Asianet Suvarna News Asianet Suvarna News

ಕೊಳ್ಳೋ ತಾಕತ್ತಿದೆ ಅಂದ್ರೂ ಎಲ್ಲ ರಾಶಿಯವರೂ ಚಿನ್ನ ಧರಿಸಿದ್ರೆ ಒಳ್ಳೇದಲ್ಲ!

ಭಾರತೀಯ ಹೆಣ್ಣು ಮಕ್ಕಳಿಗೆ ಚಿನ್ನ ಅಂದ್ರೆ ಎಲ್ಲಿಲ್ಲದ ವ್ಯಾಮೋಹ. ಎಷ್ಟು ಕೊಡಿಸಿದರೂ ಅವರಿಗೆ ಆಗೋಲ್ಲ ತೃಪ್ತಿ. ಆದರೆ, ಎಲ್ಲ ರಾಶಿಯವರಿಗೂ ಚಿನ್ನ ಧರಿಸಿದರೆ ಆಗಿ ಬರೋಲ್ಲ. ಯಾವ ರಾಶಿಗಳವು?

Aeris leo sagaritus should wear gold ornaments to have luck zodiac sign
Author
First Published Jun 26, 2023, 3:59 PM IST | Last Updated Jun 26, 2023, 3:59 PM IST

ಹಳದಿ ಲೋಹದ ಮೇಲೆ ಬಹುಶಃ ಭಾರತೀಯರು ಇನ್ವೆಸ್ಟ್ ಮಾಡಿದಷ್ಟು ಮತ್ಯಾರೂ ಮಾಡೋಲ್ಲ. ಇದರೆ ಮೇಲೆ ಎಲ್ಲಿಲ್ಲದ ವ್ಯಾಮೋಹ ಹೆಣ್ಣು ಮಕ್ಕಳಿಗೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎನ್ನುವಂತೆ ಕೆಲವು ಪ್ರದೇಶದ ಜನರು, ಹೊಟ್ಟೆ-ಬಟ್ಟೆ ಕಟ್ಟಿ ಮೈ ತುಂಬಾ ಧರಿಸಲು ಬಂಗಾರ ತೆಗೆದುಕೊಳ್ಳುತ್ತಾರೆ. ಅಂಥ ಬೆಲೆಯುಳ್ಳ ಚಿನ್ನದ ಆಭರಣಗಳನ್ನು ಕೆಲವು ರಾಶಿಯವರು ಧರಿಸಿದರೆ ಒಳಿತಾಗೋಲ್ಲ. ಯಾವ ರಾಶಿ ಬಂಗಾರವನ್ನು ಧರಿಸಬಹುದು ಅಂತ ನಾವು ಹೇಳ್ತೀವಿ ಕೇಳಿ. 

ಮೇಷ ರಾಶಿ (Aries)
ವಿಶ್ವವನ್ನೇ ಆಳುವ ಮಹತ್ವಾಕಾಂಕ್ಷೆಯುಳ್ಳ ಈ ರಾಶಿಯವರಿಗೆ ನಾಯಕತ್ವ ಗುಣ ಜನ್ಮಗತವಾಗಿಯೇ ಬಂದಿರುತ್ತೆ. ಸದಾ ಡಾಮಿನೋಟ್ ಮಾಡೋ ಇವರ ಕೈಯಲ್ಲಿ ಚಿನ್ನದುಂದರವಿದ್ದರೆ ಶ್ರೇಷ್ಟ. ಇದು ಅವರಿಗೆ ಮತ್ತಷ್ಟು ಧೈರ್ಯ ಮತ್ತು ಶೌರ್ಯ ಪ್ರದರ್ಶಿಸಲು ಹೆಲ್ಪ್ ಮಾಡುತ್ತಂತೆ. ಸಾಲವಿದ್ದರೂ ಚಿನ್ನದ ಉಂಗುರ ತೊಟ್ಟರೆ ದುಡ್ಡಿನ ಸಮಸ್ಯೆ ಬಗೆಹರಯುತ್ತೆ. ಬಯಸಿದಂತೆ ಸುಖ, ಸಂಪತ್ತು ದಕ್ಕಬೇಕು ಅಂದ್ರೆ ಮೇಷ ರಾಶಿಯವರು ಚಿನ್ನದುಂಗರ ಧರಿಸಬೇಕು. 

