Asianet Suvarna News Asianet Suvarna News

ಕೈಗೆ ಬೆಳ್ಳಿ ಬಳೆ ಹಾಕ್ತೀರಾ? ತೆಗೆಯೋಕೆ ಹೋಗಬೇಡಿ!

ಕೈಗಳಿಗೆ ಬಳೆ ಹಾಕಿದ್ರೆ ಸಾಕಷ್ಟು ಲಾಭವಿದೆ. ಮಣ್ಣಿನ ಬಳೆ, ಬಂಗಾರದ ಬಳೆ, ಬೆಳ್ಳಿ ಬಳೆ ಹೀಗೆ ಬೇರೆ ಬೇರೆ ಬಳೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಂಗಳಕರ ಲೋಹಗಳಲ್ಲಿ ಒಂದಾಗಿರುವ ಬೆಳ್ಳಿ ಬಳೆಗಳನ್ನು ಕೈಗೆ ಹಾಕಿದ್ರೆ ಆರೋಗ್ಯದ ಜೊತೆ ಜ್ಯೋತಿಷ್ಯ ಲಾಭವೂ ಇದೆ. 
 

Benefits Of Wearing Silver Bracelet
Author
First Published Feb 25, 2023, 4:50 PM IST

ಆಭರಣ ಎಲ್ಲರ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಮಹಿಳೆಯರ ಹಾಗೂ ಪುರುಷರಿಗೆ ಹೆಚ್ಚು ಶೋಭೆ ತರುವ ಬೆಳ್ಳಿ - ಬಂಗಾರ ಅಥವಾ ವಿವಿಧ ಲೋಹಗಳ ಆಭರಣಗಳು ಆರೋಗ್ಯ ದೃಷ್ಟಿಯಿಂದಲೂ ಮಹತ್ವದ ಸ್ಥಾನ ಪಡೆದಿದೆ. ಚಿನ್ನ ಬೆಳ್ಳಿಯ ಆಭರಣಗಳು ಆರ್ಥಿಕ ಹಾಗೂ ಧಾರ್ಮಿಕ ಸ್ಥಿತಿಯನ್ನು ಬಿಂಬಿಸುತ್ತದೆ. ಹಾಗಾಗಿಯೇ ಮಹಿಳೆಯರು ಬೆಳ್ಳಿಯ ಕಾಲುಂಗುರ, ಗೆಜ್ಜೆ ಮುಂತಾದವುಗಳನ್ನು ಹಾಕಿಕೊಳ್ಳಬೇಕು ಎಂದು ಹಿಂದಿನವರು ಹೇಳುತ್ತಾರೆ.

ಹಿಂದಿನ ಕಾಲದಲ್ಲಿ ಬೆಳ್ಳಿ (Silver) ಯ ಬಟ್ಟಲು, ಲೋಟ ಮುಂತಾದವುಗಳನ್ನು ನಿತ್ಯದ ಬಳಕೆಯಲ್ಲಿ ಬಳಸುತ್ತಿದ್ದರು. ಹುಟ್ಟಿದ ಮಗುವಿಗೂ ಬೆಳ್ಳಿಯ ಬಳೆ, ಕಾಲ್ಗೆಜ್ಜೆಗಳನ್ನು ಹಾಕುತ್ತಿದ್ದರು. ಇಂದಿಗೂ ಅನೇಕರು ಬೆಳ್ಳಿಯ ಆಭರಣ (Jewelry) ಗಳನ್ನು ಧರಿಸುತ್ತಾರೆ. ಬೆಳ್ಳಿಯನ್ನು ಯಾವುದೇ ರೂಪದಲ್ಲಿ ಬಳಸುವುದರಿಂದ ಮನಸ್ಸು, ಶರೀರ ಮತ್ತು ಮೆದುಳಿಗೆ ಅನೇಕ ಪ್ರಯೋಜನವಾಗುತ್ತದೆ. ಇತ್ತೀಚೆಗೆ ಬೆಳ್ಳಿಯ ಕಡಗಗಳನ್ನು ಬಹುತೇಕರು ಹಾಕ್ತಿದ್ದಾರೆ. ಬೆಳ್ಳಿಯ ಬಳೆ, ಬ್ರೆಸ್ ಲೆಟ್ ಗಳನ್ನು ಬಳಸುವುದರಿಂದ ಅನೇಕ ಪ್ರಯೋಜನವಿದೆ.

Astro Tips for Students: ಪರೀಕ್ಷೆಯಲ್ಲಿ ಯಶಸ್ಸಿಗಾಗಿ ಈ ಕಾರ್ಯ ಕೈಗೊಳ್ಳಿ..

ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಬೆಳ್ಳಿಗೆ ಪವಿತ್ರ ಸ್ಥಾನವಿದೆ. ಬೆಳ್ಳಿ ಶರೀರವನ್ನು ಆರೋಗ್ಯದಿಂದ ಇಡುತ್ತೆ. ಬೆಳ್ಳಿ ನಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟು ಮನಸ್ಸ (Mind) ನ್ನು ಶಾಂತವಾಗಿಡಲು ಸಹಕಾರಿಯಾಗಿದೆ. ಬೆಳ್ಳಿಯ ಕಡಗಗಳನ್ನು ಧರಿಸುವುದರಿಂದ ಧೈರ್ಯ, ದೃಢತೆ ಹೆಚ್ಚುತ್ತದೆ. ಬೆಳ್ಳಿಯಲ್ಲಿನ ಆಧ್ಯಾತ್ಮಿಕ ಪ್ರಯೋಜನಗಳನ್ನು ಅರಿತಿರುವ ಜನರು ಬೆಳ್ಳಿಯ ಗಜ್ಜೆ, ಬ್ರೆಸ್ಲೆಟ್ ಮತ್ತು ಹಾರಗಳನ್ನು ಧರಿಸುತ್ತಿದ್ದಾರೆ.

ಬೆಳ್ಳಿಯ ಆಭರಣಗಳಿಂದಾಗುವ ಲಾಭವೇನು ಗೊತ್ತಾ? : ಬೆಳ್ಳಿಯನ್ನು ಶುಕ್ರ ಮತ್ತು ಚಂದ್ರನ ಲೋಹವೆಂದು ಪರಿಗಣಿಸಲಾಗಿದೆ. ನಿಮಗೆ ಚಂದ್ರನ ಅನುಗ್ರಹ ದುರ್ಬಲವಾಗಿದ್ದರೆ ಅದರ ಪ್ರಭಾವ ಮಾನಸಿಕ ಸ್ಥಿತಿಯ ಮೇಲಾಗಿ ನಿಮ್ಮನ್ನು ದುರ್ಬಲಗೊಳಿಸುತ್ತದೆ. ಬೆಳ್ಳಿಯ ಲೋಹವನ್ನು ಧರಿಸುವುದರಿಂದ ಶುಕ್ರ ಮತ್ತು ಚಂದ್ರ ಗ್ರಹದ ಸಂಪೂರ್ಣ ಅನುಗ್ರಹ ನಮಗೆ ದೊರಕುತ್ತವೆ. ಬೆಳ್ಳಿಯ ಕಡಗಗಳನ್ನು ಧರಿಸುವುದರಿಂದ ರಕ್ತನಾಳಗಳು ಮತ್ತು ಮೆದುಳಿನ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಚಂದ್ರನ ಪ್ರಭಾವ ಹೆಚ್ಚಿಸುವ ಗುಣ ಬೆಳ್ಳಿಗಿರುವುದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ದೊರಕುತ್ತದೆ. ಬೆಳ್ಳಿ ನಮ್ಮ ದೇಹದಲ್ಲಿನ ನಂಜನ್ನು ನಿವಾರಣೆ ಮಾಡಿ ಉತ್ತಮ ಆರೋಗ್ಯ ಕೊಡುತ್ತದೆ. ಬೆಳ್ಳಿಯ ಆಭರಣಗಳು ಶರೀರದ ಮೇಲಿದ್ದರೆ ಶೀತ, ಕೆಮ್ಮು, ಸಂಧಿವಾತದಂತಹ ಸಮಸ್ಯೆಗಳು ಹೆಚ್ಚು ಕಾಡುವುದಿಲ್ಲ.

