Astrology Tips: ಶ್ರೀಮಂತರಾಗುವ ಮೊದಲು ಸಿಗುತ್ತೆ ಈ ಸೂಚನೆ

ಹಣ ಸಂಪಾದನೆ ಪ್ರತಿಯೊಬ್ಬರ ಗುರಿ. ಆದ್ರೆ ಶ್ರೀಮಂತರಾಗುವ ಕನಸು ಈಡೇರಿಸಿಕೊಳ್ಳಲು ಪ್ರಯತ್ನಬೇಕು. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತೆ, ನಿಮ್ಮ ಜೇಬಿನಲ್ಲೂ ಹಣ ತುಂಬುತ್ತೆ ಎಂಬುದನ್ನು ನಿತ್ಯ ಜೀವನದ ಕೆಲ ವಿಷ್ಯಗಳಿಂದ ತಿಳಿಯಬಹುದು.
 

Auspicious Signs According Astrology Become Rich

ವ್ಯಕ್ತಿಯ ಪರಿಸ್ಥಿತಿ ಯಾವಾಗ್ಲೂ ಒಂದೇ ರೀತಿ ಇರೋದಿಲ್ಲ. ದುಃಖ, ಸಂಕಷ್ಟದಲ್ಲಿರುವ ವ್ಯಕ್ತಿಯ ಸ್ಥಿತಿ ಕೆಲವೇ ದಿನಗಳಲ್ಲಿ ಬದಲಾಗಬಹುದು. ಖುಷಿ ಆತನ ಜೀವನದಲ್ಲಿ ಬರಬಹುದು. ಹಾಗೆಯೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿ ಕೂಡ ಸದಾ ಬಡವನಾಗಿಯೇ ಇರ್ತಾನೆ ಎಂದಲ್ಲ. ಆರ್ಥಿಕ ಪರಿಸ್ಥಿತಿ ಸುಧಾರಿಸಿ ಆತನ ಮೇಲೆ ಹಣದ ಮಳೆಯಾಗಬಹುದು. ಹಾಗಾಗಿ ಯಾವುದೇ ವ್ಯಕ್ತಿ ಈಗಿನ ಪರಿಸ್ಥಿತಿ ನೆನೆದು ಕೊರಗುತ್ತ ಕೂರಬಾರದು. ನಮ್ಮ ಮನೆಗೆ ಹಣದ ಆಗಮನವಾಗ್ತಿದೆ ಎಂಬುದನ್ನು ಕೆಲ ಸಂಕೇತಗಳ ಮೂಲಕ ನಾವು ತಿಳಿಬಹುದು. ನಿಮಗೂ ಈ ಕೆಳಗಿನ ಅನುಭವವಾಗಿದ್ದರೆ ಶೀಘ್ರದಲ್ಲಿಯೇ ಲಕ್ಷ್ಮಿ ಮನೆಗೆ ಬರ್ತಾಳೆ ಎಂಬುದನ್ನು ನೀವು ತಿಳಿಯಬಹುದು.

ಅದೃಷ್ಟ (Good Luck) ದ ಬಾಗಿಲು ತೆರೆಯುವ ಸೂಚನೆ ನೀಡುತ್ತೆ ಇದು : 

ಬಲ (Right) ಭಾಗ ಬಡಿದುಕೊಂಡ್ರೆ : ಶಾಸ್ತ್ರಗಳ ಪ್ರಕಾರ, ವ್ಯಕ್ತಿಯ ದೇಹದ ಬಲ ಭಾಗ ಕುಣಿದಂತೆ ಅನುಭವವಾದ್ರೆ ಮುಂಬರುವ ಒಳ್ಳೆಯ ದಿನಗಳ ಸಂಕೇತವಾಗಿದೆ. ಬಲ ಕೆನ್ನೆ ಮತ್ತು ತೋಳಿನ ಭಾಗ ಕುಣಿದಂತೆ ಅನುಭವವಾಗುತ್ತದೆ. ಅನೇಕ ಬಾರಿ ಕಣ್ಣು ಬಡಿದುಕೊಳ್ಳುತ್ತದೆ. ಇದನ್ನು ಮಂಗಳಕರವೆಂದು ಹೇಳಲಾಗುತ್ತದೆ. 

ಮನೆಗೆ ಇದು ಬಂದ್ರೆ ಶುಭ (Goodluck) : ನಿಮ್ಮ ಮನೆಯಲ್ಲಿ ಕಪ್ಪು ಇರುವೆಗಳ ಹಿಂಡು ಕಾಣಿಸಿಕೊಂಡರೆ ಅದು ಸಂಪತ್ತಿನ ಸಂಕೇತವಾಗಿದೆ. ನಿಮ್ಮ ಮನೆಯಲ್ಲಿ ಕಪ್ಪು ಇರುವೆಗಳ ಹಿಂಡು ಕಂಡರೆ ಲಕ್ಷ್ಮಿ ಆಶೀರ್ವಾದ ನಿಮಗೆ ಸಿಗ್ತಿದೆ ಎಂಬುದನ್ನು ಇದು ಸೂಚಿಸುತ್ತದೆ.

ಈ ಕೈ ತುರಿಸಿದ್ರೆ : ಬಲಗೈಯ ಅಂಗೈ ತುರಿಸಿದ್ರೆ ಇದು ಕೂಡ ಶುಭ ಸಂಕೇತವಾಗಿದೆ. ಶೀಘ್ರದಲ್ಲೇ ನೀವು ಶ್ರೀಮಂತರಾಗುತ್ತೀರಿ ಎಂಬುದು ಇದ್ರ ಅರ್ಥವಾಗಿದೆ.  

ಮಂದಾರದ ಗಿಡ : ನಿಮ್ಮ ಮನೆಯ ಮುಖ್ಯ ದ್ವಾರದ ಹೊರಗೆ ಮಂದಾರ ಹೂವಿನ ಗಿಡ ಬೆಳೆದರೆ ನೀವು ಶ್ರೀಮಂತರಾಗುತ್ತೀರಿ ಎಂದರ್ಥ. ಇದು ನಿಮಗೆ ಶುಭ ಸಂಕೇತವಾಗಿದೆ. ಯಾವುದಾದ್ರೂ ಮೂಲದಿಂದ ಹಣ ಬರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.

ಶವದ ಮಾಂಸ ತಿನ್ನುವುದಷ್ಟೇ ಅಲ್ಲ, ಅದರೊಂದಿಗೆ ದೈಹಿಕ ಸಂಪರ್ಕವನ್ನೂ ಬೆಳೆಸೋ ಅಘೋರಿಗಳು !

ಬೆಕ್ಕು ಮರಿ ಹಾಕಿದ್ರೆ : ಬೆಕ್ಕು, ಮರಿಗಳಿಗೆ ಜನ್ಮ ನೀಡುವುದು ಕೂಡ ಶುಭ ಸಂಕೇತವಾಗಿದೆ. ನಿಮ್ಮ ಮನೆಯಲ್ಲಿ ಬೆಕ್ಕು, ಮರಿಗಳನ್ನು ಹಾಕಿದ್ರೆ ಅದು ಮಂಗಳಕರ. ಶೀಘ್ರದಲ್ಲಿಯೇ ಆರ್ಥಿಕ ವೃದ್ಧಿಯನ್ನು ನೀವು ಕಾಣಬಹುದು. 

ಮನೆ ಮೇಲೆ ಈ ವಸ್ತು ಬಿದ್ರೆ ಶುಭ : ಮನೆಯ ಛಾವಣಿಯ ಮೇಲೆ ಬೆಲೆಬಾಳುವ ಯಾವುದೇ ವಸ್ತು ಬಿದ್ರೂ ಅದನ್ನು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಪಕ್ಷಿಯು ನಿಮ್ಮ ಮನೆಯ ಛಾವಣಿಯ ಮೇಲೆ ಬೆಲೆಬಾಳುವ ವಸ್ತುವನ್ನು ಬೀಳಿಸಿದರೆ  ಅದು ಶ್ರೀಮಂತರಾಗುವ ಸಂಕೇತವಾಗಿದೆ.

ಪಾರಿವಾಳದ ಗೂಡು : ಮನೆಯ ಅಂಗಳ, ಮರ ಅಥವಾ ಬಾಲ್ಕನಿಯಲ್ಲಿ ಪಕ್ಷಿ ಅಥವಾ ಪಾರಿವಾಳ ಗೂಡು ಮಾಡುವುದು ಸಹ ಮಂಗಳಕರ ಸಂಕೇತವಾಗಿದೆ. ಆದ್ರೆ ಪಕ್ಷಿಗಳ ಗೂಡು ಹಾಳಾದ್ರೆ, ಮುರಿದು ಕೆಳಗೆ ಬಿದ್ರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.  

ಶಂಖದ ಶಬ್ಧ: ಬೆಳಗ್ಗೆ ಎದ್ದ ತಕ್ಷಣ ಶಂಖದ ಸದ್ದು ಕೇಳುವುದೂ ಕೂಡ ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗಿದೆ. ಬೆಳಗ್ಗೆ ಎದ್ದ ನಂತರ ಶಂಖದ ಸದ್ದು ಕೇಳಿದರೆ ಶುಭ ಸಮಯ ಬರಲಿದೆ ಎಂದು ಅರ್ಥೈಸಿಕೊಳ್ಳಿ.

Kal Sarp Dosh: ಹರಿಯುವ ನೀರಲ್ಲಿ ಈ ವಸ್ತು ಹರಿಬಿಟ್ಟರೆ ಕಾಳಸರ್ಪ ದೋಷ ನಿವಾರಣೆ

ನಾಯಿ ಬಾಯಲ್ಲಿ ಸಸ್ಯಾಹಾರ : ನೀವು ಯಾವುದೇ ಕೆಲಸಕ್ಕೆ ಮನೆಯಿಂದ ಹೊರಗೆ ಹೋಗ್ತಿದ್ದರೆ ಈ ವೇಳೆ ನಾಯಿ ಬ್ರೆಡ್ ಅಥವಾ ಸಸ್ಯಾಹಾರವನ್ನು ಬಾಯಲ್ಲಿ ಕಚ್ಚಿಕೊಂಡು ಹೋಗ್ತಿರೋದು ನಿಮ್ಮ ಕಣ್ಣಿಗೆ ಬಿದ್ರೆ ಅದು ಕೂಡ ಶುಭ. ಆದಷ್ಟು ಬೇಗ ನಿಮ್ಮ ಮನೆ ಖಜಾನೆ ತುಂಬಲಿದೆ ಎಂಬುದನ್ನು ಇದು ಸೂಚಿಸುತ್ತದೆ. 

Latest Videos
Follow Us:
Download App:
  • android
  • ios