Asianet Suvarna News Asianet Suvarna News

ಸಾಂಪ್ರದಾಯಿಕ ವಿವಾಹದಲ್ಲೇ ಸಂತೋಷವಿದೆ ಎನ್ನುವ ನಾಲ್ಕು ರಾಶಿಗಳಿವು..

ರಾಶಿಚಕ್ರದ ಕೆಲ ಚಿಹ್ನೆಗಳು ನಿಕಟ ಕುಟುಂಬವನ್ನು ಬಯಸುತ್ತವೆ. ಆದ್ದರಿಂದ ತಮ್ಮೊಂದಿಗೆ ಮನೆಯನ್ನು ನಿರ್ವಹಿಸುವ ಇಚ್ಛೆಯನ್ನು ಹೊಂದಿರುವ ಸಂಗಾತಿಯನ್ನು ಅವರು ಆಶಿಸುತ್ತಾರೆ. ಅಂಥವರು ಯಾವ ರಾಶಿಗೆ ಸೇರಿರುತ್ತಾರೆ ನೋಡೋಣ. 

4 Zodiacs Who Wish for A Traditional Marriage to A Homely Partner skr
Author
First Published Apr 20, 2023, 6:33 PM IST

ಮದುವೆಯ ವಿಷಯಕ್ಕೆ ಬಂದಾಗ, ಕೆಲವರು ಮಹತ್ವಾಕಾಂಕ್ಷೆಯನ್ನು ಬೆನ್ನಟ್ಟಲು ಬಯಸುವುದಿಲ್ಲ. ಅರು ವಿವಾಹ ಎಂದರೆ ನಿಕಟ ಕುಟುಂಬವನ್ನು ಬಯಸುತ್ತಾರೆ. ಅವರಿಗೆ ಮಾಡ್ ಆಗಿರುವ ಅಥವಾ ಇಬ್ಬರೇ ಇರಬೇಕೆನ್ನುವ ಅಥವಾ ಮನೆಕೆಲಸವೆಂದರೆ ಮೂಗು ಮುರಿಯುವಂಥವರು ಬೇಡ. ಬದಲಿಗೆ ಮನೆಯನ್ನು, ಕುಟುಂಬವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವವರು ಬೇಕು. ಸರಳವಾಗಿದ್ದು ಸರಳ ಸಂತೋಷಗಳನ್ನು ಕೊಡುವವರು ಬೇಕು. ಅವರು ಸಂತೋಷದಿಂದ ಹಾಡನ್ನು ಗುನುಗುತ್ತಾ ರಾತ್ರಿಯ ಊಟದ ತಯಾರಿ ಮತ್ತು ಮನೆಗೆಲಸವನ್ನು ಸಂತೋಷದಿಂದ ನಿಭಾಯಿಸುವ ಮನೆಯ ಸಂಗಾತಿಗಳನ್ನು ಹುಡುಕುವವರು. ಪೋಷಕರನ್ನು ಜೊತೆಗಿರಿಸಿಕೊಂಡು ಅವರೊಂದಿಗೆ ಕೈ ಜೋಡಿಸುವವರು ಇವರಿಗೆ ಸಂತೋಷ ತರುತ್ತಾರೆ.  ಹಾಗಾಗಿ, ಅವರು ಹಿರಿಯರು ಆರಿಸಿದ ಸಂಗಾತಿಯನ್ನು ಮೆಚ್ಚಿ ಸಾಂಪ್ರದಾಯಿಕವಾಗಿ ವಿವಾಹವಾಗಲು ಬಯಸುತ್ತಾರೆ. ಇಂಥವರು ಯಾವ ರಾಶಿಗೆ ಸೇರಿರುತ್ತಾರೆ ನೋಡೋಣ

