ಸಂಗಾತಿಯೊಂದಿಗಿನ ಜಗಳ ನಿಭಾಯಿಸುವಲ್ಲಿ ಈ ರಾಶಿಯವರು ನಾಜೂಕು!
ಕೆಲವು ಸಂದರ್ಭಗಳಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗುತ್ತದೆ. ಕೆಲವು ಬಾರಿ ಹೆಚ್ಚು ಮತ್ತು ಅನಗತ್ಯ ಮಾತಿನಿಂದ ಜಗಳವಾದರೆ, ಮತ್ತೆ ಕೆಲವು ಬಾರಿ ಮಾತನಾಡದೇ ಇರುವುದರಿಂದಲೂ ಜಗಳವಾಗುವ ಸಾಧ್ಯತೆ ಇರುತ್ತದೆ. ರಾಶಿಯ ಅನುಸಾರ ಹೇಳುವುದಾದರೆ, ಈ ಐದು ರಾಶಿಯವರಿಗೆ ಜಗಳವನ್ನು ನಿಭಾಯಿಸುವ ಕಲೆಯನ್ನು ಚೆನ್ನಾಗಿ ಅರಿತಿರುತ್ತಾರಂತೆ. ಹಾಗಂತ ಇವರಿಗೆ ಜಗಳ ಮಾಡುವುದೆಂದರೆ ಇಷ್ಟವಿಲ್ಲ, ಬದಲಾಗಿ ಜಗಳದಿಂದ ದೂರವಿದ್ದು ಎಲ್ಲವನ್ನೂ ಸರಿಮಾಡಲು ಬಯಸುತ್ತಾರೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ.....
ಬಾಂಧವ್ಯ ಎಷ್ಟೇ ಗಟ್ಟಿಯಾಗಿದ್ದರೂ ಕೆಲವೊಮ್ಮೆ ಮನಸ್ಥಾಪ, ಜಗಳಗಳು ನಡೆಯುತ್ತವೆ. ಅದೇ ಕೆಲವರು ಅಂತಹ ಜಗಳಗಳಿಂದ ದೂರವಿರುತ್ತಾರೆ. ಮಾತು ಜೋರಾದರೆ ಅಲ್ಲಿಂದ ಎದ್ದು ಹೋಗಿ ಸಂದರ್ಭವನ್ನು ತಿಳಿಗೊಳಿಸುವ ಕಲೆಯನ್ನು ಕೆಲವು ರಾಶಿಯವರು ಚೆನ್ನಾಗಿ ತಿಳಿದಿರುತ್ತಾರೆ ಎಂದು ಹೇಳಲಾಗುತ್ತದೆ.
ಸಂಬಂಧಗಳೆಂದ ಮೇಲೆ ಅಲ್ಲಿ ಖುಷಿ, ನಗು, ಕಿತ್ತಾಟ, ಜಗಳ ಎಲ್ಲವೂ ಇರುವಂಥದ್ದೆ. ಕೆಲವೊಮ್ಮೆ ಕೋಪ ಮತ್ತು ಶಾಂತ ಸ್ವಭಾವಗಳು ರಾಶಿಯಿಂದ ಪ್ರಭಾವಿತವಾಗಿರುತ್ತದೆ. ಕೆಲವು ರಾಶಿಯವರು ಹೆಚ್ಚು ಸಿಟ್ಟು ಮಾಡಿದರೆ, ಮತ್ತೆ ಕೆಲವರು ತುಂಬಾ ಸಮಾಧಾನವಾಗಿರುತ್ತಾರೆ. ಅಷ್ಟೇ ಅಲ್ಲದೆ ಕೆಲವರು ಮಾತನಾಡುತ್ತಾ ಜಗಳವನ್ನೇ ಪ್ರಾರಂಭಿಸಿದರೆ, ಮತ್ತೆ ಕೆಲವರು ಮಾತನಾಡಿದರೆ ಎಲ್ಲಿ ಜಗಳವಾಗುವುದೋ ಎಂಬಂತೆ ಹೆಚ್ಚು ಮಾತನಾಡದೆಯೇ ಉಳಿದುಬಿಡುತ್ತಾರೆ.
ಹನ್ನೆರಡು ರಾಶಿಗಳಲ್ಲಿ ಈ ಐದು ರಾಶಿಯ ವ್ಯಕ್ತಿಗಳು ಜಗಳವನ್ನು ನಿಭಾಯಿಸುವ ಮತ್ತು ಅದರಿಂದ ದೂರವಿರುವ ಬಗ್ಗೆ ಹೆಚ್ಚು ಎಚ್ಚರವಹಿಸುತ್ತಾರೆ. ಹಾಗಾದರೆ ಜಗಳವನ್ನು ಮಾಡದೆಯೇ ಸಂದರ್ಭವನ್ನು ನಿಭಾಯಿಸುವ ಕಲೆ ತಿಳಿದಿರುವ ರಾಶಿಯವರ ಬಗ್ಗೆ ತಿಳಿಯೋಣ..
ಇದನ್ನು ಓದಿ: ಮನೆಯನ್ನು ಅಂದಗಾಣಿಸುವ ಈ ವಸ್ತುಗಳು ಅದೃಷ್ಟ ತರುತ್ತವೆ.
ಕುಂಭ ರಾಶಿ
ಈ ರಾಶಿಯ ವ್ಯಕ್ತಿಗಳು ಇತರರ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಕುಂಭ ರಾಶಿಯ ವ್ಯಕ್ತಿಗಳಿಗೆ ಮಾನವೀಯತೆ ಹೆಚ್ಚಿರುತ್ತದೆ. ಈ ವ್ಯಕ್ತಿಗಳು ಇಷ್ಟಪಟ್ಟ ವಸ್ತುವನ್ನು ಅಥವಾ ಇಷ್ಟಪಡುವವರನ್ನು ಪಡೆದೇ ಪಡೆಯುತ್ತೇನೆ ಎಂಬ ಮನಸ್ಥಿತಿಯನ್ನು ಉಳ್ಳವರಾಗಿರುತ್ತಾರೆ. ಸಂಗಾತಿಯೊಂದಿಗೆ ನಡೆದ ವಾದವನ್ನು ಅಥವಾ ಜೋರಾಗಿ ಮಾತನಾಡಿದ್ದನ್ನು ಈ ರಾಶಿಯವರು ಗಂಭೀರವಾಗಿ ತೆಗೆದುಕೊಳ್ಳವುದಿಲ್ಲ. ಈ ವ್ಯಕ್ತಿಗಳಿಗೆ ವಾದ-ವಿವಾದಗಳ ಆರಂಭದಲ್ಲಿ ಸ್ವಲ್ಪ ಇರುಸು-ಮುರುಸಾದರೂ, ನಂತರ ಅದನ್ನು ತಮಾಷೆಯಾಗಿ ತೆಗೆದುಕೊಂಡು ಮರೆತು ಬಿಡುತ್ತಾರೆ.
ಮೀನ ರಾಶಿ
ಖುಷಿಯಿಂದ ಇರುವ ಈ ರಾಶಿಯವರು ಯಾವುದೇ ವಿಷಯವನ್ನು ಹೆಚ್ಚು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ. ಯಾವುದೇ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳದ ಇವರು, ಕನಸಿನ ಲೋಕದಲ್ಲಿ ವಿಹರಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಈ ರಾಶಿಯ ವ್ಯಕ್ತಿಗಳ ಸಂಗಾತಿಯೊಂದಿಗೆ ಜಗಳವಾದರೆ ಅದನ್ನು ತಮಾಷೆಯಾಗಿ ಪರಿವರ್ತಿಸಲು ಇವರು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲವಂತೆ. ಅಷ್ಟೇ ಅಲ್ಲದೇ ಸಂಗಾತಿಯನ್ನು ಪ್ರೀತಿಯಿಂದ ಮನವೊಲಿಸಿ, ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳುವ ಬಗೆಯನ್ನು ಚೆನ್ನಾಗಿ ತಿಳಿದಿರುತ್ತಾರೆ.
ಇದನ್ನು ಓದಿ: ಪ್ರಕೃತಿಯಲ್ಲಿ ಕಾಣುತ್ತೆ ಪರಶಿವನ ಮೂರು ಕಣ್ಣುಗಳು…!
ಕನ್ಯಾ ರಾಶಿ
ಈ ರಾಶಿಯ ವ್ಯಕ್ತಿಗಳಿಗೆ ಜಗಳ-ಗಲಾಟೆಗಳ ಬಗ್ಗೆ ಕೇಳಿದರೆ ಭಯವುಂಟಾಗುತ್ತದೆ. ಈ ರಾಶಿಯ ವ್ಯಕ್ತಿಗಳು ಇವುಗಳಿಂದ ಆದಷ್ಟು ದೂರವಿರಲು ಪ್ರಯತ್ನಿಸುತ್ತಾರೆ. ಕನ್ಯಾ ರಾಶಿಯ ವ್ಯಕ್ತಿಗಳಿಗೆ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವ ಪರಿ ತಿಳಿದಿರುವುದಿಲ್ಲ. ಈ ವ್ಯಕ್ತಿಗಳು ಹೆಚ್ಚು ಪ್ರಾಕ್ಟಿಕಲ್ ಆಗಿ ಇರುವುದಲ್ಲದೆ, ತಮ್ಮ ಬಗ್ಗೆ ಇತರರಿಗೆ ಏನನ್ನೂ ಹೇಳಿಕೊಳ್ಳುವುದಿಲ್ಲ. ವಿಷಯಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವ ಸ್ವಭಾವ ಇವರದ್ದು. ಹಾಗಾಗಿ ಇವರಿಗೆ ಜಗಳ-ಗಲಾಟೆಗಳೆಂದರೆ ಆಗುವುದೇ ಇಲ್ಲ.
ತುಲಾ ರಾಶಿ
ತುಲಾ ರಾಶಿಯವರು ಶಾಂತಿ ಪ್ರಿಯರೆಂದು ಹೇಳಲಾಗುತ್ತದೆ. ಎಲ್ಲ ವಿಷಯಗಳಲ್ಲು ಅಳೆದು-ತೂಗಿ ನಿರ್ಧರಿಸುವವರು. ದುಡುಕು ಸ್ವಭಾವ ಇವರದ್ದಲ್ಲ. ಹಾಗಾಗಿ ಇವರು ತಮ್ಮ ಸಂಗಾತಿಯೊಂದಿಗಾಗಲಿ, ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡಿರುತ್ತಾರೆ. ಜಗಳ-ಗಲಾಟೆಗಳು ಇವರ ಹತ್ತಿರ ಸುಳಿಯದಂತೆ, ವಾದ-ವಿವಾದಗಳಿಂದ ದೂರವಿದ್ದು, ತಾಳ್ಮೆಯನ್ನು ಕಾಯ್ದುಕೊಳ್ಳುತ್ತಾರೆ.
ಇದನ್ನು ಓದಿ: ಈ ನಾಲ್ಕು ರಾಶಿಯವರಿಗೆ ಸಂಗಾತಿ ಹಣದ ಮೇಲೆ ವ್ಯಾಮೋಹವಂತೆ!
ಮಕರ ರಾಶಿ
ಮಕರ ರಾಶಿಯವರು ತಮ್ಮ ಹತ್ತಿರದವರನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಾರೆ. ಇವರು ಜಗಳಗಳಿಂದ ದೂರವಿರುವುದನ್ನು ಇಷ್ಟಪಡುತ್ತಾರೆ. ಈ ವ್ಯಕ್ತಿಗಳು ಯಾವುದೇ ವಿಷಯವನ್ನಾದರೂ ಹೆಚ್ಚು ಆಳವಾಗಿ ಯೋಚಿಸುತ್ತಾರೆ. ಹಾಗಾಗಿ ಯಾವುದೇ ಸಮಸ್ಯೆಯನ್ನು ಆರಾಮವಾಗಿ ಪರಿಹರಿಸುವ ಬಗ್ಗೆ ಪ್ರಯತ್ನಿಸುತ್ತಾರೆ. ಅಕಸ್ಮಾತ್ ಆಗಿ ಜಗಳ- ಗಲಾಟೆಗಳಂಥ ಪರಿಸ್ಥಿತಿ ಎದುರಾದರೆ, ಅದರಿಂದ ಹುಷಾರಾಗಿ ಹೊರ ಬಂದು, ಅಂತಹ ಪರಿಸ್ಥಿತಿ ಮುಂದೆ ಮತ್ತೆ ಬಾರದಂತೆ ಎಚ್ಚರವಹಿಸುತ್ತಾರೆ.