Asianet Suvarna News Asianet Suvarna News

Vastu Tips: ಮಂಗಳವಾರ ಈ ಕೆಲ್ಸಗಳ್ನ ಮಾಡಿ ಅಮಂಗಳಕ್ಕೆ ಕಾರಣವಾಗ್ಬೇಡಿ..

ಮಂಗಳವಾರ ಆಂಜನೇಯ ಹಾಗೂ ಅಂಗಾರಕನ ದಿನ. ಈ ದಿನ ಹಲವಷ್ಟು ಕಾರ್ಯಗಳನ್ನು ಮಾಡಬಾರದು. ಅದು ಏನು, ಯಾಕೆ ವಿವರಗಳು ಇಲ್ಲಿವೆ.

Avoid Doing and Buying These Things on Tuesday skr
Author
Bangalore, First Published Jan 15, 2022, 4:50 PM IST
  • Facebook
  • Twitter
  • Whatsapp

ಮಂಗಳವಾರ(Tuesday) ಮೊಟ್ಟೆ ತಿನ್ಬಾರ್ದು, ಉಗುರು ತೆಗೀಬಾರ್ದು, ಕೂದ್ಲು ಕತ್ತರಿಸ್ಬಾರ್ದು.. ಲಿಸ್ಟ್ ಬೆಳೀತಾನೇ ಹೋಗುತ್ತೆ. ಇಂಥ ಮಾತ್ಗಳ್ನೆಲ್ಲ ನಾವು ಕೇಳ್ತಾನೇ ಇರ್ತೀವಿ. ಆದ್ರೆ ಯಾಕೆ ಅನ್ನೋದಕ್ಕೆ ಮಾತ್ರ ಹೆಚ್ಚಿನ ಹಿರಿಯರ ಬಳಿ ಉತ್ರ ಇರೋಲ್ಲ. ಹಾಗಿದ್ರೆ ನಾವು ಮಂಗಳವಾರ ಏನೆಲ್ಲ ಮಾಡ್ಬಾರ್ದು ಮತ್ತು ಯಾಕಾಗಿ ಮಾಡ್ಬಾರ್ದು ಅನ್ನೋದಕ್ಕೆ ಇಲ್ಲಿದೆ ಉತ್ತರ. 

ಶೇವ್(shave) ಮಾಡಬೇಡಿ
ಮಂಗಳವಾರ ಶೇವ್ ಮಾಡುವುದಕ್ಕೆ ಬಹುತೇಕ ಎಲ್ಲ ಹಿಂದೂ ಮನೆಗಳಲ್ಲೂ ತಕರಾರು ಎದ್ದೇ ಏಳುತ್ತದೆ. ಮಂಗಳವಾರವು ಅಂಗಾರಕ(planet Mars)ನ ದಿನವಾಗಿದ್ದು, ಬಿಸಿಯೊಂದಿಗೆ ಬೆಸೆದುಕೊಂಡಿದೆ. ಈ ದಿನ ಮನುಷ್ಯನ ದೇಹಕ್ಕೆ ಹೆಚ್ಚಿನ ಪರಿಣಾಮಗಳಾಗಬಹುದು. ಮಂಗಳನು ಕೆಂಪು ಬಣ್ಣ ಹಾಗೂ ಬಿಸಿ ಇರುವ ಕಾರಣ ರಕ್ತ, ಹಾಗೂ ಕೋಪ ಎರಡೂ ಈ ದಿನ ಬೇಗ ಬರುತ್ತದೆಂಬ ನಂಬಿಕೆ ಇದೆ. ಹಾಗಾಗಿ, ಶೇವಿಂಗ್, ಹೇರ್‌ಕಟ್‌ ಕಾರ್ಯಗಳಿಗೆ ಕೈ ಹಾಕಿದರೆ ಗಾಯಗಳಾಗುವ ಸಾಧ್ಯತೆ ಮಂಗಳವಾರ ಹೆಚ್ಚು. ಶೇವಿಂಗಿಗೆ ಬುಧವಾರ ಉತ್ತಮ ದಿನ.

