Asianet Suvarna News Asianet Suvarna News

ಮುಂಬೈ ಛಾಯಾ​ಗ್ರಾ​ಹ​ಕಿ ತೆಗೆದ Deepavali ಫೋಟೋ ಶೇರ್‌ ಮಾಡಿ ಮೆಚ್ಚಿದ ಆ್ಯಪಲ್‌ ಸಿಇಒ

ಅಪೇಕ್ಷಾ ಮೇಕರ್ ಅವರು ಟಿಮ್‌ ಕುಕ್ ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಆ್ಯಪಲ್‌ ಸಿಇಒ ತನ್ನ ಚಿತ್ರಗಳಲ್ಲಿ ಒಂದನ್ನು ಹಂಚಿಕೊಳ್ಳುವುದನ್ನು ನೋಡಿ "ವಿನಮ್ರಳಾಗಿದ್ದೇನೆ" ಎಂದು ಹೇಳಿದರು. 

apple ceo tim cook shares mumbai photographers diwali image calls it beautiful ash
Author
First Published Oct 25, 2022, 12:13 PM IST

ಮುಂಬೈ (ಅಕ್ಟೋಬರ್ 25): ಮುಂಬೈ (Mumbai) ಮೂಲದ ಛಾಯಾ​ಗ್ರಾ​ಹ​ಕಿ (Photographer) ಅಪೇಕ್ಷಾ ಮೇಕರ್‌ (Apeksha Maker) ದೀಪಾ​ವ​ಳಿ (Diwali) ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಐಫೋನ್‌ನಿಂದ (iPhone) ತೆಗೆದ ಚಿತ್ರವೊಂದನ್ನು ಆ್ಯಪಲ್‌ ಸಿಇಓ (Apple CEO) ಟಿಮ್‌ ಕುಕ್‌ (Tim Cook) ತಮ್ಮ ಟ್ವಿಟ್ಟರ್‌ (Twitter) ಖಾತೆಯಲ್ಲಿ ಹಂಚಿ​ಕೊಳ್ಳುವ ಮೂಲಕ ಹಬ್ಬದ ಶುಭಾ​ಶ​ಯ​ಗ​ಳನ್ನು ತಿಳಿ​ಸಿ​ದ್ದಾ​ರೆ. ಸುತ್ತಲೂ ಇರುವ ಮಣ್ಣಿನ ಸುಂದರ ದೀಪವನ್ನು ಗೋರಂಟಿ ಹಾಕಿ​ರುವ ಯುವ​ತಿಯ ಕೈ ದೀಪ ಆರ​ದಂತೆ ಸುತ್ತು​ವ​ರೆ​ದಿ​ರುವ ಹಾಗೆ ಇರುವ ಚಿತ್ರ ಆಕ​ರ್ಷ​ಕ​ವಾ​ಗಿದೆ. ಈ ಕುರಿತು ಟಿಮ್‌ ಕುಕ್‌, ದೀಪಾ​ವ​ಳಿ​ಯನ್ನು ಬೆಳ​ಕಿನ ಹಬ್ಬ ಎಂದು ಏಕೆ ಕರೆ​ಯು​ತ್ತಾ​ರೆಂಬು​ದನ್ನು ಈ ಚಿತ್ರ ಸುಂದ​ರ​ವಾಗಿ ವಿವ​ರಿ​ಸು​ತ್ತ​ದೆ’ ಎಂದು ಬರೆ​ದು​ಕೊಂಡಿ​ದ್ದಾ​ರೆ.

ಅಪೇಕ್ಷಾ ಮೇಕರ್ ಅವರು ಟಿಮ್‌ ಕುಕ್ ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಆ್ಯಪಲ್‌ ಸಿಇಒ ತನ್ನ ಚಿತ್ರಗಳಲ್ಲಿ ಒಂದನ್ನು ಹಂಚಿಕೊಳ್ಳುವುದನ್ನು ನೋಡಿ "ವಿನಮ್ರಳಾಗಿದ್ದೇನೆ" ಎಂದು ಹೇಳಿದರು. "ದೀಪಾವಳಿಗಾಗಿ #ಟಿಮ್‌ಕುಕ್ @ಆ್ಯಪಲ್‌ ನನ್ನ #ಶಾಟ್‌ಆನ್‌ಐಫೋನ್ ಚಿತ್ರವನ್ನು ಪೋಸ್ಟ್ ಮಾಡಿದ್ದನ್ನು ನೋಡಿ ವಿನಮ್ರಳಾಗಿದ್ದೇನೆ ಮತ್ತು ಉತ್ಸಾಹವುಂಟಾಗಿದೆ! ನಿಮ್ಮೆಲ್ಲರಿಗೂ (ದೀಪಾವಳಿ) ಸಮೃದ್ಧಿಯಾಗಲಿ ಎಂದು ಹಾರೈಸುತ್ತೇನೆ" ಎಂದೂ ಮಹಾರಾಷ್ಟ್ರ ರಾಜಧಾನಿ ಮುಂಬೈನ ಅಪೇಕ್ಷಾ ಮೇಕರ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ: Apple CEO Earnings 2021ರಲ್ಲಿ ಊಹೆಗೂ ನಿಲುಕದ ಆದಾಯ ಗಳಿಸಿದ ಆ್ಯಪಲ್ ಸಿಇಒ ಟಿಮ್ ಕುಕ್!

