Asianet Suvarna News Asianet Suvarna News

ಯಾವಾಗ ಹುಟ್ಟಿದರೆ ಯಾವ ರಾಶಿಯಾಗುತ್ತೆ? ಗುಣ ಸ್ವಭಾವವೇನು?

ಮನುಷ್ಯ ಹುಟ್ಟಿದ ಸಮಯಕ್ಕೆ ಅನುಗುಣವಾಗಿ ರಾಶಿ, ನಕ್ಷತ್ರಗಳು ನಿರ್ಧರಿತವಾಗುತ್ತದೆ. ಜಾತಕವನ್ನು ಬರೆಯಲಾಗುತ್ತದೆ. ಪೂರ್ತಿ ಜೀವನವೇ ಇದಕ್ಕ ಅನುಗುಣವಾಗಿ ನಡೆಯುತ್ತದೆ ಎಂಬುವುದು ಭಾರತೀಯ ಜ್ಯೋತಿಷ್ಯ ಶಾಸ್ತ್ರದ ನಂಬಿಕೆ. ಯಾವಾಗ ಹುಟ್ಟಿದವರು ಯಾವ ರಾಶಿಯವರು ಆಗಿರುತ್ತಾರೆ? ಅವರ ಗುಣ ಸ್ವಭಾವಗಳೇನು? 
 

12 ZODIAC SIGNS DATES  SYMBOLS FACTS  suh
Author
First Published May 30, 2023, 1:37 PM IST

ರಾಶಿ ಭವಿಷ್ಯವು ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ವಿಭಿನ್ನವಾಗಿರುತ್ತದೆ. ಮನುಷ್ಯನ ಹುಟ್ಟಿದ ಸಮಯದ ಮೇಲೆ ಜಾತಕ ನಿಂತಿದೆ. ಯಾವ ಸಮಯದಲ್ಲಿ ಹುಟ್ಟಿದರೆ ಯಾವ ರಾಶಿ ಆಗಲಿದೆ ಹಾಗೂ ಆ ರಾಶಿ ಭವಿಷ್ಯದ ಪ್ರಕಾರ ಮನುಷ್ಯನ ಗುಣ ಸ್ವಭಾವಗಳು ಏನಿರಲಿವೆ ಎಂಬ ಮಾಹಿತಿ ಇಲ್ಲಿದೆ…

ಮೇಷ: ಮಾರ್ಚ್ 21 - ಏಪ್ರಿಲ್ 19
ದ್ವಾದಶ ರಾಶಿಚಕ್ರಗಳಲ್ಲಿ ಮೊದಲ ರಾಶಿ ಮೇಷ ರಾಶಿ(Aries). ಉತ್ಸಾಹ, ಬೆಂಕಿ(Fire)ಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯನ್ನು ಮಂಗಳ(Mars)ನು ಆಳುವನು. ಹೀಗಾಗಿ ಗ್ರಹಗಳ ಆಡಳಿತಗಾರ ಮಂಗಳನಿಂದ ಮತ್ತಷ್ಟು ವರ್ಧಿಸುತ್ತದೆ ಈ ರಾಶಿಯಡಿಯಲ್ಲಿ ಜನಿಸಿದವರು ಜೀವನದ ಎಲ್ಲಾ ಆಯಾಮದಲ್ಲೂ ತಾವೇ ಮೊದಲ ಸ್ಥಾನದಲ್ಲಿ ಇರುತ್ತೇವೆ ಎಂದು ಭಾವಿಸುತ್ತಾರೆ.ಉತ್ಸಾಹ, ಭಾವೋದ್ರೇಕ ಮತ್ತು ಹುಮ್ಮಸ್ಸು ಈ ರಾಶಿಯನ್ನು ಪ್ರತಿನಿಧಿಸುತ್ತದೆ. ಇನ್ನು ಈ ರಾಶಿಯವರು ಹಠಾತ್ ಪ್ರವೃತ್ತಿಯನ್ನು ಹೊಂದಿದ್ದರೂ ಸಹ, ಯಾವುದೇ ಮೇಷ ರಾಶಿಯಲ್ಲಿ ಸಹಜವಾದ ತ್ವರಿತ-ಆಲೋಚನೆ 

