Asianet Suvarna News Asianet Suvarna News

ಪ್ರತಿ ರಾಶಿಗೊಂದು ವಿಶೇಷ ಗುಣ, ನಿಮ್ಮದ್ಯಾವ ರಾಶಿ….!?

ವ್ಯಕ್ತಿಯ ಜಾತಕವನ್ನು ನೋಡುವಾಗ ರಾಶಿಗುಣಗಳನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತಾರೆ. ಆಯಾ ರಾಶಿಗೆ ಅದರದ್ದೇ ಆದ ವಿಶೇಷ ಗುಣ, ಸ್ವಭಾವಗಳಿರುತ್ತವೆ. ರಾಶಿಯ ಆಧಾರದ ಮೇಲೆ ವ್ಯಕ್ತಿಯ ಗುಣಗಳನ್ನು ಹೇಳಬಹುದಾಗಿದೆ. ಪ್ರತಿ ರಾಶಿಯ ವ್ಯಕ್ತಿಗಳು ಒಂದಿಲ್ಲೊಂದು ವಿಶೇಷ ಗುಣವನ್ನು ಹೊಂದಿರುತ್ತಾರೆ. ಹಾಗಾದರೆ ಆಯಾ ರಾಶಿಯವರ ವಿಶೇಷ ಗುಣಗಳ ಬಗ್ಗೆ ತಿಳಿಯೋಣ..

All Zodiac sign has its special nature  what is yours
Author
Bangalore, First Published Oct 7, 2020, 7:29 PM IST

ಜ್ಯೋತಿಷ್ಯ ಶಾಸ್ತ್ರದಲ್ಲಿ ಹನ್ನೆರಡು ರಾಶಿಗಳು. ಪ್ರತಿ ರಾಶಿಗೆ ಅದರದ್ದೇ ಆದ ಗುಣ, ಸ್ವಭಾವಗಳು ಮತ್ತು ಅಧಿಪತಿಗಳು. ವ್ಯಕ್ತಿಯ ರಾಶಿಯ ಆಧಾರದ ಮೇಲೆ ಗುಣ, ಸ್ವಭಾವಗಳನ್ನು ಹೇಳಬಹುದಾಗಿದೆ. 

ಅಗ್ನಿ,ಪೃಥ್ವಿ, ವಾಯು ಮತ್ತು ಜಲ ತತ್ತ್ವರಾಶಿಗಳೆಂದು ವಿಂಗಡಿಸಲಾಗಿದೆ. ಪ್ರತಿ ರಾಶಿಯು ಒಂದೊಂದು ತತ್ತ್ವದಡಿಯಲ್ಲಿ ಬರುತ್ತದೆ. ಈ ತತ್ತ್ವಗಳು ಸಹ ರಾಶಿಯ ಗುಣ, ಸ್ವಭಾವಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಹಾಗೆಯೇ ಪ್ರತಿ ರಾಶಿಗೂ ಅಧಿಪತಿಯಾಗಿ ಒಂದೊಂದು ಗ್ರಹಗಳಿರುತ್ತವೆ. ಆ ಗ್ರಹಗಳು ಸಹ ರಾಶಿಯ ಗುಣವನ್ನು ನಿರ್ಧರಿಸುವಲ್ಲಿ ಸಹಾಯಕವಾಗುತ್ತವೆ. ಹಾಗಾದರೆ ಪ್ರತ್ಯೇಕ ರಾಶಿಗಳ ವಿಶೇಷ ಸ್ವಭಾವವೇನೆಂದು ತಿಳಿಯೋಣ...

All Zodiac sign has its special nature  what is yours


ಮೇಷ ರಾಶಿ
ಮೇಷ ರಾಶಿಯವರು ಸ್ವತಂತ್ರರಾಗಿರಲು ಬಯಸುತ್ತಾರೆ. ಯಾವುದೇ ನಿರ್ಧಾರವನ್ನು ಸ್ವತಃ ತೆಗೆದುಕೊಳ್ಳುಲು ಹಿಂಜರಿಯುವುದಿಲ್ಲ. ಇವರು ಪರಿಶ್ರಮಿಗಳು ಮತ್ತು ಶಕ್ತಿವಂತರು. ತಮ್ಮ ಅಭಿಪ್ರಾಯವನ್ನು ಇತರರ ಮುಂದಿಡಲು ಹೆದರುವುದಿಲ್ಲ. ಮೇಷ ರಾಶಿಯವರಿಗೆ ಸಿಟ್ಟು ಬೇಗ ಬರುತ್ತದೆ ಎಂಬುದನ್ನು ಬಿಟ್ಟರೆ, ಅತ್ಯುತ್ತಮವಾದ ಗುಣಗಳನ್ನು ಇವರು ಹೊಂದಿರುತ್ತಾರೆ.

ಇದನ್ನು ಓದಿ: ಮನೆಯ ದಕ್ಷಿಣ ದ್ವಾರ ಯಾವ ರಾಶಿಯವರಿಗೆ ಶುಭ-ಅಶುಭ..!? 

ವೃಷಭ ರಾಶಿ
ಈ ರಾಶಿಯವರದು ಶಾಂತ ಸ್ವಭಾವ. ಇವರಿಗೆ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳ ಅರಿವು ಚೆನ್ನಾಗಿ ಇರುತ್ತದೆ. ಹಾಗಾಗಿ ಮನೆಯಲ್ಲಿ ಎಲ್ಲರೂ ಇವರನ್ನು ಇಷ್ಟಪಡುತ್ತಾರೆ. ಹಣ ಮತ್ತು ಪ್ರಸಿದ್ಧಿಯ ಮೇಲೆ ಅತ್ಯಂತ ಮೋಹವನ್ನು ಹೊಂದಿರುತ್ತಾರೆ.

ಮಿಥುನ ರಾಶಿ
ಈ ರಾಶಿಯವರು ಉತ್ತಮ ಮಾತುಗಾರರಾಗಿರುತ್ತಾರೆ. ಈ ರಾಶಿಯವರು ಹಲವಾರು ಭಾಷೆಗಳ ಜ್ಞಾನವನ್ನು ಹೊಂದಿರುತ್ತಾರೆ. ಇವರ ಸ್ವಭಾವ ಆಗಾಗ ಬದಲಾಗುವ ಕಾರಣ ಇವರನ್ನು ಅರಿತುಕೊಳ್ಳುವುದು ಕಷ್ಟಕರ.

ಶಾರುಖ್ ಖಾನ್‌ಗೂ ಸಂಖ್ಯಾಶಾಸ್ತ್ರದಲ್ಲಿದ್ಯಾ ನಂಬಿಕೆ?

ಕರ್ಕಾಟಕ ರಾಶಿ
ಈ ರಾಶಿಯವರು ಪರಿಶುದ್ಧ ಹೃದಯವನ್ನು ಮತ್ತು ಸ್ವಚ್ಛ ಮನಸ್ಸನ್ನು ಹೊಂದಿರುತ್ತಾರೆ. ತನ್ನವರನ್ನು ಹೆಚ್ಚು ಪ್ರೀತಿಸುತ್ತಾರೆ. ರಾಜಕೀಯ ವಿಷಯಗಳಲ್ಲಿ ಹೆಚ್ಚು ಪ್ರಾವೀಣ್ಯತೆ ಹೊಂದಿರುತ್ತಾರೆ. 

ಸಿಂಹ ರಾಶಿ
ಈ ರಾಶಿಯು ಸೂರ್ಯನ ಪ್ರಭಾವಕ್ಕೊಳಪಡುತ್ತದೆ. ಬಾಲ್ಯದಿಂದಲೂ ಇವರಿಗೆ ನಾಯಕತ್ವದ ಗುಣವಿರುತ್ತದೆ. ಸಾಹಸಿಗಳು ಮತ್ತು ಶಕ್ತಿವಂತರು ಸಿಂಹ ರಾಶಿಯವರು. ರಾಜನಂತೆ ಜೀವನವನ್ನು ನಡೆಸುತ್ತಾರೆ. ಅಹಂಕಾರ ಮತ್ತು ಸಿಟ್ಟು ಇವರ ಅವಗುಣಗಳಾಗಿವೆ.

ಕನ್ಯಾ ರಾಶಿ
ಈ ರಾಶಿಯವರು ಜ್ಞಾನಿಗಳು ಮತ್ತು ವಿನಯವಂತರು ಆಗಿರುತ್ತಾರೆ. ಕೆಲವು ಬಾರಿ ವ್ಯಂಗ್ಯ ಮತ್ತು ವಿಷಯವನ್ನು ದೊಡ್ಡದು ಮಾಡುವ ಗುಣ ಸಹ ಇವರಲ್ಲಿರುತ್ತದೆ. ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸುವವರೆಗೂ ಪಟ್ಟು ಬಿಡುವುದಿಲ್ಲ, ಇದು ಈ ರಾಶಿಯವರ ವಿಶೇಷ ಗುಣವೆಂದು ಹೇಳಬಹುದಾಗಿದೆ.

