Asianet Suvarna News Asianet Suvarna News

ಏ. 20ಕ್ಕೆ ಮೊದಲ ಸೂರ್ಯಗ್ರಹಣ, ಈ ನಿಯಮ ಅನುಸರಿಸದಿದ್ದರೆ ಕೆಟ್ಟ ಪರಿಣಾಮ!

ಇನ್ನೆರಡು ದಿನಗಳಲ್ಲಿ ಸೂರ್ಯಗ್ರಹಣ. ಇದು ಈ ವರ್ಷದ ಮೊದಲ ಸೂರ್ಯಗ್ರಹಣ. ಈ ಗ್ರಹಣವಾಗೋ ಸಮಯ ಯಾವುದು? ಆಗ ಯಾವ ನಿಯಮ ಪಾಲಿಸಬೇಕು ಅನ್ನುವ ವಿವರ ಇಲ್ಲಿದೆ.

April 20 Solar eclipse side effects
Author
First Published Apr 18, 2023, 1:23 PM IST

ಏಪ್ರಿಲ್ 20 ಗುರುವಾರ ವೈಶಾಖ ಅಮವಾಸ್ಯೆಯ ಸಮಯದಲ್ಲಿ ಸೂರ್ಯಗ್ರಹಣ ಘಟಿಸುತ್ತಿದೆ. ಇದು 2023ನೇ ವರ್ಷದ ಮೊದಲ ಸೂರ್ಯಗ್ರಹಣ. ಭಾರತದಲ್ಲಿ ಇದು ಅಷ್ಟಾಗಿ ಗೋಚರಿಸದು. ಆದರೆ ಇದರ ಪರಿಣಾಮ ಇಲ್ಲ ಎನ್ನಲಾಗದು. ವಿಶ್ವದ ವಿವಿಧ ಭಾಗಗಳಿಂದ ಇದು ಗೋಚರಿಸುತ್ತದೆ. ಈ ವರ್ಷದಲ್ಲಿ ಎರಡು ಚಂದ್ರಗ್ರಹಣಗಳು ಮತ್ತು ಎರಡು ಸೂರ್ಯಗ್ರಹಣಗಳು ಸೇರಿದಂತೆ ಒಟ್ಟು ನಾಲ್ಕು ಗ್ರಹಣ ಸಂಭವಿಸಲಿವೆ. ಇನ್ನು ಈ ಬಾರಿಯ ಗ್ರಹಣದ ಬಗ್ಗೆ ಹೇಳೋದಾದ್ರೆ ಭಾರತೀಯ ಜ್ಯೋತಿಷ್ಯ ಕ್ಯಾಲೆಂಡರ್ ಪ್ರಕಾರ 2023 ರ ಮೊದಲ ಸೂರ್ಯಗ್ರಹಣ ಬೆಳಿಗ್ಗೆ 07:04 ಕ್ಕೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ 12:29 ಕ್ಕೆ ಕೊನೆಗೊಳ್ಳುತ್ತದೆ. ನಮ್ಮ ದೇಶದಲ್ಲಿ ಇದು ಗೋಚರಿಸುವುದಿಲ್ಲ. ಆದರೆ ಪರಿಣಾಮಗಳನ್ನು ಅಲ್ಲಗಳೆಯುವಂತಿಲ್ಲ. ಎರಡನೇ ಸೂರ್ಯಗ್ರಹಣ ಅಕ್ಟೋಬರ್ 14, 2023 ರಂದು ಸಂಭವಿಸುತ್ತದೆ. ಈ ಗ್ರಹಣವನ್ನು ನಾವು ನೋಡಬಹುದು. ಅಂದರೆ ಇದು ಭಾರತದಿಂದ ಗೋಚರಿಸುತ್ತದೆ.

ಗ್ರಹಣ ಸಂಭವಿಸುತ್ತದೆ ಅಂದಾಗ ವಿವಿಧ ರಾಶಿಗಳ ಮೇಲೆ ಪ್ರಭಾವ ಬೀರೋದು ಸಹಜ. ಈ ಗ್ರಹಣದಿಂದ ವೃಷಭ ರಾಶಿಯ ವಿದ್ಯಾರ್ಥಿಗಳ ಹಾದಿ ಸುಗಮವಾಗುತ್ತದೆ. ಮೇಷ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು. ಮಿಥುನ ರಾಶಿಯವರಿಗೆ ಕುಟುಂಬದಲ್ಲಿ ಕೆಲವು ಸಮಸ್ಯೆ ಉಂಟಾಗಬಹುದು. ಕಟಕ ರಾಶಿವರಿಗೆ ಪ್ರಮೋಶನ್, ವೇತನದಲ್ಲಿ ಹೆಚ್ಚಳ ಇತ್ಯಾದಿ ಅನುಕೂಲಗಳಾಗಬಹುದು. ಸಿಂಹ ರಾಶಿಯವರ ತಂದೆಯವರಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು. ಉಳಿದಂತೆ ವಿವಿಧ ರಾಶಿಗಳ ಮೇಲೆ ಈ ಸೂರ್ಯಗ್ರಹಣದ ಪರಿಣಾಮಗಳಿವೆ. ಒಟ್ಟಾರೆಯಾಗಿ ಹೇಳಬೇಕು ಅಂದರೆ ಇದು ಮೇಷ, ಕರ್ಕ, ತುಲಾ ಮತ್ತು ಮಕರ ರಾಶಿಯ ಜನರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದರೊಂದಿಗೆ, ವೃಷಭ, ಸಿಂಹ, ವೃಶ್ಚಿಕ ಮತ್ತು ಕುಂಭ ರಾಶಿಯ ಜನರಲ್ಲಿ ಕೆಲವು ಗಮನಾರ್ಹ ಬದಲಾವಣೆಗಳನ್ನು ಸಹ ಗಮನಿಸಬಹುದು.