ಅಪೇಕ್ಷಾ ಮೇಕರ್ ಅವರ ಇನ್ಸ್ಟಾಗ್ರಾಮ್‌ ಬಯೋ ಪ್ರಕಾರ, ಅವರು ವೃತ್ತಿಪರ ಛಾಯಾಗ್ರಾಹಕಿಯಾಗಿದ್ದಾರೆ. ಅವರು ಕಿಯಾರಾ ಅಡ್ವಾಣಿ, ದೀಪಿಕಾ ಪಡುಕೋಣೆ ಮತ್ತು ಅನುಷ್ಕಾ ಶರ್ಮಾ ಸೇರಿದಂತೆ ಪ್ರಸಿದ್ಧ ಸೆಲೆಬ್ರಿಟಿಗಳೊಂದಿಗೆ ಹಾಗೂ ಟಾಪ್ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. ಅಪೇಕ್ಷಾ ಅವರು ಹೌಸ್ ಆಫ್ ಪಿಕ್ಸೆಲ್ಸ್‌ ಎಂಬ ಕಂಪನಿಯ ಸ್ಥಾಪಕಿಯೂ ಆಗಿದ್ದಾರೆ.

 
 
 
 
 
 
 
 
 
 
 
 
 
 
 

A post shared by Apeksha Maker (@amaker7)

9 ವರ್ಷದ ಬಾಲಕಿಯನ್ನು ಪ್ರಶಂಸಿಸಿದ್ದ ಟಿಮ್ ಕುಕ್
ಈ ಮಧ್ಯೆ, ಕಳೆದ ತಿಂಗಳು, ಟಿಮ್ ಕುಕ್ ದುಬೈನಲ್ಲಿ ವಾಸಿಸುವ 9 ವರ್ಷದ ಬಾಲಕಿಯನ್ನು ಐಫೋನ್‌ಗಳಿಗಾಗಿ ಐಒಎಸ್ ಅಪ್ಲಿಕೇಶನ್ ವಿನ್ಯಾಸಗೊಳಿಸಿದ್ದಕ್ಕಾಗಿ ಪ್ರಶಂಸಿಸಿದ್ದರು. ಹನಾ ಮುಹಮ್ಮದ್ ರಫೀಕ್ ಎಂಬ ಬಾಲಕಿ, ತಾನು ಅತ್ಯಂತ ಕಿರಿಯ ಐಒಎಸ್ ಡೆವಲಪರ್ ಎಂದು ಆ್ಯಪಲ್‌ ಸಿಇಒಗೆ ಹೇಳಿಕೊಂಡಿದ್ದಳು. ಮಕ್ಕಳಿಗೆ ಕಥೆಗಳನ್ನು ರೆಕಾರ್ಡ್ ಮಾಡಲು ಪೋಷಕರಿಗೆ ಅನುಮತಿಸುವ ಸ್ಟೋರಿ ಟೆಲ್ಲಿಂಗ್ ಹೇಳುವ ಅಪ್ಲಿಕೇಶನ್ "ಹನಾಸ್" (Hanas) ಅನ್ನು ಬಾಲಕಿ ಅಭಿವೃದ್ಧಿಪಡಿಸಿದ್ದಳು.

ಇದನ್ನೂ ಓದಿ: ಭಾರತದಲ್ಲಿ ದುಪ್ಪಟ್ಟುಗೊಂಡ ಆಪಲ್ ಬಿಸಿನೆಸ್, ಹಬ್ಬದ ಸೀಸನ್ ಕಾರಣ?

ತನ್ನ ಅಪ್ಲಿಕೇಶನ್ ಮತ್ತು ಇತರ ಸಾಧನೆಗಳನ್ನು ವಿವರಿಸಿದ ಆಕೆಯ ಇಮೇಲ್‌ಗೆ ಪ್ರತಿಕ್ರಿಯೆಯಾಗಿ, ಆ್ಯಪಲ್‌ ಸಿಇಒ ಅವಳನ್ನು ಅಭಿನಂದಿಸಿದ್ದರು. "ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಮ್ಮ ಎಲ್ಲಾ ಪ್ರಭಾವಶಾಲಿ ಸಾಧನೆಗಳಿಗೆ ಅಭಿನಂದನೆಗಳು. ಇದನ್ನು ಮುಂದುವರಿಸಿ ಮತ್ತು ಭವಿಷ್ಯದಲ್ಲಿ ನೀವು ಅದ್ಭುತವಾದ ಕೆಲಸಗಳನ್ನು ಮಾಡುತ್ತೀರಿ" ಎಂದೂ ಆ್ಯಪಲ್‌ ಸಿಇಒ ಟಿಮ್ ಕುಕ್‌ ಇ - ಮೇಲ್‌ನಲ್ಲಿ ಬರೆದಿದ್ದರು. 

Follow Us:
Download App:
  • android
  • ios