Asianet Suvarna News Asianet Suvarna News

ಜನರನ್ನು ಚಿಂತೆಗೆ ತಳ್ಳಿದ 2022ರ ಭಾರತದ ಬಗ್ಗೆ ಬಾಬಾ ವಾಂಗಾ ಭವಿಷ್ಯ

2022ರಲ್ಲಿ ಭಾರತದಲ್ಲಾಗುವ ಪ್ರಾಕೃತಿಕ ವಿಕೋಪದ ಕುರಿತ ಬಾಬಾ ವಾಂಗಾ ಭವಿಷ್ಯವೊಂದು ಜನರನ್ನು ಚಿಂತೆಗೀಡು ಮಾಡಿದೆ..

Baba Vanga prediction about a big natural attack in India in 2022 leaves people worried skr
Author
First Published Sep 29, 2022, 11:26 AM IST

ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದು ಅಡ್ಡಹೆಸರು ಹೊಂದಿರುವ ಬಾಬಾ ವಾಂಗಾಳ ದೃಷ್ಟಿಕೋನಗಳು ಶೇ. 85ರಷ್ಟು ಸರಿಯಾಗಿವೆ ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಕೆಲವೆಂದರೆ ಚೋರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು, ಸೋವಿಯತ್ ಒಕ್ಕೂಟದ ವಿಸರ್ಜನೆ, 2004ರ ಥೈಲ್ಯಾಂಡ್ ಸುನಾಮಿ ಮತ್ತು ಬರಾಕ್ ಒಬಾಮಾ ಅವರ ಅಧ್ಯಕ್ಷತೆಯನ್ನು ಒಳಗೊಂಡಿದೆ. ಈ ಬಾರಿ, 2022ರಲ್ಲಿ ಭಾರತದ ಬಗ್ಗೆ ಅವರ ಭವಿಷ್ಯವಾಣಿಯೊಂದು ವೈರಲ್ ಆಗಿದೆ ಮತ್ತು ನೆಟಿಜನ್‌ರನ್ನು ಚಿಂತೆಗೀಡು ಮಾಡಿದೆ.

ಬಾಬಾ ವಾಂಗಾ
ಬಾಬಾ ವಾಂಗಾ ಎಂದು ಸಾಮಾನ್ಯವಾಗಿ ಜನಪ್ರಿಯವಾಗಿರುವ ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಅವರು ಬಲ್ಗೇರಿಯನ್ ಮಹಿಳೆ. 12ನೇ ವಯಸ್ಸಿನಲ್ಲಿ ಭಾರಿ ಚಂಡಮಾರುತದ ಅಪಘಾತದಲ್ಲಿ ಕಣ್ಣು ಕಳೆದುಕೊಂಡ ಬಳಿಕ ಅತೀಂದ್ರಿಯ ಶಕ್ತಿಯೊಂದು ಅವರಿಗೆ ಒಲಿದಿದ್ದು, ಮುಂದಾಗುವ ವಿಷಯಗಳು ತಿಳಿದು ಬರುತ್ತಿದ್ದವು ಎನ್ನಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಹಲವಾರು ಭವಿಷ್ಯವಾಣಿಗಳನ್ನು ನುಡಿದರು. 5079ರವರೆಗೆ ನಡೆಯುವ ಮುನ್ನೋಟಗಳನ್ನು ಅವರು ಹೇಳಿದ್ದಾರೆ. 5079ರಲ್ಲಿ ಜಗತ್ತು ಅಂತ್ಯವಾಗುತ್ತದೆ ಎಂದವರು ಹೇಳಿದ್ದಾರೆ. ಬಾಬಾ ವಾಂಗಾ 9/11 ದಾಳಿಗಳು, ಬ್ರೆಕ್ಸಿಟ್ ಮತ್ತು ತನ್ನ ಜೀವಿತಾವಧಿಯಲ್ಲಿ ಹಲವಾರು ಮಹತ್ವದ ಘಟನೆಗಳನ್ನು ಊಹಿಸಿದ್ದರು ಎಂದು ಹೇಳಲಾಗುತ್ತದೆ.

Navratri 2022 day 4: ತಾಯಿ ಕೂಷ್ಮಾಂಡಾ ಪೂಜೆಯಿಂದ ವಯಸ್ಸು, ಕೀರ್ತಿ, ಆರೋಗ್ಯ ಪ್ರಾಪ್ತಿ

ಈ ಬಾರಿ, 2022ರಲ್ಲಿ ಭಾರತದ ಬಗ್ಗೆ ಅವರ ಭವಿಷ್ಯವಾಣಿಯೊಂದು ವೈರಲ್ ಆಗಿದೆ ಮತ್ತು ನೆಟಿಜನ್‌ಗಳನ್ನು ಚಿಂತೆಗೀಡು ಮಾಡಿದೆ.
ಆನ್‌ಲೈನ್‌ನಲ್ಲಿ ಪ್ರಸಾರವಾದ ಕೆಲವು ಪೋಸ್ಟ್‌ಗಳ ಪ್ರಕಾರ, ದೇಶಾದ್ಯಂತ ಕ್ಷಾಮಕ್ಕೆ ಕಾರಣವಾಗುವ ಮಾರಣಾಂತಿಕ ಮಿಡತೆ ದಾಳಿಯನ್ನು ಭಾರತ ಈ ವರ್ಷ ಎದುರಿಸಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