ಜ್ಯೋತಿಷ್ಯದ  ಪ್ರಕಾರ ಮಾರ್ಚ್ 21 ರಿಂದ ಏಪ್ರಿಲ್ 19ರ ಒಳಗೆ ಜನಿಸಿದವರು ಮೇಷರಾಶಿ(Aries)ಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ರಾಶಿಯವರ ಹೆಸರಿನ ಮೊದಲ ಅಕ್ಷರ ಅ, ಲ ಮತ್ತು ಇ ಅಕ್ಷರಗಳಿಂದ ಪ್ರಾರಂಭಿಸಲಾಗುತ್ತದೆ.  ಮೇಷ ರಾಶಿಯ ವ್ಯಕ್ತಿಗಳು ತಮ್ಮ ವಿಶೇಷ ಗುಣಗಳಿಂದ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಾರೆ. 

 

ವೃಷಭ: ಎಪ್ರಿಲ್ 20 - ಮೇ 20
ವೃಷಭ ರಾಶಿ(Taurus)ಯುನ್ನು ಶುಕ್ರ (Venus)ಆಳ್ವಿಕೆ ಮಾಡುತ್ತದೆ. ಇದು ರಾಶಿಚಕ್ರದ ಎರಡನೇ ಚಿಹ್ನೆಯಾಗಿದೆ.ವೃಷಭ ರಾಶಿಯನ್ನು ಬುಲ್‌(bull)ನಿಂದ ಸಂಕೇತಿಸಲಾಗುತ್ತದೆ.  ಸಾಮಾನ್ಯವಾಗಿ  ಬುಲ್ ಶಾಂತವಾಗಿರುವ ಮನಸ್ಥಿತಿಯನ್ನು ಹೊಂದಿದೆ ಆದರೆ ಕೋಪ ಬಂದರೆ  ಉಗ್ರ ರೂಪವನ್ನು ತಾಳುತ್ತದೆ. ಇದೇ ಮಾದರಿಯ ಗುಣಲಕ್ಷಣಗಳನ್ನು ಈ ರಾಶಿ ಚಕ್ರದಲ್ಲಿ ಜನಿಸವದರಲ್ಲಿ ಕಾಣಬಹುದಾಗಿದೆ.   ಸಹಜವಾಗಿ ಈ ರಾಶಿಯವರು ತುಂಬಾ ಹಠಮಾರಿ ಸ್ವಬಾವದವರಾಗಿರುತ್ತಾರೆ. ಇದರೊಂದಿಗೆ, ಆಲಸ್ಯದ ಗುಣಗಳು ಕಂಡುಬರುತ್ತದೆ.  ಉಳಿದ ರಾಶಿಗಳಿಗೆ ಹೋಲಿಸಿದರೆ ವೃಷಭ ರಾಶಿ(Taurus)ಯವರು  ಸಂಪ್ರದಾಯವಾದಿಗಳಾಗಿರುತ್ತಾರೆ.

ಜ್ಯೋತಿಷ್ಯದ  ಪ್ರಕಾರ ಎಪ್ರಿಲ್ 20  ರಿಂದಮೇ 20ರ ಒಳಗೆ ಜನಿಸಿದವರು ವೃಷಭ ರಾಶಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ರಾಶಿಯವರ ಹೆಸರಿನ ಮೊದಲ ಅಕ್ಷರ ಇ, ಉ, ಎ, ಒ, ವ, ವಿ, ವು, ವೆ, ವೊ ಅಕ್ಷರಗಳಿಂದ ಪ್ರಾರಂಭಿಸಲಾಗುತ್ತದೆ. 