ಸಿಂಹ ರಾಶಿ
ನೊಣಗಳನ್ನು ಹಿಡಿಯಲು ಜೇನುತುಪ್ಪವು ವಿನೆಗರ್‌ಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿದವರು ಸಿಂಹ ರಾಶಿಯವರು. ಹಾಗೆಯೇ ಎಂಥ ಸಂಗಾತಿ ಮನೆಗೆ ಬೇಕೆಂಬುದನ್ನು ಕೂಡಾ ಅವರು ನಿಖರವಾಗಿ ಅರಿತಿರುತ್ತಾರೆ. ಇತರರಿಗೆ ಸಹಾನುಭೂತಿ ತೋರಿಸುವ ಹಾಗೂ ತಮ್ಮ ಮಕ್ಕಳಿಗೂ ಅದೇ ಸ್ವಭಾವ ಕಲಿಸುವಂಥ ಸಂಗಾತಿಯನ್ನು ಬಯಸುತ್ತಾರೆ. ಅಹಂಕಾರದ ಪ್ರವೃತ್ತಿಯಿರುವ ಸಂಗಾತಿಯನ್ನು ದೂರವಿಡುತ್ತಾರೆ.ಮಕ್ಕಳನ್ನು ನೋಡಿಕೊಳ್ಳಲು, ಮನೆಯ ಬಜೆಟ್ ಅನ್ನು ನಿರ್ವಹಿಸಲು ಮತ್ತು ಅವರೊಂದಿಗೆ ದಿನಸಿಗಾಗಿ ಶಾಪಿಂಗ್ ಮಾಡಲು ಇಷ್ಟಪಡುವ ಸಂಗಾತಿಯನ್ನು ಮದುವೆಯಾಗುವುದನ್ನು ಅವರು ಆನಂದಿಸುತ್ತಾರೆ. 

ಉಜ್ಜಯಿನಿಯ ಕಾಲ ಭೈರವ ದೇವಾಲಯದಲ್ಲಿ ಅಡಗಿದೆ ದೇವರ ಮದಿರ ಪಾನದ ರಹಸ್ಯ

ಕನ್ಯಾ ರಾಶಿ
ಕನ್ಯಾ ರಾಶಿಯವರು ಅತ್ಯುತ್ತಮವಾಗಿ ವೃತ್ತಿಜೀವನ ನಿಭಾಯಿಸುವುದಲ್ಲದೆ ಮನೆಗೂ ಅಷ್ಟೇ ಸಮಯ ಹೊಂದಿಸುತ್ತಾರೆ.. ಬಹುಶಃ ಈ ಕಾರಣಕ್ಕಾಗಿಯೇ ಅವರು ಅಡುಗೆ ಮತ್ತು ಶುಚಿಗೊಳಿಸುವಿಕೆಯಂತಹ ಸಾಮಾನ್ಯ ಕೆಲಸಗಳನ್ನು ನಿಭಾಯಿಸುವಲ್ಲಿ ಪರಿಣಿತರಾದ ಪ್ರೇಮಿಗಳನ್ನು ಹುಡುಕುತ್ತಾರೆ. ಕೌಟುಂಬಿಕ ಕೆಲಸಗಳನ್ನು ಆನಂದಿಸುವವರು, ಮಕ್ಕಳನ್ನು ಪ್ರೀತಿಸುವವರು, ಹಿರಿಯರ ಆರೈಕೆಗೆ ಹೆದರದವರು, ಮನೆಯ ಮೇಲ್ವಿಚಾರಣೆಯ ಉಸ್ತುವಾರಿ ವಹಿಸುವ ಸಾಮರ್ಥ್ಯ ಇರುವವರು ಬೇಕೆಂದು ಇವರು ಬಯಸುತ್ತಾರೆ. ಸಂತೋಷದಿಂದ ತುಂಬಿದ ಕುಟುಂಬ, ಮನೆ, ಮಕ್ಕಳು ಇವರ ಕನಸು. 

