ಇದು ತಿಳಿಸುತ್ತೆ ಮಾಸ, ತಿಥಿ, ನಕ್ಷತ್ರ, ವಾರ.. ವಿಶೇಷವಾಗಿದೆ ಪಂಚಾಂಗ ಗಡಿಯಾರ!

ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಲಭ್ಯವಿರುವ ಈ ಪಂಚಾಂಗದ ಗಡಿಯಾರ ರಾಶಿ, ನಕ್ಷತ್ರ, ತಿಥಿ, ಏಕಾದಶಿ, ದ್ವಾದಶಿ, ಹಬ್ಬ  ಹರಿದಿನಗಳನ್ನು ತಿಳಿಸುತ್ತದೆ.

a new invention in Clock Industry which shows panchang Astro time skr

ವರದಿ - ರಕ್ಷಾ, ಸುವರ್ಣ ನ್ಯೂಸ್, ಬೆಂಗಳೂರು

ಇದು ಯಾವ ಮಾಸ, ಇವತ್ತು ಯಾವ ತಿಥಿ, ಇವಾಗ ಯಾವ ನಕ್ಷತ್ರ ನಡೆಯುತ್ತಿದೆ.. ಇದಕ್ಕೆಲ್ಲ ಉತ್ತರ  ಕೇಳಿದ್ರೆ ತಕ್ಷಣ ನೀವು ಪಂಚಾಗ ಹುಡುಕುತ್ತೀರಾ ಅಲ್ವಾ.. ಇನ್ಮುಂದೆ ಹಾಗಿಲ್ಲ ನೀವು ಗಡಿಯಾರ ನೋಡಿಯೇ ಇದಕ್ಕೆಲ್ಲ ಉತ್ತರಿಸಬಹುದು.
ಹೌದು ತಿಥಿ, ನಕ್ಷತ್ರ, ರಾಶಿ, ಮಾಸಗಳು ನಮ್ಮ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಪಾತ್ರ ವಹಿಸುತ್ತವೆ. ಹಬ್ಬ ಹರಿದಿನಗಳ ಆಚರಣೆ, ಪೂಜೆ ಪುರಸ್ಕಾರಗಳಲ್ಲಿ ತೊಡಗುವಿಕೆ, ಮದುವೆ, ನಾಮಕರಣ ಇತ್ಯಾದಿ ಕಾರ್ಯಕ್ರಮಗಳನ್ನು ಹಿಂದುಗಳು ಪಂಚಾಂಗದ ಆಧಾರದಲ್ಲಿಯೇ ನಡೆಸೋದು. ಇದನ್ನು ಪರಿಗಣನೆಯಲ್ಲಿಟ್ಟುಕೊಂಡು ಮಾರುಕಟ್ಟೆಯಲ್ಲಿ ವಿಶೇಷ ಗಡಿಯಾರವೊಂದು ಬಂದಿದೆ, ಇದೇ ಪಂಚಾಂಗ ಗಡಿಯಾರ.
ಸೋನಾ ಗ್ರೂಪ್‌ ಮಾಲಿಕರಾದ ಯಜ್ಞನಾರಾಯಣ್ ಅಸ್ಟ್ರೋ ಟೈಮ್ ಕಂಪನಿಯಿಂದ ಈ ಗಡಿಯಾರವನ್ನು ಆವಿಷ್ಕರಿಸಲಾಗಿದೆ. ಮೂರು ವರ್ಷಗಳ ಹಿಂದೆ ಈ ಪಂಚಾಂಗದ ಗಡಿಯಾರದ ಪರಿಕಲ್ಪನೆಯನ್ನು ಹರಿನಾಥ್ ಶುರುವಿಟ್ಟಿದ್ದು ಸಧ್ಯ ಇದೀಗ ಕ್ಲಾಕ್ ಇಂಡಸ್ಟ್ರಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಇದು ಜಗತ್ತಿನಲ್ಲೇ ಮೊದಲ ಪಂಚಾಂಗ ತೋರಿಸುವ ಗಡಿಯಾರವಾಗಿದೆ. ಪ್ರತಿ ಹಿಂದೂಗಳ ಮನೆಗೂ ಉಪಯೋಗವಾಗುವಂಥ ತಂತ್ರಜ್ಞಾನ ಇದಾಗಿದೆ. ಈ ಗಡಿಯಾರವನ್ನು ಮನೆ, ದೇವಸ್ಥಾನಗಳು, ಕಚೇರಿಗಳು ಮತ್ತು ಆಸ್ಪತ್ರೆಗಳಲ್ಲಿ ಬಳಸಲು ಯೋಗ್ಯವಾಗುವಂತೆ ಕಲ್ಪಿಸಲಾಗಿದೆ. ಇದು ವಿವಿಧ ಹಬ್ಬಗಳು ಮತ್ತು ರಾಷ್ಟ್ರೀಯ ರಜಾದಿನಗಳನ್ನು ಸೂಚಿಸುವ ಸಮಯ ಮತ್ತು ಕ್ಯಾಲೆಂಡರ್ ವ್ಯವಸ್ಥೆಯಾಗಿದೆ. ಅಕ್ಷಾಂಶ ಮತ್ತು ರೇಖಾಂಶ, ಭಾಷೆ ಮತ್ತು ಸಮಯ ವಲಯಗಳನ್ನು ಅವಲಂಬಿಸಿ ಇದನ್ನು ವಿವಿಧ ಸ್ಥಳಗಳಿಗೆ ಕಸ್ಟಮೈಸ್ ಮಾಡಲಾಗಿದೆ. ಈ ಗಡಿಯಾರವನ್ನು ಸೌರ ಅಥವಾ ಚಂದ್ರನ ಕ್ಯಾಲೆಂಡರ್ ವ್ಯವಸ್ಥೆಯನ್ನು ಅನುಸರಿಸುವ ಸಮಾಜದ ಎರಡೂ ವಿಭಾಗಗಳು ಬಳಸಬಹುದು ಎಂಬುದು ವಿಶೇಷ.

ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಲಭ್ಯವಿರುವ ಈ ಪಂಚಾಂಗದ ಗಡಿಯಾರ ರಾಶಿ, ನಕ್ಷತ್ರ, ತಿಥಿ, ಏಕಾದಶಿ, ದ್ವಾದಶಿ, ಹಬ್ಬ  ಹರಿದಿನಗಳನ್ನು ತಿಳಿಸುತ್ತದೆ. ಸೂರ್ಯ, ಚಂದ್ರ ಹಾಗೂ ಭೂಮಿಯ ಚಲನವಲನಗಳನ್ನು ಸಹ ತಿಳಿಸುತ್ತದೆ. ಖಗೋಳ ಶಾಸ್ತ್ರದ ಮೇಲೆ ನಡೆಯುವ ಪಂಚಾಂಗದ ಬಗ್ಗೆ ಸಾಮಾನ್ಯ ಜ್ಞಾನವನ್ನು ನೀಡುವ ಈ ಗಡಿಯಾರದಲ್ಲಿ ನಾವು ಸೂರ್ಯೋದಯ , ಸೂರ್ಯಾಸ್ತದ ಜೊತೆಗೆ ಚಂದ್ರೋದಯ, ಚಂದ್ರ ಹಸ್ತಗಳನ್ನು ಸಹ ತಿಳಿಯಬಹುದಾಗಿದೆ. ಅಮವಾಸ್ಯೆ ಹಾಗೂ ಪೂರ್ಣಿಮೆಗಳಂದು ಸೂರ್ಯ ಚಂದ್ರರ ನಡೆಗಳು, ಖಗೋಳದಲ್ಲಾಗೋ ಬದಲಾವಣೆಗಳು ಹೀಗೆ ಹಲವು ವಿಸ್ಮಯಗಳನ್ನು ತಿಳಿಯಲು ಈ ಪಂಚಾಂಗದ ಗಡಿಯಾರ ಮಾರ್ಗದರ್ಶಿಯಾಗಲಿದೆ. 

ವಾರ ಭವಿಷ್ಯ: ಕಟಕಕ್ಕೆ ಸಂತಸಮಯ ವಾರ, ಮಕರಕ್ಕೆ ಜೊತೆಗಿರದ ಅದೃಷ್ಟ

ಎಲ್ಲ ಸ್ಥಳಗಳಿಗೆ ಹೊಂದಾಣಿಯಾಗುವಂತೆ ಸಾಫ್ಟ್‌ವೇರ್ ಫಿಕ್ಸ್ ಮಾಡಲಾಗಿದೆ. ಒಂದು ಸಾಫ್ಟ್‌ವೇರ್ ಹಾಗೂ ಮೂರು ಮೋಟರ್ ಗಳಿಂದ ಈ ಗಡಿಯಾರ ಕಾರ್ಯನಿರ್ವಹಿಸಲಿದೆ. ಎಂಟು ಗಂಟೆಗಳ ಬ್ಯಾಟರಿ ಬ್ಯಾಕ್ ಅಪ್ ಸಹ ಒಳಗೊಂಡಿದ್ದು, ಹೊರ ಭಾಗದಲ್ಲಿ ಚೌಕಾಕಾರದ ಆಕೃತಿ ಹಾಗೂ ಒಳಭಾಗದಲ್ಲಿ ವೃತ್ತಕಾರದಲ್ಲಿರುವ ಗಡಿಯಾರವು ಕೆಂಪು, ನೀಲಿ, ಹಸಿರು ಬಣ್ಣಗಳಲ್ಲಿ ಹಾಗೂ ಐದು ಭಾಷೆಗಳಲ್ಲಿ ಲಭ್ಯವಿದೆ. ಗಡಿಯಾರ ಕೊಂಡುಕೊಳ್ಳಲು ಇಚ್ಚಿಸುವವರು http://Www.shriastrotime.com ನಲ್ಲಿ ಸಂಪರ್ಕಿಸಬಹುದಾಗಿದೆ. 

Vasant Panchami 2023: ತಾಯಿ ಸರಸ್ವತಿ ಜನಿಸಿದ್ದು ಭಾರತದ ಈ ಕಟ್ಟಕಡೆಯ ಹಳ್ಳಿಯಲ್ಲಿ!

ಈಗಾಗ್ಲೇ ಹಲವು ದೇವಸ್ಥಾನಗಳಿಂದ ಬೇಡಿಕೆ ಹೆಚ್ಚಿದ್ದು, ಪ್ರತಿ ಹಿಂದುಗಳ ಮನೆಯಲ್ಲೊಂದು ಪಂಚಾಂಗದ ಗಡಿಯಾರವಿದ್ರೆ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಂಚಿದಂತಾಗುತ್ತೆ ಅನ್ನೋದು ಹಲವರ ಅಭಿಪ್ರಾಯ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios