ಹುಟ್ಟಿದ ದಿನಾಂಕದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯದ ಬಗ್ಗೆ ತಿಳಿಯಬಹುದಾಗಿದೆ. ಸಂಖ್ಯಾಶಾಸ್ತ್ರದಲ್ಲಿ 2, 11, 20 ಮತ್ತು 29ನೇ ತಾರೀಖಿನಂದು ಜನಿಸಿದವರು ತಮ್ಮ ಸಂಗಾತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.. ಹಾಗಾದರೆ ಈ ದಿನದಲ್ಲಿ ಜನಿಸಿದವರ ವ್ಯಕ್ತಿತ್ವದ ಬಗ್ಗೆ ಮತ್ತಷ್ಟು ತಿಳಿಯೋಣ...
ಸಂಖ್ಯಾಶಾಸ್ತ್ರದಲ್ಲಿ (Numerology) 1ರಿಂದ 9ರ ವರೆಗಿನ ಸಂಖ್ಯೆಗಳನ್ನು (Numbers) ಪಾದಾಂಕವೆಂದು (Padanka) ಕರೆಯುತ್ತಾರೆ. ಹುಟ್ಟಿದ ದಿನದ (Birth Date) ಆಧಾರದ ಮೇಲೆ ಪಾದಾಂಕ ಯಾವುದೆಂದು ತಿಳಿಯಲಾಗುತ್ತದೆ. ಈ ಪಾದಾಂಕದ ಅನುಸಾರ ವ್ಯಕ್ತಿಗಳ ವ್ಯಕ್ತಿತ್ವದ (Personality) ಬಗ್ಗೆ ತಿಳಿಯಬಹುದಾಗಿದೆ. ಅಲ್ಲದೆ, ಆರ್ಥಿಕ ಸ್ಥಿತಿ (Economy), ಆರೋಗ್ಯ (Health) ಹೀಗೆ ಇನ್ನಿತರ ವಿಚಾರಗಳ ಬಗ್ಗೆ ತಿಳಿಯುವ ಆಸಕ್ತಿ (Interest) ಎಲ್ಲರಿಗೂ ಇರುತ್ತದೆ. ಇದಲ್ಲದೆ, ಹುಟ್ಟಿದ ದಿನಾಂಕಕ್ಕನುಸಾರವಾಗಿ ಸಂಗಾತಿಯನ್ನು (Partner) ಹೇಗೆ ನೋಡಿಕೊಳ್ಳುತ್ತಾರೆ ಎಂಬುದೂ ಇದರಿಂದ ತಿಳಿಯಬಹುದಾಗಿದೆ. ಪಾದಾಂಕ ಎರಡರಲ್ಲಿ ಜನಿಸಿದ ವ್ಯಕ್ತಿಗಳು ತಮ್ಮ ಸಂಗಾತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಸಂಖ್ಯಾ ಶಾಸ್ತ್ರ ಹೇಳುತ್ತದೆ. ಪಾದಾಂಕ ಎರಡರ ಅಧಿಪತಿ ದೇವರು ಚಂದ್ರ (Moon) ಗ್ರಹವಾಗಿದೆ (Planet). 2, 11, 20 ಮತ್ತು 29ನೇ ತಾರೀಕಿನಂದು ಜನಿಸಿದವರ ಪಾದಾಂಕ 2 ಆಗುತ್ತದೆ.
ಈ ಪಾದಾಂಕದಲ್ಲಿ ಜನಿಸಿದ ಹುಡುಗರ ಸ್ವಭಾವ (Nature) ತುಂಬಾ ಕೇರಿಂಗ್ (Caring) ಮತ್ತು ರೋಮ್ಯಾಂಟಿಕ್ (Romantic) ಆಗಿರುತ್ತದೆ. ಖಾಸಗಿ ವ್ಯಕ್ತಿಗಳು ತಮ್ಮ ಹೆಂಡತಿಯನ್ನು (Wife) ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಒಬ್ಬ ಉತ್ತಮ ಪತಿಯಾಗುವ (Husband) ಎಲ್ಲ ಗುಣಗಳು ಈ ದಿನಾಂಕಗಳಲ್ಲಿ ಹುಟ್ಟಿದವರಲ್ಲಿ ಇರುತ್ತದೆ. ಈ ವ್ಯಕ್ತಿಗಳ ಬಗ್ಗೆ ಇನ್ನಷ್ಟು ತಿಳಿಯೋಣ....
