Asianet Suvarna News Asianet Suvarna News

ಈ 4 ರಾಶಿ ಹುಡುಗಿಯರು ರಿಲೇಶನ್ ಶಿಪ್ ನಲ್ಲಿ ಬೆಸ್ಟ್!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ರಾಶಿಯವರ ಗುಣ – ಸ್ವಭಾವಗಳು ಭಿನ್ನವಾಗಿರುತ್ತದೆ. ಅದರಲ್ಲೂ ಹುಡುಗಿಯರ ಮನಸ್ಸನ್ನು ಅರಿತವರು ಯಾರು ಎಂಬ ಮಾತೇ ಇದೆ. ಆದರೆ, ಈ ನಾಲ್ಕು ರಾಶಿಯ ಹುಡುಗಿಯರ ವ್ಯಕ್ತಿತ್ವ, ಸ್ವಭಾವ ಹೇಗೆ ಎಂಬುದನ್ನು ಜ್ಯೋತಿಷ್ಯದ ಪ್ರಕಾರ ಅರಿಯಬಹುದು. ಹಾಗಾದರೆ ಅವರ ಬಗ್ಗೆ ತಿಳಿಯೋಣವೇ..?

Cancer Capricorn Aquarius Pisces girls best in relationship
Author
Bangalore, First Published Jan 7, 2022, 10:46 PM IST

ಮನುಷ್ಯ ಸಂಘ ಜೀವಿ. ಜೊತೆ ಜೊತೆಯಲ್ಲಿಯೇ ಬಾಳುವ, ಬಾಳುತ್ತಿರುವ ನಾವುಗಳು ಸಂಬಂಧಗಳಿಗೂ (Relation) ಅಷ್ಟೇ ಬೆಲೆ ಕೊಡುತ್ತೇವೆ. ಆದರೆ, ಕೆಲವೊಂದು ಸಂದರ್ಭದಲ್ಲಿ ಸ್ವಾರ್ಥಕ್ಕೆ (Selfish) ಗಂಟುಬಿದ್ದು, ಸಂಬಂಧಗಳನ್ನು ಹಲವರು ಮರೆತುಬಿಡುತ್ತಾರೆ. ತಾವಾಯ್ತು, ತಮ್ಮ ಪಾಡಾಯ್ತು ಅಂತ ಇದ್ದುಬಿಡುತ್ತಾರೆ. ಆದರೆ ಮತ್ತೆ ಕೆಲವರು ಹಾಗಲ್ಲ. ಅವರು ಸಂಬಂಧಗಳಿಗೆ ತುಂಬವೇ ಬೆಲೆ ಕೊಡುತ್ತಾರೆ. ಪ್ರಾಮುಖ್ಯತೆಯನ್ನು (importance) ನೀಡುತ್ತಾರೆ. ಇದರಲ್ಲಿ ಈ ನಾಲ್ಕು ರಾಶಿಯ (Zodiac sign) ಹುಡುಗಿಯರು ಬಹಳ ಮುಂದು.

ಇವರು ರಿಲೇಶನ್‌ಶಿಪ್ ಅನ್ನು ಬಹಳ ಜಾಗ್ರತೆಯಿಂದ ಕಾಪಾಡಿಕೊಳ್ಳುತ್ತಾರೆ. ಅಕ್ಕರೆಯಿಂದ ಎಲ್ಲರನ್ನೂ  ನೋಡಿಕೊಳ್ಳುತ್ತಾರೆ. ಹೀಗಾಗಿ ಎಲ್ಲರ ಮನಸ್ಸನ್ನು ಹಾಗೂ ಹೃದಯವನ್ನು (Heart) ಬಹುಬೇಗ ಗೆದ್ದುಬಿಡುತ್ತಾರೆ. ಇವರು ತಮ್ಮ ಕುಟುಂಬದವರನ್ನು (Family) ಎಂದೂ ಬಿಟ್ಟುಕೊಡುವವರಲ್ಲ. ಕುಟುಂಬ ಹಾಗೂ ತಮ್ಮ ಆಪ್ತ ಬಳಗದ ಎಲ್ಲರನ್ನೂ ಒಂದಾಗಿ ಕರೆದುಕೊಂಡು ಹೋಗುವ ಗುಣವನ್ನು ಈ ರಾಶಿಗಳ ಹುಡುಗಿಯರು ಹೊಂದಿದವರಾಗಿರುತ್ತಾರೆ. ಹಾಗಾದರೆ ಆ ನಾಲ್ಕು ರಾಶಿಯವರು ಯಾರು ಎಂಬುದನ್ನು ನೋಡೋಣವೇ..? 

