ಡೇಂಜರ್ ಡಿಸೆಂಬರ್; ಕಾರಿನ ಮೇಲೆ ಬಿದ್ದ ಕಂಟೈನರ್ ಲಾರಿ; ಆರು ಮಂದಿ ದುರ್ಮರಣ ಕ್ಕೆ ಗ್ರಹಚಾರವೇ ಹೊಣೆ!

ಗ್ರಹಚಾರ ಸರಿಯಿಲ್ಲ ಅಂತ ಮೊನ್ನೆ ಪೋಸ್ಟ್ ಮಾಡಿದ್ದು ಇದಕ್ಕೇನೆ.. NH48 ಅಪಘಾತ
 

accident in nelamangala 6 members of the same family die after container falls on car suh

ದೈವಜ್ಞ ಹರೀಶ್ ಕಶ್ಯಪ್​, ಜ್ಯೋತಿಷಿ

ಡೇಂಜರ್ ಡಿಸೆಂಬರ್!

ಹೆಬ್ಬುಲಿಯಂತೆ ಯಮನು
ಬೊಬ್ಬಿಡುತ ಕಾದಿರುವ
ಉಬ್ಬದಿರು ಉಬ್ಬದಿರು 
ಎಲೆ ಮಾನವ....

ಬಿಸಿಲ ತಾಳದೆ ಮರದ ನೆರಳಿಗೆ ಹೋದೆ
ಮರ ಬಗ್ಗಿ ಶಿರದ ಮೇಲೆ ಉರುಳಿತೋ ಹರಿಯೇ...
ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ....

ಇದು ನಿತ್ಯದಲ್ಲಿ ನಿತ್ಯ ಪರಿಸ್ಥಿತಿ ಜೀವ ಮರ್ತ್ಯಲೋಕದ....
ಇದರ ಅರಿವು ಮನದಲ್ಲಿ ಅಷ್ಟೇ ನಿತ್ಯದಲ್ಲಿ ನಿತ್ಯವಾಗಿ ಇರಬೇಕು. ಆಗ, "ಅದಕೆ ಮುನ್ನ" ಹಲವು ಸಾರ್ಥಕ್ಯ ಸಾಧ್ಯ. ಮೃತದಾಚೆ ಅಮೃತದರಿವು ಸಾಧ್ಯ. ಮೃತದಲ್ಲಿ ಅಮೃತವನ್ನ ಅರಸುತ್ತಾ ಇರುವುದೇ ದೊಡ್ಡ ಪ್ರಮಾದ. ಅಶಾಶ್ವತದಲ್ಲಿ ಶಾಶ್ವತ ಒಂದಡಗಿದೆ. ಅದನ್ನು ಪಡೆಯಬೇಕು.ಅಶಾಶ್ವತವನ್ನೇ ಶಾಶ್ವತ ಅಂದುಕೊಂಡಿರುವುದು ದೊಡ್ಡ ಪ್ರಮಾದ. ಸತ್ತಿರುವುದು ಯಾರೋ, ನಾನಲ್ಲ ಎಂದೇ ಎಲ್ಲರೂ ಅಂದುಕೊಳ್ಳುವುದು. ಆದರೆ ಇರುವುದೇ ಸಾವಿನ ಮನೆಯಲ್ಲಿ ನಿತ್ಯ ಸೂತಕದಲ್ಲಿ. ಹೀಗಿದ್ದೂ, ಅದೆಷ್ಟು ನರಕ ಮಾಡಿಕೊಂಡಿರುತ್ತಾರೆ ತಮ್ಮನೂ ತಮ್ಮ ಸುತ್ತಲೂ ಜನ, ನೋಡಿದರೆ ಆ ದೊಡ್ಡ ಪ್ರಮಾದ ಏನು ಅಂತ ಅರ್ಥವಾದೀತು ಅಂತ ಹೇಳ್ತಾ ಇದೀನಿ. ಬೆಳ್ ಬೆಳಗ್ಗೆ ಇದೇನು ಫಿಲಾಸಫಿ ವದರು ಅಂದುಕೋಬೇಡಿ. ಮೃತ್ಯು ಅಂಥ ಅನೂಹ್ಯ ಸತ್ಯ. 

ಆಗಿದ್ದೇನು ? ಇಲ್ಲಿದೆ ನೋಡಿ...Breaking: ನೆಲಮಂಗಲ ಹೆದ್ದಾರಿಯಲ್ಲಿ ಕಾರ್‌ನ ಮೇಲೆ ಬಿದ್ದ ಕಂಟೇನರ್‌ ಲಾರಿ, 6 ಮಂದಿ ಅಪ್ಪಚ್ಚಿ!

ಪಾಪಗ್ರಹರು ಬಹುಪೀಡೆಗಳ ಕಾರಕರು. ಇಂತದ್ದೇ ಕೆಟ್ಟ ಗ್ರಹಚಾರದ ಡಿಸೆಂಬರ್ ನಲ್ಲೇ 2021ನಲ್ಲಿ ಸೇನಾ ಚೀಫ್ ರಾವತ್ ಸಪರಿವಾರ ಹೆಲಿಕಾಪ್ಟರ್ ಪತನಗೊಂಡಿದ್ದು! ಅತ್ತ ಮಧ್ಯಪ್ರಾಚ್ಯದಲ್ಲಿ ಯುದ್ಧ ಮಾರಣ ಶುರುವಾಗಿದ್ದು!...ಇನ್ನೂ ಈಗಲೂ ಮಾರಣ ಚೀತ್ಕಾರಗಳು ವ್ಯಾಪಿಸುತ್ತಲೇ ಇದೆ.....

ಕಾರಣಕ್ಕೆ ಕಾರಣ ಏನೋ ಇರುತ್ತೆ, ನಮಗೆ ಕಾರಣವೇ ಅರ್ಥವಾಗಲ್ಲ, ಇನ್ನು ಅದಕ್ಕೆ ಕಾರಣ ಹೇಗೆ ಅರ್ಥವಾದೀತು?! ಇದು ಮನುಷ್ಯನ ಇರವು , ಎಂಥವನೆ ಆದರೂ ಸಾವಿನ ದವಡೆಯಲ್ಲೇ ಇರುವ. 
ತನ್ನ ಕೋಟಿ ಕಾರಿನಲ್ಲಿ ಎಲ್ಲೋ ಊರಿಗೆ ಹೊರಟವರು, ಯಾವುದೋ ಕಂಟೇನರ್ ಜಿಗಿದು ಅಪ್ಪಳಿಸಿ ಅಯ್ಯೋ...ಅಂತ ಚೀರುವುದಕ್ಕೂ ಮುನ್ನ ಅಪ್ಪಚ್ಚಿ ಮಾಡಿದೆ ದೇಹಗಳ ಅಂದರೆ.....
ದೇವರೇ.

ಇಲ್ಲಿದೆ ಅಪಘಾತದ ವಿಡಿಯೋ.. ವೋಲ್ವೋ ಕಾರಿನ ಮೇಲೆ ಕಂಟೈನರ್ ಬಿದ್ದ ಪ್ರಕರಣ: ನೆಲಮಂಗಲ ಅಪಘಾತ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗರುವ ಬಿಟ್ಟು , ಮರ್ತ್ಯವ ಹೀಗೆಂದು ತಿಳಿದು , ಹೀಗೆ ತಿಳಿದರೇನೆ ಗರುವ ಬಿಡಲು ಸಾಧ್ಯ!! ಎಂದರಿತು, ಗುರು ದೇವರಿಗೆ ನಮ್ರ ಕೈ ಕರಣಗಳ ಮುಗಿದು ಕೂರುವುದು.
ಇಷ್ಟು , ಇಷ್ಟೇ ನಮ್ಮ ಪಾಲು.
ಮಿಕ್ಕೆಲ್ಲ.... ಹೆಬ್ಬುಲಿಯಂತೇ ಯಮನು.....

 ಕಾಶ್ಯಪೇಯಮ್


 

Latest Videos
Follow Us:
Download App:
  • android
  • ios