ಮಿಥುನ: ಮೇ 21 - ಜೂನ್ 20
ಮಿಥುನ ರಾಶಿ(Gemini)ಯು ಬುಧದಿಂದ ಆಳಲ್ಪಡುತ್ತದೆ. ಇದು ರಾಶಿಚಕ್ರದ ಮೂರನೇ ಚಿಹ್ನೆಯಾಗಿದ್ದು,ಪುರುಷ ಲಿಂಗ ರಾಶಿಯಾಗಿದೆ. ಮಿಥುನವನ್ನು 'ಅವಳಿ'(twins)ಗಳಿಂದ ಸಂಕೇತಿಸಲಾಗಿದೆ, ಈ ರಾಶಿಯವರು ತುಂಬಾ ಸ್ನೇಹಪರ ಸ್ವಭಾವದವರು ಎಂಬುದನ್ನು ಸ್ಪಷ್ಟಪಡಿಸುತ್ತದೆ.ಹಾಗೆಯೇ ಈ ರಾಶಿಯವರು ಸ್ನೇಹ ಜೀವಿಗಳಾಗಿರುತ್ತಾರೆ. ಮಿಥುನ ರಾಶಿ(Gemini)ವರು ರೂಪಾಂತರ ಸ್ವಭಾವವನ್ನು ಹೊಂದಿದ್ದಾರೆ. ಈ ರಾಶಿಗೆ ಬುಧನು ಅಧಿಪತಿಯಾಗಿರುವುದರಿಂದ  ತ್ವರಿತ ಬುದ್ಧಿವಂತರು ಮತ್ತು ಉತ್ಸಾಹಭರಿತ ಸ್ವಭಾವವನ್ನು ಹೊಂದಿರುತ್ತಾರೆ. ಎಲ್ಲ ವಿಷಯದಲ್ಲಿ ಸಂಪೂರ್ಣ ಕುತೂಹಲವನ್ನು ಹೊಂದಿರುತ್ತಾರೆ,  ಬುದ್ಧಿವಂತ ದೃಷ್ಟಿಕೋನವನ್ನು ಹೊಂದಿರುತ್ತಾರೆ. 

ಜ್ಯೋತಿಷ್ಯದ  ಪ್ರಕಾರ ಮೇ 21 ರಿಂದ ಜೂನ್ 20ರ ಒಳಗೆ ಜನಿಸಿದವರು ಮಿಥುನ ರಾಶಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ರಾಶಿಯವರ ಹೆಸರಿನ ಮೊದಲ ಅಕ್ಷರ ಕಾ, ಕೀ, ಕೂ, ಘ, ಛ, ಕೆ, ಕೊ, ಹ ಅಕ್ಷರಗಳಿಂದ ಪ್ರಾರಂಭಿಸಲಾಗುತ್ತದೆ. 

Love horoscope: ಸಂಗಾತಿ ಜೊತೆ ಕಾಲ ಕಳೆದರೆ, ಜೀವನದಲ್ಲಿ ಸುಖ

ಕರ್ಕಾಟಕ: ಜೂನ್ 21 - ಜುಲೈ 22
ಕರ್ಕಾಟಕ ರಾಶಿ(Cancer)ಯು  ಚಂದ್ರನಿಂದ ಆಳಲ್ಪಡುತ್ತದೆ. ಇದು ರಾಶಿಚಕ್ರದ ನಾಲ್ಕನೇ ಚಿಹ್ನೆಯಾಗಿದ್ದು, ಸ್ತ್ರೀ ಲಿಂಗ ರಾಶಿಯಾಗಿದೆ. ಈ ರಾಶಿಯನ್ನು ಪ್ರತಿನಿಧಿಸುವ ಚಿಹ್ನೆ ಏಡಿ(crab), ಅದಕ್ಕಾಗಿಯೇ ಈ ರಾಶಿಯವರು ಅಂಜುವಿಕೆ ಸೂಕ್ಷ್ಮತೆ ಮತ್ತು ದಯೆಯಂತಹ ಭಾವನೆಗಳಿಂದ ತುಂಬಿರುತ್ತಾರೆ. ಈ ರಾಶಿಯ ಚಕ್ರಾಧಿಪತಿ ಚಂದ್ರ(moon)ನಾಗಿರುವುದರಿಂದ  ತಮ್ಮ ಕುಟುಂಬ ಸದಸ್ಯರು ಮತ್ತು ಮನೆಯವರೊಂದಿಗೆ ಬಹಳ ಆಳವಾಗಿ ಸಂಪರ್ಕ ಹೊಂದಿರುತ್ತಾರೆ ಕರ್ಕಾಟಕ ರಾಶಿಯವರು.ಸಾಮಾನ್ಯವಾಗಿ ಮೂಡಿ ಸ್ವಭಾವದವರಾಗಿರುತ್ತಾರೆ. ಈ ರಾಶಿವರು ಪ್ರೀತಿ ಮತ್ತು ಸಂಬಂಧಗಳ ವಿಷಯಕ್ಕೆ ಬಂದರೆ, ತುಂಬಾ ಗಂಭೀರವಾಗಿರುತ್ತಾರೆ.

ಜ್ಯೋತಿಷ್ಯದ  ಪ್ರಕಾರ  ಜೂನ್ 21 ರಿಂದ ಜುಲೈ 22 ರ ಒಳಗೆ ಜನಿಸಿದವರು ಕರ್ಕಾಟಕ ರಾಶಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ರಾಶಿಯವರ ಹೆಸರಿನ ಮೊದಲ ಅಕ್ಷರ ಹೀ, ಹೂ, ಹೆ, ಹೊ, ಡಾ, ಡೂ, ಡೆ, ಡೊ,ಅಕ್ಷರಗಳಿಂದ ಪ್ರಾರಂಭಿಸಲಾಗುತ್ತದೆ. 

 

ಸಿಂಹ: ಜುಲೈ 23 - ಆಗಸ್ಟ್ 22
ಸಿಂಹ ರಾಶಿಯು (Leo) ಸೂರ್ಯನಿಂದ ಆಳಲ್ಪಡುತ್ತದೆ. ಇದು ರಾಶಿಚಕ್ರದ ಐದನೇ ಚಿಹ್ನೆಯಾಗಿದ್ದು, ,ಪುರುಷ ಲಿಂಗ ರಾಶಿಯಾಗಿದೆ. ಈ ರಾಶಿಯವರು ಸೂರ್ಯ(sun)ನಂತೆ ಪ್ರಕಾಶಮಾನವಾಗಿ ಹೊಳೆಯಲು ಇಷ್ಟಪಡುತ್ತಾರೆ. ರಾಶಿಚಕ್ರ ಚಿಹ್ನೆ 'ಸಿಂಹ'(lion)ವಾಗಿರುವುದರಿಂದ ಈ ರಾಶಿಗೆ ಸೇರಿದವರೂ ಕೂಡ ತುಂಬಾ ಬಲಶಾಲಿ ಮತ್ತು ಧೈರ್ಯಶಾಲಿಗಳು. ಈ ರಾಶಿಯವರು ಸಾಕಷ್ಟು ಆಶಾವಾದಿಗಳು ಮತ್ತು ಮಹತ್ವಾಕಾಂಕ್ಷಿಗಳು ಮತ್ತು ಅವರ ಸ್ವಭಾವದಲ್ಲಿ ಪರಿಶುದ್ಧವಾಗಿರುತ್ತಾರೆ.

ಜ್ಯೋತಿಷ್ಯದ  ಪ್ರಕಾರ ಜುಲೈ 23 ರಿಂದ ಆಗಸ್ಟ್ 22ರ ಒಳಗೆ ಜನಿಸಿದವರು ಸಿಂಹ ರಾಶಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ರಾಶಿಯವರ ಹೆಸರಿನ ಮೊದಲ ಅಕ್ಷರ  ಮಾ, ಮೀ, ಮೂ, ಮೊ, ಟಾ, ಟೀ, ಟೂ, ಟೆ ಅಕ್ಷರಗಳಿಂದ ಪ್ರಾರಂಭಿಸಲಾಗುತ್ತದೆ. 


