ಅಳೋ ಹೆಣ್ಣು ಮನೆಗೆ ಅದೃಷ್ಟ ತರ್ತಾಳೆ ಅಂತಾರೆ ಚಾಣಕ್ಯ, ಅದು ಹೇಗೆ?
ಚಾಣಕ್ಯ ಮನುಷ್ಯನ ಗುಣ, ಸ್ವಭಾವಗಳನ್ನು ಸರಿಯಾಗಿ ಅರ್ಥೈಸಿದ ಮಹಾನುಭಾವ. ಆತನ ಪ್ರಕಾರ ಅಳೋ ಹೆಣ್ಣು ಮನೆಗೆ ಅದೃಷ್ಟ ತರ್ತಾಳಂತೆ. ಅದು ಹೇಗೆ?
ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ವ್ಯಕ್ತಿ, ಸಲಹೆಗಾರ, ತಂತ್ರಜ್ಞ, ಶಿಕ್ಷಕ, ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ. ಅವರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯಗಳು ಭಾರತೀಯ ಇತಿಹಾಸದ ಹಾದಿಯನ್ನು ಬದಲಾಯಿಸಿದವು. ಚಾಣಕ್ಯರು ಮಾನವ ಕಲ್ಯಾಣಕ್ಕಾಗಿ ತಮ್ಮ ನೀತಿಯಲ್ಲಿ ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ. ಅವುಗಳು ಇಂದಿಗೂ ಪ್ರಸಿದ್ಧವಾಗಿದೆ. ನೀವು ಈ ನೀತಿಗಳನ್ನು ಅಳವಡಿಸಿಕೊಂಡರೆ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುವುದನ್ನು ಯಾರೂ ತಡೆಯಲಾರರು. ಅಷ್ಟೇ ಅಲ್ಲ, ಅವರ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ದೈನಂದಿನ ಜೀವನದಲ್ಲಿ ನಡೆಯುತ್ತಿರುವ ಎಲ್ಲಾ ತೊಂದರೆಗಳಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳಬಹುದು. ಆದರೆ ಅವರು ಹೆಣ್ಣಿನ ಬಗ್ಗೆ ಸಂಸಾರದ ಬಗ್ಗೆ ಮಾತಾಡ್ತಾರೆ. ಅವರ ಒಂದು ಮಾತು ಅಳೋ ಹೆಣ್ಣು ಮನೆಗೆ ಅದೃಷ್ಟ ತರುತ್ತಾಳೆ ಅನ್ನೋದು. ಅದು ಹೇಗೆ ಅನ್ನೋದಕ್ಕೆ ಆಚಾರ್ಯರೇ ವಿವರಣೆಯನ್ನೂ ನೀಡುತ್ತಾರೆ.
ಚಾಣಕ್ಯರ ಪ್ರಕಾರ ಮಹಿಳೆಯರು ಬಹಳ ಸೌಮ್ಯ ಸ್ವಭಾವದವರು. ಮಹಿಳೆಯರ ಮನಸ್ಸು, ಹೃದಯ ತುಂಬಾ ಸೂಕ್ಷ್ಮ. ಅವರು ಎಲ್ಲದರಲ್ಲೂ ಭಾವನಾತ್ಮಕವಾಗಿರುತ್ತಾರೆ. ಆದರೆ ಮಹಿಳೆಯರ ಭಾವಾನಾತ್ಮಕ ಅಂಶದಿಂದ ಕೆಲವರು ಅಸಮಾಧಾನಗೊಳ್ಳುತ್ತಾರೆ. ಆದರೆ ಚಾಣಕ್ಯರ ಪ್ರಕಾರ ಕೆಲವು ವಿಷಯಗಳಲ್ಲಿ ಮಹಿಳೆಯರು ಅಳುವುದು ಒಳ್ಳೆಯದು. ಇದರಿಂದ ನಿಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. ಚಾಣಕ್ಯರು ತನ್ನ ಚಾಣಕ್ಯ ನೀತಿಯಲ್ಲಿ ಹೆಣ್ಣಿನ ಅಳುವಿನ ಬಗ್ಗೆ ಹೇಳಿದ್ದಾರೆ. ಅಳುವ ಮಹಿಳೆಗೆ ಹೆಚ್ಚು ಗೌರವ ನೀಡಬೇಕು ಎಂದು ಚಾಣಕ್ಯ ಹೇಳಿದರು. ಹೆಚ್ಚು ಭಾವನಾತ್ಮಕವಾಗಿರುವ ಮಹಿಳೆಯರನ್ನು ಮದುವೆಯಾಗುವವರು ತುಂಬಾ ಅದೃಷ್ಟವಂತರು ಎಂದು ಚಾಣಕ್ಯ ಹೇಳಿದ್ದಾರೆ. ಮಹಿಳೆಯರ ಅಳುವ ಚಟದಿಂದ ಕುಟುಂಬ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ಎಂದರು. ಅಂತಹ ಮಹಿಳೆಯರನ್ನು ಹೆಚ್ಚು ಗೌರವಿಸಬೇಕು ಎಂದೂ ಅವರು ವಿವರಿಸಿದರು.
ಶುಕ್ರನಿಂದ ಅಪರೂಪ ಯೋಗ,ಈ ರಾಶಿಗೆ ಕೈ ತುಂಬಾ ದುಡ್ಡು.. ಅಪಾರ ಲಾಭ...
ಚಾಣಕ್ಯನ ಪ್ರಕಾರ, ಎಲ್ಲದರ ಬಗ್ಗೆ ಅಳುವ ಮಹಿಳೆಯರು ನಿಜವಾಗಿಯೂ ತಮ್ಮ ಪತಿ (husband) ಮತ್ತು ಕುಟುಂಬ ಸದಸ್ಯರಿಂದ ದೂರವಿರಲು ಬಯಸುವುದಿಲ್ಲ. ಅಲ್ಲದೆ ಅಂತಹ ಮಹಿಳೆಯರು (ladies) ಯಾವಾಗಲೂ ಕುಟುಂಬವನ್ನು ಒಟ್ಟಿಗೆ ಇಡಲು ಬಯಸುತ್ತಾರೆ.
ಏನೇ ಸಂಭವಿಸಿದರೂ ಅಳುವ ಮಹಿಳೆಯರಿಗೆ ಕೋಪ ಅಥವಾ ಉದ್ವೇಗ ಇರುವುದಿಲ್ಲ. ಅವೆಲ್ಲವೂ ಕಣ್ಣೀರಿನ ಮೂಲಕ ವ್ಯಕ್ತವಾಗುತ್ತವೆ. ಸಣ್ಣಪುಟ್ಟ ವಿಷಯಗಳಿಗೆ ಅಳುವ ಮಹಿಳೆಯರು ತುಂಬಾ ಸಂವೇದನಾಶೀಲರು. ಇತರರ ತಪ್ಪುಗಳನ್ನು ಮರೆತುಬಿಡಿ. ತಕ್ಷಣ ಕ್ಷಮಿಸಿ. ಅಂತಹ ಮಹಿಳೆಯರು ದೀರ್ಘಕಾಲದವರೆಗೆ ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ. ಅಂತಹ ಮಹಿಳೆಯರು ಪತಿ ಮತ್ತು ಕುಟುಂಬಕ್ಕೆ ಅದೃಷ್ಟವಂತರು. ಯಾವುದೇ ತಪ್ಪು ಮಾಡದೆ ಅಳಲು ತೋಡಿಕೊಳ್ಳುವ ಮಹಿಳೆಯರಿಗೆ ಒಳಗೊಳಗೆ ತಮ್ಮ ಕುಟುಂಬದ ಮೇಲೆ ಅಪಾರ ಪ್ರೀತಿ. ಅಂತಹ ಮಹಿಳೆಯರು ತಮ್ಮ ಕುಟುಂಬವನ್ನು ತುಂಬಾ ಪ್ರೀತಿಸುತ್ತಾರೆ. ಈ ಗುಣವು ಮಹಿಳೆಯು ಕುಟುಂಬವನ್ನು ಚೆನ್ನಾಗಿ ಮುನ್ನಡೆಸುವಂತೆ ಮಾಡುತ್ತದೆ.
ಏನ್ಮಾಡಿದ್ರೆ ಖುಷಿಯಾಗಿರ್ತೀರಿ ಅನ್ನೋದನ್ನ ನಿಮ್ಮ ರಾಶಿ ಹೇಳುತ್ತೆ! ಟ್ರೈ ಮಾಡಿ
ಸಣ್ಣ ವಿಷಯಗಳಿಗೆ ಅಳುವ ಮಹಿಳೆಯರು ಯಾವಾಗಲೂ ಸಹಾನುಭೂತಿ ಹೊಂದಿರುತ್ತಾರೆ. ಮಹಿಳೆಯರ (women) ಅಳುವಿನಿಂದ ಹಲವು ರೀತಿಯ ಗಂಭೀರ ಕಾಯಿಲೆಗಳು ಗುಣವಾಗುತ್ತವೆ, ಅಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಚಾಣಕ್ಯ (Koutilya) ಹೇಳಿದರು. ಚಾಣಕ್ಯನ ಪ್ರಕಾರ ಅಳುವುದು ವ್ಯಕ್ತಿಯ ಒತ್ತಡವನ್ನು ಹೋಗಲಾಡಿಸುತ್ತದೆ. ಆದರೆ ಅಳಲು ಕೆಲವು ವಿಷಯಗಳಿವೆ. ಅಳುವುದು (crying) ಎಲ್ಲದಕ್ಕೂ ಒಳ್ಳೆಯದಲ್ಲ. ಮಹಿಳೆಯರನ್ನು ನೋಯಿಸಬೇಡಿ ಮತ್ತು ಕುಟುಂಬದ ಸದಸ್ಯರನ್ನು ಅಳುವಂತೆ ಮಾಡಬೇಡಿ ಎಂಬದು ಅವರು ಹೇಳುವ ಇನ್ನೊಂದು ಮಾತು. ಹೆಣ್ಣು ಅನ್ನುವವಳು ಮನೆಗೆ ಶೋಭೆ ಇದ್ದ ಹಾಗೆ. ಅವಳು ಸದಾ ಸಂತೃಪ್ತಳಾಗಿದ್ದು, ಸ್ವಚ್ಛ ಮನಸ್ಸಿನವಳಾಗಿದ್ದರೆ ಮನೆ, ಮನೆಯವರ ಮನಸ್ಸು (mind) ಚೆನ್ನಾಗಿರುತ್ತದೆ. ಆಕೆ ದ್ವೇಷ, ಜಗಳಗಂಟಿತನದಿಂದ ಇದ್ದರೆ ಎಲ್ಲರ ನೆಮ್ಮದಿಯೂ ಹಾಳಾಗಬಹುದು. ಹೆಣ್ಣು ಭಾವನಾತ್ಮಕವಾಗಿದ್ದರೆ ಆಕೆಯ ಮನಸ್ಸು ಕಲ್ಮಶರಹಿತವಾಗಿರುತ್ತದೆ ಎಂಬ ಮಾತನ್ನೂ ಚಾಣಾಕ್ಯ ಹೇಳುತ್ತಾರೆ.