ಉದ್ದಿನ ಬೇಳೆ(Urad dal) ಉಪಯೋಗಿಸಬೇಡಿ
ಮಂಗಳವಾರ ಮನೆಯಲ್ಲಿ ಉದ್ದಿನ ಬೇಳೆ ಉಪಯೋಗಿಸಬಾರದು. ಉದ್ದಿನ ಬೇಳೆಯು ಶನಿ ಗ್ರಹ(planet Saturn)ದೊಂದಿಗೆ ಸಂಬಂಧ ಹೊಂದಿದೆ. ಶನಿ ಹಾಗೂ ಮಂಗಳ ಒಟ್ಟಾದರೆ ಅಂಥ ಕುಟುಂಬವು ಸಿಕ್ಕಾಪಟ್ಟೆ ಅನಾನುಕೂಲ, ಅಪಾಯಗಳನ್ನು ಎದುರಿಸಬೇಕಾಗಬಹುದು. ಮೊದಲೇ ಇವೆರಡೂ ಗ್ರಹಗಳಿಗೆ ಒಂದನ್ನು ಕಂಡರೆ ಮತ್ತೊಂದಕ್ಕಾಗುವುದಿಲ್ಲ. ಅಲ್ಲದೆ ಎರಡೂ ಮನುಷ್ಯನ ಜೀವನದಲ್ಲಿ ಸಮಸ್ಯೆಗಳನ್ನು ತಂದಿಡುವುದರಲ್ಲೂ ಎಂದೂ ಮುಂದೆ. ಹೀಗಾಗಿ, ಅವೆರಡನ್ನೂ ಒಂದೇ ದಿನ ಆಹ್ವಾನಿಸಿ, ಸುಮ್ನಿರ್ಲಾರ್ದೆ ಇರ್ವೆ ಬಿಟ್ಕಂಡಂಗೆ ಮಾಡ್ಕೋಬೇಡಿ. 

ನಿಮ್ಮ ರಾಶಿಯ Power Color ಯಾವುದು ತಿಳಿಯಿರಿ

ಉಗುರು(nails) ಕತ್ತರಿಸಬೇಡಿ
ಮಂಗಳವಾರ, ಗುರುವಾರ ಹಾಗೂ ಶನಿವಾರ ಉಗುರು ಕತ್ತರಿಸುವುದು ಅಶುಭ. ಉಗುರು, ಕೂದಲು, ಕೊಳಕಿನಂಥ ಎಲ್ಲ ತ್ಯಾಜ್ಯಗಳಿಗೂ ಶನಿಯೇ ಅಧಿಪತಿ. ಇನ್ನು ಬ್ಲೇಡು, ನೇಲ್ ಕಟ್ಟರ್, ಕತ್ತರಿ ಮುಂತಾದ ಚೂಪಾದ ವಸ್ತುಗಳಿಗೆ ಮಂಗಳನ ಅಧಿಪತ್ಯ. ಹಾಗಾಗಿ ಮಂಗಳವಾರ ಉಗುರು ಕತ್ತರಿಸುವುದು, ಇಲ್ಲವೇ ಕೂದಲು ಕತ್ತರಿಸುವುದರಿಂದ ಮಂಗಳ ಮತ್ತು ಶನಿಯ ನಡುವೆ ಗುದ್ದಾಟ ತಂದಿಟ್ಟಂತಾಗುತ್ತದೆ. ಅದರ ಪರಿಣಾಮಗಳನ್ನು ನಾವೇ ಎದುರಿಸಬೇಕಾಗುತದೆ. 

ಅಣ್ಣನೊಂದಿಗೆ ಜಗಳ ಮಾಡಬೇಡಿ
ಮಂಗಳ ಗ್ರಹವು ಅಣ್ಣ(elder brother)ನೊಂದಿಗೆ ಕಿರಿಯರ ಸಂಬಂಧವನ್ನು ನಿಯಂತ್ರಿಸುತ್ತದೆ. ಹಾಗಾಗಿ, ತಂಗಿಯೇ ಆಗಲಿ, ತಮ್ಮನಾಗಲೀ ಅಣ್ಣನೊಂದಿಗೆ ಮಂಗಳವಾರ ಜಗಳ ಮಾಡಕೂಡದು. ಒಂದು ವೇಳೆ ಮಾಡಿದರೆ ಉದ್ದೇಶ ರಹಿತವಾಗಿಯೇ ಅಣ್ಣನಿಗೆ ನೋವುಂಟು ಮಾಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದರಿಂದ ಹೆಚ್ಚು ಸಮಯದವರೆಗೆ ಇಬ್ಬರೂ ದ್ವೇಷ ಬೆಳೆಸಿಕೊಳ್ಳಬಹುದು. 

