Ram Navami 2023: 4 ಯೋಗಗಳ ಸಂಯೋಗ; ಈ ರಾಶಿಗಳಿಗೆ ರಾಮನ ವಿಶೇಷ ಕೃಪೆ
ಈ ಬಾರಿಯ ರಾಮ ನವಮಿಯಂದು ಒಂದೇ ದಿನ ನಾಲ್ಕು ಶುಭ ಯೋಗಗಳು ನಡೆಯುತ್ತವೆ. ಇದು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮೂರು ರಾಶಿಯವರಿಗೆ ಹೆಚ್ಚಿನ ಲಾಭ ಸಿಗಲಿದೆ.
ಧಾರ್ಮಿಕ ದೃಷ್ಟಿಯಿಂದ ಚೈತ್ರ ಮಾಸಕ್ಕೆ ವಿಶೇಷವಾದ ಮಹತ್ವವಿದೆ. ಏಕೆಂದರೆ ಹಿಂದೂ ಹೊಸ ವರ್ಷ ಯುಗಾದಿಯು ಈ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ಚೈತ್ರ ನವರಾತ್ರಿ ಆಚರಿಸಲಾಗುತ್ತದೆ. ಚೈತ್ರ ನವರಾತ್ರಿಯ ಕೊನೆಯ ದಿನ ಅಂದರೆ ಶುಕ್ಲ ಪಕ್ಷ ನವಮಿಯನ್ನು ಭಗವಾನ್ ಶ್ರೀರಾಮನ ಜನ್ಮದಿನವೆಂದು ಆಚರಿಸಲಾಗುತ್ತದೆ. ಶ್ರೀರಾಮನು ತ್ರೇತಾಯುಗದಲ್ಲಿ ಚೈತ್ರ ಮಾಸದ ಶುಕ್ಲ ಪಕ್ಷ ನವಮಿಯಂದು ಜನಿಸಿದನು.
ಈ ಬಾರಿ ಚೈತ್ರ ಮಾಸದ ಶುಕ್ಲ ಪಕ್ಷ ನವಮಿ ತಿಥಿ ಮಾರ್ಚ್ 30ರಂದು ಬರುತ್ತದೆ. ಈ ವರ್ಷ, ರಾಮ ನವಮಿ (Ram Navami 2023)ಯಂದು, ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನದಿಂದಾಗಿ ಅನೇಕ ವಿಶೇಷ ಯೋಗಗಳು ರೂಪುಗೊಳ್ಳುತ್ತಿವೆ. ಈ ಕಾರಣದಿಂದಾಗಿ, ರಾಮ ನವಮಿ ಹಬ್ಬವು ಇನ್ನಷ್ಟು ವಿಶೇಷವಾಗಿದೆ. ಹಾಗಾದರೆ ಈ ದಿನ ಯಾವ ಯಾವ ಶುಭ ಯೋಗಗಳು(Shubha Yogas) ರೂಪುಗೊಳ್ಳುತ್ತಿವೆ. ಇದು ಯಾವ ರಾಶಿಚಕ್ರದ ಚಿಹ್ನೆಗಳ (Zodiac signs) ಮೇಲೆ ಶುಭ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.
ರಾಮ ನವಮಿ 2023ರ ವಿಶೇಷ ಯೋಗ (Shubh Yoga)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಮನವಮಿಯ ದಿನದಂದು ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗದೊಂದಿಗೆ ಗುರು ಪುಷ್ಯ ಯೋಗವೂ ರೂಪುಗೊಳ್ಳುತ್ತಿದೆ. ಮಾರ್ಚ್ 30ರಂದು ಬೆಳಿಗ್ಗೆ 6.06 ರಿಂದ ರಾತ್ರಿ 10.59 ರವರೆಗೆ ಸರ್ವಾರ್ಥಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗ ನಡೆಯಲಿದೆ. ಇದಾದ ನಂತರ ಅಮೃತಸಿದ್ಧಿ ಯೋಗ, ಗುರು ಪುಷ್ಯ ಮತ್ತು ಸರ್ವಾರ್ಥ ಸಿದ್ಧಿ ಯೋಗವು ರಾತ್ರಿ 10.59 ರಿಂದ ಮಾರ್ಚ್ 31 ರ ಬೆಳಿಗ್ಗೆ 6.04 ರವರೆಗೆ ಇರುತ್ತದೆ. ರಾಮನವಮಿಯ ದಿನ ಇಡೀ ದಿನ ರವಿಯೋಗವೂ ಇರುತ್ತದೆ. ಈ ಯೋಗವೂ ಮಂಗಳಕರ. ಈ ಯೋಗವನ್ನು ರಾಮನ (Sri Rama) ಆರಾಧನೆಗೆ ಮಂಗಳಕರವೆಂದು ಪರಿಗಣಿಸಲಾಗಿದೆ.
ತಿರುಪತಿ ತಿಮ್ಮಪ್ಪನಿಗೆ ಈ ವರ್ಷ ದಾಖಲೆ 4411 ಕೋಟಿ ಬಜೆಟ್
ಗುರುವಾರ (Thursday)
ಶ್ರೀರಾಮನು ವಿಷ್ಣುವಿನ 7ನೇ ಅವತಾರ. ವಿಷ್ಣುವನ್ನು ಪೂಜಿಸಲು ಗುರುವಾರ ವಿಶೇಷವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿ ಗುರುವಾರ ರಾಮನವಮಿ ಆಚರಿಸಲಾಗುತ್ತಿದೆ. ಇದರಿಂದಾಗಿ ರಾಮ ನವಮಿಯ ಮಹತ್ವವೂ ಹೆಚ್ಚಿದೆ.
ಈ ರಾಶಿಚಕ್ರದ ಚಿಹ್ನೆಗಳಿಗೆ ಲಾಭ..
ಮೇಷ ರಾಶಿ (Aries)
ಚೈತ್ರ ನವರಾತ್ರಿಯಿಂದ ರಾಮನವಮಿಯವರೆಗೆ ಸುಖ ಮಾತ್ರ ಇರುತ್ತದೆ. ಶ್ರೀರಾಮನ ಕೃಪೆಯಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ದೊರೆಯುತ್ತದೆ. ಸಾಲವನ್ನು ತೊಡೆದುಹಾಕುವುದರೊಂದಿಗೆ, ಆದಾಯದ ಹೊಸ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಇದರೊಂದಿಗೆ ವ್ಯಾಪಾರ ಮತ್ತು ಉದ್ಯೋಗದಲ್ಲಿಯೂ ಲಾಭವಿರಲಿದೆ.
ವೃಷಭ ರಾಶಿ (Taurus)
ಚೈತ್ರರಾಮ ನವಮಿಯ ದಿನವು ಈ ರಾಶಿಯವರಿಗೆ ಉತ್ತಮವಾಗಿರುತ್ತದೆ. ಈ ದಿನವು ಹೊಸ ಕೆಲಸ ಮತ್ತು ಹೂಡಿಕೆಗೆ ಉತ್ತಮವಾಗಿದೆ. ಸ್ಥಗಿತಗೊಂಡ ಕೆಲಸಗಳು ಸುಗಮವಾಗಿ ಪ್ರಾರಂಭವಾಗುತ್ತವೆ. ಇದರೊಂದಿಗೆ ಆರ್ಥಿಕ ಸ್ಥಿತಿಯೂ ಸದೃಢವಾಗಿರುತ್ತದೆ.
ಹುಟ್ಟುವ ಮಗುವಿನ ಆರೋಗ್ಯ, ಸಂತೋಷಕ್ಕಾಗಿ ಗರ್ಭಿಣಿಯರು ಈ ಮಂತ್ರ ಹೇಳಿ..
ತುಲಾ ರಾಶಿ (Libra)
ತುಲಾ ರಾಶಿಯವರಿಗೆ ರಾಮನವಮಿಯಂದು ಒಳ್ಳೆಯ ಸುದ್ದಿ ಸಿಗಲಿದೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರಬಹುದು. ನೀವು ಆದಾಯದ ಸಾಧನಗಳನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿಯು ಸದೃಢವಾಗಿ ಉಳಿಯುತ್ತದೆ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.