ಕರ್ಕಾಟಕ ರಾಶಿ (Cancer)
ಈ ರಾಶಿಚಕ್ರದ ಹುಡುಗಿಯರು ಸ್ವಭಾವತಃ ತುಂಬಾ ಸರಳ ವ್ಯಕ್ತಿತ್ವವನ್ನು (Simple personality) ಹೊಂದಿದವರಾಗಿದ್ದು, ಉಲ್ಲಾಸದ ಚಿಲುಮೆಯಾಗಿರುತ್ತಾರೆ. ಇವರು ಗುಣದಲ್ಲಿಯೂ ಸಹ ಅತ್ಯುತ್ತಮದವರಾಗಿದ್ದು, ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ. ಇವರು ತಮ್ಮ ಪ್ರೀತಿಪಾತ್ರರ, ಕುಟುಂಬದವರನ್ನು ಸುಲಭವಾಗಿ ಗೆಲ್ಲುತ್ತಾರೆ. ಇನ್ನು ವೃತ್ತಿಬದುಕನ್ನು (Profession) ನೋಡುವುದಾದರೆ ಅಲ್ಲಿ ಸಹೋದ್ಯೋಗಿಗಳ ಮನಸ್ಸನ್ನೂ ಆರಾಮಾಗಿ ಗೆದ್ದುಬಿಡುತ್ತಾರೆ. ಇವರು ಎಂಥದ್ದೇ ಪರಿಸರವಿರಲಿ ಅದಕ್ಕೆ ಯಾವುದೇ ರೀತಿಯಲ್ಲೂ ತಲೆಕೆಡಿಸಿಕೊಳ್ಳದೆ ಹೊಂದಿಕೊಳ್ಳುವ ಗುಣವನ್ನು ಹೊಂದಿದವರಾಗಿರುತ್ತಾರೆ. ಇವರಿಗೆ ಸಂಪತ್ತಿನ (Wealth) ಕೊರತೆ (Deficiency) ಎಂದಿಗೂ ಆಗದು.

ಮಕರ ರಾಶಿ (Capricorn)
ಈ ರಾಶಿಚಕ್ರದ ಹುಡುಗಿಯರು ಸುಸಂಸ್ಕೃತ ಗುಣವುಳ್ಳವರು. ಜೊತೆಗೆ ಇವರು ಅದೃಷ್ಟವಂತರೂ (Lucky) ಹೌದು. ತಮಗೆ ಏನು ಬೇಕೋ ಅದನ್ನು ಸುಲಭವಾಗಿ ಪಡೆದುಕೊಳ್ಳುವ ಗುಣವನ್ನು ಹೊಂದಿದವರಾಗಿದ್ದಾರೆ. ಇವರ ಅದೃಷ್ಟದಿಂದ ಪತಿಯ (Husband) ಜೀವನದಲ್ಲಿ ಅನೇಕ ಉತ್ತಮ (Good) ಬೆಳವಣಿಗೆಗಳು ಆಗಲಿದ್ದು, ಒಳ್ಳೊಳ್ಳೆ ಫಲಿತಾಂಶವನ್ನು (Result) ಕಾಣಬಹುದಾಗಿದೆ. ಇದು ಪತಿಯ ವೃತ್ತಿ ಬದುಕು ಇಲ್ಲವೇ ವ್ಯವಹಾರ (Business) ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಯಶಸ್ಸಿಗೂ (Success) ಕಾರಣವಾಗುತ್ತದೆ. ಹೀಗಾಗಿ ಇವರು ಗಂಡನ ಮನೆಯಲ್ಲಿ ಅದೃಷ್ಟ ಲಕ್ಷ್ಮಿಯರು ಎಂದೂ ಕರೆಸಿಕೊಳ್ಳುತ್ತಾರೆ. ಇದೆಲ್ಲದರ ಜೊತೆಗೆ ತಮ್ಮ ಸೌಮ್ಯ ಹಾಗೂ ಉತ್ತಮ ನಡವಳಿಕೆಯಿಂದ ಮನೆಯ ಎಲ್ಲ ಸದಸ್ಯರ ಹಾಗೂ ಅತ್ತೆ-ಮಾವಂದಿರ ಮನಸ್ಸನ್ನು ಬಹುಬೇಗ ಗೆದ್ದುಬಿಡುತ್ತಾಳೆ. 

ಇದನ್ನು ಓದಿ: Friendship Astro: ಯಾವ ರಾಶಿಯವರನ್ನು ಫ್ರೆಂಡ್‌ಶಿಪ್ ಮಾಡಿಕೊಂಡರೆ ಒಳ್ಳೆಯದು?

ಕುಂಭ ರಾಶಿ (Aquarius)
ಈ ರಾಶಿಯ ಹುಡುಗಿಯರು ಬಹಳ ಜವಾಬ್ದಾರಿಯುತ (Responsibility) ಸ್ವಭಾವದವರು. ಪ್ರತಿಯೊಂದು ವಿಷಯವನ್ನು ಆಸ್ಥೆಯಿಂದ ಮಾಡುವ ಇವರು, ಉತ್ತಮವಾಗಿ ನಿರ್ವಹಣೆ ಮಾಡಬಲ್ಲರು. ಅಲ್ಲದೆ, ತಮ್ಮ ಜೀವನದಲ್ಲಿ (Life) ಯಾವುದೇ ಕರ್ತವ್ಯಗಳಿಂದ ದೂರ ಸರಿಯುವುದಿಲ್ಲ. ಹೀಗಾಗಿ ಇವರು ಗಂಡನಿಗೆ ಮಾತ್ರವಲ್ಲದೆ, ಅತ್ತೆ-ಮಾವಮ ಸಹಿತ ಮನೆಯ ಪ್ರತಿ ಸದಸ್ಯರ ಮೆಚ್ಚಿನ ಮನೆಮಗಳಾಗಿರುತ್ತಾರೆ. ಇವರು ಹೋದಲ್ಲೆಲ್ಲ ಲಕ್ಷ್ಮೀ ಸಂಚಾರವಿರುತ್ತದೆ. ಹೀಗಾಗಿ ಅಲ್ಲಿ ಇವರು ಅದೃಷ್ಟ ಲಕ್ಷ್ಮೀಯಾಗಿ ಮಿಂಚುತ್ತಾರೆ. ಜೊತೆಗೆ ಎಲ್ಲರಿಂದಲೂ ಪ್ರೀತಿ ಮತ್ತು ಗೌರವವನ್ನು ಪಡೆಯುತ್ತಾರೆ.

ಇದನ್ನು ಓದಿ: Gemstones: ರತ್ನಗಳ ಧರಿಸುವಾಗ ಈ ವಿಷಯಗಳ ಬಗ್ಗೆ ಇರಲಿ ಗಮನ

ಮೀನ ರಾಶಿ (Pisces)
ಮೀನ ರಾಶಿಯ ಹುಡುಗಿಯರು ಸಂಬಂಧದ ಮಹತ್ವವನ್ನು ಚೆನ್ನಾಗಿ ಅರಿತುಕೊಂಡವರಾಗಿದ್ದಾರೆ. ಹೀಗಾಗಿ ಆಯಾ ಸಂಬಂಧಕ್ಕೆ ಹೇಗೆ ಬೆಲೆ ಕೊಡಬೇಕೋ, ಪ್ರೀತಿ (Love), ಆದರದಿಂದ ಕಾಣಬೇಕೋ ಅದನ್ನು ಉತ್ತಮವಾಗಿ ಬಲ್ಲವರಾಗಿರುತ್ತಾರೆ. ಹೀಗಾಗಿ ಇವರನ್ನು ಮನೆಯ ಪ್ರತಿ ಸದಸ್ಯರೂ ಇಷ್ಟಪಡುತ್ತಾರೆ. ಅವರೆಲ್ಲರ ಪ್ರೀತಿಗೆ ಇವರು ಪಾತ್ರರಾಗುತ್ತಾರೆ. ಎಲ್ಲರನ್ನೂ ಸದಾ ಸಂತೋಷವಾಗಿಡುತ್ತಾರೆ. 

Follow Us:
Download App:
  • android
  • ios