ಪ್ರಪಂಚದ ತಾಪಮಾನದ ಏರಿಕೆಯಿಂದಾಗಿ ಮಿಡತೆಗಳು ಏಕಾಏಕಿ ಹೆಚ್ಚಾಗುತ್ತವೆ ಮತ್ತು ಭಾರತದಲ್ಲಿ ಬೆಳೆಗಳ ಮೇಲೆ ದಾಳಿ ಮಾಡುತ್ತವೆ, ಇದರ ಪರಿಣಾಮವಾಗಿ ಕ್ಷಾಮ ಮತ್ತು ಆಹಾರದ ಕೊರತೆ ಉಂಟಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. 2022 ಅಂತ್ಯವಾಗಲು ಇನ್ನು ನಾಲ್ಕು ತಿಂಗಳಷ್ಟೇ ಉಳಿದಿದ್ದು, ಈ ಭವಿಷ್ಯವಾಣಿ ನಿಜವಾದರೆ ಎಂಬ ಭಯ ಭಾರತೀಯರನ್ನು ಕಾಡುತ್ತಿದೆ.

ಅವರು 2022ರ ವರ್ಷಕ್ಕೆ ಆರು ಭವಿಷ್ಯವಾಣಿಗಳನ್ನು ಮಾಡಿದ್ದು - ಈವರೆಗೆ ಅವುಗಳಲ್ಲಿ ಎರಡು ನಿಜವಾಗಿದೆ. 2022ರಲ್ಲಿ ಆಸ್ಟ್ರೇಲಿಯಾವು 'ತೀವ್ರವಾದ ಪ್ರವಾಹದ' ಹೊಡೆತಕ್ಕೆ ಒಳಗಾಗುತ್ತದೆ ಎಂದು ಬಾಬಾ ವಾಂಗಾ ಹೇಳಿದ್ದರು. ಅಂತೆಯೇ ಆಸ್ಟ್ರೇಲಿಯಾದಲ್ಲಿ ಭಾರೀ ಮಳೆ ಮತ್ತು ಚಂಡಮಾರುತಗಳು ಈ ವರ್ಷ ಭಾರಿ ಪ್ರವಾಹಕ್ಕೆ ಕಾರಣವಾಯಿತು.

2022 ರ ಬಾಬಾ ವಂಗಾ ಅವರ ಎರಡನೇ ಭವಿಷ್ಯವಾಣಿಯು ಹಲವಾರು ದೇಶಗಳು ತೀವ್ರ ನೀರಿನ ಕೊರತೆಯನ್ನು ಎದುರಿಸಲಿವೆ ಎಂಬುದಾಗಿತ್ತು. ಈ ವರ್ಷ, ಯುನೈಟೆಡ್ ಕಿಂಗ್‌ಡಮ್‌ನ ಹಲವಾರು ಭಾಗಗಳಲ್ಲಿ ಮತ್ತು ಹಲವಾರು ಯುರೋಪಿಯನ್ ನಗರಗಳಲ್ಲಿ ಬರಗಾಲವನ್ನು ಅಧಿಕೃತವಾಗಿ ಘೋಷಿಸಲಾಯಿತು. ತೀವ್ರ ಕೊರತೆಯಿಂದಾಗಿ ಪೋರ್ಚುಗಲ್ ಮತ್ತು ಇಟಲಿಗೆ ತಮ್ಮ ನೀರಿನ ಬಳಕೆಯನ್ನು ನಿಯಂತ್ರಿಸಲು ತಿಳಿಸಲಾಗಿದೆ.

ಬಾಬಾ ವಾಂಗಾ ಅವರ ಮುಂದಿನ ಭವಿಷ್ಯವಾಣಿಗಳು:
2023ರಲ್ಲಿ ಭೂಮಿಯ ಕಕ್ಷೆ ಬದಲಾಗುವುದು ಮತ್ತು 2028ರಲ್ಲಿ ಶುಕ್ರಕ್ಕೆ ಗಗನಯಾತ್ರಿಗಳು ಪ್ರಯಾಣಿಸುತ್ತಾರೆ.
2046ರಲ್ಲಿ ಅಂಗಾಂಗ ಕಸಿ ತಂತ್ರಜ್ಞಾನದಿಂದಾಗಿ ಜನರು 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
2100ರಿಂದ, ರಾತ್ರಿಯು ಕಣ್ಮರೆಯಾಗುತ್ತದೆ ಮತ್ತು ಕೃತಕ ಸೂರ್ಯನ ಬೆಳಕು ಭೂಮಿಯ ಇನ್ನೊಂದು ಭಾಗವನ್ನು ಬೆಳಗಿಸುತ್ತದೆ.
5079ರಲ್ಲಿ ಜಗತ್ತು ಕೊನೆಗೊಳ್ಳುತ್ತದೆ.

ಯಾವ ವಾರ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತೆ? 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios