Asianet Suvarna News Asianet Suvarna News

ಈ ರಾಶಿಯವರ ಮನಸ್ಸಿಗೆ ಎಂದೂ ನೋವು ಮಾಡಬೇಡಿ, ಸೇಡು ತೀರಿಸಿಕೊಳ್ತಾರೆ!

ಕೆಲವು ರಾಶಿಯವರು ತಮ್ಮ ಸುತ್ತಮುತ್ತಲಿನವರಿಂದ ತಮಗಾಗಿ ಮೆಚ್ಚುಗೆ, ತಮ್ಮ ಕೆಲಸಕ್ಕೆ ಶ್ಲಾಘನೆಗಳನ್ನು ಬಯಸುತ್ತಾರೆ. ಅದನ್ನು ನೀವು ನೀಡದಿದ್ದರೆ ಅದನ್ನೇ ನೆನಪಿನಲ್ಲಿಟ್ಟುಕೊಂಡು ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. ಇವರ್ಯಾರು? ನೀವೂ ಇದ್ದೀರಾ ಇವರ ಪಟ್ಟಿಯಲ್ಲಿ? ನೋಡಿಕೊಳ್ಳಿ.

Aries Leo Capricorn Scorpion zodiac signs take revenge for sure
Author
Bengaluru, First Published Aug 30, 2021, 5:27 PM IST

ಕೆಲವರನ್ನು ನೀವು ನೋಡಿರಬಹುದು. ಇತರರು ತಮ್ಮ ಕಾರ್ಯದಲ್ಲಿ ನಿರತರಾಗಿ ಇವರನ್ನು ಪರಿಗಣಿಸದಿದ್ದರೆ, ಮುಗಿದೇ ಹೋಯಿತು, ದ್ವೇಷ ಕಾರುತ್ತಾರೆ. ಇವರು ಯಾವಾಗಲೂ ಗಮನ ಮತ್ತು ಪ್ರೀತಿಯನ್ನು ಬಯಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು, ಅವರನ್ನು ಪ್ರೀತಿಪಾತ್ರರು ಗಮನಿಸದಿದ್ದಾಗ, ತೀವ್ರವಾಗಿ ಕುಗ್ಗಿ ದ್ವೇಷದ ಹಂತಕ್ಕೆ ತಲುಪಿಬಿಡುತ್ತಾರೆ. ಸೇಡು ತೀರಿಸಿಕೊಳ್ತಾರೆ. ಈ ಗುಣವಿರುವ ರಾಶಿಗಳು ಯಾವುವು ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ.

ಮೇಷ ರಾಶಿ
ಇವರು ನಿಮ್ಮಿಂದ ಸದಾ ಮೆಚ್ಚುಗೆ ಮಾತುಗಳನ್ನು ಬಯಸುತ್ತಾ ಇರುತ್ತಾರೆ. ಒಂದು ವೇಳೆ ನೀವು ತೊಂಬತ್ತೊಂಬತ್ತು ಬಾರಿ ಅವರನ್ನು ಹೊಗಳಿ, ಒಂದು ಬಾರಿ ಹೊಗಳದೇ ಹೋದರೂ ಅದನ್ನೇ ಮನಸ್ಸಲ್ಲಿ ಇಟ್ಟುಕೊಂಡು ಕೊರಗುತ್ತಾರೆ ಹಾಗೂ ನಿಮ್ಮ ಮೇಲೆ ದ್ವೇಷ ಸೃಷ್ಟಿಸಿಕೊಳ್ಳುತ್ತಾರೆ. ಇವರನ್ನು ಮೆಚ್ಚಿಸುವುದು ಬಹಳ ಕಷ್ಟ. ಇಂಥವರು ನಿಮ್ಮ ಅಪ್ತರಾಗಿದ್ದರೆ ನೀವು ಅವರನ್ನು ಟೀಕಿಸುವ ಮುನ್ನ ಎಚ್ಚರವಾಗಿರಬೇಕು. ಯಾಕೆಂದರೆ ತಾವು ಮಾಡಿದ್ದೇ ಸರಿ ಎಂಬುದು ಅವರ ಮನದಲ್ಲಿ ಇರುತ್ತದೆ. ಇವರ ಸ್ವಾಭಿಮಾನವನ್ನು ಭಂಗಿಸಿದರೆ ನಿಮಗೆ ಕಷ್ಟ ಕಟ್ಟಿಟ್ಟ ಬುತ್ತಿ.