ಇವರು ‘ಬಂಗಾರ ಮನುಷ್ಯ’ರು; ಆದರ್ಶವೇ ಈ ರಾಶಿಯವರ ಜೀವಾಳ..!

ಸಿಂಹ ರಾಶಿ (Leo):
ಈ ರಾಶಿಯವರದ್ದು ರಾಜಯೋಗದ ಬದುಕು. ಚಿನ್ನವೂ ಇವರಿಗೆ ಲಕ್ ತರೋದು ಗ್ಯಾರಂಟಿ. ಚಿನ್ನ ಧರಿಸಿದಷ್ಟೂ ಇವರಿಗೆ ಶುಭ. ಉದ್ಯೋಗ ವ್ಯವಹಾರದಲ್ಲಿ ಚಿನ್ನ ಪ್ರಗತಿ ತರಿಸುತ್ತೆ. ಆರ್ಥಿಕ ಸ್ಥಿತಿಯನ್ನೂ ಉತ್ತಮಗೊಳಿಸುತ್ತೆ. ಚಿನ್ನದುಂಗುರ ಧರಿಸಿದರೆ ಇವರಿಗೆ ಅದೃಷ್ಟ ಲಕ್ಷ್ಮಿಯೂ ತಾನಾಗಿಯೇ ಹುಡುಕಿಕೊಂಡು ಬರುತ್ತಾಳೆ. ಸಿಂಹಕ್ಕೆ ಬಂಗಾರ ಹೇಳಿ ಮಾಡಿಸಿದ ಲೋಹ.

ಕನ್ಯಾ ರಾಶಿ (Virgo):
ಚಂಚಲ ಸ್ವಭಾವದ ಕನ್ಯಾ ರಾಶಿಯವರಿಗೆ ಚಿನ್ನದುಂಗುರಕ್ಕಿಂತಲೂ ಬಂಗಾರದ ಸರ ಅಥವಾ ಬಳೆ ಧರಿಸಿದರೆ ಹಲವು ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಹಿಡಿದ ಕೆಲಸದಲ್ಲಿ ಗೆಲವು ಸಾಧಿಸಲು ಚಿನ್ನ ಧರಿಸಬೇಕು ಈ ರಾಶಿಯವರು. ಆ ಮೂಲಕ ಜೀವನದಲ್ಲಿ ಸಮಸ್ಯೆಗಳಿಗೆ ಮುಕ್ತಿ ಹಾಡಬಹುದು. ಸಂಪತ್ತು, ಐಶ್ವರ್ಯ ಹೆಚ್ಚುವ ಜೊತೆಗೆ ಅದೃಷ್ಟವೂ (Luck)  ಇವರನ್ನು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಏನೋ ಕಸಿವಿಸಿ ಫೀಲ್ ಮಾಡಿಕೊಳ್ಳುವ ಕನ್ಯಾ ರಾಶಿಯವರಿಗೆ ಚಿನ್ನ ಧರಿಸುವುದರಿಂದ ಮನಸ್ಸು ಸ್ಥೀಮಿತಕ್ಕೆ ಬರುತ್ತದೆ.

