Asianet Suvarna News Asianet Suvarna News

New Year 2023 : ಈ ರಾಶಿಯವರಿಗೆ ಸಿಗಲಿದೆ ಹೊಸ ಉದ್ಯೋಗ

ಹೊಸ ವರ್ಷ ಬರ್ತಿದೆ. ಹೊಸ ಆಸೆಗಳು ಚಿಗುರುತ್ತಿವೆ. ಹೊಸ ವೃತ್ತಿ, ಉದ್ಯೋಗ ಹುಡುಕುತ್ತಿರುವವರು ಮುಂದಿನ ವರ್ಷ ಹೇಗಿರಲಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ. ವ್ಯಾಪಾರದಲ್ಲಿ ಲಾಭವಾಗಲಿದೆಯಾ ಎಂಬ ಪ್ರಶ್ನೆ ಕೆಲವರ ಮನದಲ್ಲಿ ಮೂಡಿದೆ. ಅದೆಲ್ಲದಕ್ಕೂ ಉತ್ತರ ಇಲ್ಲಿದೆ. 
 

Career Horoscope 2023 which zodiac will get lucky in new year
Author
First Published Dec 8, 2022, 3:36 PM IST

ಹೊಸ ವರ್ಷ 2023ಕ್ಕೆ ದಿನಗಣನೆ ಶುರುವಾಗಿದೆ. ಜನರು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಮುಂದಾಗ್ತಿದ್ದಾರೆ. ಕೆಲವರು, ಹೊಸ ವರ್ಷದ ಮೊದಲ ದಿನದಿಂದ ಕೆಲ ಶುರು ಮಾಡೋಣ ಅಂತ ಕೆಲ ಪ್ಲಾನ್ ಪೋಸ್ಟ್ ಪೋನ್ ಮಾಡಿದ್ದೂ ಇದೆ. ಹೊಸ ವರ್ಷ ಹೇಗಿರುತ್ತೆ ಎನ್ನುವ ಕುತೂಹಲ ನಮಗೆ ನಿಮಗೆಲ್ಲ ಇದೆ. ಆರೋಗ್ಯ, ಪ್ರೀತಿ, ಉದ್ಯೋಗ, ವೃತ್ತಿ ಎಲ್ಲದರಲ್ಲೂ ಯಶಸ್ಸು ಸಿಗಲಿ ಎಂದು ಜನರು ಬಯಸ್ತಿದ್ದಾರೆ. ಜ್ಯೋತಿಷ್ಯ ಶಾಸ್ತ್ರಜ್ಞರು ಕೂಡ ನವ ವರ್ಷದಲ್ಲಿ ಯಾವ ರಾಶಿಯವರ ಭವಿಷ್ಯ ಹೇಗಿರಲಿದೆ ಎಂಬುದನ್ನು ಹೇಳ್ತಿದ್ದಾರೆ. ಬರುವ ವರ್ಷ ಎಲ್ಲ ರಾಶಿಯವರ ವೃತ್ತಿ ಜೀವನ ಹೇಗಿರಲಿದೆ ಎಂಬುದನ್ನು ನಾವಿಂದು ಹೇಳ್ತೆವೆ.

ಹೊಸ ವರ್ಷ (New Year) ಹೀಗಿರಲಿದೆ ನಿಮ್ಮ ವೃತ್ತಿ (Career) ಜೀವನ : 