ಕನ್ಯಾ: ಆಗಸ್ಟ್ 23 - ಸೆಪ್ಟೆಂಬರ್ 22
ಕನ್ಯಾ ರಾಶಿ(Virgo)ಯು ಬುಧದಿಂದ ಆಳಲ್ಪಡುತ್ತದೆ.ಇದು ರಾಶಿಚಕ್ರದ ಆರನೇ ಚಿಹ್ನೆಯಾಗಿದ್ದು, ಸ್ತ್ರೀ ಲಿಂಗ ರಾಶಿಯಾಗಿದೆ. ಕನ್ಯಾರಾಶಿ ರಾಶಿಯನ್ನು ಕೈಯಲ್ಲಿ ಹೂವಿನ ಎಳೆಯನ್ನು ಹಿಡಿದಿರುವ ಹುಡುಗಿ("virgin" "girl")ಯ ಚಿಹ್ನೆಯಿಂದ ಪ್ರತಿನಿಧಿಸಲಾಗುತ್ತದೆ.ಈ ರಾಶಿಯವರು ಸಾಮಾನ್ಯವಾಗಿ ತುಂಬಾ ದುಡಿಯುವವರು ಮತ್ತು ಬುದ್ಧಿವಂತರು.ಕನ್ಯಾರಾಶಿಯ ವ್ಯಕ್ತಿಗಳು ಕೂಡ ಸ್ವಲ್ಪ ಸ್ವಾರ್ಥಿಗಳಾಗಿರುತ್ತಾರೆ. ಈ ರಾಶಿಯವರು ಎಲ್ಲಾ ಸಮಯದಲ್ಲೂ ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸುತ್ತಾರೆ. 

ಜ್ಯೋತಿಷ್ಯದ  ಪ್ರಕಾರಆಗಸ್ಟ್ 23 ರಿಂದ ಸೆಪ್ಟೆಂಬರ್ 22ರ ಒಳಗೆ ಜನಿಸಿದವರು ಕನ್ಯಾ ರಾಶಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ರಾಶಿಯವರ ಹೆಸರಿನ ಮೊದಲ ಅಕ್ಷರ  ಪಾ, ಪೀ, ಪೂ, ಷ, ಣ , ಪೆ , ಪೊ ಅಕ್ಷರಗಳಿಂದ ಪ್ರಾರಂಭಿಸಲಾಗುತ್ತದೆ. 


ತುಲಾ: ಸೆಪ್ಟೆಂಬರ್ 23 - ಅಕ್ಟೋಬರ್ 22
ತುಲಾ ರಾಶಿ(Libra)  ಶುಕ್ರ(Venus)ನಿಂದ ಆಳಲ್ಪಡುತ್ತದೆ.ಇದು ರಾಶಿಚಕ್ರದ ಏಳನೇ ಚಿಹ್ನೆಯಾಗಿದ್ದು, ,ಪುರುಷ ಲಿಂಗ ರಾಶಿಯಾಗಿದೆ. ಈ ರಾಶಿಯ ಚಿಹ್ನೆಯು 'ತಕ್ಕಡಿ'ಯಾಗಿದ್ದು, ಇತರ ಎಲ್ಲಾ ರಾಶಿಚಕ್ರ ಚಿಹ್ನೆಗಳಿಗಿಂತ ಸಂಪೂರ್ಣವಾಗಿ ಭಿನ್ನವೆಂದು ಪರಿಗಣಿಸಲಾಗುತ್ತದೆ.ತುಲಾ ರಾಶಿಯವರು ಏಕಾಂತದಲ್ಲಿ ಸಮಯ ಕಳೆಯಲು ಬಯಸುವುದಿಲ್ಲ. ತಮ್ಮ ಹತ್ತಿರದ ಮತ್ತು ಪ್ರೀತಿಪಾತ್ರರ ನಡುವೆ ಸಮಯ ಕಳೆಯಲು ಬಯಸುತ್ತಾರೆ. ಈ ರಾಶಿಯವರಲ್ಲಿ  ನಾಯಕತ್ವದ ಸಾಮರ್ಥ್ಯವನ್ನು ಕಾಣಬಹುದಾಗಿದೆ.

