Asianet Suvarna News Asianet Suvarna News

ಅಬ್ಬಬ್ಬಾ! ಇಷ್ಟೊಂದು ದೇಶಗಳಲ್ಲಿ ಆಚರಿಸ್ತಾರೆ ಬುದ್ಧ ಪೂರ್ಣಿಮೆ

ಬುದ್ಧ ಜಯಂತಿ ಅಥವಾ ಬುದ್ಧ ಪೂರ್ಣಿಮಾ ಬೌದ್ಧ ಧರ್ಮದ ಪ್ರಮುಖ ಹಬ್ಬವಾಗಿದೆ. ಈ ಹಬ್ಬವನ್ನು ನಮ್ಮಂತೆ ವಿಶ್ವದ ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ. ಯಾವೆಲ್ಲ ದೇಶಗಳಲ್ಲಿ ಬುದ್ಧ ಜಯಂತಿಯನ್ನು ಹೇಗೆಲ್ಲ ಆಚರಿಸಲಾಗುತ್ತದೆ ನೋಡೋಣ. 

Buddha Purnima is celebrated not only in India but also in these countries skr
Author
First Published May 4, 2023, 4:11 PM IST

ಬುದ್ಧ ಜಯಂತಿಯು ಹೆಚ್ಚಿನ ದೇಶಗಳಲ್ಲಿ ಸಾರ್ವಜನಿಕ ರಜಾ ದಿನವಾಗಿದೆ. ಹೌದು, ಬುದ್ಧ ಪೂರ್ಣಿಮಾವನ್ನು ಕೇವಲ ಭಾರತದಲ್ಲಲ್ಲದೆ ಬಹಳಷ್ಟು ದೇಶಗಳಲ್ಲಿ ಆಚರಿಸಲಾಗುತ್ತದೆ. ವೈಶಾಖ ಹುಣ್ಣಿಮೆಯಂದು ಬುದ್ಧ ಹುಟ್ಟಿದ್ದಷ್ಟೇ ಅಲ್ಲ, ಗೌತಮ ಬುದ್ಧನಿಗೆ ಬೋಧ ಗಯಾದಲ್ಲಿ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಯಿತು. ಅಂದಿನಿಂದ ಈ ದಿನವನ್ನು ಬುದ್ಧ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಶ್ರೀಲಂಕಾ, ಥೈಲ್ಯಾಂಡ್, ಬಾಂಗ್ಲಾದೇಶಗಳಲ್ಲಿ ಈ ಹಬ್ಬವನ್ನು 'ವೆಸಕ್' ಎಂದು ಕರೆಯಲಾಗುತ್ತದೆ. ಇದು ‘ವೈಶಾಖ’ ಪದದ ಅಪಭ್ರಂಶವಾಗಿದೆ.

ಈ ಹಬ್ಬವನ್ನು ನಮ್ಮಂತೆ ವಿಶ್ವದ ಯಾವ ದೇಶದಲ್ಲಿ ಆಚರಿಸಲಾಗುತ್ತದೆ ಎಂದು ತಿಳಿಯಲು ಪುಟ್ಟದೊಂದು ಪ್ರವಾಸ ಕೈಗೊಳ್ಳೋಣ ಬನ್ನಿ.