ಮೇಷ ರಾಶಿ : ಈ ವರ್ಷ ಮೇಷ ರಾಶಿಯವರ ವೃತ್ತಿ ಜೀವನ ಉತ್ತಮವಾಗಿರಲಿದೆ. ವರ್ಷದ ಆರಂಭದಿಂದಲೇ ಯಶಸ್ಸು (Success) ನಿಮ್ಮದಾಗಲಿದೆ. 2022ರಲ್ಲಿ ಪೂರ್ಣಗೊಳ್ಳದ ಕಾಮಗಾರಿಗಳು ಈ ವರ್ಷ ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿದ್ದ ಎಲ್ಲಾ ಸಮಸ್ಯೆಗಳು ದೂರವಾಗಲಿವೆ. ಉದ್ಯೋಗದಲ್ಲಿ ಹಿರಿಯರ ಬೆಂಬಲ ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಪ್ರಗತಿ ಸಿಗಲಿದೆ. ಆಗಸ್ಟ್ ನಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಉದ್ಯಮಿಗಳಿಗೆ ಈ ವರ್ಷ ಏರಿಳಿತಗಳಿರುವ ಸಾಧ್ಯತೆಯಿದೆ. ವರ್ಷದ ಕೊನೆಯ ತ್ರೈಮಾಸಿಕದಲ್ಲಿ ವ್ಯಾಪಾರದಲ್ಲಿ ಸಾಕಷ್ಟು ಪ್ರಗತಿ ಕಾಣುವ ಸಾಧ್ಯತೆಯಿದೆ.

ವೃಷಭ ರಾಶಿ : ನಿಮ್ಮ ಸಾಮರ್ಥ್ಯ ಸಾಬೀತುಪಡಿಸಲು ಇಲ್ಲಿ ಒಳ್ಳೆ ಅವಕಾಶವಿದೆ. ಆರಂಭದಲ್ಲಿಯೇ ಉದ್ಯೋಗದಲ್ಲಿ ವರ್ಗಾವಣೆ ಸಿಗುವ ಸಾಧ್ಯತೆಯಿದೆ.  ಹೊಸ ಉದ್ಯೋಗ ನಿಮಗೆ ಸಿಗುವ ಸಂಭವವಿದೆ. ಆದ್ರೆ ವರ್ಷವಿಡಿ ಕಷ್ಟಪಟ್ಟು ಕೆಲಸ ಮಾಡುವುದು ಅನಿವಾರ್ಯವಾಗಲಿದೆ. ಉದ್ಯೋಗದಲ್ಲಿ ಏರಿಳಿತ ಕೂಡ ಕಾಣಲಿದೆ.  

ಮಿಥುನ ರಾಶಿ : ಹೊಸ ವರ್ಷ ವೃತ್ತಿ ಜೀವನ ಅಂದುಕೊಂಡಷ್ಟು ಯಶಸ್ವಿಯಾಗುವುದಿಲ್ಲ. ವರ್ಷದ ಆರಂಭದಲ್ಲಿ ವೃತ್ತಿಜೀವನ ಉತ್ತಮವಾಗಿರಲಿದೆ. ಶನಿ ಎಂಟನೇ ಮನೆಯಲ್ಲಿ ಇರುವ ಕಾರಣ ವೃತ್ತಿ ಜೀವನದಲ್ಲಿ ಏರಿಳಿತ ಕಾಣಲಿದೆ. ಉದ್ಯೋಗದಲ್ಲಿ ಗೊಂದಲ ಸೃಷ್ಟಿಯಾಗಲಿದೆ. ಆದ್ರೆ ಹೊಸ ಅವಕಾಶಗಳು ಬಂದಾಗ ಅದನ್ನು ಬಿಡಬೇಡಿ. ಮೇಲಾಧಿಕಾರಿಗಳ ಜೊತೆ ನಿಮ್ಮ ಸಂಬಂಧ ಹದಗೆಡುವ ಸಾಧ್ಯತೆಯಿದೆ. ಹಾಗಾಗಿ ಎಚ್ಚರಿಕೆ ಹೆಜ್ಜೆ ಇಡಬೇಕು.  