ಮೇಷ ರಾಶಿ
ಮೇಷ ರಾಶಿಯವರು ಮನೆಯಲ್ಲಿ ಸುಂದರವಾದ ವಾತಾವರಣವನ್ನು ಸೃಷ್ಟಿಸುತ್ತಾರೆ, ಅಲ್ಲಿ ಅವರು ತಮ್ಮ ಮನೆಗೆ ಪ್ರವೇಶಿಸುವ ಪ್ರತಿಯೊಬ್ಬರನ್ನು ಸ್ವಾಗತಿಸುತ್ತಾರೆ. ಹಾಗಾಗಿ, ಸ್ವಾಭಾವಿಕವಾಗಿ, ಅವರು ತಮ್ಮಂತೆಯೇ ಹೋಮ್ಲಿ ಇರುವ ಸಂಗಾತಿಯನ್ನು ಹುಡುಕುತ್ತಾರೆ. ಅವರು ತಮ್ಮ ಹೆತ್ತವರು ಮತ್ತು ಭವಿಷ್ಯದ ಮಕ್ಕಳೊಂದಿಗೆ ತಾಳ್ಮೆಯಿಂದಿರುವ ವ್ಯಕ್ತಿಯನ್ನು ಅಪೇಕ್ಷಿಸುತ್ತಾರೆ. ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವಂಥ ಸಂಗಾತಿಗಾಗಿ ಹಂಬಲಿಸುತ್ತಾರೆ. ಹಾಗಂಥ ಸಂಗಾತಿಗೆ ಹೊರಗೆ ಕೆಲಸ ಮಾಡಬಾರದೆಂಬ ನಿಯಮವೇನು ಅವರಲ್ಲಿಲ್ಲ. ಒಟ್ಟಿನಲ್ಲಿ ಸಾಂಪ್ರದಾಯಿಕ ವಿವಾಹದಿಂದ ಇಂಥ ಸಂಗಾತಿಯನ್ನು ಹುಡುಕಿಕೊಳ್ಳುವುದು ಸಾಧ್ಯವೆಂಬುದು ಅವರ ನಂಬಿಕೆ. 

Chanakya Niti : ನೀವು ಖುಷಿಯಾಗಿರಿ, ಬೇಜಾರಾಗಿರಿ, ಆದ್ರೆ ಈ ಕೆಲಸ ಅಂತೂ ಮಾಡ್ಲೇ ಬೇಡಿ…

ವೃಶ್ಚಿಕ ರಾಶಿ
ಅವರು ಲಘು ಮನೆಗೆಲಸವನ್ನು ತೆಗೆದುಕೊಳ್ಳುವ, ವಾರಕ್ಕೊಮ್ಮೆ ದಿನಸಿ ಶಾಪಿಂಗ್ ಮಾಡುವ, ತಮ್ಮ ಪೋಷಕರೊಂದಿಗೆ ಸಂತೋಷದಿಂದ ಮಾತನಾಡುವ ಮತ್ತು ಪ್ರತಿ ದಿನ ಅಡುಗೆಗೆ ಕೈ ಜೋಡಿಸುವ ಸಂಗಾತಿಯನ್ನು ಬಯಸುತ್ತಾರೆ. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುವ, ಸಾಂಪ್ರದಾಯಿಕ ಕಲೆಗಳು ಗೊತ್ತಿರುವ, ಸಂಪ್ರದಾಯ ತಿಳಿದಿರುವ, ಹಣಕಾಸು ನಿರ್ವಹಣೆ ಬಲ್ಲಂಥವರು ಇವರಿಗೆ ಬೇಕು. ಅವರ ಎಲ್ಲಾ ಅಗತ್ಯತೆಗಳನ್ನು ಪೂರೈಸಲು ಸಿದ್ಧರಿರುವ ಯಾರನ್ನಾದರೂ ಹುಡುಕಲು ಸಾಂಪ್ರದಾಯಿಕ ವಿವಾಹವೇ ಲೇಸು ಎಂದುಕೊಳ್ಳುತ್ತಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios