ಭವ್ಯರೂಪ ತಾಳುತ್ತಿದೆ ಅಯೋಧ್ಯೆ ರಾಮ ಮಂದಿರದ ಗರ್ಭಗೃಹ; ಇಲ್ಲಿದೆ ನೋಡಿ ಫಸ್ಟ್ ಲುಕ್

ಅಯೋಧ್ಯೆ ರಾಮಮಂದಿರದ ಗರ್ಭಗೃಹದ ಹೊಸ ಚಿತ್ರವನ್ನು ಸಂಬಂಧ ಪಟ್ಟ ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಅದರಂತೆ ನೆಲಮಹಡಿಯಲ್ಲಿ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೇ.40ರಷ್ಟು ಮೇಲ್ಛಾವಣಿಯ ಕಾಮಗಾರಿ ಮುಗಿದಿದೆ.

Ayodhyas Ram Mandir Here is First Look Of Garbha Griha skr

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರೂಪುಗೊಳ್ಳುತ್ತಿರುವ ರಾಮಮಂದಿರದ ತಾಜಾ ಚಿತ್ರವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಂಚಿಕೊಂಡಿದ್ದಾರೆ. ಅದರಂತೆ ಗರ್ಭಗೃಹದ ಕಾಮಗಾರಿಯ ಝಲಕ್ ಕಾಣಬಹುದಾಗಿದ್ದು, ಬಿಳಿಯ ಅಮೃತಶಿಲೆಯ ಗೋಡೆಗಳ ತುಂಬಾ ಮನ ಸೆಳೆವ ಕಲಾರಚನೆಗಳನ್ನು ಕಾಣಬಹುದಾಗಿದೆ. ದೇವಾಲಯ ಈಗ ಭವ್ಯ ರೂಪ ಪಡೆಯುತ್ತಿದೆ.

ಗರ್ಭ ಗೃಹದ ಫಸ್ಟ್ ಲುಕ್
ಜನವರಿ 2024ರ ಮೊದಲು ದೇವಾಲಯದ ನೆಲ ಮಹಡಿ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ದೇವಾಲಯದ ಟ್ರಸ್ಟ್ ಸದಸ್ಯ ಮಹಂತ್ ಕಮಲ್ ನಯನ್ ದಾಸ್ ಅವರು ಮುಂದಿನ ವರ್ಷ (2024) ಜನವರಿ 14 ಮತ್ತು 15 ರಂದು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಭಕ್ತರಿಗಾಗಿ ದೇವಾಲಯದ ದ್ವಾರಗಳನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ.

ನೆಲಮಹಡಿಯಲ್ಲಿ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೇ.40ರಷ್ಟು ಮೇಲ್ಛಾವಣಿಯ ಕಾಮಗಾರಿ ಮುಗಿದಿದೆ. 

ಈ ರಾಶಿಯ ಹುಡುಗಿಯರಿಗೆ ಪ್ರತಿ ಕ್ಷೇತ್ರದಲ್ಲೂ ಯಶ ಸಿಗೋದು ಗ್ಯಾರಂಟಿ!

ಈ ಮಧ್ಯೆ ಅಯೋಧ್ಯೆಗೆ ಆಧ್ಯಾತ್ಮಿಕ ನಗರ ಎಂಬ ಗುರುತನ್ನು ನೀಡಲು ಸರ್ಕಾರ ಮುಂದಾಗಿದೆ. ದೇವಾಲಯದ ಪಟ್ಟಣದ ಪ್ರಮುಖ ಬೀದಿಗಳಿಗೆ ವಿನ್ಯಾಸಗಳು, ಕಲಾಕೃತಿಗಳು ಮತ್ತು ಪರಿಕಲ್ಪನೆಗಳನ್ನು ಒದಗಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳಿಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ADA) ಸ್ಪರ್ಧೆಯನ್ನು ಏರ್ಪಡಿಸಿದೆ.
ದೇವಾಲಯದ ಟ್ರಸ್ಟ್ ಪ್ರಕಾರ ಅಂತಿಮ ವಿನ್ಯಾಸವು ದೇವಾಲಯದ ಸ್ಥಳದಲ್ಲಿ ಸೂರ್ಯ, ಗಣೇಶ, ಶಿವ, ದುರ್ಗಾ, ವಿಷ್ಣು ಮತ್ತು ಬ್ರಹ್ಮ ದೇವಾಲಯಗಳ ನಿರ್ಮಾಣವನ್ನು ಒಳಗೊಂಡಿರುತ್ತದೆ.

 

Latest Videos
Follow Us:
Download App:
  • android
  • ios