ಕರ್ಕ ರಾಶಿ : ಈ ವರ್ಷ ವೃತ್ತಿ ಜೀವನದಲ್ಲಿ ಕೆಲ ಬದಲಾವಣೆಯಾಗಲಿದೆ.  ಕೆಲಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಅದೃಷ್ಟ ಬದಲಾಗಲಿದೆ. ಏಪ್ರಿಲ್ ತಿಂಗಳಲ್ಲಿ ಉದ್ಯೋಗ ಬದಲಾವಣೆ ಅವಕಾಶವಿದ್ದು, ಸಂಬಳ ಹೆಚ್ಚಾಗಲಿದೆ. ಮೇ ತಿಂಗಳಿನಲ್ಲಿ ರಾಹುವಿನ ಕಾರಣ ಸಮಸ್ಯೆಯಾಗಲಿದೆ.  

Yearly Horoscope 2023: ಕನ್ಯಾ ರಾಶಿಗೆ ಖರ್ಚೂ ಹೆಚ್ಚು, ಸಂಬಂಧಕ್ಕೂ ಬೇಕು ಹೆಚ್ಚಿನ ಕಾಳಜಿ

ಸಿಂಹ ರಾಶಿ : ವೃತ್ತಿ ಜೀವನದ ದೃಷ್ಟಿಯಿಂದ ಈ ವರ್ಷ ಬಹಳ ಮುಖ್ಯ. ಜನವರಿಯಲ್ಲಿ ಏಳನೇ ಮನೆಗೆ ಶನಿ ಬರಲಿದ್ದಾನೆ. ವ್ಯಾಪಾರದಲ್ಲಿ ಹೊಸ ಯೋಜನೆ ಫಲಿಸಲಿದೆ. ಏಪ್ರಿಲ್ ನಲ್ಲಿ ಗುರು ಬಲದ ಕಾರಣ ನಿಮಗೆ ಒಳ್ಳೆಯದಾಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕೆಲವು ಹೊಸ ಸಾಧನೆ ಮಾಡಲಿದ್ದೀರಿ.  

ಕನ್ಯಾ ರಾಶಿ : ಈ ವರ್ಷದ ಆರಂಭವು ಉತ್ತಮವಾಗಿರಲಿದೆ.  ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಗುರು, ಏಪ್ರಿಲ್ ವರೆಗೆ ನಿಮಗೆ ಸಹಾಯ ಮಾಡಲಿದ್ದಾನೆ. ಇದ್ರಿಂದ ಲಾಭವಾಗಲಿದೆ. ರಾಹು ಮತ್ತು ಕೇತು ಕೂಡ ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. 

New Year 2023 : ಹೊಸ ವರ್ಷದಲ್ಲಿ ಇವರನ್ನು ಸೋಮಾರಿ ಮಾಡ್ತಾನೆ ಕೇತು

ತುಲಾ ರಾಶಿ :  ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ. ಯಾವ ಕ್ಷೇತ್ರಗಳಲ್ಲಿ ದುರ್ಬಲರಾಗಿದ್ದೀರಿ ಎಂಬುದನ್ನು ಪತ್ತೆ ಮಾಡಿ, ಆ ಕ್ಷೇತ್ರಕ್ಕೆ ಹೆಚ್ಚು ಸಮಯ ನೀಡಿ. ಹೊಸ ಕೌಶಲ್ಯ ಕಲಿಯುವ ಅವಕಾಶವಿದೆ. ವರ್ಷದ ಆರಂಭದಲ್ಲಿಯೇ ವೃತ್ತಿ ಜೀವನದಲ್ಲಿ ಬದಲಾವಣೆ ಕಂಡು ಬರಬಹುದು. ಹೊಸ ಉದ್ಯೋಗ ಹುಡುಕುತ್ತಿದ್ದರೆ ಉದ್ಯೋಗ ಸಿಗಲಿದೆ. ಹಳೆ ಕೆಲಸ ಹೋದ್ರೂ ಉತ್ತಮ ಆಯ್ಕೆ ನಿಮಗೆ ಸಿಗಲಿದೆ.  

ವೃಶ್ಚಿಕ ರಾಶಿ : ಈ ವರ್ಷ ನಿಮ್ಮನ್ನು ನೀವು ಸಾಬೀತುಪಡಿಸಲು ಸಾಕಷ್ಟು ಪ್ರಯತ್ನ  ಮಾಡಬೇಕು. ಕಠಿಣ ಪರಿಶ್ರಮದಿಂದ ಶೀಘ್ರ ಫಲ ಸಿಗಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಜೂನ್ ತಿಂಗಳ ನಂತ್ರ  ವೃತ್ತಿಜೀವನದಲ್ಲಿ ಸಮಸ್ಯೆ ಆಗಬಹುದು. ಅಕ್ಟೋಬರ್ ನಲ್ಲಿ ವಿದೇಶಿ ಪ್ರವಾಸ ಸಾಧ್ಯತೆಯಿದೆ. 

ಧನು ರಾಶಿ : ವೃತ್ತಿ ಜೀವನದಲ್ಲಿ ಜಾಗರೂಕರಾಗಿರುವುದು ಒಳ್ಳೆಯದು. ವರ್ಷಾರಂಭ ಅನುಕೂಲಕರವಾಗಿರುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಉದ್ಯೋಗ ಬದಲಾವಣೆ ಯಶಸ್ಸು ತರುತ್ತದೆ. ಏಪ್ರಿಲ್ ನಿಂದ ಆಗಸ್ಟ್ ಅವಧಿಯಲ್ಲಿ ಕೆಲಸ ಬದಲಿಸಬೇಡಿ. 

ಮಕರ ರಾಶಿ : ಸಾಡೆ ಸಾತಿ ಶನಿ ಮುಗಿಯಲಿದೆ. ಇದ್ರಿಂದ ಉತ್ತಮ ಫಲಿತಾಂಶ ಸಿಗಲಿದೆ. ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ.  ವ್ಯಾಪಾರದಲ್ಲಿ ಪ್ರಗತಿಯಾಗಲಿದೆ. ಹೆಚ್ಚು ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗಲಿದೆ. ಏಪ್ರಿಲ್ ನಂತ್ರ ಸಕಾರಾತ್ಮಕ ಫಲಿತಾಂಶ ಸಿಗಲಿದೆ.

ಕುಂಭ ರಾಶಿ : ಈ ವರ್ಷ ಆದಾಯದಲ್ಲಿ ಹೆಚ್ಚಳ ಕಾಣಲಿದೆ. ಹೊಸ ವ್ಯಾಪಾರ ಒಪ್ಪಂದ ನಡೆಯಲಿದೆ. ಗುರು ಮತ್ತು ಶನಿಯಿಂದ ವ್ಯಾಪಾರ ಕ್ಷೇತ್ರದಲ್ಲಿ ಪ್ರಗತಿಯಾಗಲಿದೆ. ಆದ್ರೆ ಬಡ್ತಿ ಪಡೆಯಲು ಸ್ವಲ್ಪ ಸಮಸ್ಯೆಯಾಗಲಿದೆ.

ಮೀನ ರಾಶಿ : ವೃತ್ತಿ ಜೀವನ ಆಹ್ಲಾದಕರವಾಗಿರಲಿದೆ. ಗುರು ನಿಮ್ಮ ರಾಶಿಯಲ್ಲಿ ಸಾಗಲಿದ್ದಾನೆ. ಆದ್ರೆ ಜನವರಿ ಮಧ್ಯಭಾಗದಿಂದ ಸಾಡೇ ಸತಿ ಆರಂಭವಾಗಲಿದೆ. ಈ ವೇಳೆ ಎಚ್ಚರಿಕೆ ವಹಿಸುವುದು ಮುಖ್ಯ. ಏಪ್ರಿಲ್ ವರೆಗೆ ಗುರು ಸಹಾಯ ಮಾಡಲಿದ್ದಾನೆ. ನಂತರ ಕೆಲವು ವ್ಯವಹಾರ ಸಮಸ್ಯೆಗಳು ಉದ್ಭವಿಸಲಿವೆ. 
 

Follow Us:
Download App:
  • android
  • ios