ಜನ್ಮರಾಶಿಗೆ ತಕ್ಕಂತೆ ನಿಮ್ಮ ಪರ್ಸನಾಲಿಟಿಯ ಎರಡು ಮುಖ ನಿಮಗೆ ಗೊತ್ತೇ?

ಸಿಂಹ ರಾಶಿ
ಸಿಂಹ ರಾಶಿಯವರು ಗಮನಾಕಾಂಕ್ಷಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದಾರೆ. ಇವರು ಮೇಲೆ ಎಲ್ಲರ ಕಣ್ಣುಗಳು ತಮ್ಮ ಮೇಲೆ ಇರಬೇಕೆಂದು ಬಯಸುತ್ತಾರೆ. ಅವರು ಏನೇ ಮಾಡಿದರೂ ಇತರರ ಗಮನ ಸೆಳೆಯಲು ಮಾಡುತ್ತಾರೆ. ಈ ಗಮನವು ಎಲ್ಲಿಯವರೆಗೆ ಒಳ್ಳೆಯದು ಅಥವಾ ಕೆಟ್ಟದ್ದು ಎನ್ನುವುದು ಇವರಿಗೆ ಬೇಕಾಗುವುದಿಲ್ಲ. ಜನರನ್ನು ತಮ್ಮೆಡೆಗೆ ಸೆಳೆಯಲು ಅವರು ಏನು ಬೇಕಾದರೂ ಮಾಡುತ್ತಾರೆ ಮತ್ತು ಯಾವಾಗಲೂ ಜನಮನದಲ್ಲಿರಲು ಬಯಸುತ್ತಾರೆ. ನೀವು ಅವರನ್ನು ನಿರ್ಲಕ್ಷಿಸಿದರೆ, ಆ ಕ್ಷಣದಿಂದಲೇ ಹೆಡೆ ತುಳಿದ ಹಾವು ಆಗಿಬಿಡುತ್ತಾರೆ.

ಕುಂಭ ರಾಶಿ
ಕುಂಭ ರಾಶಿಯಲ್ಲಿ ಜನಿಸಿದವರು ಇತರರು ಅವರನ್ನು ಮೆಚ್ಚಬೇಕು ಮತ್ತು ಅವರ ಸಾಧನೆಗಳನ್ನು ಪುರಸ್ಕರಿಸಬೇಕೆಂದು ಬಯಸುತ್ತಾರೆ. ಖಚಿತವಾಗಿ ಹೇಳುವುದಾದರೆ, ಅವರು ಮಹತ್ವಾಕಾಂಕ್ಷೆಯ ಮತ್ತು ದೃಢ ನಿಶ್ಚಯದವರಾಗಿರುತ್ತಾರೆ. ತಮ್ಮ ಕೆಲಸ ಸದಾ ಶ್ರೇಷ್ಠವಾಗಿರಬೇಕೆಂದು ಬಯಸುತ್ತಾರೆ. ಯಾರಾದರೂ ತಮ್ಮನ್ನು ಸದಾ ಹೊಗಳಲು ಮತ್ತು ಅವರ ಸಾಧನೆಗಳ ಬಗ್ಗೆ ಹೇಳಬೇಕೆಂದು ಅವರು ಬಯಸುತ್ತಾರೆ. ಇವರು ಲೇಖಕ ಅಥವಾ ಕಲಾವಿದರಾದರೆ, ಮೆಚ್ಚುಗೆ ಇಲ್ಲದೆ ಬದುಕುಳಿಯಲಾರರು. ಟೀಕಿಸಿದರೆ ಅಂಥವರ ಮೇಲೆ ಕೆಂಡ ಕಾಡುತ್ತಾರೆ.