ತುಲಾ ರಾಶಿ
ಈ ರಾಶಿಯವರು ಆಕರ್ಷಕವಾಗಿರುತ್ತಾರೆ. ಭಾವನೆಗಳನ್ನು ಹೊರ ಜಗತ್ತಿಗೆ ತೋರಿಸಿಕೊಳ್ಳಲು ಇವರು ಇಷ್ಟಪಡುವುದಿಲ್ಲ. ಈ ರಾಶಿಯವರಿಗೆ ದುಬಾರಿ ಮತ್ತು ಬ್ರಾಂಡೆಡ್ ವಸ್ತುಗಳು ಇಷ್ಟವಾಗುತ್ತವೆ. ವಾದ-ವಿವಾದಗಳಲ್ಲಿ ಇತರರನ್ನು ಗೊಂದಲಕ್ಕೆ ಗುರಿ ಮಾಡಿ ಬಿಡುತ್ತಾರೆ.

ವೃಶ್ಚಿಕ ರಾಶಿ
ಈ ರಾಶಿಯವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ, ತಮ್ಮ ಭಾವನೆಗಳನ್ನು ಬಚ್ಚಿಟ್ಟುಕೊಳ್ಳುವ ಸ್ವಭಾವ ಇವರದ್ದು. ಹಾಗಾಗಿ ಈ ರಾಶಿಯವರನ್ನು ಅರ್ಥಮಾಡಿಕೊಳ್ಳುವುದು ಕಷ್ಟದ ವಿಷಯವಾಗಿರುತ್ತದೆ. ಇವರಲ್ಲಿ ಉತ್ಸಾಹ ಮತ್ತು ಸಾಹಸಿ ಗುಣವನ್ನು ನೋಡಬಹುದಾಗಿದೆ.

ಇದನ್ನು ಓದಿ: ರಾಶಿಯನುಸಾರ ಈ ಪ್ರಾಣಿಗಳನ್ನು ಸಾಕಿದರೆ ಶುಭ ಫಲ...

ಧನು ರಾಶಿ
ಈ ರಾಶಿಯವರು ಬೃಹಸ್ಪತಿಯಂತೆ ಜ್ಞಾನಿಗಳಾಗಿರುತ್ತಾರೆ. ಇವರು ಪ್ರಾಮಾಣಿಕರು, ಸತ್ಯವಂತರು, ಕರ್ತವ್ಯನಿಷ್ಠರು ಮತ್ತು ವಿಶ್ವಾಸಕ್ಕೆ ಅರ್ಹ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಸಿಟ್ಟು ಮತ್ತು ಹಿಂಸಾ ಗುಣ ಸಹ ಇವರಲ್ಲಿರುತ್ತದೆ.

ಮಕರ ರಾಶಿ
ಈ ರಾಶಿಯವರು ಆಳವಾದ ಚಿಂತನೆಯನ್ನು ಮಾಡುವ ಸ್ವಭಾವದವರಾಗಿರುತ್ತಾರೆ. ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ಅರಿತು ನಿಭಾಯಿಸುತ್ತಾರೆ. ಕೈಗೆ ಬಂದ ಕೆಲಸವನ್ನು ಪೂರ್ತಿ ಮಾಡುವವರೆಗೂ ಸಮಾಧಾನದಿಂದ ಕೂರುವವರು ಈ ರಾಶಿಯವರಲ್ಲ. ಬೇರೆಯವರನ್ನು ಅನುಮಾನದಿಂದ ನೋಡುವ ಗುಣ ಇವರಿಗಿರುತ್ತದೆ.

ಕುಂಭ ರಾಶಿ
ಈ ರಾಶಿಯವರು ನಿಧಾನಿಗಳು ಮತ್ತು ದಯಾವಂತರು. ಇವರ ಬುದ್ಧಿವಂತಿಕೆ, ಚಾತುರ್ಯ್ಯ ಮತ್ತು ತರ್ಕ ಮಾಡುವ ಕ್ಷಮತೆ ಇತರರು ಮೆಚ್ಚುವಂತಿರುತ್ತದೆ. ಮಾತಿನ ಚಾತುರ್ಯ್ಯದಿಂದ ಎಂಥವರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ.

ಇದನ್ನು ಓದಿ: ಅಕ್ಟೋಬರ್‌ನಲ್ಲಿ ಜನಿಸಿದವರು ಹೀಗಿರ್ತಾರಂತೆ..‍! 

ಮೀನ ರಾಶಿ
ಈ ರಾಶಿಯವರು ಬಹುಮುಖ ಪ್ರತಿಭೆಯುಳ್ಳವರಾಗಿರುತ್ತಾರೆ. ತಮ್ಮ ಮಾತನ್ನು ಉಳಿಸಿಕೊಳ್ಳುವ ಇವರು ತರ್ಕ, ವಿವಾದಗಳಲ್ಲಿ ನಿಸ್ಸೀಮರಾಗಿರುತ್ತಾರೆ. ಹತ್ತಿರದವರನ್ನು ಅಪ್ಯಾಯತೆಯಿಂದ ನೋಡಿಕೊಳ್ಳುತ್ತಾರೆ.

Follow Us:
Download App:
  • android
  • ios