ಪಾದಾಂಕ ಎರಡರಲ್ಲಿ ಜನಿಸಿದವರು ಎಲ್ಲರಿಗೂ ಅಚ್ಚುಮೆಚ್ಚು. ಚಂದ್ರ ಗ್ರಹದ ಪ್ರಭಾವದಿಂದ (Effect) ಈ ವ್ಯಕ್ತಿಗಳು ಎಲ್ಲರೊಂದಿಗೂ ಬೇಗ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಈ ಪಾದಾಂಕದಲ್ಲಿ ಜನಿಸಿದವರು ಮೇಲೆ ಹುಡುಗಿಯರು ಬೇಗ ಆಕರ್ಷಿತರೂ (Attractive) ಆಗುತ್ತಾರೆ. ಸಂಬಂಧಗಳ ಮೌಲ್ಯವನ್ನು ಚೆನ್ನಾಗಿ ಅರಿತಿರುತ್ತಾರೆ. ಸಂಬಂಧಗಳನ್ನು ಗಳಿಸುತ್ತಾರೆ. ಅಷ್ಟೇ ಚೆನ್ನಾಗಿ ಅದನ್ನು ನಿಭಾಯಿಸುತ್ತಾರೆ. ಮಾತಿನಲ್ಲೇ ಎಲ್ಲರ ಹೃದಯವನ್ನು (Heart) ಗೆಲ್ಲುತ್ತಾರೆ. ಪತ್ನಿಯೊಂದಿಗೆ ಸಮರ್ಪಣಾ ಭಾವದಿಂದ ಇರುತ್ತಾರೆ. ಜೀವನದಲ್ಲಿ ಬಹಳ ದೊಡ್ಡ ನಿರ್ಧಾರಗಳನ್ನು (Decision) ತೆಗೆದುಕೊಳ್ಳುವ ಸಮಯದಲ್ಲಿ (Time) ಅವರ ಸಲಹೆಗಳನ್ನು (Suggestion) ಪಡೆಯುತ್ತಾರೆ. ಪತ್ನಿಯ ಮಾತುಗಳನ್ನು ಆಲಿಸಿ ಅವರ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಹೆಂಡತಿಯನ್ನು ಖುಷಿಯಾಗಿಟ್ಟುಕೊಳ್ಳಲು (Happy) ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಾರೆ.
ಇದನ್ನು ಓದಿ: Vastu Tips: ದೇವರ ಕೋಣೆಯ ಈ ಬದಲಾವಣೆಗೆ ಸಿಗಲಿದೆ ಲಕ್ಷ್ಮೀ ಕೃಪೆ!
ಭಾವನಾ ಜೀವಿಗಳು (Emotional beings)
ಪಾದಾಂಕ ಎರಡರಲ್ಲಿ ಜನಿಸಿದ ವ್ಯಕ್ತಿಗಳು ತುಂಬ ಭಾವುಕ ಸ್ವಭಾವ ಹೊಂದಿರುತ್ತಾರೆ. ಹಾಗಾಗಿ ಸಣ್ಣ ವಿಷಯಗಳಿಗೆ ಬೇಸರ ಮಾಡಿಕೊಳ್ಳುತ್ತಾರೆ. ತಮ್ಮವರಿಗಾಗಿ ಎಲ್ಲವನ್ನೂ ಮಾಡುವ ಗುಣವನ್ನು ಹೊಂದಿರುತ್ತಾರೆ. ಇತರರ ದುಃಖವನ್ನು (Sad) ಕಂಡು ಮಮ್ಮಲ ಮರುಗುತ್ತಾರೆ. ಜೀವನದಲ್ಲಿ (Life) ಎಂತಹದೇ ಪರಿಸ್ಥಿತಿ ಎದುರಾದರೂ ತಮ್ಮವರನ್ನು ಬಿಟ್ಟು ಕೊಡುವುದಿಲ್ಲ. ಸಾಹಸಿ (Adventure) ಪ್ರವೃತ್ತಿಯನ್ನು ಹೊಂದಿರುವ ಈ ವ್ಯಕ್ತಿಗಳು ಎಂತಹದೇ ಸವಾಲು (Challenge) ಎದುರಾದರೂ ಅದನ್ನು ಎದುರಿಸಿ ಮುನ್ನುಗ್ಗುತ್ತಾರೆ. ಯಾವುದೇ ಕೆಲಸವನ್ನಾದರೂ ಯೋಚಿಸಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡು ಮಾಡುತ್ತಾರೆ. ಈ ವ್ಯಕ್ತಿಗಳು ಹೆಚ್ಚು ಪರಿಶ್ರಮಿಗಳು ಮತ್ತು ಕೆಲಸದ ಬಗ್ಗೆ ಹೆಚ್ಚು ಆಸಕ್ತಿ (Interest) ಉಳ್ಳವರಾಗಿರುತ್ತಾರೆ. ಯಾವುದೇ ಕ್ಷೇತ್ರವಾಗಲಿ ಯಶಸ್ಸನ್ನು (Success) ಗಳಿಸುತ್ತಾರೆ.
ಇದನ್ನು ಓದಿ: Father And Son: ಅಪ್ಪನಿಗೆ ಹೆಮ್ಮೆ ತರುವ ಹುಡುಗರ ರಾಶಿಯಿದು..
ಪಾದಾಂಕವನ್ನು ತಿಳಿಯುವುದು ಹೇಗೆ?
ಹುಟ್ಟಿದ ದಿನಾಂಕವನ್ನು ಕೂಡಿದಾಗ ಬಂದ ಸಂಖ್ಯೆಯನ್ನು ಪಾದಾಂಕವೆಂದು ಕರೆಯುತ್ತಾರೆ. ಹುಟ್ಟಿದ ದಿನಾಂಕ 3 ಎಂದಾದರೆ ಪಾದಾಂಕ 3 ಆಗುತ್ತದೆ. ಅದೇ ಜನಿಸಿದ ದಿನಾಂಕವು 13 ಆಗಿದ್ದರೆ ಒಂದು ಮತ್ತು ಮೂರನ್ನು ಕೂಡಿದಾಗ ಬರುವ ಸಂಖ್ಯೆ ನಾಲ್ಕು (Four) (1 + 3 = 4) ಇದು ಪಾದಾಂಕವಾಗಿರುತ್ತದೆ. ಪಾದಾಂಕದಿಂದ ವ್ಯಕ್ತಿ ಬಗೆಗಿನ ವಿಚಾರಗಳನ್ನು ತಿಳಿಯಬಹುದೆಂದು ಸಂಖ್ಯಾಶಾಸ್ತ್ರ ಹೇಳುತ್ತದೆ.