ಜ್ಯೋತಿಷ್ಯ ಶಾಸ್ತ್ರ ಹೀಗೆ ಹೇಳುತ್ತೆ : ಭಾರತೀಯ ಜ್ಯೋತಿಷಿಗಳು ಬೆಳ್ಳಿಯನ್ನು ಕೈಗೆ ಧರಿಸುವುದರಿಂದ ಜೀವನದಲ್ಲಿ ಅದೃಷ್ಟ ಖುಲಾಯಿಸುತ್ತೆ ಎನ್ನುತ್ತಾರೆ. ಮಾತು ಮಾತಿಗೂ ಕೋಪ ಮಾಡಿಕೊಳ್ಳುವವರು ಕೋಪವನ್ನು ನಿಯಂತ್ರಿಸಲು ಕೈಗೆ ಬೆಳ್ಳಿಯ ಕಡಗವನ್ನು ಧರಿಸಬೇಕು. ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಒಂದು ವಿಷಯದ ಕಡೆಗೆ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಬೆಳ್ಳಿಯ ಕಡಗ ಅಥವಾ ಬ್ರೆಸ್ಲೆಟ್ ಗಳನ್ನು ಧರಿಸಬೇಕು. ಬೆಳ್ಳಿ ವ್ಯಕ್ತಿಯ ಶರೀರದಲ್ಲಿನ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ ಸಕಾರಾತ್ಮಕ ಶಕ್ತಿಯನ್ನು ತನ್ನೆಡೆ ಸೆಳೆಯುತ್ತದೆ.

ಬೆಳ್ಳಿಯ ಬ್ರೆಸ್ಲೆಟ್ ಅನ್ನು ಯಾವ ದಿನ ಹಾಕಿಕೊಳ್ಳಬೇಕು ಗೊತ್ತಾ? : ಹಿಂದೂ ಧರ್ಮದಲ್ಲಿ ಬೆಳ್ಳಿಯನ್ನು ಯಾವಾಗ ಹೇಗೆ ಧರಿಸಬೇಕು ಎನ್ನುವುದರ ಕುರಿತು  ನಿಯಮಗಳನ್ನು ಹೇಳಲಾಗಿದೆ. ಗುರುವಾರ ಬೆಳ್ಳಿಯ ಆಭರಣಗಳನ್ನು ಖರೀದಿಸುವುದು ಅತ್ಯಂತ ಶುಭವಾಗಿದೆ. ಏಕೆಂದರೆ ಗುರುವಾರ ಬೆಳ್ಳಿಯನ್ನು ಖರೀದಿಸಿದರೆ ವಿಷ್ಣುವಿನ ಕೃಪೆ ನಮ್ಮ ಮೇಲಿರುತ್ತೆ ಎನ್ನುವ ನಂಬಿಕೆಯಿದೆ. ಖರೀದಿಸಿದ ಆಭರಣವನ್ನು ಸೋಮವಾರ ಅಥವಾ ಶುಕ್ರವಾರ ಧರಿಸುವುದು ಬಹಳ ಒಳ್ಳೆಯದು. ಸೋಮವಾರ ಕೈಗೆ ಬೆಳ್ಳಿಯ ಆಭರಣ ಧರಿಸುವುದರಿಂದ ಈಶ್ವರನ ಕೃಪೆ ಸದಾ ನಿಮ್ಮ ಮೇಲಿರುತ್ತೆ.

ನಾಭಿ ಮೇಲೆ ಅರಿಶಿನ ಹಚ್ಚೋದ್ರಿಂದ ಏನು ಪ್ರಯೋಜನ ತಿಳಿಯಿರಿ

ರಾಹುವಿನ ಕೆಟ್ಟ ಪ್ರಭಾವದಿಂದ ನಮ್ಮನ್ನು ಕಾಪಾಡುತ್ತೆ: ರಾಹುವಿನ ಕೆಟ್ಟ ದೃಷ್ಟಿಯಿಂದ  ದೂರವಿರಲು ನೀವು ಬೆಳ್ಳಿಯ ಕಡಗವನ್ನು ಧರಿಸಬೇಕು. ಬೆಳ್ಳಿಯ ಆಭರಣದಿಂದ ರಾಹು ಕೂಡ ಪ್ರಸನ್ನನಾಗುತ್ತಾನೆ. ಇದರಿಂದ ಮಾನಸಿಕ ಶಾಂತಿ, ಆರೋಗ್ಯ, ಅದೃಷ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತೆ.
 

Follow Us:
Download App:
  • android
  • ios