ಧನು ರಾಶಿ (Sagittarius):
ವಿಜಯದತ್ತ (Victory) ಧನು ರಾಶಿಯವರ ಗಮ್ಯವಿರುತ್ತದೆ. ಎಲ್ಲವನ್ನೂ ಗೆಲ್ಲುವ ತವಕದಲ್ಲಿಯೇ ಇರುತ್ತಾರೆ. ಈ ರಾಶಿಗೆ ಗುರು ಅಧಿಪತಿ. ಪ್ರೀತಿಯಿಂದ ಚಿನ್ನ ಧರಿಸಿದರೆ ಅತ್ಯುತ್ತಮ ಫಲಗಳು ಸಿಗೋದು ಗ್ಯಾರಂಟಿ. ಮಂಗಳ ತರುವ ಬಂಗಾರ ಧಾರಣೆ ಹಿಡಿದ ಕೆಲಸಗಳಲ್ಲಿ ಜಯ ಸಿಗುವಂತೆ ಮಾಡುತ್ತದೆ. ಸಂಪತ್ತು ವೃದ್ಧಿಯಾಗುವುದರೊಂದಿಗೆ, ಬಯಸಿದ ಆಸ್ತಿ ಖರೀದಿಸುವುದರಲ್ಲಿಯೂ ಯಶಸ್ಸು ಸಿಗುತ್ತದೆ. ಚಿನ್ನ ಧಾರಣೆ ಈ ರಾಶಿಯವರನ್ನು ಸದಾ ಖುಷಿಯಾಗಿರುವಂತೆ ಮಾಡುತ್ತದೆ. ಚೆನ್ನ ಧರಿಸಿದಷ್ಟೂ ಇವರಿಗೆ ಮತ್ತಷ್ಟು ಚಿನ್ನ ಕೊಳ್ಳುವ ಶಕ್ತಿಯೂ ವೃದ್ಧಿಯಾಗುತ್ತದೆ. 

ಇವರು ಬೆಕ್ಕು-ನಾಯಿಯಂತೆ ಕಚ್ಚಾಡೋ ಗಂಡ-ಹೆಂಡತಿ; ಇದು ಯಾವ ರಾಶಿಯವರ ದೋಷ ಗೊತ್ತಾ?

ಮೀನ ರಾಶಿ (Pisces):
ಹೆಸರಿಗೆ ತಕ್ಕಂತೆ ಈ ರಾಶಿಯವರು ಮೀನಿನಂತೆ ಜಿಗೀತಾ ಇರುತ್ತಾರೆ. ಆ ಕೆಲಸದಿಂದ ಈ ಕೆಲಸಕ್ಕೆ, ಈ ಕೆಲಸದಿಂದ ಆ ಕೆಲಸಕ್ಕೆ ಜಿಗಿಯುವುದೇ ಇವರ ಸ್ವಭಾವ. ಇರುವುದೆಲ್ಲವ ಬಿಟ್ಟು, ಇರದ ಕಡೆ ತುಡಿಯೋ ರಾಶಿಯವರು ಇವರು. ಚಂಚಲ. ಆದರೆ, ಪ್ರಾಮಾಣಿಕರು. ಇವರಿಗೂ ಚಿನ್ನ ಧರಿಸಿದರೆ ಅದೃಷ್ಟ ಒಲಿಯುತ್ತೆ. ಮುಗಿಯದ ಕೆಲಸಗಳು ಪೂರ್ತಿಯಾಗುತ್ತೆ. ಕೋಪವೂ ಕಡಿಮೆ ಆಗುತ್ತೆ. ಆಲೋಚನಾ ಶೈಲಿಯೇ ಬದಲಾಗುತ್ತದೆ. ಕೈಯಲ್ಲಿ ಹಣ ಉಳಿಯುತ್ತೆ. ಇನ್ನೊಬ್ಬರ ಮುಂದೆ ಕೈಚಾಚಬೇಕಾದ ಸ್ಥಿತಿಯಿಂದ ತಪ್ಪಿಸಿಕೊಳ್ಳಬೇಕು ಅಂದ್ರೆ ಚಿನ್ನ ಧರಿಸಬೇಕು. ಗಟ್ಟಿ ಲೋಹ ಬಂಗಾರದಿಂದ ಮಾಡಿದ ಆಭರಣಗಳನ್ನು ಈ ರಾಶಿವರು ಧರಿಸಿದರೆ ಮನಸ್ಸು ಸ್ವಲ್ಪ ಸ್ಥಿರವಾಗುತ್ತೆ.

Latest Videos
Follow Us:
Download App:
  • android
  • ios