ಜ್ಯೋತಿಷ್ಯದ  ಪ್ರಕಾರ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 22ರ ಒಳಗೆ ಜನಿಸಿದವರು ತುಲಾ ರಾಶಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ರಾಶಿಯವರ ಹೆಸರಿನ ಮೊದಲ ಅಕ್ಷರ ರಾ, ರೀ, ರೂ, ರೆ, ರೊ, ತಾ, ತೀ, ತೂ, ತೆ ಅಕ್ಷರಗಳಿಂದ ಪ್ರಾರಂಭಿಸಲಾಗುತ್ತದೆ. 

ಜೂನ್ ತಿಂಗಳು ನಿಮಗೆ ಹೇಗಿರುತ್ತದೆ? ಅದೃಷ್ಟ ಯಾವಾಗ ತೆರೆದುಕೊಳ್ಳುತ್ತದೆ?


ವೃಶ್ಚಿಕ: ಅಕ್ಟೋಬರ್ 23 - ನವೆಂಬರ್ 21
 ಮಂಗಳವು ವೃಶ್ಚಿಕ ರಾಶಿ(Scorpio)ಯ ಅಧಿಪತಿ.ಇದು ರಾಶಿಚಕ್ರದ ಎಂಟನೇ ಚಿಹ್ನೆಯಾಗಿದ್ದು, ಸ್ತ್ರೀ ಲಿಂಗ ರಾಶಿಯಾಗಿದೆ.  ರಾಶಿಚಕ್ರ ಚಿಹ್ನೆಯಾಗಿ ವೃಶ್ಚಿಕ ರಾಶಿಯನ್ನು ಚೇಳಿನಿಂದ ಸಂಕೇತಿಸಲಾಗಿದೆ. ಈ ರಾಶಿಯವರನ್ನು ಗಂಭೀರ, ನಿರ್ಭೀತ, ಕೆಲವೊಮ್ಮೆ ಹಠಮಾರಿ ಸ್ವಭಾವದವರಾಗಿರುತ್ತಾರೆ. ಈ ರಾಶಿಯವರು ಪ್ರೀತಿ ಮತ್ತು ವಾತ್ಸಲ್ಯವನ್ನು ಹೊಂದಿರುತ್ತಾರೆ.ವೃಶ್ಚಿಕ ರಾಶಿಯವರು ಸ್ವಭಾವತಃ ಸೂಕ್ಷ್ಮ ಸ್ವಭಾವದವರಾಗಿದ್ದು ಹೆಚ್ಚಿನ ಸಂದರ್ಭಗಳಲ್ಲಿ ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ.

ಜ್ಯೋತಿಷ್ಯದ  ಪ್ರಕಾರ ಅಕ್ಟೋಬರ್ 23 ರಿಂದ  ನವೆಂಬರ್ 21ರ ಒಳಗೆ ಜನಿಸಿದವರು ವೃಶ್ಚಿಕ ರಾಶಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ರಾಶಿಯವರ ಹೆಸರಿನ ಮೊದಲ ಅಕ್ಷರ ತೊ, ನಾ, ನೀ, ತೊ, ನಾ, ನೀ, ನೆ, ನೊ, ಯಾ, ಯೀ, ಯೂ ಅಕ್ಷರಗಳಿಂದ ಪ್ರಾರಂಭಿಸಲಾಗುತ್ತದೆ. 