ಈ ದೇವಾಲಯದಲ್ಲಿ ದುರ್ಗೆಗೆ ನಿತ್ಯ ಪೂಜಿಸುವುದು ಮುಸ್ಲಿಂ ಅರ್ಚಕ!

ಆದರೆ ಈ ಸಮಯದಲ್ಲಿ ಕೆಲವು ವಿಶೇಷ ನಿಯಮಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಂಬಲಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಕೆಲವು ವಿಶೇಷ ವಿಷಯಗಳನ್ನು ಅನುಸರಿಸಬೇಕಾಗುತ್ತದೆ.

ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯ, ಪೂಜೆ, ಶಾಪಿಂಗ್ ಮಾಡಬಾರದು. ಈ ಸಮಯದಲ್ಲಿ ಸೂರ್ಯನಿಗೆ(Sun) ಏನ್ನನ್ನೂ ಅರ್ಪಿಸುವುದಿಲ್ಲ. ತುಳಸಿ ಮತ್ತು ಯಾವುದೇ ಪೂಜಿಸಬಹುದಾದ ಮರಗಳು ಮತ್ತು ಸಸ್ಯಗಳಿಗೆ ನೀರನ್ನು ಅರ್ಪಿಸುವುದು ಬೇಡ. ಈ ಸಮಯದಲ್ಲಿ ಮಲಗಬಾರದು. ಹೀಗೆ ಮಾಡುವುದರಿಂದ ಜೀವನದಲ್ಲೆ ಕೆಟ್ಟ ಪರಿಣಾಮಗಳು ಬೀರುತ್ತವೆ ಎಮದು ಹೇಳಲಾಗುತ್ತದೆ, ತೀರಾ ಅನಿವಾರ್ಯತೆಯ ಹೊರತಾಗಿ ಆಹಾರಗಳ ಸೇವನೆ ಈ ಅವಧಿಯಲ್ಲಿ ಬೇಡ. ವೃದ್ಧರು ಮತ್ತು ಅನಾರೋಗ್ಯದ ವ್ಯಕ್ತಿಗಳಿಗೆ ವಿನಾಯಿತಿ ಇದೆ. ಮಾತ್ರವಲ್ಲದೆ ಈ ಸಮಯದಲ್ಲಿ ಆಹಾರವನ್ನು(Food) ಬೇಯಿಸಬಾರದು ಅಥವಾ ಸೇವಿಸಬಾರದು. ಈ ದಿನದಂದು ಗರ್ಭಿಣಿಯರು(Pregnent) ವಿಶೇಷ ಕಾಳಜಿ ವಹಿಸಬೇಕು. ಆರಂಭದಿಂದ ಗ್ರಹಣ ಮುಗಿಯುವವರೆಗೆ ಮನೆಯಿಂದ ಹೊರಬರಬಾರದೇ ಇರುವುದು ಉತ್ತಮ. ಸೂಜಿ, ಕತ್ತರಿ, ಚಾಕು ಮುಂತಾದ ಚೂಪಾದ ವಸ್ತುಗಳನ್ನು ಬಳಸಬಾರದು.

ಗ್ರಹಣಕ್ಕೂ ಮೊದಲು ಧಾನ್ಯಗಳು ಮತ್ತು ನೀರಲ್ಲಿ ತುಳಸಿ ದಳ ಬೆರೆಸಿ ಇಡಿ. ಇದರಿಂದ ಗ್ರಹಣದ ದುಷ್ಪರಿಣಾಮಗಳಿಂದ ನಿಮ್ಮನ್ನು ನೀವು ರಕ್ಷಿಸಬಹುದು. ಗ್ರಹಣದ(Eclipse) ನಂತರ ದಾನ ಮಾಡಬಹುದು. ಗಂಗಾಜಲದಿಂದ ಗಂಗಾಜಲವನ್ನು ಸಿಂಪಡಿಸಿ ಇಡೀ ಮನೆಯನ್ನು ಶುದ್ಧೀಕರಿಸಿ. ಈ ಸಮಯ ಪೂಜೆಯನ್ನು ನಿಷೇಧಿಸಿದರೂ ಮಂತ್ರವನ್ನು ಪಠಿಸುವುದು ಉತ್ತಮ. 'ತಮೋಮಯ ಮಹಾಭೀಂ ಸೋಮಸೂರ್ಯವಿಮರ್ದನ' ಮಂತ್ರ ಅಥವಾ ಮಹಾಮೃತ್ಯುಂಜಯ ಮಂತ್ರ ಪಠಿಸುವುದು ಉತ್ತಮ. 

Venus Transit: ಶುಕ್ರನ ಯೌವನ ಪ್ರವೇಶದಿಂದ 4 ರಾಶಿಗಳಿಗೆ ಲಾಭ

Follow Us:
Download App:
  • android
  • ios