Thursday Born: ಗುರುವಾರ ಹುಟ್ಟಿದವರ ಗುಣ ಹೀಗಿರತ್ತೆ..

ಕಪ್ಪು ಬಟ್ಟೆ(black clothes) ಧರಿಸಬೇಡಿ
ಕಪ್ಪು ಬಣ್ಣವೆಂದರೆ ಆಂಜನೇಯನಿಗೂ ಇಷ್ಟವಿಲ್ಲ, ಮಂಗಳ ಗ್ರಹಕ್ಕೂ ಇಷ್ಟವಿಲ್ಲ. ಈ ದಿನ ಇವರಿಬ್ಬರಿಗೆ ಮೀಸಲಾದ್ದರಿಂದ ಹಾಗೂ ಇವರಿಬ್ಬರಿಗೂ ಕೆಂಪು, ಕೇಸರಿ ಬಣ್ಣಗಳು ಇಷ್ಟವಾದ್ದರಿಂದ ಕೆಂಪು ಬಣ್ಣದ ಬಟ್ಟೆ ತೊಡುವುದು ಉತ್ತಮ. ಇದರಿಂದ ಮಂಗಳ ದೋಷದ ಪರಿಣಾಮಗಳೂ ಕುಗ್ಗಲಿವೆ. ಬದಲಿಗೆ ಕಪ್ಪನ್ನು ಧರಿಸಿದರೆ ಬೆಳವಣಿಗೆ ಕುಗ್ಗುತ್ತದೆ, ಜೊತೆಗೆ ಮಾನಸಿಕ ತುಮುಲಗಳು ಹೆಚ್ಚಲಿವೆ. 

ನೆಲ ಅಗೆಯಬೇಡಿ
ಹನುಮಾನ್‌ನನ್ನು ಭೂಮಿಪುತ್ರ ಎಂದು ಕೂಡಾ ಕರೆಯುತ್ತೇವೆ. ಆತನ ವಿಶೇಷ ದಿನವಾದ ಮಂಗಳವಾರ ಭೂಮಿ ಅಗೆಯುವುದರಿಂದ ಆಂಜನೇಯನ ಕೋಪಕ್ಕೆ ಬಲಿಯಾಗ ಬೇಕಾಗುತ್ತದೆ. ಹಾಗಾಗಿ ಮಂಗಳವಾರ ಯಾರೂ ಮನೆ, ಮತ್ತಿತರೆ ಕಟ್ಟಡಕ್ಕೆ ಭೂಮಿ ಪೂಜೆ ಮಾಡುವುದಿಲ್ಲ, ಫೌಂಡೇಶನ್ ಹಾಕುವುದಿಲ್ಲ. ಭೂಮಿ ಪೂಜೆಗೆ ಸೋಮವಾರ ಹಾಗೂ ಗುರುವಾರ ಉತ್ತಮ ದಿನಗಳು. 

ಈ ವಸ್ತುಗಳನ್ನು ಖರೀದಿಸಬೇಡಿ
ಮಂಗಳವಾರ ಯಾವುದೇ ರೀತಿಯ ಮೇಕಪ್ ವಸ್ತುಗಳನ್ನು ಕೊಳ್ಳಬಾರದು. ಇದರಿಂದ ಸಂಬಂಧದ ನಡುವೆ ಬಿರುಕು ಉಂಟಾಗಬಹುದು. ಅಲ್ಲದೆ, ಕಪ್ಪು ಬಣ್ಣದ ಬಟ್ಟೆ ಕೂಡಾ ಮಂಗಳವಾರ ಖರೀದಿಸುವುದು ಶ್ರೇಯಸ್ಕರವಲ್ಲ. ಇದರಿಂದ ದುರದೃಷ್ಟ(bad luck) ಜೊತೆಯಾಗುತ್ತದೆ. ಇನ್ನು, ಕಬ್ಬಿಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಕೂಡಾ ಮಂಗಳವಾರ ಖರೀದಿಸಕೂಡದು. ಇದರಿಂದ ದೈಹಿಕ ನೋವುಗಳು ಉಂಟಾಗಬಹುದು. 
 

Follow Us:
Download App:
  • android
  • ios