ಮಹಾಭಾರತದಲ್ಲಿ ಶ್ರೀಕೃಷ್ಣನ ಎಂಬತ್ತು ಮಕ್ಕಳೆಲ್ಲಾ ಏನಾದರು?

ಮಿಥುನ ರಾಶಿ
ಮಿಥುನ ರಾಶಿಯವರು ಸಾಮಾಜಿಕವಾಗಿ ಬೆರೆಯುವವರು. ಯಾರಾದರೂ ಯಾವಾಗಲೂ ಅವರೊಂದಿಗೆ ಇರಬೇಕೆಂದು ಅವರು ಬಯಸುತ್ತಾರೆ. ಅವರು ಏಕಾಂಗಿಯಾಗಿ ಅಥವಾ ಇತರರ ಗಮನಕ್ಕೆ ಬಾರದ ಕೆಲಸಗಳನ್ನು ಮಾಡುವ ಕಲ್ಪನೆಯನ್ನು ದ್ವೇಷಿಸುತ್ತಾರೆ. ಅವರು ಇತರರ ಸಹವಾಸವನ್ನು ಬಯಸುತ್ತಾರೆ ಮತ್ತು ಜನರು ತಮ್ಮನ್ನು ಸುತ್ತುವರೆದು ತಮ್ಮನ್ನೇ ಪ್ರೀತಿಸಬೇಕೆಂದು ಅವರು ಬಯಸುತ್ತಾರೆ. ಇವರು ತಮ್ಮ ಒಡಹುಟ್ಟಿದವರನ್ನೇ ಇನ್ಯಾರಾದರೂ ಹೆಚ್ಚು ಪ್ರೀತಿಸಿದರೆ, ಮೆಚ್ಚಿದರೆ, ನೊಂದುಕೊಂಡು, ಆ ಸಿಟ್ಟು ತೀರಿಸಿಕೊಳ್ಳಲು ಸಮಯ ಹುಡುಕುತ್ತಾ ಇರುತ್ತಾರೆ.

Aries Leo Capricorn Scorpion zodiac signs take revenge for sure

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ತಾವು ಎಲ್ಲರಿಗಿಂತ ಉತ್ತಮ ಎಂದು ಭಾವಿಸುತ್ತಾರೆ. ಈ ಗುಣದಿಂದಲೇ ಜನರು ಸ್ವಯಂಪ್ರೇರಿತರಾಗಿ ತಮ್ಮತ್ತ ಆಕರ್ಷಿತರಾಗಬೇಕು ಎಂದು ಅವರು ನಂಬುತ್ತಾರೆ. ಜನರು ತಮ್ಮ ನಿಗೂಢ ವ್ಯಕ್ತಿತ್ವ ಮತ್ತು ಸೆಳೆತದಿಂದ ಕುತೂಹಲಕ್ಕೆ ಮತ್ತು ಮಂತ್ರಮುಗ್ಧರಾಗಬೇಕೆಂದು ಅವರು ಬಯಸುತ್ತಾರೆ. ಆದ್ದರಿಂದ ಯಾರಾದರೂ ಅವರನ್ನು ನಿರ್ಲಕ್ಷಿಸಿದಾಗ ಅಥವಾ ಅವರನ್ನು ಸಾಮಾನ್ಯರ ರೀತಿಯಲ್ಲಿ ಪರಿಗಣಿಸಿದಾಗ ಅವರು ಅದನ್ನು ಸಹಿಸುವುದಿಲ್ಲ. ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಳ್ಳುವ ವಿದ್ಯೆಗಳು ಇವರಿಗೆ ಕರತಲಾಮಲಕ.

ರಾಶಿಚಕ್ರದ ಪ್ರಕಾರ ಯಾವ ಬಣ್ಣ ಯಾರಿಗೆ ಅದೃಷ್ಟ ತರುತ್ತದೆ?

Follow Us:
Download App:
  • android
  • ios