ಥೈಲ್ಯಾಂಡ್
ಬೌದ್ಧ ಧರ್ಮವು ಥೈಲ್ಯಾಂಡ್‌ನ ಮುಖ್ಯ ಧರ್ಮವಾಗಿದೆ. ಥೈಲ್ಯಾಂಡ್‌ನ ಜನಸಂಖ್ಯೆಯ 95 ಪ್ರತಿಶತಕ್ಕಿಂತಲೂ ಹೆಚ್ಚು ಬೌದ್ಧರಾಗಿದ್ದಾರೆ. ಈ ದಿನದಂದು ಮೊದಲು ಭಗವಾನ್ ಬುದ್ಧನಿಗೆ ಖೀರ್ ಅರ್ಪಿಸಿ ನಂತರ ಪ್ರಸಾದವೆಂದು ಭಾವಿಸಿ ಸೇವಿಸಲಾಗುತ್ತದೆ. ಜನರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಸನ್ಯಾಸಿಗಳಿಗೆ ಆಹಾರ, ಮೇಣದಬತ್ತಿಗಳು ಮತ್ತು ಹೂವುಗಳನ್ನು ಅರ್ಪಿಸುತ್ತಾರೆ. ದೇವಾಲಯಗಳಲ್ಲಿ, ಸನ್ಯಾಸಿಗಳು ಬುದ್ಧನ ಬೋಧನೆಗಳ ಕುರಿತು ಪ್ರಾರ್ಥನೆ ಮತ್ತು ಉಪದೇಶಗಳನ್ನು ನೀಡುತ್ತಾರೆ. ಈ ದಿನದಂದು 'ಬುದ್ಧ ಸ್ನಾನ ಸಮಾರಂಭ' ಎಂಬ ವಿಶೇಷ ಸಮಾರಂಭವೂ ನಡೆಯುತ್ತದೆ. 

ಶ್ರೀಲಂಕಾ
ಶ್ರೀಲಂಕಾದಲ್ಲಿ, ಮನೆಗಳನ್ನು ಕಾಗದದ ಲ್ಯಾಂಟರ್ನ್‌ಗಳು ಮತ್ತು ಬಿದಿರಿನ ದೀಪಗಳಿಂದ ಅಲಂಕರಿಸಲಾಗುತ್ತದೆ. ಭಕ್ತಿಗೀತೆಗಳನ್ನು ಹಾಡಲಾಗುತ್ತದೆ. ವಿವಿಧ ಸ್ಥಳಗಳಲ್ಲಿ ಬುದ್ಧನ ಜೀವನದ ದೃಶ್ಯಗಳನ್ನು ನಿರ್ಮಿಸಲಾಗಿದೆ. ಅಲ್ಲಿಗೆ ಭೇಟಿ ಕೊಟ್ಟು ಬುದ್ಧನನ್ನು ಸ್ಮರಿಸಲಾಗುತ್ತದೆ.

ಬುದ್ಧ ಪೂರ್ಣಿಮೆಯಂದು ಈ ಕೆಲಸ ಮಾಡಿದ್ರೆ ಅದೃಷ್ಟದ ಬಾಗಿಲು ತೆರೆಯುತ್ತೆ

ಬಾಂಗ್ಲಾದೇಶ
ಬಾಂಗ್ಲಾದೇಶದಲ್ಲಿ ಬೌದ್ಧ ದೇವಾಲಯಗಳು ವರ್ಣರಂಜಿತ ಅಲಂಕಾರಗಳು ಮತ್ತು ಮೇಣದಬತ್ತಿಗಳಿಂದ ಬೆಳಗುತ್ತವೆ. ದೇವಾಲಯಗಳ ಸುತ್ತಲೂ ದೊಡ್ಡ ಜಾತ್ರೆ ನಡೆಯುತ್ತದೆ. ಬಂಗಾಳಿ ಆಹಾರ (ಹೆಚ್ಚಾಗಿ ಸಸ್ಯಾಹಾರಿ), ಬಟ್ಟೆ ಮತ್ತು ಆಟಿಕೆಗಳು ಮಾರಾಟವಾಗುತ್ತವೆ. ಬುದ್ಧನ ಜೀವನದ ಕಲಾಕೃತಿಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಈ ವೆಸಕ್ ತಿಂಗಳಲ್ಲಿ ಭೂತಾನ್‌ನಲ್ಲಿ ಕಟ್ಟುನಿಟ್ಟಾದ ಸಸ್ಯಾಹಾರಿ ಆಹಾರವನ್ನು ಅನುಸರಿಸಲಾಗುತ್ತದೆ.

ಕಾಂಬೋಡಿಯಾ
ಬುದ್ಧನ ಜನ್ಮದಿನವನ್ನು ಕಾಂಬೋಡಿಯಾದಲ್ಲಿ 'ವಿಸಾಕ್ ಬೋಚಿಯಾ' ಎಂದು ಆಚರಿಸಲಾಗುತ್ತದೆ. ದೇಶಾದ್ಯಂತದ ಸನ್ಯಾಸಿಗಳು ಕಮಲದ ಹೂವುಗಳು, ಧೂಪದ್ರವ್ಯ ಮತ್ತು ಮೇಣದಬತ್ತಿಗಳೊಂದಿಗೆ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಜನರು ಸನ್ಯಾಸಿಗಳಿಗೆ ದೇಣಿಗೆ ನೀಡುತ್ತಾರೆ. 

ಚೀನಾ ಮತ್ತು ಹಾಂಗ್ ಕಾಂಗ್‌
ಚೀನಾ ಮತ್ತು ಹಾಂಗ್ ಕಾಂಗ್‌ನಲ್ಲಿ ಬುದ್ಧನ ಜ್ಞಾನೋದಯವನ್ನು ಸಂಕೇತಿಸಲು ಮೇಣದಬತ್ತಿಗಳನ್ನು ಬೆಳಗಿಸಲಾಗುತ್ತದೆ.

ಜಪಾನ್
ಜಪಾನ್‌ನಲ್ಲಿ, ಈ ದಿನವನ್ನು 'ಕನ್ಬುಟ್ಸು-ಇ' ಎಂದು ಕರೆಯಲಾಗುತ್ತದೆ. 

ಇಂಡೋನೇಷ್ಯಾ
ಇಂಡೋನೇಷ್ಯಾದಲ್ಲಿ ಈ ದಿನದಂದು ದೊಡ್ಡ ಮೆರವಣಿಗೆಯನ್ನು ನಡೆಸಲಾಗುತ್ತದೆ. 

ಮಲೇಷ್ಯಾ, ಮಂಗೋಲಿಯಾ
ಈ ಬುದ್ಧನ ಜನ್ಮದಿನವನ್ನು ಮಲೇಷ್ಯಾದಲ್ಲಿ ವೆಸಕ್ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶಾದ್ಯಂತ ದೇವಾಲಯಗಳನ್ನು ಅಲಂಕರಿಸಲಾಗುತ್ತದೆ. ಈ ದಿನ, ಪಂಜರದಲ್ಲಿರುವ ಪ್ರಾಣಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ದೇಶಾದ್ಯಂತ ಜನರು ಪ್ರಾರ್ಥನೆ, ಪಠಣ ಮತ್ತು ದಾನದಲ್ಲಿ ತೊಡಗುತ್ತಾರೆ. ಈ ಹಬ್ಬವನ್ನು ಮಂಗೋಲಿಯಾದಲ್ಲಿ 'ವೆಸಕ್' ಎಂದು ಆಚರಿಸಲಾಗುತ್ತದೆ.

Buddha Purnima 2023: ಕ್ಷಮೆ ಹೇಗಿರಬೇಕು? ಬುದ್ಧನ ಈ ಕತೆಯಿಂದ ಅರ್ಥ ಮಾಡಿಕೊಳ್ಳೋಣ..

ಮ್ಯಾನ್ಮಾರ್‌
ಮ್ಯಾನ್ಮಾರ್‌ನಲ್ಲಿ ಬುದ್ಧನ ಜನ್ಮದಿನವನ್ನು 'ಕಸುನ್ ಪೂರ್ಣಿಮಾ' ಎಂದು ಆಚರಿಸಲಾಗುತ್ತದೆ. ಬೋಧಿ ವೃಕ್ಷಕ್ಕೆ ನೀರು ಅರ್ಪಿಸಿ ನಾಮಸ್ಮರಣೆ ಮಾಡುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ದೊಡ್ಡ ಪಗೋಡಗಳಲ್ಲಿ, ಸಂಗೀತ ಮತ್ತು ನೃತ್ಯವನ್ನು ಉತ್ಸವದ ಭಾಗವಾಗಿ ಪ್ರದರ್ಶಿಸಲಾಗುತ್ತದೆ. 

ನೇಪಾಳ
ನೇಪಾಳದಲ್ಲಿ, ಈ ದಿನ ಮಾಂಸಾಹಾರವನ್ನು ತಪ್ಪಿಸಲಾಗುತ್ತದೆ. ಅಕ್ಕಿಯಿಂದ ಸಿಹಿ ಪಾಯಸವನ್ನು ತಯಾರಿಸಲಾಗುತ್ತದೆ.

ಉತ್ತರ ಕೊರಿಯಾ, ಫಿಲಿಪೈನ್ಸ್, ಸಿಂಗಾಪುರ, ದಕ್ಷಿಣ ಕೊರಿಯಾ
ಉತ್ತರ ಕೊರಿಯಾದಲ್ಲಿಯೂ ಈ ದಿನವನ್ನು ಆಚರಿಸಲಾಗುತ್ತದೆ. ಫಿಲಿಪೈನ್ಸ್‌ನಲ್ಲಿ ಈ ದಿನವನ್ನು 'ಕಾರವಾನ್ ನಿ ಬುದ್ಧ' ಎಂದು ಕರೆಯಲಾಗುತ್ತದೆ. ಸಿಂಗಾಪುರದಲ್ಲಿ ಈ ದಿನದಂದು ಬೌದ್ಧ ದೇವಾಲಯಗಳನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ದಕ್ಷಿಣ ಕೊರಿಯಾದಲ್ಲಿ, ಈ ದಿನವನ್ನು ಕೊರಿಯನ್ ಚಂದ್ರನ ಕ್ಯಾಲೆಂಡರ್ ಪ್ರಕಾರ ಆಚರಿಸಲಾಗುತ್ತದೆ. ಈ ದಿನವನ್ನು "ಸಿಯೋಕ್ಕಾ ತನ್ಶಿನ್ ಇಲ್" ಎಂದು ಕರೆಯಲಾಗುತ್ತದೆ.
ಈ ದಿನ ದೇವಾಲಯದಲ್ಲಿ ಉಚಿತ ಅನ್ನಸಂತರ್ಪಣೆ ಇರುತ್ತದೆ. ಇಲ್ಲಿ ದೊಡ್ಡ ಲಾಟೀನು ಹಬ್ಬವನ್ನು ಆಯೋಜಿಸಲಾಗುತ್ತದೆ. 

ತೈವಾನ್‌, ವಿಯೆಟ್ನಾಂ, ಮೆಲ್ಬೋರ್ನ್, ಬ್ರೆಜಿಲ್
ತೈವಾನ್‌ನಲ್ಲಿ, ವಿಯೆಟ್ನಾಂನಲ್ಲಿ ಬುದ್ಧನ ಪ್ರತಿಮೆಗಳಿಗೆ ಪರಿಮಳಯುಕ್ತ ನೀರಿನಲ್ಲಿ ಸ್ನಾನ ಮಾಡಿಸಲಾಗುತ್ತದೆ. ಮೆಲ್ಬೋರ್ನ್ ವಾರಾಂತ್ಯದ ಹಬ್ಬವನ್ನು ಬುದ್ಧ ದಿನ ಮತ್ತು ಬಹುಸಾಂಸ್ಕೃತಿಕ ಉತ್ಸವವನ್ನು ಏಪ್ರಿಲ್/ಮೇ ಆಸುಪಾಸಿನಲ್ಲಿ ಆಯೋಜಿಸುತ್ತದೆ. ಬ್ರೆಜಿಲ್‌ನಲ್ಲಿ ಈ ಹಬ್ಬವನ್ನು 'ಹನಮತ್ಸುರಿ' ಎಂದು ಕರೆಯಲಾಗುತ್ತದೆ.

ಅದರ ಜನಪ್ರಿಯತೆ ಈಗ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆ. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್‌ನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 

Follow Us:
Download App:
  • android
  • ios