಮರ್ಪಿಸಲಾಯಿತು. ಪಂಚಾಮೃತ, ಪಂಚಗವ್ಯ, ವಿವಿಧ ಹಣ್ಣುಗಳ ರಸ, ಗಿಡ ಮೂಲಿಕೆಗಳ ಮಿಶ್ರಿತ ಜಲ ಮತ್ತು ಎಳನೀರುಗಳಿಂದ ಅಭಿಷೇಕ, 108 ಕಳಶಗಳ ಪವಿತ್ರ ಜಲದಿಂದ ಅಭಿಷೇಕ, ವಿಧವಿಧವಾದ ಪುಷ್ಪಗಳ ವೃಷ್ಟಿ ಮತ್ತು ವಿಧವಿಧವಾದ ಆರತಿಗಳಿಂದ ಆಚರಿಸಲಾಯಿತು.
ಕೃಷ್ಣ ಜನ್ಮಾಷ್ಟಮಿ 2022: ರಾಶಿ ಪ್ರಕಾರ ಕೃಷ್ಣನಿಗೆ ಮಾಡಿ ನೈವೇದ್ಯ, ಬಯಸಿದ್ದು ಪಡೆಯಿರಿ..
ಶ್ರೀ ಕೃಷ್ಣ ಬಲರಾಮರಿಗೆ ಛಪ್ಪನ್ ಭೋಗ್ ಅನ್ನು (56 ಬಗೆಯ ಖಾದ್ಯಗಳು) ಸಮರ್ಪಿಸಲಾಯಿತು. ಉಯ್ಯಾಲೆ ಸೇವೆ, ಪುಷ್ಪ ಪಲ್ಲಕ್ಕಿ ಮತ್ತು ಶಯನ ಆರತಿದೊಂದಿಗೆ ಬಲರಾಮ ಪೂರ್ಣಿಮೆಯ ಉತ್ಸವ ವಿಜೃಂಭಣೆಯಿಂದ ಮುಕ್ತಾಯಗೊಂಡಿತು.
ಹೆಚ್ಚಿನ ಮಾಹಿತಿಗಾಗಿ: ವಿಮಲಾ ಕೃಷ್ಣದಾಸ 9902971439