ಧನು: ನವೆಂಬರ್ 22 - ಡಿಸೆಂಬರ್ 21
ಧನು ರಾಶಿಯು (Sagittarius) ಬುಧ(Mercury)ದಿಂದ ಆಳಲ್ಪಡುತ್ತದೆ.ಇದು ರಾಶಿಚಕ್ರದ ಒಂಬತ್ತನೇ ಚಿಹ್ನೆಯಾಗಿದ್ದು, ಪುರುಷ ಲಿಂಗ ರಾಶಿಯಾಗಿದೆ. ಧನು ರಾಶಿಯ ಚಿಹ್ನೆಯು 'ಕುದುರೆ ಮನುಷ್ಯ'. ಈ ಚಿಹ್ನೆಗೆ ಸೇರಿದವರು ತಮ್ಮ ಜೀವನದ ಮುಂಬರುವ ದಿನಗಳ ಬಗ್ಗೆ ಪ್ರಭಾವಶಾಲಿ, ಮತ್ತು ಸಾಕಷ್ಟು ಆಶಾವಾದಿಗಳಾಗಿರುತ್ತಾರೆ.ಧನು ರಾಶಿಯ ಗ್ರಹಗಳ ಆಡಳಿತಗಾರ ಗುರು, ಆಗಾಗ್ಗೆ ಈ ರಾಶಿಯವರಿಗೆ  ಅದೃಷ್ಟದ ಸಮೃದ್ಧಿಯೊಂದಿಗೆ ಉಡುಗೊರೆಯಾಗಿ ನೀಡುತ್ತಾನೆ. ಧನು ರಾಶಿಯವರು ಬಹಳ ಸುಲಭವಾಗಿ ಕೋಪಗೊಳ್ಳುತ್ತಾರೆ. 

ಜ್ಯೋತಿಷ್ಯದ  ಪ್ರಕಾರ ನವೆಂಬರ್ 22 ರಿಂದ ಡಿಸೆಂಬರ್ 21ರ ಒಳಗೆ ಜನಿಸಿದವರು ಧನು ರಾಶಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ರಾಶಿಯವರ ಹೆಸರಿನ ಮೊದಲ ಅಕ್ಷರ ಥೆ, ಯೊ, ಭಾ, ಭೀ, ಭೂ, ಧಾ, ಫಾ, ಢಾ, ಭೆ ಅಕ್ಷರಗಳಿಂದ ಪ್ರಾರಂಭಿಸಲಾಗುತ್ತದೆ. 


ಮಕರ: ಡಿಸೆಂಬರ್ 22 - ಜನವರಿ 19
ಮಕರ ರಾಶಿಯು (Capricorn)ಶನಿಯಿಂದ ಆಳಲ್ಪಡುತ್ತದೆ. ಇದು ರಾಶಿಚಕ್ರದ ಹತ್ತನೇ ಚಿಹ್ನೆಯಾಗಿದ್ದು,  ಸ್ತ್ರೀ ಲಿಂಗ ರಾಶಿಯಾಗಿದೆ.  ಮಕರ ರಾಶಿಯನ್ನು ಪ್ರತಿನಿಧಿಸುವ ಚಿಹ್ನೆ ಮಕರ ಅಥವಾ ಕೊಂಬಿನ ಮೇಕೆ. ಇದನ್ನು ಹಿಂದೂ ಪುರಾಣಗಳ ಪ್ರಕಾರ, ಇದನ್ನು ಸಮುದ್ರ ಜೀವಿ ಎಂದು ಪರಿಗಣಿಸಲಾಗಿದೆ. ಶನಿ(Saturn)ಯ ಆಡಳಿತದ ಅಡಿಯಲ್ಲಿ ಈ ರಾಶಿ ಬರುವುದರಿಂದ ಮಕರ ರಾಶಿಯವರು ಸಾಕಷ್ಟು ಶಿಸ್ತಿನಿಂದ ಇರುತ್ತಾರೆ.

ಜ್ಯೋತಿಷ್ಯದ  ಪ್ರಕಾರ ಡಿಸೆಂಬರ್ 22 ರಿಂದ ಜನವರಿ 19ರ ಒಳಗೆ ಜನಿಸಿದವರು ಮಕರ ರಾಶಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ರಾಶಿಯವರ ಹೆಸರಿನ ಮೊದಲ ಅಕ್ಷರ ಭೊ, ಜಾ, ಜೀ, ಖೀ, ಖೂ, ಖೆ, ಖೊ, ಗಾ, ಗೀ ಅಕ್ಷರಗಳಿಂದ ಪ್ರಾರಂಭಿಸಲಾಗುತ್ತದೆ. 


ಕುಂಭ: ಜನವರಿ 20 - ಫೆಬ್ರವರಿ 18
ಕುಂಭ ರಾಶಿ (Aquarius)ಯು ಶನಿ(Saturn)ಯಿಂದ ಆಳಲ್ಪಡುತ್ತದೆ.ಇದು ರಾಶಿಚಕ್ರದ  ಹನ್ನೊಂದನೇ ಚಿಹ್ನೆಯಾಗಿದ್ದು, ಪುರುಷ ಲಿಂಗ ರಾಶಿಯಾಗಿದೆ. ಈ ರಾಶಿಚಕ್ರ ಚಿಹ್ನೆ 'ಕುಂಭ'ದಿಂದ ಸಂಕೇತಿಸಲಾಗಿದೆ. ಈ ರಾಶಿಯವರು ಸಮಾಜಕ್ಕೆಏನಾದರೂ ಒಳ್ಳೆಯದನ್ನು ಮಾಡುವ ಉದ್ದೇಶವನ್ನು ಹೊಂದಿರುತ್ತಾರೆ.ಕುಂಭ ರಾಶಿಯವರಲ್ಲಿ ಕೆಲವರು  ಅಂತರ್ಮುಖಿಗಳಾಗಿರುತ್ತಾರೆ. ಈ ರಾಶಿಯವರು ತುಂಬಾ ಬುದ್ಧಿವಂತರಾಗಿರುತ್ತಾರೆ. 

ಜ್ಯೋತಿಷ್ಯದ  ಪ್ರಕಾರ ಜನವರಿ 20 ರಿಂದ ಫೆಬ್ರವರಿ 18ರ ಒಳಗೆ ಜನಿಸಿದವರು ಕುಂಭ ರಾಶಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ರಾಶಿಯವರ ಹೆಸರಿನ ಮೊದಲ ಅಕ್ಷರ ಗೂ, ಗೆ, ಗೊ, ಸಾ, ಸೀ, ಸೂ, ಸೊ, ದಾ ಅಕ್ಷರಗಳಿಂದ ಪ್ರಾರಂಭಿಸಲಾಗುತ್ತದೆ. 


ಮೀನ: ಫೆಬ್ರವರಿ 19 - ಮಾರ್ಚ್ 20

ಮೀನ  ರಾಶಿ (pisces)ಯು ಗುರು(Jupiter)ವಿನಿಂದ  ಆಳಲ್ಪಡುತ್ತದೆ.ಇದು ರಾಶಿಚಕ್ರದ ಹನ್ನೆರಡನೇ ಚಿಹ್ನೆಯಾಗಿದ್ದು, ಸ್ತ್ರೀ ಲಿಂಗ ರಾಶಿಯಾಗಿದೆ.  ಮೀನ ರಾಶಿಗೆ ಮೀನನ್ನು ಸಂಕೇತಿಸಲಾಗಿದೆ.  ಈ ರಾಶಿಚಕ್ರ ಚಿಹ್ನೆಗೆ ಸೇರಿದವರು  ಶಾಂತವಾಗಿರುತ್ತಾರೆ,  ಹಿತಚಿಂತಕ ಮತ್ತು ದಯೆಯ ಸ್ವಭಾವದವರು. ಮೀನ ರಾಶಿಯವರು ಸ್ವಲ್ಪ ನಿಗೂಢ ಸ್ವಭಾವದವರು. ಮೀನ  ರಾಶಿಯುವರು ಕಲಾತ್ಮಕ ಚಿಂತನೆಗಳ ವಿಷಯದಲ್ಲಿ ಬಹಳ ಉತ್ತಮರು.

ಜ್ಯೋತಿಷ್ಯದ  ಪ್ರಕಾರ ಫೆಬ್ರವರಿ 19 ರಿಂದ ಮಾರ್ಚ್ 20ರ ಒಳಗೆ ಜನಿಸಿದವರು ಮೀನ ರಾಶಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ರಾಶಿಯವರ ಹೆಸರಿನ ಮೊದಲ ಅಕ್ಷರ ದೀ, ದೂ, ಥ, ಝ, ದೆ, ದೊ, ಚಾ, ಚೀ ಅಕ್ಷರಗಳಿಂದ ಪ್ರಾರಂಭಿಸಲಾಗುತ್ತದೆ. 

Follow Us:
Download App:
  • android
  • ios