ಭಾವೈಕತೆಯ ಭಗವಂತ, ಸಿದ್ದಿಪುರುಷ ಅದ್ದೂರಿ ವಿಶ್ವರಾಧ್ಯರ ರಥೋತ್ಸವ
ಅಬ್ಬೆತುಮಕೂರು ವಿಶ್ವರಾಧ್ಯರ ಜಾತ್ರೆಯಲ್ಲಿ ಸಾವಿರಾರು ಜನ ಭಾಗಿ
ಕಲ್ಯಾಣ ಕರ್ನಾಟಕ ಪ್ರಸಿದ್ಧ ಜಾತ್ರೆಗೆ ಅಪಾರ ಭಕ್ತರು ಸಾಕ್ಷಿ
ವರಿದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ: ಭಾವೈಕತೆಯ ಭಗವಂತ, ಸಿದ್ದಿಪುರುಷ, ಕಲ್ಯಾಣ ಕರ್ನಾಟಕದ ಪ್ರಸಿದ್ಧ ಅಬ್ಬೆತುಮಕೂರಿನ ವಿಶ್ವರಾಧ್ಯ ರ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಯಾದಗಿರಿ ತಾಲೂಕಿನ ಅಬ್ಬೆತುಮಕೂರಿನ ವಿಶ್ವರಾಧ್ಯರ ಮಠಕ್ಕೆ ಅಪಾರ ಭಕ್ತಗಣ ಆಗಮಿಸಿ ದರ್ಶನ ಪಡೆದರು. ವಿಶ್ವಾರಾಧ್ಯರು ಕಲಿಯುಗದ ಕಲ್ಯಾಣಕ್ಕಾಗಿ ಧೆರಗಿಳಿದ ಸಾಕ್ಷಾತ್ ಭಗವಂತ. ಬೀಡಿದ್ದು ನೀಡುವ, ಸಕಲರಿಗೆ ಒಳಿತು ಮಾಡುವ ಮಹಾದೇವ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.
ಅಬ್ಬೆತುಮಕೂರು ವಿಶ್ವರಾಧ್ಯರ ಅದ್ದೂರಿ ಭವ್ಯ ರಥೋತ್ಸವ!
ಕಲ್ಯಾಣ ಕರ್ನಾಟಕದಲ್ಲಿಯೇ ಅತ್ಯಂತ ಪ್ರಸಿದ್ಧ, ಅತ್ಯಧಿಕ ಭಕ್ತರನ್ನು ಹೊಂದಿರುವ ಜಾತ್ರೆ ಅಂದ್ರೆ ಅದು ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರಿನ ವಿಶ್ವರಾಧ್ಯ ಜಾತ್ರೆ. ಅಬ್ಬೆತುಮಕೂರಿನ ವಿಶ್ವರಾಧ್ಯ ಜಾತ್ರೆಯು ಸಡಗರ, ಸಂಭ್ರಮದಿಂದ ನಡೆಯಿತು. ವಿಶ್ವರಾಧ್ಯ ಮಂದಿರಲ್ಲಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆ, ಹೋಮ-ಹವನ ಏರ್ಪಟ್ಟಿತ್ತು. ವಿಶ್ವರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮಿಯವರ ಸಾನಿಧ್ಯದಲ್ಲಿ ಭವ್ಯ ರಥೋತ್ಸವ ಜರುಗಿತು. ಭಕ್ತರು ರಥಕ್ಕೆ ಉತ್ತತ್ತಿ, ಖಾರಿಕ್ ಹಾಗೂ ಬಾಳೆ ಹಣ್ಣು ಅರ್ಪಿಸಿ ಭಕ್ತಿ ಮೆರೆದರು. ಈ ವೇಳೆ ನಂದಿಕೋಲು ನೃತ್ಯ, ಪುರವಂತರ ಸೇವೆ ಹಾಗೂ ವಿವಿಧ ಕಲಾ ತಂಡಗಳ ಮೆರಗು ಎಲ್ಲರ ಗಮನ ಸೆಳೆಯಿತು.
12 ವರ್ಷಗಳ ಬಳಿಕ ನವಪಂಚಮ ರಾಜಯೋಗ; ಯಾರಿಗೆಲ್ಲ ಇದರ ಲಾಭ?
ಯಾದಗಿರಿಯ ಅಬ್ಬೆತುಮಕೂರಿನ ಈ ವಿಶ್ಚರಾಧ್ಯ ಜಾತ್ರೆಗೆ ದೇಶದ ನಾನಾ ಭಾಗಗಳಿಂದ ಭಕ್ತರ ದಂಡೇ ಹರಿದು ಬರುತ್ತದೆ. ಅಲ್ಲದೇ ಪಕ್ಕದ ರಾಜ್ಯವಾದ ಮಹಾರಾಷ್ಟ್ರದ ಹಲವಾರು ಕುಟುಂಬಗಳು 30-40 ವರ್ಷಗಳಿಂದ ಪ್ರತಿವರ್ಷವೂ ಬಂದು ತಮ್ಮ ಹರಕೆ ತೀರಿಸಿ ಹೋಗ್ತಾರೆ. ಅಬ್ಬೆತುಮಕೂರು ವಿಶ್ವರಾಧ್ಯರ ಮಠದ ಭಕ್ತಗಣದ ಹಲವು ಕುಟುಂಬಗಳು ವಿಶ್ವರಾಧ್ಯರ ಆಶೀರ್ವಾದ ಪಡೆದು ಪುನೀತರಾಗಿದ್ದಾರೆ. ಈ ಕುರಿತು ಒಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ವಿಶ್ವರಾಧ್ಯ ಮಠದ ಭಕ್ತ ಅವಿನಾಶ್ ಜಗನ್ನಾಥ ಮಾತನಾಡಿ, 'ಅಬ್ಬೆತುಮಕೂರಿನ ವಿಶ್ವರಾಧ್ಯರು ಒಬ್ಬ ಪವಾಡ ಪುರುಷರು. ಬೇಡಿದ ಇಷ್ಟಾರ್ಥ ಈಡೇರಿಸುವ ಮಹಿಮಾಂತಕ. ಮಠವೂ ಜಾತಿ-ಧರ್ಮ ಮೀರಿದ ಸಾಮರಸ್ಯದ ಪ್ರತೀಕ. ನಾವು ಪ್ರತಿ ವರ್ಷ ವಿಶ್ವರಾಧ್ಯರ ಅಜ್ಜರ ಜಾತ್ರೆಗೆ ಬರುತ್ತೇವೆ. ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸುತ್ತಾರೆ. ಹಾಗಾಗಿ ವಿಶ್ವರಾಧ್ಯರು ಕಲಿಯುಗದ ಕರುಣಾಮಯಿ' ಎಂದು ಹೇಳಿದರು.
ದೇವಾಲಯಕ್ಕೆ ಹೋಗುವ 29 ಪ್ರಯೋಜನಗಳು; ನಿಮಗಾಗಿ ದೇವಾಲಯಕ್ಕೆ ಹೋಗಿ..
ವಿಶ್ವರಾಧ್ಯರ ಜಾತ್ರೆಯಲ್ಲಿ ನಟ ಅಪ್ಪು ಭಾವಚಿತ್ರ ಹಿಡಿದ ಫ್ಯಾನ್ಸ್..!
ಅಬ್ಬೆತುಮಕೂರಿನ ವಿಶ್ವರಾಧ್ಯರ ಜಾತ್ರೆಯಲ್ಲಿ ನಟ ದಿ.ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಹಿಡಿದು ಭಕ್ತರು ಅಭಿಮಾನ ವ್ಯಕ್ತಪಡಿಸಿದರು. ಒಟ್ನಲ್ಲಿ ಕಲ್ಯಾಣ ಕರ್ನಾಟಕದ ವಿಶ್ವರಾಧ್ಯ ಮಠವೂ, ಬಡವ-ಶ್ರೀಮಂತ, ಜಾತಿ-ಪಂಥವನ್ನು ಮೀರಿ ಎಲ್ಲರನ್ನೂ ಸಮಾನವಾಗಿ ಕಾಣುವಂತದ್ದಾಗಿದೆ. ಹಾಗಾಗಿ ಇದು ಲಕ್ಷಾಂತರ ಸಂಖ್ಯೆಯ ಭಕ್ತರನ್ನು ಹೊಂದಿದೆ.