ಹಾಸನ, (ಏ.22): ಮದ್ದಿಲ್ಲದ ಕಾಯಿಲೆ ಬರುತ್ತೆ ಎಂದು ಕೋಡಿ ಮಠದ ಶ್ರೀ ಭವಿಷ್ಯ ನುಡಿದಿದ್ದರು. ಅವರ ಭವಿಷ್ಯದಂತೆ ಕೊರೋನಾ ಎನ್ನುವ ಡೆಡ್ಲಿ ವೈರಸ್‌ ಬಂದು ಇಡೀ ವಿಶ್ವವನ್ನೇ ಕಟ್ಟಿ ಕಾಡುತ್ತಿದ್ದು, ಈ ಮಾಹಾಮಾರಿಗೆ ಇನ್ನೂ ವರೆಗೂ ಔಷಧಿ ಸಿಕ್ಕಿಲ್ಲ.

ಇದೀಗ ಮತ್ತೆ ಇದೇ ಹಾಸನ ತಾಲೂಕಿನ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಕೊರೋನಾ ವೈರಸ್​ ಸೋಂಕಿನ ಕುರಿತು ಇಂದು (ಬುಧವಾರ) ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಕಿಲ್ಲರ್ ಕೊರೋನಾ ಬಗ್ಗೆ ಕೋಡಿಶ್ರೀ ಭವಿಷ್ಯ; ಒಂದು ದೇಶವೇ ಸಂಪೂರ್ಣ ನಾಶವಾಗಲಿದೆ!

ಈ ಮಾಹಾಮಾರಿ ಕೊರೋನಾದಿಂದ ಭಾರತಕ್ಕೆ ಹೆಚ್ಚಾಗಿ ಸಾವು-ನೋವು ಇಲ್ಲ. ಆದ್ರೆ, ಈಗಾಗಲೇ ವೈರಸ್‌ನಿಂದ ತತ್ತರಿಸಿರುವ ದೊಡ್ಡಣ್ಣ ಅಮೆರಿಕಾಗೆ ಇನ್ನಷ್ಟು ಅಪಾಯ ಕಟ್ಟಿಟ್ಟಬುತ್ತಿ ಎಂದು ಕೋಡಿ ಶ್ರೀಗಳು ಭವಿಷ್ಯ ಹೇಳಿದ್ದಾರೆ. ಅದರಲ್ಲೂ ಕರ್ನಾಟಕದ ಮಂತ್ರಿಗಳಿಗೆ ಕಂಟಕವಿದೆ ಎಂದು ನುಡಿದಿರುವುದು ಆಘಾತಕಾರಿಯಾಗಿದೆ.

ಭಾರತಕ್ಕಿಲ್ಲ ಗಂಡಾಂತರ
ಮೇ ಅಂತ್ಯಕ್ಕೆ ಕೊರೋನಾ ಮಹಾಮಾರಿ ಕೊನೆಯಾಲಿದ್ದು, ಈ ಗಂಡಾಂತರ ಭಾರತಕ್ಕಿಲ್ಲ. ಆದ್ರೆ, ಪ್ರಕೃತಿ ಹಾಗೂ ಸರ್ಕಾರದ ಜೊತೆ  ಜನರು ಬಹಳ ಎಚ್ಚರದಿಂದ ಸಹಕರಿಸಿದರೆ ವ್ಯಾದಿ ಶೀಘ್ರ ದೂರವಾಗಲಿದೆ ಎಂದು ಭವಿಷ್ಯ ನುಡಿದರು.

ಅಮೆರಿಕಾಗೆ ಕಾದಿದೆ ತೀವ್ರ ಗಂಡಾಂತರ
ಸಿರಿವಂತ ಮಗನುಟ್ಟಿ... ಆಳುವನು ಮುನಿಪುರವ...ಯುದ್ದವಿಲ್ಲದೆ ನುಡಿಯೆ ಪುರವೆಲ್ಲ ಕೂಳಾದೀತು...ಸಿರಿವಂತ ಮಗ ಎಂದರೆ ಟ್ರಂಪ್, ಮುನಿಪುರ ಎಂದರೆ ಅಮೆರಿಕಾ. ಅಮೆರಿಕಾಗೆ ಇನ್ನು ತೀವ್ರ ಗಂಡಾಂತರ ಇದೆ ಎಂದಿದ್ದಾರೆ.

ಯುದ್ದವಿಲ್ಲದೆ ಜನರು ಮಡಿಯುತ್ತಾರೆ ಎಂದು ಕಾಲ ಜ್ಞಾನ ಭವಿಷ್ಯ ನುಡಿದ ಶ್ರೀಗಳು, ಈ ರೋಗ ಲೋಕ ಪೀಡಕ,ಜಗತ್ತಿಗೆ ಬಂದಿರೊ‌ ಖಾಯಿಲೆ ಶೀತ ಪ್ರದೇಶಕ್ಕೆ ಹೆಚ್ಚು ಹಾನಿಮಾಡುತ್ತದೆ ಎಂದು ಹೇಳಿದರು.

"

ಕರ್ನಾಟಕ ಸೇಫ್..!
ಭಾರತದಲ್ಲಿ ದೊಡ್ಟಮಟ್ಟದ ಸಾವು ನೋವು ಆಗುವುದಿಲ್ಲ. ಅದರಲ್ಲೂ ಕರ್ನಾಟಕಕ್ಕೆ ಯಾವುದೇ ಹೆಚ್ಚಿನ ತೊಂದರೆ ಇಲ್ಲ. ಆದ್ರೆ, ಜನರ ಬೇಜವಾಬ್ದಾರಿಯಿಂದ ಕೆಲ ಸಮಸ್ಯೆ ಆಗುತ್ತಿದೆ. ಜನರು ಸರ್ಕಾರ ಹಾಗೂ ವೈದ್ಯರ ಸಲಹೆ ಪಾಲಿಸಬೇಕು ಎಂದು ಸಲಹೆ ನೀಡಿದರು.

ಕೊರೋನಾದಿಂದ‌ ನಾಡ‌ ಅರಸನಿಗೆ ಕಂಟಕ ಇಲ್ಲಾ. ಜನರಿಗೆ, ಕೆಲ‌ ಮಂತ್ರಿಗಳಿಗೆ ಕಂಟಕ‌ ಇದೆ ಎಂದು ಆಘಾತಕಾರಿ ಭವಿಷ್ಯ ನುಡಿದರು.